ಐಹೊಳೆ ಗ್ರಾಮಸ್ಥರಲ್ಲಿ ಮನೆ ಉರುಳುವ ಆತಂಕ; ಸ್ಥಳಾಂತರಕ್ಕೆ ಆಗ್ರಹ

|

Updated on: Mar 20, 2021 | 2:21 PM

ಐಹೊಳೆ ಎಂದರೆ ತಕ್ಷಣ ಎಲ್ಲರಿಗೂ ನೆನಪಾಗುವುದು ಐತಿಹಾಸಿಕ ಸ್ಥಳ. ಇಲ್ಲಿ ಚಾಲುಕ್ಯ, ರಾಷ್ಟ್ರಕೂಟರ ಕಾಲದ 120ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕ ದೇಗುಲಗಳಿವೆ. ಆದರೆ ಈ ದೇಗುಲಗಳೇ ಈ ಗ್ರಾಮಸ್ಥರ ಸಂಕಷ್ಟಕ್ಕೆ ಕಾರಣವಾಗಿವೆ. ಈ ಎಲ್ಲ ದೇಗುಲಗಳು ಪುರಾತತ್ವ ಇಲಾಖೆಗೆ ಸೇರಿದ್ದರಿಂದ ಇಲ್ಲಿನ ಸ್ಥಿತಿಗತಿಯನ್ನು ಯಥಾವತ್ತಾಗಿ ಕಾಪಾಡಬೇಕಾಗುತ್ತದೆ.

ಐಹೊಳೆ ಗ್ರಾಮಸ್ಥರಲ್ಲಿ ಮನೆ ಉರುಳುವ ಆತಂಕ; ಸ್ಥಳಾಂತರಕ್ಕೆ ಆಗ್ರಹ
ಮುರುಕಲು ಮನೆಯಲ್ಲಿ ವಾಸಿಸುತ್ತುರುವ ಜನರು
Follow us on

ಬಾಗಲಕೋಟೆ: ಹೈಹೊಳೆ ಸುಪ್ರಸಿದ್ಧ ಐತಿಹಾಸಿಕ ಸ್ಥಳ. ಆದರೆ ಈ ಪ್ರಸಿದ್ಧ ಸ್ಥಳದ ಜನರು ಶಿಥಿಲಾವಸ್ಥೆಗೆ ತಲುಪಿದ ಮನೆಗಳನ್ನು ದುರಸ್ಥಿ ಮಾಡಿಕೊಳ್ಳುವಂತಿಲ್ಲ. ತಾವು ವಾಸಿಸುವ ಜಾಗದಲ್ಲಿ ನೂತನ ಮನೆ ನಿರ್ಮಾಣ ಮಾಡುವಂತಿಲ್ಲ. ಬೇರೆ ಗ್ರಾಮದ ಸುಂದರ ಮನೆಗಳನ್ನು ಕಂಡು ಇಂತಹ ಮನೆ ಕಟ್ಟಿಸಬಹುದೆಂದು ಇಲ್ಲಿನ ಜನರು ಕೇವಲ ಕನಸನ್ನು ಮಾತ್ರ ಕಾಣಬಹುದು. ಆದರೆ ಮನೆ ಕಟ್ಟುವುದಕ್ಕೆ ಸಾಧ್ಯವಿಲ್ಲ. ಇದೆಲ್ಲ ಒಂದು ಕಡೆ ಆದರೆ ಪ್ರತಿ ಬಾರಿ ಬರುವ ಪ್ರವಾಹ ಇವರನ್ನು ಹೈರಾಣಾಗಿಸಿದೆ. ಜೊತೆಗೆ ಈ ಬಾರಿ ಬಜೆಟ್ ‌ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಮತ್ತೆ ನಿರಾಸೆಯಾಗಿದೆ.

ಐಹೊಳೆ ಎಂದರೆ ತಕ್ಷಣ ಎಲ್ಲರಿಗೂ ನೆನಪಾಗುವುದು ಐತಿಹಾಸಿಕ ಸ್ಥಳ. ಇಲ್ಲಿ ಚಾಲುಕ್ಯ, ರಾಷ್ಟ್ರಕೂಟರ ಕಾಲದ 120ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕ ದೇಗುಲಗಳಿವೆ. ಆದರೆ ಈ ದೇಗುಲಗಳೇ ಈ ಗ್ರಾಮಸ್ಥರ ಸಂಕಷ್ಟಕ್ಕೆ ಕಾರಣವಾಗಿವೆ. ಈ ಎಲ್ಲ ದೇಗುಲಗಳು ಪುರಾತತ್ವ ಇಲಾಖೆಗೆ ಸೇರಿದ್ದರಿಂದ ಇಲ್ಲಿನ ಸ್ಥಿತಿಗತಿಯನ್ನು ಯಥಾವತ್ತಾಗಿ ಕಾಪಾಡಬೇಕಾಗುತ್ತದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ಮನೆ ದುರಸ್ಥಿ ಮಾಡಲಾಗುತ್ತಿಲ್ಲ. ಮನೆ ಬಿದ್ದರೆ ನೂತನ ಮನೆ ನಿರ್ಮಾಣ ಮಾಡಲು ಆಗುತ್ತಿಲ್ಲ. ಅದರಲ್ಲೂ ಪ್ರತಿ ಬಾರಿ ಪ್ರವಾಹ ಬಂದಾಗಲೂ ಐಹೊಳೆ ಮುಳುಗಡೆಯಾಗುತ್ತದೆ. ಆಗ ಮನೆ ಬಿದ್ದರೆ ಹೊಸ ಮನೆ ಕಟ್ಟಿಸೋಕೆ ಆಗುವುದಿಲ್ಲ. ಮನೆ ದುರಸ್ಥಿ ಮಾಡುವುದಕ್ಕೆ ಆಗೋದಿಲ್ಲ. ಎಲ್ಲದಕ್ಕೂ ಪುರಾತತ್ವ ಇಲಾಖೆ ಅಡ್ಡಿಪಡಿಸುತ್ತದೆ. ಈ ನಡುವೆ ಈ ಬಾರಿ ಬಜೆಟ್​ನಲ್ಲಿ ಐಹೊಳೆ ಬಗ್ಗೆ ಏನಾದರೂ ಹಣ ಮೀಸಲಿಡುತ್ತಾರಾ ಎಂದು ಸ್ಥಳೀಯರು ನಿರೀಕ್ಷೆ ಇಟ್ಟುಕೊಂಡಿದ್ದರು. ಅದು ಕೂಡ ಈಡೇರದೆ ಗ್ರಾಮಸ್ಥರು ನಿರಾಶರಾಗಿದ್ದು, ಆದಷ್ಟು ಬೇಗ ನಮ್ಮನ್ನು ಸ್ಥಳಾಂತರ ಮಾಡಿ, ಈ ಕಷ್ಟದಿಂದ ಮುಕ್ತಿ ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಬಹು ದಿನಗಳ ಬೇಡಿಕೆ
ಐಹೊಳೆ ಗ್ರಾಮವನ್ನು ಸ್ಥಳಾಂತರ ಮಾಡಿ ಎಂಬ ಬೇಡಿಕೆ ಬಹಳ ದಿನಗಳಿಂದಲೂ ಇದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಸ್ಥಳಾಂತರಕ್ಕೆ ಮನಸ್ಸು ಮಾಡಿದ್ದರು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಸ್ಥಳಾಂತರ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಈಗಲೂ ಯಾವುದೇ ಕ್ಷಿಪ್ರಗತಿಯ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಐಹೊಳೆ ಗ್ರಾಮದಲ್ಲಿ ರಸ್ತೆ ಕೂಡ ದುರಸ್ಥಿ ಮಾಡುವ ಹಾಗಿಲ್ಲ. ಮನೆಯ ಒಂದು ಕಲ್ಲನ್ನು ಬಿಚ್ಚಿದರೂ ಪುರಾತತ್ವ ಇಲಾಖೆ ಅಧಿಕಾರಿಗಳು ಬಂದು ಎಚ್ಚರಿಕೆ ನೀಡುತ್ತಾರೆ.

ಗೊಚ್ಚೆಯಿಂದ ಕೂಡಿರುವ ರಸ್ತೆ

ಮುರಿದು ಹೋಗಿರುವ ಮನೆಗಳು

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ ಸ್ಥಳಾಂತರಕ್ಕಾಗಿ 60 ಕೋಟಿ ಘೋಷಣೆ ಮಾಡಲಾಗಿತ್ತು. ಆದರೆ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಇದರಿಂದ ಮುರುಕಲು ಮನೆಗಳಲ್ಲಿಯೇ ಇಲ್ಲಿನ ಜನ ಬದುಕುತ್ತಿದ್ದಾರೆ. ಮಳೆ ಬಂದರೆ ನೆನೆಯುತ್ತಾ, ರಾತ್ರಿಯಾದರೆ ಹಳೆಯ ಮನೆ ಬೀಳುವುದೋ ಎಂಬ ಭಯದಲ್ಲಿ ವಾಸ ಮಾಡುವ ಪರಿಸ್ಥಿತಿ ಗ್ರಾಮಸ್ಥರಿಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಈಗಾಗಲೇ ಸರಕಾರಕ್ಕೆ 261 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದೆ. 1058 ಕುಟುಂಬಗಳ ಸ್ಥಳಾಂತರಕ್ಕೆ 137 ಎಕರೆ ಜಾಗ ಕೂಡ ಗುರುತು ಮಾಡಲಾಗಿದೆ. ರೈತರೊಂದಿಗೆ ಭೂಸ್ವಾಧೀನಕ್ಕಾಗಿ ಸಭೆ ನಡೆಸಿ ಬೆಲೆ ನಿಗಧಿ ಮಾಡಲಾಗುವುದು. ಸರ್ಕಾರದಿಂದ ಹಣ ಮಂಜೂರಾಗಿ ಅನುಮೋದನೆ ಸಿಗಬೇಕಾಗಿದೆ. ಸಿಕ್ಕ ನಂತರ ಸ್ಥಳಾಂತರ ಕಾರ್ಯ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವ ಕಾರ್ಯ ಆರಂಭಿಸಲಾಗುವುದು ಎಂದು ಹೇಳುತ್ತಿದ್ದಾರೆ.

ಐಹೊಳೆ ದೇವಲಾಯದ ಬಳಿ ಗ್ರಾಮ

ಇದನ್ನೂ ಓದಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಮ್ ವಿಧಿವಶ

ನ್ಯಾಯಾಧೀಶರ ಮುಂದೆ ಸ್ವಯಂಪ್ರೇರಿತವಾಗಿ ಹಾಜರಾಗಿ ಹೇಳಿಕೆ ನೀಡಿದ ‘ಸಿಡಿ’ ಯುವತಿಯ ಬಾಯ್​ಫ್ರೆಂಡ್​

Published On - 2:21 pm, Sat, 20 March 21