ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಅಷ್ಟೇನೂ ಮಳೆಯಾಗದಿದ್ದರು ಆಗಾಗ ತುಂತುರು ಮಳೆಯಾಗಿ ಎಲ್ಲಾ ಕಡೆ ಹಸಿರು ರಾಶಿ ಕಂಗೊಳಿಸುತ್ತಿದೆ. ಈ ನಡುವೆ ಬೀದರ್ ಪಟ್ಟಣದ ಬಯಲು ಪ್ರದೇಶದಲ್ಲಿ ನವಿಲು ನರ್ತನದ ಅಪರೂಪದ ದೃಶ್ಯವೊಂದು ಮನಸೂರೆಗೊಳಿಸಿದೆ.
ವಿಪರೀತ ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಾತ್ರವಲ್ಲದೆ ಪ್ರಾಣಿಪಕ್ಷಿಗಳಿಗೂ ಈ ಬಾರಿಯ ಮಳೆ ಹಿತಾನುಭವ ನೀಡಿದೆ. ಇದಕ್ಕೆ ಸಾಕ್ಷಿ ಎಂದರೆ ಬೀದರ್ನಲ್ಲಿ ಕಂಡು ಬಂದ ಆ ಒಂದು ನವಿಲು ನರ್ತನ. ಈ ನರ್ತನವನ್ನು ನೋಡಿ ಜನ ರೋಮಾಂಚನಗೊಂಡಿದ್ದಾರೆ. ಸುತ್ತಲೂ ಹೆಣ್ಣು ನವಿಲುಗಳು, ನಡುವಲ್ಲಿ ಗಂಡು ನವಿಲು ಗರಿಬಿಚ್ಚಿ ಕುಣಿಯುವ ಈ ಸುಂದರ ದೃಶ್ಯಗಳನ್ನು ನೋಡಿ ಪ್ರಕೃತಿಯ ವಿಸ್ಮಯಕ್ಕೆ ಜನ ಖುಷಿಯಾಗಿದ್ದಾರೆ. ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಗರಿ ಬಿಚ್ಚಿ ಗಂಡು ನವಿಲು ನೃತ್ಯ ಮಾಡಿದ್ದ ದೃಶ್ಯ ಜನ ಮೈಮರೆತಿದ್ದರು.
ಗಂಡು ನವಿಲು ಕುಣಿಯುವುದೇಕೆ?
ಹೆಣ್ಣು ನವಿಲಿನೊಂದಿಗೆ ಸೇರಲು ಗಂಡು ನವಿಲು ಕಾತರಿಸುವ ವೇಳೆ ಆಕಾಶದಲ್ಲಿ ಕಾಣುವ ಕರಿ ಮೋಡ ಅಥವಾ ಮಳೆಯ ಸೂಚನೆ ಸಿಕ್ಕಿದೊಡನೆ ಸಂಭ್ರಮಿಸುತ್ತದೆ. ತಮ್ಮ ಗರಿಗಳನ್ನು ಒಂದಕ್ಕೊಂದು ಬಡಿದು ಕೂಗುತ್ತ ತನ್ನ ಸಂಗಾತಿಯನ್ನು ತನ್ನತ್ತ ಸೆಳೆಯುತ್ತದೆ. ರಾಷ್ಟ್ರ ಪಕ್ಷಿಯಾಗಿರುವ ನವಿಲಿನ ಕುಣಿತ ಅದರ ಅಂದ ಕೇಳುವುದಕ್ಕಿಂತ ನೋಡುವುದೇ ಚಂದ.
ಇದನ್ನೂ ಓದಿ: ನವಿಲುಗಳ ಬಿಂದಾಸ್ ಹಾರಾಟ.. ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಇಮ್ಮಡಿಸಿದ ಚೆಲುವು