ಹಸುಗಳಿಗೆ ಗುಂಡಿಟ್ಟು ಕತ್ತು ಕೊಯ್ದು ಹತ್ಯೆ; ಕೊಡಗಿನಲ್ಲಿ ದುಷ್ಕರ್ಮಿಗಳಿಂದ ಅಮಾನವೀಯ ಕೃತ್ಯ
ಕಳ್ಳಿಚಂಡ ರಮೇಶ್, ಕಳ್ಳಿಚಂಡ ಸಾಬು ಮತ್ತು ಎರವರ ಸುಬ್ರ ಎಂಬುವರಿಗೆ ಸೇರಿದ ಹಸುಗಳಾಗಿವೆ. ಮೇಯಲು ಬಿಟ್ಟಿದ್ದ ಈ ಹಸುಗಳುನ್ನು ದುಷ್ಟರು ಕಾಡಿಗೆ ಕರೆದೊಯ್ದು ಹತ್ಯೆ ಮಾಡಿರುವ ಸಾಧ್ಯತೆ ಇದೆ. ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸಮೀಪದ ಕಾಯಂಬೆಟ್ಟ ಎಂಬಲ್ಲಿ ಮೂರು ಗೋವುಗಳನ್ನು ಅಮಾನುಷವಾಗಿ ದುಷ್ಕರ್ಮಿಗಳು ಹತ್ಯೆಮಾಡಿದ್ದಾರೆ. ದುಷ್ಕರ್ಮಿಗಳು ಮೊದಲು ಹಸುಗಳಿಗೆ ಗುಂಡಿಕ್ಕಿದ್ದಾರೆ. ಬಳಿಕ ಮೂರೂ ಹಸುಗಳ ಕತ್ತನ್ನು ಭೀಕರವಾಗಿ ಕುಯ್ದಿದ್ದಾರೆ. ಕಾಯಂಬೆಟ್ಟದ ದೇವರ ಕಾಡಿನಲ್ಲಿ ಈ ಘಟನೆ ನಡೆದಿದೆ. ಬಹುಶಃ ದುಷ್ಕರ್ಮಿಗಳು ಹಲಾಲ್ ಮಾಡಲು ಕತ್ತು ಕೊಯ್ದಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಕಳ್ಳಿಚಂಡ ರಮೇಶ್, ಕಳ್ಳಿಚಂಡ ಸಾಬು ಮತ್ತು ಎರವರ ಸುಬ್ರ ಎಂಬುವರಿಗೆ ಸೇರಿದ ಹಸುಗಳಾಗಿವೆ. ಮೇಯಲು ಬಿಟ್ಟಿದ್ದ ಈ ಹಸುಗಳುನ್ನು ದುಷ್ಟರು ಕಾಡಿಗೆ ಕರೆದೊಯ್ದು ಹತ್ಯೆ ಮಾಡಿರುವ ಸಾಧ್ಯತೆ ಇದೆ. ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಂಟಿ ಸಲಗ ಪ್ರತ್ಯಕ್ಷ ಧಾರವಾಡ: ನಿನ್ನೆ ಕರ್ನಾಟಕ ವಿಶ್ವವಿದ್ಯಾಲಯದ ಬಳಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಗರದತ್ತ ಬಾರದಂತೆ ಪಟಾಕಿ ಹೊಡೆದು ಓಡಿಸುತ್ತಿದ್ದಾರೆ. ಪಟಾಕಿ ಶಬ್ದಕ್ಕೆ ಒಂಟಿ ಸಲಗ ದಿಕ್ಕು ತೋಚದೇ ಓಡುತ್ತಿದೆ.
ಇದನ್ನೂ ಓದಿ
ಕಾಲುವೆಗೆ ಬಿದ್ದ ವಾಹನ; ಭೀಕರ ಅಪಘಾತದಲ್ಲಿ 13 ಮಂದಿ ಸಾವು
(perpetrators have killed three cows at madikeri)