ಕೊವಿಡ್ ನಿಯಮ ಉಲ್ಲಂಘಿಸಿ ವಿಜಯಪುರದಲ್ಲಿ ಬಡಿಗೆ ಜಾತ್ರೆ

| Updated By: sandhya thejappa

Updated on: Jun 06, 2021 | 8:52 AM

ಕೊವಿಡ್ ನಿಯಮ ಉಲ್ಲಂಘಿಸಿ ಜಿಲ್ಲೆಯ ಕನ್ನೂರಿನಲ್ಲಿ ಬಡಿಗೆ ಜಾತ್ರೆ ನಡೆದಿದೆ. ದೈಹಿಕ ಅಂತರ ಮರೆತು ಜಾತ್ರೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಇಂದು (ಜೂನ್ 6) ಬೆಳಗಿನ ಜಾವ ಕನ್ನೂರು ಗ್ರಾಮದ ರೇವಣ್ಣಸಿದ್ಧೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆದಿದೆ.

ಕೊವಿಡ್ ನಿಯಮ ಉಲ್ಲಂಘಿಸಿ ವಿಜಯಪುರದಲ್ಲಿ ಬಡಿಗೆ ಜಾತ್ರೆ
ಬಡಿಗೆ ಜಾತ್ರೆ
Follow us on

ವಿಜಯಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧಾನ ಗತಿಯಲ್ಲಿ ಕಡಿಮೆಯಾಗುತ್ತಿದೆ. ಅಕ್ಟೋಬರ್, ನವೆಂಬರ್ ಹೊತ್ತಿಗೆ ಕೊರೊನಾ ಮೂರನೇ ಅಲೆ ಬಂದು ಅಪ್ಪಳಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಕೊರೊನಾ ಆರ್ಭಟ ಇನ್ನು ಕಡಿಮೆಯಾಗದ ಕಾರಣ ರಾಜ್ಯ ಸರ್ಕಾರ ಲಾಕ್​ಡೌನ್​ ಮುಂದುವರಿಸಿದೆ. ಈ ನಡುವೆ ಜನ ಮಾತ್ರ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈಗಾಗಲೇ ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ಕಾರ ಕಡಿವಾಣ ಹೇರಿದೆ. ಹೀಗಿದ್ದೂ, ವಿಜಯಪುರ ಜಿಲ್ಲೆಯ ಕನ್ನೂರಿನಲ್ಲಿ ಬಡಿಗೆ ಜಾತ್ರೆ ನಡೆದಿದೆ.

ಕೊವಿಡ್ ನಿಯಮ ಉಲ್ಲಂಘಿಸಿ ಜಿಲ್ಲೆಯ ಕನ್ನೂರಿನಲ್ಲಿ ಬಡಿಗೆ ಜಾತ್ರೆ ನಡೆದಿದೆ. ದೈಹಿಕ ಅಂತರ ಮರೆತು ಜಾತ್ರೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಇಂದು (ಜೂನ್ 6) ಬೆಳಗಿನ ಜಾವ ಕನ್ನೂರು ಗ್ರಾಮದ ರೇವಣ್ಣಸಿದ್ಧೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆದಿದೆ. ಗ್ರಾಮದ ಜನರು ಜಾತ್ರೆ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿದಿದ್ದರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ತಿಳಿದುಬಂದಿದೆ. ಕಠಿಣ ನಿಯಮದ ನಡುವೆ ಜಾತ್ರೆ ನಡೆದಿದೆ ಎಂದು ಸಾರ್ವಜನಿಕರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸಗೊಬ್ಬರ ಖರೀದಿಗೆ ರೈತರ ಸರತಿ ಸಾಲು
ಜಿಲ್ಲೆಯಲ್ಲಿ ಉತ್ತಮ ಮುಂಗಾರು ಹಿನ್ನೆಲೆ ರಸಗೊಬ್ಬರ ಅಂಗಡಿಗಳ ಮುಂದೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ರೈತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. 10 ಗಂಟೆಗೆ ವರಗೆ ಮಾತ್ರ ಖರೀದಿ ಅವಕಾಶ ಹಿನ್ನೆಲೆ ಬೆಳಗಿನ ಜಾವದಿಂದ ರೈತರು ಕಾಯುತ್ತಿದ್ದಾರೆ. ಜಿಲ್ಲೆಯ ರೈತರು ತೊಗರಿ, ಮೆಕ್ಕೆ ಜೋಳ, ಹೆಸರು ಉದ್ದು ಬೆಳೆಗೆ ತಯಾರಿ ಮಾಡಿಕೊಳ್ಳುತ್ತಿದ್ದು, ಬೀಜ ಖರೀದಿ ಲಾಕ್​ಡೌನ್​ ಅಡ್ಡಿಯಾಗಿದೆ. ಮೂರು ದಿನದಿಂದ ನಗರಕ್ಕೆ ಬಂದರೂ ಕೆಲ ರೈತರಿಗೆ ಗೊಬ್ಬರ ಸಿಗದೇ ಊರುಗಳಿಗೆ ವಾಪಸ್ ಹೋಗುತ್ತಿದ್ದಾರೆ. ಹೀಗಾಗಿ ಬೀಜ ಖರೀದಿಗೆ ಇನ್ನಷ್ಟು ಸಮಯವನ್ನು ನೀಡಿ ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ

‘ನಾವು ಸಾಯುವುದಕ್ಕಾಗಿ ಈ ಆಸ್ಪತ್ರೆಗೆ ಬರಬೇಕಾ’ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೋಂಕಿತನ ಆಕ್ರೋಶ

ಜನರ ವಲಸೆ: ಕೊರೊನಾ ಸೋಂಕು ಮರೆತಂತೆ ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಜನ ಜಾತ್ರೆ

(People of Vijayapur held fair between corona lockdown)