ಬಳ್ಳಾರಿ: ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ ಅಂತಾ.. ಆಸೆ ಬಿದ್ದು ಬಂದವರಿಗೆ ಸಿಕ್ಕಿದ್ದು ಮಾತ್ರ ಸಿಕ್ಕಾಪಟ್ಟೆ ಗೂಸಾ

ಕಡಿಮೆ ಬೆಲೆಗೆ ಬಂಗಾರ ಕೊಡುವುದಾಗಿ ನಂಬಿಸಿ ವಂಚನೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಹರಪನಹಳ್ಳಿ ತಾಲೂಕಿನ ಹಲುವಾಗಲು ರಟ್ಟಿಹಳ್ಳಿಯ ಚಂದ್ರಪ್ಪ ಹಾಗೂ ಹೊನ್ನಾಳಿ ಕಾಶಿನಾಥ್‌ ವಂಚನೆಗೆ ಒಳಗಾಗಿದ್ದಾರೆ.

ಬಳ್ಳಾರಿ: ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ ಅಂತಾ.. ಆಸೆ ಬಿದ್ದು ಬಂದವರಿಗೆ ಸಿಕ್ಕಿದ್ದು ಮಾತ್ರ ಸಿಕ್ಕಾಪಟ್ಟೆ ಗೂಸಾ
ಪೊಲೀಸರು ಬಂಧಿಸಿದ ಆರೋಪಿ
Edited By:

Updated on: Dec 06, 2020 | 2:37 PM

ಬಳ್ಳಾರಿ: ಕಡಿಮೆ ಬೆಲೆಗೆ ಬಂಗಾರ ಕೊಡುವುದಾಗಿ ನಂಬಿಸಿ ವಂಚನೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಹರಪನಹಳ್ಳಿ ತಾಲೂಕಿನ ಹಲುವಾಗಲು ರಟ್ಟಿಹಳ್ಳಿಯ ಚಂದ್ರಪ್ಪ ಹಾಗೂ ಹೊನ್ನಾಳಿ ಕಾಶಿನಾಥ್‌ ವಂಚನೆಗೆ ಒಳಗಾಗಿದ್ದಾರೆ.

ವಂಚಕರು 2.75 ಲಕ್ಷಕ್ಕೆ 250 ಗ್ರಾಂ ಚಿನ್ನ ಕೊಡುವುದಾಗಿ ಸಂತ್ರಸ್ತರಿಗೆ ನಂಬಿಸಿದ್ದರು. ಕಡಿಮೆ ಬೆಲೆಗೆ ಬಂಗಾರ ದೊರಕುವ ಆಸೆ ಹೊತ್ತು ಬಂದ  ಸಂತ್ರಸ್ತರನ್ನು ಶಿರಗಾನಹಳ್ಳಿ ಕ್ರಾಸ್ ಬಳಿ ಕರೆಸಿದ ಆರೋಪಿಗಳು ನಂತರ ಅವರ ಮೇಲೆ ಹಲ್ಲೆಗೈದು ಹಣ ಹಾಗೂ ಅವರ ಬಳಿಯಿದ್ದ ಎರಡು ಮೊಬೈಲ್​ಗಳನ್ನು ಕಸಿದು ಪರಾರಿಯಾಗಿದ್ದಾರೆ.

ಸದ್ಯ, ಹಲುವಾಗಲು ಪೊಲೀಸ್​ ಠಾಣೆಗೆ ಚಂದ್ರಪ್ಪ ದೂರು ದಾಖಲಿಸಿದ್ದಾರೆ. ಪರಿಶೀಲನೆ ನಡೆಸಿದ ಪೊಲೀಸರು ಮಂಜಪ್ಪ ಎಂಬುವವನನ್ನು ಬಂಧಿಸಿದ್ದಾರೆ. ಜೊತೆಗೆ, ಉಳಿದ 6 ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.