ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಮ್ ವಿಧಿವಶ
ಎರಡು ಬಾರಿ ಮೈಮುಲ್ ನಿರ್ದೇಶಕರಾಗಿದ್ದ ಕೆ.ಸಿ.ಬಲರಾಮ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಮಾರ್ಚ್ 16ರಂದು ನಡೆದ ಮೈಮುಲ್ ಚುನಾವಣೆಯಲ್ಲಿ ಸೋಲು ಕಂಡಿದ್ದ ಕೆ.ಸಿ.ಬಲರಾಮ್, ಈ ಸೋಲಿನಿಂದಾಗಿ ಸಂಪೂರ್ಣವಾಗಿ ಮನನೊಂದಿದ್ದರು ಎಂದು ಮೂಲಗಳು ತಿಳಿಸಿವೆ.
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೆ.ಸಿ.ಬಲರಾಮ್ ವಿಧಿವಶರಾಗಿದ್ದಾರೆ. ಎರಡು ಬಾರಿ ಮೈಮುಲ್ ನಿರ್ದೇಶಕರಾಗಿದ್ದ ಕೆ.ಸಿ.ಬಲರಾಮ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಮಾರ್ಚ್ 16ರಂದು ನಡೆದ ಮೈಮುಲ್ ಚುನಾವಣೆಯಲ್ಲಿ ಸೋಲು ಕಂಡಿದ್ದ ಕೆ.ಸಿ.ಬಲರಾಮ್, ಈ ಸೋಲಿನಿಂದಾಗಿ ಸಂಪೂರ್ಣವಾಗಿ ಮನನೊಂದಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಅಂಗಗಳ ಒಕ್ಕೂಟ ನಿಯಮಿತದ (ಮೈಮುಲ್) ಚುನಾವಣೆಯಲ್ಲಿ ಕೂಡ ಕೆ.ಸಿ.ಬಲರಾಮ್ ಸ್ಪರ್ಧಿಸಿದ್ದರು. ಮೈಮುಲ್ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ ನಡೆದಿತ್ತು. ಇಲ್ಲಿ ಅಡಳಿತ ಮಂಡಳಿಯ 15 ಸ್ಥಾನಗಳಿಗೆ 33 ಮಂದಿ ಕಣಕ್ಕೆ ಇಳಿದಿದ್ದು, ತೀವ್ರ ಪೈಪೋಟಿ ಕೂಡ ಇತ್ತು.
ಈ 15 ಮಂದಿಯಲ್ಲಿ ಮಾಜಿ ಅಧ್ಯಕ್ಷರಾದ ಕೆ.ಜಿ. ಮಹೇಶ್, ಎಸ್.ಸಿದ್ದೇಗೌಡ, ಕೆ. ಉಮಾಶಂಕರ್, ಎ.ಟಿ ಸೋಮಶೇಖರ್, ಮಾಜಿ ಉಪಾಧ್ಯಕ್ಷ ಬಿ.ಎನ್. ಸದಾನಂದ, ಕೆ.ಸಿ.ಕುಮಾರ್, ಕೆ. ಈರೇಗೌಡ, ಪಿ.ಎಂ. ಪ್ರಸನ್ನ ಜೊತೆಗೆ ಮಾಜಿ ನಿರ್ದೇಶಕರಾದ ಕೆ.ಸಿ ಬಲರಾಮ್ ಕೂಡ ಕಣಕ್ಕೆ ಇಳಿದಿದ್ದು, ಈ ಸ್ಪರ್ಧೆಯಲ್ಲಿ ಸೋಲು ಕಂಡಿದ್ದರು. ಇಂದು ಬೆಳಿಗ್ಗೆ ಕೆ.ಸಿ ಬಲರಾಮ್ ವಿಧಿವಶರಾಗಿದ್ದಾರೆ.
ಇದನ್ನೂ ಓದಿ:
ಕನ್ನಡದ ಖ್ಯಾತ ಕವಿ, ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ವಿಧಿವಶ