ಆನ್‌ಲೈನ್ ಜೂಜು ನಿಯಂತ್ರಣಕ್ಕೆ ಸಂಬಂಧಿಸಿ ಹೈಕೋರ್ಟ್ನಲ್ಲಿ ಪಿಐಎಲ್ ವಿಚಾರಣೆ
ಹೈಕೋರ್ಟ್ಗೆ ಆನ್‌ಲೈನ್ ಗೇಮ್ಸ್ ಒಕ್ಕೂಟ, ಆನ್‌ಲೈನ್ ಗ್ಯಾಂಬ್ಲಿಂಗ್ ನಿಯಂತ್ರಿಸಲು ಸಮ್ಮತಿಯಿದ್ದು, ಆದರೆ ಸರ್ಕಾರ ಸ್ಕಿಲ್ ಗೇಮ್ ನಿರ್ಬಂಧಿಸಬಾರದು ಎಂದು ಮನವಿ ಮಾಡಿದೆ.

ಬೆಂಗಳೂರು: ಆನ್‌ಲೈನ್ ಜೂಜು ರದ್ದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಇಂದು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ಗೆ ಆನ್‌ಲೈನ್ ಗೇಮ್ಸ್ ಒಕ್ಕೂಟ, ಆನ್‌ಲೈನ್ ಗ್ಯಾಂಬ್ಲಿಂಗ್ ನಿಯಂತ್ರಿಸಲು ಸಮ್ಮತಿಯಿದ್ದು, ಆದರೆ ಸರ್ಕಾರ ಸ್ಕಿಲ್ ಗೇಮ್ ನಿರ್ಬಂಧಿಸಬಾರದು ಎಂದು ಮನವಿ ಮಾಡಿದೆ. ಈ ಮನವಿಯನ್ನು ಆಲಿಸಿದ ಹೈಕೋರ್ಟ್ ಸರ್ಕಾರದ ಬಳಿ ತನ್ನ ನಿಲುವು ತಿಳಿಸಲು ಸೂಚಿಸಿದೆ.
ಈಗಾಗಲೇ ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಆನ್‌ಲೈನ್ ಜೂಜಿನ ವಿರುದ್ಧ ಮಸೂದೆ ಅಂಗೀಕಾರವಾಗಿದೆ. ಆಂಧ್ರ ಪ್ರದೇಶ ಗೇಮಿಂಗ್ ಬಿಲ್ 2020ಯನ್ನು ಜಾರಿಗೊಳಿಸಲು ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಈ ಹಿಂದೆ ಆಂಧ್ರದಲ್ಲಿ, ಆನ್‌ಲೈನ್ ಜೂಜಿನ ಸಾಲ ತೀರಿಸಲಾಗದೆ ಕೆಲವು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಗಳ ಬೆನ್ನಲ್ಲೇ ಸರ್ಕಾರ ಆನ್‌ಲೈನ್ ಜೂಜಾಟಗಳಿಗೆ ನಿರ್ಬಂಧ ಹೇರುವ ಮನಮಾಡಿದೆ.
ಕರ್ನಾಟಕದಲ್ಲಿ ಯಾವಾಗ? ಆನ್‌ಲೈನ್ ಜೂಜಾಟಗಳನ್ನು ಬ್ಯಾನ್ ಮಾಡುವ ಬಗ್ಗೆ ಕರ್ನಾಟಕ ಸರ್ಕಾರವು ಹೇಳಿಕೆ ನೀಡುತ್ತಲೇ ಬಂದಿದ್ದು, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಜೂಜಿನಲ್ಲಿ ಪಾಲ್ಗೊಳ್ಳುವ ಯುವಕರಿಂದ ಅವರ ಮನೆಯವರೂ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮಿಳುನಾಡು, ಆಂಧ್ರದ ಬಳಿಕ ಕರ್ನಾಟಕದಲ್ಲೂ ಆನ್‌ಲೈನ್ ಗ್ಯಾಂಬ್ಲಿಂಗ್ ವಿರುದ್ಧ ಮಸೂದೆ ರಚಿಸಬೇಕು ಎಂಬ ಕೂಗು ಜೋರಾಗುತ್ತಿದೆ.
ಆನ್‌ಲೈನ್ ಆಟಗಳಿಂದಾಗಿ ವಂಚನೆ, ಕಳ್ಳತನ ಮುಂತಾದ ಅಪರಾಧ ಕೃತ್ಯಗಳೂ ಹೆಚ್ಚುತ್ತವೆ ಎಂದು ಆಂಧ್ರ ಗೃಹ ಸಚಿವೆ ಎಮ್. ಸುಚರಿತಾ ಅಭಿಪ್ರಾಯಪಟ್ಟಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಅಪರಾಧಿಗಳಿಗೆ ಏನು ಶಿಕ್ಷೆ ಅಪರಾಧಿಗಳಿಗೆ 5 ಸಾವಿರ ದಂಡ ಮತ್ತು ಒಂದು ವರ್ಷದ ಜೈಲು ಶಿಕ್ಷೆಯನ್ನು ನಿಗಧಿಪಡಿಸಲಾಗಿದ್ದು, ಅಪರಾಧ ಮರುಕಳಿಸಿದರೆ ಅಂಥವರಿಗೆ 10 ಸಾವಿರ ದಂಡ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಜಾಮೀನು ರಹಿತ ಶಿಕ್ಷೆ ಇದಾಗಿದೆ.
ಇದನ್ನೂ ಓದಿ: ಜುಲೈ 1ರೊಳಗೆ ಕೊವಿಡ್ ಮುಕ್ತ ಗುರಿ, ಮಹಿಳೆಯರಿಗೆ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
(PIL hearing on ban on Online Gambling in Karnataka High Court)