ಆಸ್ತಿಗಾಗಿ ಹೆತ್ತವರನ್ನೇ ಮನೆಯಿಂದ ಹೊರ ಹಾಕಿದ ಮಕ್ಕಳು; ಕರುಳ ಬಳ್ಳಿಗಳ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆ ಮಟ್ಟಿಲೇರಿದ ವೃದ್ಧ ದಂಪತಿ
ಯೂಸುಫ್ ಅವರು ದುಡಿದು ತಮ್ಮ ಸಂಪಾದನೆಯಲ್ಲಿ ಮಾಡಿರುವ ಮನೆಯಿಂದ ಇವರ ಹೆತ್ತ ಮಕ್ಕಳಾದ ಮುಸ್ತಾಕ್ ಹಾಗೂ ಯಾಸಿನ್ ಎನ್ನುವ ಇಬ್ಬರು ಮಕ್ಕಳು ಹೊಡೆದು ಮನೆಯಿಂದ ಹೊರಗಡೆ ಹಾಕಿದ್ದಾರೆ.
ಗದಗ: ಆಸ್ತಿಗಾಗಿ ಹೆತ್ತ ಮಕ್ಕಳೇ ತಂದೆ-ತಾಯಿಗೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ ಹೃದಯ ವಿದ್ರಾವಕ ಘಟನೆಯೊಂದು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಯೂಸುಫ್ ಲಕ್ಕುಂಡಿ ಹಾಗೂ ಶಕೀಲಾ ಬೇಗಂ ಎನ್ನುವ ವಯೋ ವೃದ್ಧ ದಂಪತಿ ಮಕ್ಕಳಿಂದ ಹಲ್ಲೆಗೊಳಗಾಗಿದ್ದು, ಮಕ್ಕಳ ಈ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಯೂಸುಫ್ ಅವರು ದುಡಿದು ತಮ್ಮ ಸಂಪಾದನೆಯಲ್ಲಿ ಮಾಡಿರುವ ಮನೆಯಿಂದ ಇವರ ಹೆತ್ತ ಮಕ್ಕಳಾದ ಮುಸ್ತಾಕ್ ಹಾಗೂ ಯಾಸಿನ್ ಎನ್ನುವ ಇಬ್ಬರು ಮಕ್ಕಳು ಹೊಡೆದು ಮನೆಯಿಂದ ಹೊರಗಡೆ ಹಾಕಿದ್ದಾರೆ. ಹಾಗಾಗಿ ಈ ವೃದ್ಧ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವೃದ್ಧ ದಂಪತಿಗಳಿಗೆ ಮನೆಯಲ್ಲಿ ವಾಸ ಮಾಡಲು ಅವಕಾಶ ನೀಡದೆ ಹಿಂಸೆ ಮಾಡುತ್ತಿದ್ದಾರೆ.
ಇದು ನಮ್ಮ ಮನೆ ನೀವು ಬೇರೆ ಕಡೇ ಹೋಗಿ ಎಂದು ನಿತ್ಯ ಬಂದು ಜಗಳ ತೆಗೆದು ಹೊಡೆಯುವುದು ಬಡಿಯುವುದು ಮಾಡುತ್ತಿದ್ದಾರೆ. ಹೀಗಾಗಿ ಈ ವಯಸ್ಸಿನಲ್ಲಿ ನಾವು ಎಲ್ಲಿಗೆ ಹೋಗಬೇಕು ನಮಗೆ ನಮ್ಮ ಮಕ್ಕಳಾದ ಮುಸ್ತಾಕ್ ಹಾಗೂ ಯಾಸಿನ್ ನಿಂದ ಮುಕ್ತಿ ನೀಡಿ ಇಲ್ಲವಾದರೆ ನಾವು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತೇವೆ ಎಂದು ಯೂಸುಫ್ ಲಕ್ಕುಂಡಿ ಪೊಲೀಸ್ ಠಾಣೆ ಎದುರು ಕಣ್ಣೀರು ಹಾಕುತ್ತಿದ್ದಾರೆ.
ಯೂಸುಫ್ ಅವರ ಪಿತ್ರಾರ್ಜಿತ ಆಸ್ತಿ 8 ಎಕರೆ ಜಮೀನು ಹಾಗೂ ಮನೆಯಲ್ಲಿ ಮಕ್ಕಳು ಆಸ್ತಿಯನ್ನು ಪಾಲು ಮಾಡಿಕೊಂಡಿದ್ದಾರೆ. ಆದರೆ ಯೂಸುಫ್ ಅವರ ಗಮನಕ್ಕೆ ಇದು ಬಂದಿರಲಿಲ್ಲ. ಹೀಗಾಗಿ ನಾವು ಬದುಕು ಸಾಗಿಸಲು ನಮ್ಮ ಆಸ್ತಿ ನಮಗೆ ಬೇಕು ಎಂದು ಗ್ರಾಮದಲ್ಲಿ ನ್ಯಾಯ ಪಂಚಾಯತಿ ಮಾಡಿದ್ದಾರೆ. ಆದರೆ ಈ ವಿಷಯ ಬಗೆ ಹರಿದಿಲ್ಲ. ಹೀಗಾಗಿ ದಂಪತಿ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ನಿಂದ ಕೇಸ್ ವಾಪಾಸ್ ಪಡೆಯುವಂತೆ ಮತ್ತೆ ಕಿರುಕುಳ ನೀಡಿದ್ದು, ಮನೆಯಿಂದ ಹೊರಹಾಕುತ್ತಿದ್ದಾರೆ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ದಂಪತಿಗಳು ಗದಗ ಗ್ರಾಮೀಣ ಪೋಲಿಸ್ ಠಾಣೆಗೆ ಬಂದು ಮಕ್ಕಳ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.
ಇನ್ನು ಈ ದಂಪತಿಗಳಿಗೆ ಏಳು ಜನ ಮಕ್ಕಳಿದ್ದು, ಮೂವರು ಗಂಡು ಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ಇಬ್ಬರು ಮಾತ್ರ ಕಿರುಕುಳ ನೀಡುತ್ತಿದ್ದಾರೆ ಎಂದು ದಂಪತಿಗಳು ಆರೋಪ ಮಾಡಿದ್ದಾರೆ. ಮುಪ್ಪಿನ ವಯಸ್ಸಿನಲ್ಲಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಮಕ್ಕಳು ಹೆತ್ತವರ ಕೆಟ್ಟವರಾಗಿದ್ದಾರೆ.
ಇದನ್ನೂ ಓದಿ:
ಹೆತ್ತ ಮಕ್ಕಳಿಂದಲೇ ವಂಚನೆಗೆ ಒಳಗಾದ 85 ವರ್ಷದ ವೃದ್ಧೆ; ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು
(Gadag Old age couple expelled from home and decided to book a complaint on sons )