ಮಾಸ್ಕ್ ಖರೀದಿಸಿ ಹಣ ನೀಡದೆ ವಂಚಿಸಿದವರ ವಿರುದ್ಧ ದೂರು
₹ 15 ಲಕ್ಷ ಮೌಲ್ಯದ ಮಾಸ್ಕ್ ಖರೀದಿಸಿ ಹಣ ನೀಡದೆ ವಂಚಿಸಿದ್ದ ಆರೋಪಿಗಳ ವಿರುದ್ಧ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ನೆಲಮಂಗಲ: ₹ 15 ಲಕ್ಷ ಮೌಲ್ಯದ ಮಾಸ್ಕ್ ಖರೀದಿಸಿ ಹಣ ನೀಡದೆ ವಂಚಿಸಿದ್ದ ಆರೋಪಿಗಳ ವಿರುದ್ಧ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆರೋಪಿಗಳಾದ ವೀರೇಶ್ ಮತ್ತು ಮಧುಗೌಡ ಯುಟ್ಯೂಬ್ ಚಾನೆಲ್ ಒಂದನ್ನು ನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಚಿಕ್ಕಬಾಣವಾರದಲ್ಲಿ ಮಾಸ್ಕ್ಗಳನ್ನು ಪೂರೈಕೆ ಮಾಡುವ ಉದ್ಯಮಿ ಸುರೇಂದ್ರ ಸಿಂಗ್ ಅವರಿಂದ ಮಾಸ್ಕ್ಗಳನ್ನು ತರಿಸಿಕೊಂಡು ಆರೋಪಿಗಳು ಹಣ ಪಾವತಿಸದೇ ವಂಚಿಸಿದ್ದರೆ ಎಂದು ದೂರಿನಲ್ಲಿ ಹೇಳಲಾಗಿದೆ.
ವೆಲ್ನೆಸ್ ಸೆಂಟರ್ನಿಂದ ಮಾಸ್ಕ್ ಪಡೆದಿದ್ದ ಆರೋಪಿಗಳು ಆನ್ಲೈನ್ ಪೇಮೆಂಟ್ ಮಾಡಲು ಸರ್ವರ್ ಪ್ರಾಬ್ಲಂ ಇದೆ ಎಂದು ಹೇಳಿದ್ದರು. ನಾಳೆ ಕಚೇರಿಗೆ ಬನ್ನಿ ಹಣ ನೀಡುತ್ತೇವೆ ಎಂದು ಉದ್ಯಮಿ ಸುರೇಂದ್ರ ಸಿಂಗ್ಗೆ ಆರೋಪಿಗಳಾದ ವೀರೇಶ್ ಮತ್ತು ಮಧುಗೌಡ ತಿಳಿಸಿದ್ದರು.
ನಂತರ ಉದ್ಯಮಿಗೆ ₹ 15 ಲಕ್ಷದ ಚೆಕ್ ನೀಡಿದ್ದರು. ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು. ಇದನ್ನು ಖರೀದಿದಾರರಿಗೆ ತಿಳಿಸಿ, ಹಣ ಪಾವತಿಸುವಂತೆ ಉದ್ಯಮಿ ಸೂಚಿಸಿದ್ದರು. ಆದರೆ ಅವರು ಬೆದರಿಕೆ ಹಾಕಿದ್ದರು. ಇದೀಗ ವೀರೇಶ್ ಮತ್ತು ಮಧುಗೌಡ ವಿರುದ್ಧ ಉದ್ಯಮಿ ಸುರೇಂದ್ರ ಸಿಂಗ್ ದೂರ ನೀಡಿದ್ದಾರೆ. ಈ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ ವಾಣಿ ವಿರುದ್ಧವು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಮೆರಿಕದಲ್ಲಿ ಸಾವಿನ ಸಂಖ್ಯೆ 1.3 ಲಕ್ಷ: ಕೊನೆಗೂ MASK ಧರಿಸಿದ ದೊಡ್ಡಣ್ಣ!
Published On - 3:23 pm, Sun, 6 December 20



