‘ನಾವು ಸಾಯುವುದಕ್ಕಾಗಿ ಈ ಆಸ್ಪತ್ರೆಗೆ ಬರಬೇಕಾ’ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೋಂಕಿತನ ಆಕ್ರೋಶ

‘ನಾವು ಸಾಯುವುದಕ್ಕಾಗಿ ಈ ಆಸ್ಪತ್ರೆಗೆ ಬರಬೇಕಾ’ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೋಂಕಿತನ ಆಕ್ರೋಶ
‘ನಾವು ಸಾಯುವುದಕ್ಕಾಗಿ ಈ ಆಸ್ಪತ್ರೆಗೆ ಬರಬೇಕಾ’ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೋಂಕಿತನ ಆಕ್ರೋಶ

ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೋಂಕಿತ ವ್ಯಕ್ತಿ ಆರೋಪ ಮಾಡಿದ್ದು ಆಕ್ರೋಶ ಹೊರ ಹಾಕಿದ್ದಾರೆ. ‘ನಾವು ಸಾಯುವುದಕ್ಕಾಗಿ ಈ ಆಸ್ಪತ್ರೆಗೆ ಬರಬೇಕಾ’ ಎಂದು ಹೊನ್ನಾಳಿ ತಾಲೂಕಿನ ಚಟ್ನಿಳ್ಳಿ ಗ್ರಾಮದ ಸೋಂಕಿತ ವ್ಯಕ್ತಿ ಆಸ್ಪತ್ರೆಯ ಬೇಜವಾಬ್ದಾರಿತನದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾನೆ. ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಬೇಕು. ಇಲ್ಲಿ ಚಿಕಿತ್ಸೆ ಪಡೆದು ಮನೆಗೆ ಆರೋಗ್ಯವಂತರಾಗಿ ಹೋಗಲು ನಾವು ಬಂದಿದ್ದೇವೆ. ಗುಣಮುಖರಾಗಲು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ ಆದರೆ ಸಾಯುವುದಕ್ಕಾಗಿಯೇ ಇಲ್ಲಿಗೆ ಬಂದಂತಾಗಿದೆ.

TV9kannada Web Team

| Edited By: Ayesha Banu

Jun 06, 2021 | 8:32 AM

ದಾವಣಗೆರೆ: ‘ನಾವು ಸಾಯುವುದಕ್ಕಾಗಿ ಈ ಆಸ್ಪತ್ರೆಗೆ ಬರಬೇಕಾ’ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೋಂಕಿತ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಮಹಾಮಾರಿ ಕೊರೊನಾದ ಎರಡನೇ ಅಲೆಯಲ್ಲಿ ದೇಶ ತತ್ತರಿಸಿ ಹೋಗಿದೆ. ಇದರ ನಡುವೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಜನ ಬೇಸತ್ತಿದ್ದಾರೆ. ಕೆಲ ಆಸ್ಪತ್ರೆಗಳಲ್ಲಿ ಸೋಂಕಿತನ ಮೃತ ದೇಹವಿಟ್ಟಿದ್ದ ಬೆಡ್ ಪಕ್ಕದಲ್ಲೇ ಸೋಂಕಿತರಿಗೆ ಬೆಡ್ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ. ಸರಿಯಾದ ಸ್ವಚ್ಛತೆ, ಊಟ, ಮಾತ್ರೆಗಳು ನೀಡುತ್ತಿಲ್ಲ. ಇದಕ್ಕೆ ಮನನೊಂದು ಕೆಲ ಸೋಂಕಿತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅದೆಷ್ಟೂ ಆರೋಪಗಳು ಕೇಳುತ್ತಿದ್ದೇವೆ. ಇದೇ ರೀತಿ ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೋಂಕಿತ ವ್ಯಕ್ತಿ ಆರೋಪ ಮಾಡಿದ್ದು ಆಕ್ರೋಶ ಹೊರ ಹಾಕಿದ್ದಾರೆ.

‘ನಾವು ಸಾಯುವುದಕ್ಕಾಗಿ ಈ ಆಸ್ಪತ್ರೆಗೆ ಬರಬೇಕಾ’ ಎಂದು ಹೊನ್ನಾಳಿ ತಾಲೂಕಿನ ಚಟ್ನಿಳ್ಳಿ ಗ್ರಾಮದ ಸೋಂಕಿತ ವ್ಯಕ್ತಿ ಆಸ್ಪತ್ರೆಯ ಬೇಜವಾಬ್ದಾರಿತನದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾನೆ. ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಬೇಕು. ಇಲ್ಲಿ ಚಿಕಿತ್ಸೆ ಪಡೆದು ಮನೆಗೆ ಆರೋಗ್ಯವಂತರಾಗಿ ಹೋಗಲು ನಾವು ಬಂದಿದ್ದೇವೆ. ಗುಣಮುಖರಾಗಲು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ ಆದರೆ ಸಾಯುವುದಕ್ಕಾಗಿಯೇ ಇಲ್ಲಿಗೆ ಬಂದಂತಾಗಿದೆ.

ಸೋಂಕಿತ ಮೃತಪಟ್ಟರೆ ಆ ಬೆಡ್ ಸ್ವಚ್ಛಗೊಳಿಸುವುದಿಲ್ಲ. ಅದೇ ಬೆಡ್ ಬೇರೊಬ್ಬರಿಗೆ ನೀಡುತ್ತಾರೆ. ಇಲ್ಲಿ ಸೋಂಕು ಹೆಚ್ಚಿಸುವ ಕೆಲಸ ನಡೆಯುತ್ತಿದೆ ಎಂದು ವಿಡಿಯೋ ಮಾಡಿ ಸೋಂಕಿತ ವ್ಯಕ್ತಿ ಆರೋಪ ಮಾಡಿದ್ದಾರೆ. ಇನ್ನು ಒಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಸ್ಥಿತಿ ನೋಡಿ. ಇಲ್ಲಿನ ಸೋಂಕಿತರ ಸ್ಥಿತಿ ನೋಡಿ. ಇಲ್ಲಿ ಸ್ವಚ್ಛತೆ ಮರೆಯಾಗಿದೆ ಎಂದು ಶಾಸಕ ರೇಣುಕಾಚಾರ್ಯ ಮತ್ತು ದಾವಣಗೆರೆ ಡಿಸಿಗೆ ವಿಡಿಯೋ ಮೂಲಕ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸುವಂತೆ ಸೋಂಕಿತ ವ್ಯಕ್ತಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಕೊರೊನಾ ವೈರಸ್ ಚೀನಾದ ವುಹಾನ್​ನಿಂದ ಹೊರಬಿದ್ದಿದ್ದು ಅಂತ ಭಾರತೀಯನನ್ನೊಳಗೊಂಡ ಹವ್ಯಾಸಿ ಪತ್ತೇದಾರರು ಪತ್ತೆ ಮಾಡಿದ್ದು ಹೀಗೆ!

Follow us on

Related Stories

Most Read Stories

Click on your DTH Provider to Add TV9 Kannada