Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಿಲುಗಳ ಬಿಂದಾಸ್ ಹಾರಾಟ.. ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಇಮ್ಮಡಿಸಿದ ಚೆಲುವು

ಬೆಳಗಾವಿ: ಕುಂದಾನಗರಿ ಬೆಳಗಾವಿ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವುದರಿಂದ ಅದರ ನೋಟವೇ ವಿಭಿನ್ನವಾಗಿದೆ. ಅದ್ರಲ್ಲೂ ಮಳೆಗಾಲದಲ್ಲಿಯಂತೂ ಬೆಳಗಾವಿಯ ಕೆಲವೊಂದಿಷ್ಟು ಪ್ರದೇಶಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ಎಲ್ಲೇ ಇದ್ದರು ಮಳೆಗಾಲದಲ್ಲಿ ಒಂದು ಬಾರಿ ಬೆಳಗಾವಿಗೆ ಭೇಟಿ ನೀಡಬೇಕೆನ್ನುವಷ್ಟು ಸೆಳೆಯುತ್ತದೆ ಇಲ್ಲಿನ ಹಚ್ಚ ಹಸಿರಿನ ಪರಿಸರ. ಸುಂದರವಾದ ಪರಿಸರದ ನಡುವೆ ಹಕ್ಕಿಗಳ  ಚಲನವಲನ, ಒನಪು ವಯ್ಯಾರ ನೋಡುಗರ ಮನಸ್ಸನ್ನ ಇನ್ನಷ್ಟು ಮುದಗೊಳಿಸುತ್ತದೆ. ಬೆಳಗಾವಿ ನಗರದಲ್ಲೇ ಇಂತಹ ಪ್ರದೇಶಗಳಿರೋದು ಇನ್ನೂ ವಿಶೇಷ. ನಗರ ಪ್ರದೇಶದಲ್ಲಿ ಗಿಡ ಮರಗಳು ಇರೋದೆ ಕಷ್ಟ ಆದ್ರೆ ಕುಂದಾನಗರಿಯಲ್ಲಿ […]

ನವಿಲುಗಳ ಬಿಂದಾಸ್ ಹಾರಾಟ.. ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಇಮ್ಮಡಿಸಿದ ಚೆಲುವು
Follow us
ಆಯೇಷಾ ಬಾನು
| Updated By:

Updated on:Jul 27, 2020 | 10:09 PM

ಬೆಳಗಾವಿ: ಕುಂದಾನಗರಿ ಬೆಳಗಾವಿ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವುದರಿಂದ ಅದರ ನೋಟವೇ ವಿಭಿನ್ನವಾಗಿದೆ. ಅದ್ರಲ್ಲೂ ಮಳೆಗಾಲದಲ್ಲಿಯಂತೂ ಬೆಳಗಾವಿಯ ಕೆಲವೊಂದಿಷ್ಟು ಪ್ರದೇಶಗಳು ಎಲ್ಲರ ಕಣ್ಮನ ಸೆಳೆಯುತ್ತವೆ.

ಎಲ್ಲೇ ಇದ್ದರು ಮಳೆಗಾಲದಲ್ಲಿ ಒಂದು ಬಾರಿ ಬೆಳಗಾವಿಗೆ ಭೇಟಿ ನೀಡಬೇಕೆನ್ನುವಷ್ಟು ಸೆಳೆಯುತ್ತದೆ ಇಲ್ಲಿನ ಹಚ್ಚ ಹಸಿರಿನ ಪರಿಸರ. ಸುಂದರವಾದ ಪರಿಸರದ ನಡುವೆ ಹಕ್ಕಿಗಳ  ಚಲನವಲನ, ಒನಪು ವಯ್ಯಾರ ನೋಡುಗರ ಮನಸ್ಸನ್ನ ಇನ್ನಷ್ಟು ಮುದಗೊಳಿಸುತ್ತದೆ. ಬೆಳಗಾವಿ ನಗರದಲ್ಲೇ ಇಂತಹ ಪ್ರದೇಶಗಳಿರೋದು ಇನ್ನೂ ವಿಶೇಷ.

ನಗರ ಪ್ರದೇಶದಲ್ಲಿ ಗಿಡ ಮರಗಳು ಇರೋದೆ ಕಷ್ಟ ಆದ್ರೆ ಕುಂದಾನಗರಿಯಲ್ಲಿ ಎಲ್ಲಿ ನೋಡಿದ್ರೂ ಮರಗಿಡಗಳು, ಉದ್ಯಾನವನಗಳು ಕಾಣಿಸುತ್ತವೆ. ಅದ್ರಲ್ಲೂ ಬೆಳಗಾವಿಯ ಟೀಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋ ಅರಣ್ಯದಂತೆ ಕಂಡು ಬಂದ್ರೂ ಆದು ನಗರದ ಮಧ್ಯಭಾಗದಲ್ಲಿದೆ ಎಂಬುದು ವಿಶೇಷ. ಗಿಡ ಮರಗಳ ಜತೆಗೆ ಇಲ್ಲಿ ಹಕ್ಕಿಗಳ ಸಂಕುಲವೇ ಇದೆ. ಇಪ್ಪತ್ತಕ್ಕೂ ಅಧಿಕ ವಿಭಿನ್ನ ಹಕ್ಕಿಗಳನ್ನು ಕಾಣಬಹುದು ಅದರಲ್ಲಿ ನವಿಲುಗಳೇ ಹೆಚ್ಚಾಗಿ ಕಾಣಸಿಗುತ್ತವೆ.

ನಗರದ ಮಧ್ಯೆ ನವಿಲುಗಳು ಬಿಂದಾಸ್ ಹಾರಾಟ ಟೀಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿರುವ ಅರಣ್ಯದಲ್ಲಿ ಸದ್ಯ ನವಿಲುಗಳ ನರ್ತನ ಹಾಗೂ ಹಾರಾಟ ಜೋರಾಗಿ ಕಂಡು ಬರುತ್ತಿದೆ. ಗಿಡಮರಗಳು ಚಿಗುರೊಡೆದು ಹಚ್ಚ ಹಸಿರಿನಿಂದ ವ್ಯಾಕ್ಸಿನ್ ಡಿಪೋ ಕಂಗೊಳಿಸುತ್ತಿದ್ದು ಅದರ ಸೌಂದರ್ಯವನ್ನ ಈ ನವಿಲುಗಳ ಹಾರಾಟದಿಂದ ಇನ್ನಷ್ಟು ಇಮ್ಮಡಿಗೊಂಡಿದೆ.

ಇನ್ನೂ ಈ ಸುಂದರ ಸೊಬಗನ್ನ ನೋಡಲು ನಿತ್ಯವೂ ಜನರು ಕೂಡ ಆಗಮಿಸುತ್ತಿದ್ದರೆ ಇದೇ ಜಾಗದಲ್ಲಿ ವಾಯುವಿಹಾರಕ್ಕೆ ಸ್ಥಳೀಯರು ಬರುತ್ತಿದ್ದು ನವಿಲುಗಳನ್ನ ನೋಡಿ ಖುಷಿಯಿಂದ ವಾಕಿಂಗ್ ಮಾಡುತ್ತಿದ್ದಾರೆ.

ಪೋಟೋಗ್ರಾಫರ್ ಕ್ಯಾಮೆರಾದಲ್ಲಿ ಸೆರೆಯಾದ್ವು ನವಿಲುಗಳು ಬೆಳಗಾವಿಯ ಪ್ರಸಿದ್ದ ಪೋಟೋಗ್ರಾಫರ್ ಪಿ.ಕೆ ಬಡಿಗೇರ್ ನವಿಲುಗಳ ಪೋಟೋಗಳನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇಪ್ಪತ್ತು ವರ್ಷದಿಂದ ಫೋಟೋಗ್ರಫಿ ವೃತ್ತಿ ಮಾಡುತ್ತಿರುವ ಇವರು ಬಿಡುವಿನ ಸಂದರ್ಭದಲ್ಲಿ ನಿಸರ್ಗದ ಹಾಗೂ ಪ್ರಾಣಿ ಪಕ್ಷಿಗಳ ಫೋಟೋಗಳನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ.

ವ್ಯಾಕ್ಸಿನ್ ಡಿಪೋದಲ್ಲಿ ಹೆಚ್ಚಾಗಿರುವ ನವಿಲುಗಳನ್ನ ಸದ್ಯ ತಮ್ಮ ಕ್ಯಾಮೆರದಾಲ್ಲಿ ಪಿಕೆ ಬಡಿಗೇರ್ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮನುಷ್ಯರನ್ನ ಕಂಡರೇ ಮಾರುದ್ದ ಓಡುವ ನವಿಲುಗಳನ್ನ ಕ್ಯಾಮೆರಾದಲ್ಲಿ ಹಿಡಿದಿದ್ದು ಒಂದೊಂದು ನವಿಲಿನ ಫೋಟೋಗಳು ವಿಭಿನ್ನವಾಗಿವೆ, ಫೋಟೋಗಳನ್ನ ನೋಡುತ್ತಿದ್ದರೆ ಖುಷಿ ಕೊಡುವಷ್ಟು ಚೆನ್ನಾಗಿವೆ ಅಂತಿದ್ದಾರೆ ಸಾರ್ವಜನಿಕರು ಸಹದೇವ ಮಾನೆ

Published On - 12:53 pm, Mon, 27 July 20

ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ