ಬೆಳಗಾವಿ: ಅಪೂರ್ವ ಬಿದರಿ ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಫೀಸರ್. ರಾಜ್ಯದ ಖಡಕ್ ಅಧಿಕಾರಿಗಳ ಕುಟುಂಬದ ಕುಡಿ. ಈ ಮಹಿಳಾ ಅಧಿಕಾರಿಯಾದ ಅಪೂರ್ವ ಬಿದರಿ ಪ್ರೋಬೇಶನರಿ ಸಮಯದಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಇದೀಗ ಗುರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಯಾರನ್ನು ಕೇಳಿದರೂ ಬರಿ ಮಹಿಳಾ ಆಫೀಸರ್ ಬಗ್ಗೆನೇ ಮಾತು. ತಾನು ಸಿಕ್ಕಾಪಟ್ಟೆ ಖಡಕ್ ಆಧಿಕಾರಿ ಅಂತ ಪೋಸ್ ನೀಡುವ ಅಪೂರ್ವ ಬಿದರಿ ತಮ್ಮ ಮೇಲಾಧಿಕಾರಿಗಳಿಗೆ ತಲೆ ನೋವು ಆಗಿದ್ದಾರೆ. ಕೆ.ಎ.ಎಸ್ ಪ್ರೊಬೇಷನರಿ ಆಗಿರುವ ಅಪೂರ್ವ ಚಿಕ್ಕೋಡಿಯ ಪುರಸಭೆಯ ಮುಖ್ಯಾಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪೂರ್ವ ತಾನು ಸಿಕ್ಕಾಪಟ್ಟೆ ಖಡಕ್ ಅಧಿಕಾರಿ ಅಂತ ಬಿಂಬಿಸಿಕೊಳ್ಳಲು ಕೈಯಲ್ಲಿ ಲಾಠಿ ಹಿಡಿದುಕೊಳ್ಳುತ್ತಾರೆಂಬ ಮಾತುಗಳು ಹೆಚ್ಚಾಗಿವೆ.
ಸಚಿವೆ ಜೊಲ್ಲೆ ಅವರಿಗೆ ಬಾಯಿ ಅಂತ ಕರೆದಿರುವ ಅಪೂರ್ವ ಬಗ್ಗೆ ಚಿಕ್ಕೋಡಿಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಪ್ರೊಬೇಷನರಿ ಹಂತವನ್ನೆ ಮುಗಿಸದ ಅಪೂರ್ವ ಅಧಿಕಾರದ ಮದ ಇಳಿಸಲು ದಲಿತ ಸಂಘನೆಗಳು ಮುಂದಾಗಿವೆ. ಲಿಕ್ಕರ್ ಡಾನ್ಗಳ ಅಣತಿಯಂತೆ ಅಧಿಕಾರ ನಡೆಸುತ್ತಿರುವ ಅಪೂರ್ವ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಕೊರೊನಾ ನಿಯಂತ್ರಿಸಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಮಹಿಳಾ ಅಧಿಕಾರಿ ಅಪೂರ್ವ ಖಾಸಗಿ ವಾಹನದಲ್ಲಿ ಕುಟುಂಬದ ಆರು ಜನರನ್ನು ಕೂರಿಸಿಕೊಂಡು ಗೂಂಡಾ ವರ್ತನೆ ನಡೆಸಿರುವುದು ಬೆಳಕಿಗೆ ಬಂದಿದೆ. ದೀನ ದಲಿತರ ಮದುವೆ ವೇಳೆಯಲ್ಲಿ ಎಲ್ಲರಿಗೂ ಮನಸ್ಸಿಚ್ಚೆಯಂತೆ ಬೈದು ದೌರ್ಜನ್ಯತೆಯನ್ನು ಮೆರೆದಿದ್ದಾರೆ. ಹೀಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಲಾಗುತ್ತದೆ ಎಂದು ಹೋಮ್ಗಾರ್ಡ್ನ ಮಾಜಿ ಸೂಪರಿಡೆಂಟ್ ಅರವಿಂದ್ ಗಟ್ಟಿ ತಿಳಿಸಿದರು.
ಇದನ್ನೂ ಓದಿ
ಬೀದರ್: ಬ್ರಿಮ್ಸ್ ಅವ್ಯವಸ್ಥೆ ಕಂಡು ಸಚಿವ ಡಾ.ಕೆ.ಸುಧಾಕರ್ ಕೆಂಡಾಮಂಡಲ
ಕೊವಿಡ್ ವ್ಯಾಕ್ಸಿನ್ ಬಗ್ಗೆ ತಪ್ಪು ಮಾಹಿತಿ ಹರಡಿದ ನಟನಿಗೆ 2 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
(People of Belgaum accused of violating Corona Guidelines against officer Apoorva Bidari)