PM Modi ISRO Visit Highlights: ವಿಶೇಷ ವಿಮಾನದ ಮೂಲಕ ಹೆಚ್​​ಎಎಲ್​​ನಿಂದ ನವದೆಹಲಿಗೆ ತೆರಳಿದ ಮೋದಿ

|

Updated on: Aug 26, 2023 | 9:50 AM

PM Modi in Bangalore Live News Updates: ಚಂದ್ರಯಾನ-3 ರ ಯಶಸ್ಸು ಸಾಧಿಸಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದ್ದು, ಈ ಮಹತ್ವದ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಅಭಿನಂದಿಸಿದರು. ಪೀಣ್ಯದಲ್ಲಿರುವ ಇಸ್ರೋ ಪ್ರಧಾನ ಕಚೇರಿಗೆ ತೆರಳಿದ ಪ್ರಧಾನಿ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಆ ಕುರಿತ ಹೈಲೈಟ್ಸ್ ಇಲ್ಲಿದೆ.

PM Modi ISRO Visit Highlights: ವಿಶೇಷ ವಿಮಾನದ ಮೂಲಕ ಹೆಚ್​​ಎಎಲ್​​ನಿಂದ ನವದೆಹಲಿಗೆ ತೆರಳಿದ ಮೋದಿ
ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮೋದಿ ಮಾತು

ಬೆಂಗಳೂರು, ಆಗಸ್ಟ್ 26: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮತ್ತೆ ಬೆಂಗಳೂರಿಗೆ (Bangalore) ಬಂದಿದ್ದರು. ಈ ಬಾರಿ ದೇಶದ ಬಾಹ್ಯಾಕಾಶ ಸಂಸಶೋಧನಾ ಸಂಸ್ಥೆ ಇಸ್ರೋದ (ISRO) ಮಹತ್ತರ ಸಾಧನೆಯ ಬಗ್ಗೆ ವಿಜ್ಞಾನಿಗಳನ್ನು ಅಭಿನಂದಿಸಲು ಅವರು ಸಿಲಿಕಾನ್ ಸಿಟಿಗೆ ಬಂದಿದ್ದರು. ಚಂದ್ರಯಾನ-3 ರ (Chandrayaan-3) ಯಶಸ್ಸು ಸಾಧಿಸಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದ್ದು, ಈಗಾಗಲೇ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈಗಾಗಲೇ ಪೀಣ್ಯದಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಬ್ರಿಕ್ಸ್​​ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಮೋದಿ ಚಂದ್ರಯಾನ-3ರ ಯಶಸ್ಸಿನ ವೇಳೆ ಅಲ್ಲಿದ್ದರು. ನಂತರ ಅಲ್ಲಿಂದ ಗ್ರೀಕ್​ಗೆ ತೆರಳಿದ್ದ ಅವರು ಈಗ ಬೆಂಗಳೂರಿಗೆ ಬಂದಿದ್ದಾರೆ.

LIVE NEWS & UPDATES

The liveblog has ended.
  • 26 Aug 2023 09:49 AM (IST)

    PM Modi ISRO Visit Live: ವಿಶೇಷ ವಿಮಾನದ ಮೂಲಕ ಹೆಚ್​​ಎಎಲ್​​ನಿಂದ ನವದೆಹಲಿಗೆ ತೆರಳಿದ ಮೋದಿ

    ವಿಶೇಷ ವಿಮಾನದ ಮೂಲಕ ಪ್ರಧಾನಿ ಮೋದಿ ಹೆಚ್​​ಎಎಲ್​​ನಿಂದ ನವದೆಹಲಿಗೆ ತೆರಳಿದರು.

  • 26 Aug 2023 08:58 AM (IST)

    PM Modi ISRO Visit Live: ಇಸ್ರೋ ಕಮಾಂಡ್​ ಸೆಂಟರ್​ನಿಂದ ನಿರ್ಗಮಿಸಿದ ಮೋದಿ

    ಪೀಣ್ಯದ ಇಸ್ರೋ ಕಮಾಂಡ್​ ಸೆಂಟರ್​ನಿಂದ ನಿರ್ಗಮಿಸಿದ ಪ್ರಧಾನಿ ಮೋದಿ, ಹೆಚ್​ಎಎಲ್​ ಏರ್​ಪೋರ್ಟ್​​ನತ್ತ ತೆರಳಿದರು. ಕಾರ್ಯಕರ್ತರತ್ತ ಕೈಬೀಸಿ ಏರ್​​ಪೋರ್ಟ್​​ನತ್ತ ತೆರಳಿದರು.

  • 26 Aug 2023 08:40 AM (IST)

    PM Modi ISRO Visit Live: ದೇಶದ ಜನರ ಆಶೀರ್ವಾದ ನಮ್ಮ ಮೇಲಿದೆ

    ದೇಶದ ಜನರ ಆಶೀರ್ವಾದ ನಮ್ಮ ಮೇಲಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗುವ ಗುರಿಗೆ ಇದು ಪೂರಕವಾಗಲಿದೆ ಎಂದು ಮೋದಿ ಹೇಳಿದರು.

  • 26 Aug 2023 08:23 AM (IST)

    PM Modi ISRO Visit Live: ಚಂದ್ರಯಾನ ಯಶಸ್ವಿಯಾದ ದಿನ ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ; ಮೋದಿ ಘೋಷಣೆ

    ಚಂದ್ರಯಾನ-3 ಯಶಸ್ವಿಯಾದ ದಿನ, ಅಂದರೆ ಆಗಸ್ಟ್​ 23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಮೋದಿ ಘೋಷಣೆ ಮಾಡಿದರು.

  • 26 Aug 2023 08:19 AM (IST)

    PM Modi ISRO Visit Live: ಚಂದ್ರಯಾನ-2 ಪತನ ಸ್ಥಳಕ್ಕೆ ತಿರಂಗ ಪಾಯಿಂಟ್​ ನಾಮಕರಣ

    ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆಯೋಣ. ಶಿವನಲ್ಲಿ ಮಾನವ ಶಕ್ತಿಯನ್ನು ರೂಪಿಸುವ ಶಕ್ತಿ ಇದೆ. ಚಂದ್ರನ ಮೇಲೂ ತಿರಂಗ ರಾರಾಜಿಸುತ್ತಿದೆ ಎಂದ ಮೋದಿ, ಚಂದ್ರಯಾನ-2 ಪತನ ಸ್ಥಳಕ್ಕೆ ತಿರಂಗ ಪಾಯಿಂಟ್​ ಎಂದು ಹೆಸರಿಟ್ಟರು. ಈ ತಿರಂಗ ಪಾಯಿಂಟ್​​​ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಯಿತು. ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು. ಮೇಕ್​ ಇನ್​ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ ಎಂದು ಮೋದಿ ಹೇಳಿದರು.

  • 26 Aug 2023 08:13 AM (IST)

    PM Modi ISRO Visit Live: ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಹೆರಿಟ್ಟ ಪ್ರಧಾನಿ ಮೋದಿ

    ಚಂದ್ರಯಾನ-3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಾಮಕರಣ ಮಾಡಿದರು. ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಅವರು ಈ ಘೋಷಣೆ ಮಾಡಿದರು. ಜತೆಗೆ, ಚಂದ್ರಯಾನ-3 ಯಶಸ್ಸಿಗೆ ಮಹಿಳಾ ವಿಜ್ಞಾನಿಗಳ ಕೊಡುಗೆಯೂ ಇದೆ ಎಂದು ಮಹಿಳಾ ವಿಜ್ಞಾನಿಗಳನ್ನು ಕೊಂಡಾಡಿದರು.

  • 26 Aug 2023 08:08 AM (IST)

    PM Modi ISRO Visit Live: ಇಸ್ರೋ ವಿಜ್ಞಾನಿಗಳನ್ನು ಕೊಂಡಾಡಿದ ಪ್ರಧಾನಿ ಮೋದಿ

    ನಿಮ್ಮ ಸಾಧನೆಯನ್ನು ಎಷ್ಟೇ ಕೊಂಡಾಡಿದರೂ ಅದು ಕಡಿಮೆಯೇ. ಚಂದ್ರನ ಮೇಲೆ ಪ್ರಜ್ಞಾನ್​ ಪರಾಕ್ರಮ ಕಂಡು ಖುಷಿಯಾಗಿದೆ. ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ ಎಂದು ಇಸ್ರೋ ಕಮಾಂಡ್​ ಸೆಂಟರ್​ನಲ್ಲಿ ಪ್ರಧಾನಿ ಮೋದಿ ಹೇಳಿದರು.

  • 26 Aug 2023 08:03 AM (IST)

    PM Modi ISRO Visit Live: ನಾನು ವಿದೇಶದಲ್ಲಿದ್ದೆ, ಆದರೆ ನನ್ನ ಹೃದಯವು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ನಿಮ್ಮೊಂದಿಗೆ ಇತ್ತು; ಮೋದಿ

    ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡಿದೆ. ನಿಮ್ಮೆಲ್ಲರ ಈ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ. ನೀವೆಲ್ಲರೂ ಸೇರಿ ಭಾರತದ ಕನಸನ್ನು ನನಸು ಮಾಡಿದ್ದೀರಿ. ನಾನು ವಿದೇಶದಲ್ಲಿದ್ದೆ, ಆದರೆ ನನ್ನ ಹೃದಯವು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ನಿಮ್ಮೊಂದಿಗೆ ಇತ್ತು ಎಂದು ವಿಜ್ಞಾನಿಗಳನ್ನು ಉದ್ದೇಶಿಸಿ ಮೋದಿ ಹೇಳಿದರು.

  • 26 Aug 2023 07:58 AM (IST)

    PM Modi ISRO Visit Live: ವಿಜ್ಞಾನಿಗಳ ಸಾಧನೆ ಉಲ್ಲೇಖಿಸಿ ಭಾವುಕರಾದ ಮೋದಿ

    ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದು ಹೇಳುವ ವೇಳೆ ವಿಜ್ಞಾನಿಗಳ ಸಾಧನೆ ನೆನೆದು ಪ್ರಧಾನಮಂತ್ರಿ ಮೋದಿ ಭಾವುಕರಾದರು. ಪ್ರತಿಯೊಬ್ಬ ವಿಜ್ಞಾನಿಗೂ ನನ್ನಿಂದ ಸಲ್ಯೂಟ್​​. ನಿಮ್ಮ ಧೈರ್ಯ, ಶಕ್ತಿ, ಶ್ರಮ, ಸಾಮರ್ಥ್ಯಕ್ಕೆ ನನ್ನ ನಮನಗಳು ಎಂದು ಮೋದಿ ಹೇಳಿದರು. ಸದ್ಯ ಭಾರತ ಚಂದ್ರನ ಮೇಲಿದೆ. ದೇಶದ ಘನತೆಯನ್ನು ಉತ್ತುಂಗಕ್ಕೇರಿಸಿದ್ದಕ್ಕೆ ಧನ್ಯವಾದಗಳು ಎಂದು ಮೋದಿ ಹೇಳಿದರು.

  • 26 Aug 2023 07:57 AM (IST)

    PM Modi ISRO Visit Live: ನಿಮ್ಮನ್ನು ಭೇಟಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ

    ನಿಮ್ಮನ್ನು ಭೇಟಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದು ಪೀಣ್ಯದ ಇಸ್ರೋ ಕಮಾಂಡ್​ ಸೆಂಟರ್​ನಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.

  • 26 Aug 2023 07:50 AM (IST)

    PM Modi ISRO Visit Live: ಇಸ್ರೋ ವಿಜ್ಞಾನಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ

    ಪೀಣ್ಯದಲ್ಲಿನ ಇಸ್ರೋ ಕಮಾಂಡ್​ ಸೆಂಟರ್​ನಲ್ಲಿ ಇಸ್ರೋ ವಿಜ್ಞಾನಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸುತ್ತಿದ್ದಾರೆ.

  • 26 Aug 2023 07:46 AM (IST)

    PM Modi ISRO Visit Live: ಚಂದ್ರಯಾನ-3 ಯಶಸ್ಸಿನ ಕುರಿತು ಪ್ರಧಾನಿ ಮೋದಿಗೆ ಇಸ್ರೋ ಅಧ್ಯಕ್ಷರಿಂದ ಮಾಹಿತಿ

    ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ ಮೋದಿ ಅವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು.  ನಂತರ ಚಂದ್ರಯಾನ-3 ಯಶಸ್ಸಿನ ಕುರಿತು ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಪ್ರಧಾನಿ ಮೋದಿಗೆ ಮಾಹಿತಿ ನೀಡಿದರು.  ಪ್ರಜ್ಞಾನ್​ ರೋವರ್​​ ಕಾರ್ಯನಿರ್ವಹಣೆ, ಅನ್ವೇಷಣೆ ಬಗ್ಗೆ ಮಾಹಿತಿ ನೀಡಿದರು.

  • 26 Aug 2023 07:38 AM (IST)

    PM Modi ISRO Visit Live: ಪ್ರಧಾನಿ ಮೋದಿ ಸ್ವಾಗತಿಸಿದ ಇಸ್ರೋ ಅಧ್ಯಕ್ಷ ಸೋಮನಾಥ್

    ಬೆಂಗಳೂರಿನ ಪೀಣ್ಯದ ಇಸ್ರೋ ಕೇಂದ್ರಕ್ಕೆ ಆಗಮಿಸಿದ ಮೋದಿ ಅವರನ್ನು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಸ್ವಾಗತಿಸಿದರು. ಯು.ಆರ್.ರಾವ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಂ.ಶಂಕರನ್, ಇಸ್ಟ್ರಾಕ್ ನಿರ್ದೇಶಕ ಬಿ.ಎನ್.ರಾಮಕೃಷ್ಣರಿಂದ ಮೋದಿಗೆ ಸ್ವಾಗತ ದೊರೆಯಿತು.

  • 26 Aug 2023 07:29 AM (IST)

    PM Modi ISRO Visit Live: ಮಾರ್ಗ ಮಧ್ಯೆ ಜನರತ್ತ ಕೈಬೀಸಿದ ಮೋದಿ

    ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ಗೆ ತೆರಳುತ್ತಿರುವಾಗ ಜನರತ್ತ ಕೈಬೀಸಿದರು.

  • 26 Aug 2023 07:28 AM (IST)

    PM Modi ISRO Visit Live: ಇಸ್ರೋ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ಮೋದಿ

    ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಇಸ್ರೋ ಕಚೇರಿಯಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಯು.ಆರ್. ರಾವ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಂ. ಶಂಕರನ್ ಮತ್ತು ಇಸ್ಟ್ರಾಕ್ ನಿರ್ದೇಶಕ ಬಿ.ಎನ್. ರಾಮಕೃಷ್ಣ ಅವರಿಗೆ ಮಾತ್ರ ಪ್ರಧಾನಿ ಸ್ವಾಗತಕ್ಕೆ ಅವಕಾಶ ನೀಡಲಾಗಿದೆ.

  • 26 Aug 2023 07:20 AM (IST)

    PM Modi ISRO Visit Live: ಕೆಲವೇ ಕ್ಷಣಗಳಲ್ಲಿ ಇಸ್ರೋ ಪ್ರಧಾನ ಕಚೇರಿಗೆ ಪ್ರಧಾನಿ ಮೋದಿ

    ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಬೆಂಗಳೂರು ಪೊಲೀಸರಿಂದ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್‌ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಹೆಚ್‌ಎಎಲ್‌ ಏರ್‌ಪೋರ್ಟ್‌ನಿಂದ ಪೀಣ್ಯದವರೆಗೂ ಬಂದೋಬಸ್ತ್‌ ಇದೆ. ಪ್ರಧಾನಿ ಸಾಗುವ ರಸ್ತೆಯಲ್ಲಿ 2000ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. HAL ಏರ್‌ಪೋರ್ಟ್‌ನಲ್ಲಿ 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. HALನಲ್ಲಿ ವೈಟ್‌ಫೀಲ್ಡ್‌, ಪೂರ್ವ ವಿಭಾಗದ ಡಿಸಿಪಿಯಿಂದ ಭದ್ರತೆ. ಪ್ರಧಾನಿ ಸಾಗುವ ರಸ್ತೆಯಲ್ಲಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ, ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ನೇತೃತ್ವದಲ್ಲಿ ಬಂದೋಬಸ್ತ್‌. ಪೀಣ್ಯದಲ್ಲಿ ಉತ್ತರ ಡಿಸಿಪಿ ಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ಭದ್ರತೆ. ಎಲ್ಲಾ ಭದ್ರತೆಗೂ ಪೊಲೀಸ್ ಆಯುಕ್ತ ದಯಾನಂದ್‌ ಮೇಲುಸ್ತುವಾರಿ. ಟ್ರಾಫಿಕ್ ವಿಭಾಗವನ್ನು ಎಂ.ಎನ್.ಅನುಚೇತ್ ನಿಭಾಯಿಸುತ್ತಿದ್ದಾರೆ.

  • 26 Aug 2023 06:54 AM (IST)

    PM Modi ISRO Visit Live: ಸಿಎಂ, ಡಿಸಿಎಂ, ರಾಜ್ಯಪಾಲರಿಗೆ ಧನ್ಯವಾದ ಸಮರ್ಪಿಸಿದ ಮೋದಿ

    ಭಾರತದಲ್ಲಿ ಬೆಳಕು ಹರಿದಿದೆ, ಆ ಬೆಳಕಿನಲ್ಲಿ ಬೆಂಗಳೂರಿಗರ ಮುಖ ನೋಡಿದೆ. ವಿದೇಶದಲ್ಲಿದ್ದಾಗ ಅಲ್ಲಿಂದಲೇ ಬೆಂಗಳೂರಿಗೆ ಬರಲು ನಿರ್ಧರಿಸಿದೆ. ಅದಕ್ಕೆ ಶೀಘ್ರದಲ್ಲೇ ವ್ಯವಸ್ಥೆ ಮಾಡಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯಪಾಲರಿಗೆ ಧನ್ಯವಾದ ಎಂದು ಮೋದಿ ಹೇಳಿದರು.

  • 26 Aug 2023 06:51 AM (IST)

    PM Modi ISRO Visit Live: ನಮ್ಮ ವಿಜ್ಞಾನಿಗಳ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಗಿದೆ; ಪ್ರಧಾನಿ ಮೋದಿ

    ವಿಜ್ಞಾನಿಗಳ ಸಾಧನೆ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ನಮ್ಮ ವಿಜ್ಞಾನಿಗಳ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಗಿದೆ. ವಿದೇಶದಲ್ಲಿ ಇರುವಾಗಲೇ ಇಸ್ರೋ ಸಂಸ್ಥೆಗೆ ಭೇಟಿ ನೀಡಲು ನಿರ್ಧರಿಸಿದೆ. ವಿದೇಶದಲ್ಲಿ ಇರುವಾಗಲೇ ಇಸ್ರೋ ಸಂಸ್ಥೆಗೆ ಭೇಟಿ ನೀಡಲು ನಿರ್ಧರಿಸಿದೆ. ಹಾಗಾಗಿ ವಿದೇಶದಿಂದ ನೇರವಾಗಿ ವಿಜ್ಞಾನಿಗಳಿಗೆ ಭೇಟಿಗೆ ಬಂದಿದ್ದೇನೆ ಎಂದು ಮೋದಿ ಹೇಳಿದರು.

  • 26 Aug 2023 06:48 AM (IST)

    PM Modi ISRO Visit Live: ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್; ಮೋದಿ ಘೋಷಣೆ

    ಹೆಚ್​ಎಎಲ್ ಏರ್​ಪೋರ್ಟ್​​ನಿಂದ ಇಸ್ರೋ ಕೇಂದ್ರಕ್ಕೆ ಹೊರಡುತ್ತಿದ್ದಂತೆಯೇ ಜನರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಇದೇ ವೇಳೆ ಜನ ಜೈ ಮೋದಿ ಎಂಬ ಘೋಷಣೆ ಕೂಗಲು ಮುಂದಾದಾಗ ಅದನ್ನು ತಡೆದು, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದು ಮೋದಿ ಘೋಷಣೆ ಮಾಡಿದರು.

  • 26 Aug 2023 06:40 AM (IST)

    PM Modi ISRO Visit Live: ಹೆಚ್​ಎಎಲ್​ ಏರ್​ಪೋರ್ಟ್​​ನಿಂದ ಇಸ್ರೋ ಕೇಂದ್ರದತ್ತ ತೆರಳಿದ ಪ್ರಧಾನಿ ಮೋದಿ

    ಹೆಚ್​ಎಎಲ್​ ಏರ್​ಪೋರ್ಟ್​​ನಿಂದ ಬೆಂಗಳೂರಿನ ಪೀಣ್ಯದ ಬಳಿಯಲ್ಲಿರುವ ಇಸ್ರೋ ಕೇಂದ್ರದತ್ತ ಪ್ರಧಾನಿ ಮೋದಿ ತೆರಳಿದರು.

  • 26 Aug 2023 06:33 AM (IST)

    PM Modi ISRO Visit Live: ಬೆಂಗಳೂರಿಗೆ ಮೋದಿ ಆಗಮಿಸಿದ ಕ್ಷಣ ಹೀಗಿದೆ ನೋಡಿ

    ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ ಭೇಟಿಯನ್ನು ಮುಗಿಸಿದ ನಂತರ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾಗಿರುವ ಇಸ್ರೋ ತಂಡದ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಲಿದ್ದಾರೆ. ಮೋದಿ ಬೆಂಗಳೂರಿನಲ್ಲಿ ಲ್ಯಾಂಡ್ ಆದ ಕ್ಷಣ ಹೀಗಿದೆ ನೋಡಿ.

    ಬೆಂಗಳೂರಿನಲ್ಲಿ ಬಂದಿಳಿದ ಮೋದಿಯ ವಿಡಿಯೋ

  • 26 Aug 2023 06:24 AM (IST)

    PM Modi ISRO Visit Live: ಕೆಲವೇ ಕ್ಷಣಗಳಲ್ಲಿ ಇಸ್ರೋ ಕೇಂದ್ರಕ್ಕೆ ತೆರಳಲಿರುವ ಮೋದಿ

    ಕೆಲವೇ ಕ್ಷಣಗಳಲ್ಲಿ HAL ಏರ್​ಪೋರ್ಟ್​ನಿಂದ ಮೋದಿ ಇಸ್ರೋ ಕೇಂದ್ರಕ್ಕೆ ನಿರ್ಗಮಿಸಲಿದ್ದಾರೆ. ಟ್ರಿನಿಟಿ ಸರ್ಕಲ್, ಎಂ.ಜಿ.ರಸ್ತೆ, ಕಬ್ಬನ್ ​ಪಾರ್ಕ್ ರೋಡ್‌, ರಾಜಭವನ ರಸ್ತೆ, ಚಾಲುಕ್ಯ ಸರ್ಕಲ್, ಕಾವೇರಿ ಜಂಕ್ಷನ್, ಸ್ಯಾಂಕಿ ಟ್ಯಾಂಕ್ ರಸ್ತೆ, ಮಾರಮ್ಮ ಸರ್ಕಲ್, ಯಶವಂತಪುರ, ಗೊರಗುಂಟೆಪಾಳ್ಯ, ಪೀಣ್ಯ ಮೂಲಕ ಇಸ್ರೋ ಕಚೇರಿಗೆ ಮೋದಿ ತೆರಳಲಿದ್ದಾರೆ.

  • 26 Aug 2023 06:17 AM (IST)

    PM Modi ISRO Visit Live: ಬೆಂಗಳೂರಿಗೆ ಬಂದಿಳಿದೆ; ಪ್ರಧಾನಿ ಮೋದಿ ಟ್ವೀಟ್

    ಬೆಂಗಳೂರಿಗೆ ಬಂದಿಳಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಜತೆಗೆ, ಚಂದ್ರಯಾನ-3ರ ಯಶಸ್ಸಿನಿಂದ ಭಾರತಕ್ಕೆ ಹೆಮ್ಮೆ ತಂದಿರುವ ನಮ್ಮ ಅಸಾಧಾರಣ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲು ಎದುರುನೋಡುತ್ತಿದ್ದೇನೆ. ಅವರ ಸಮರ್ಪಣೆ ಮತ್ತು ಉತ್ಸಾಹವು ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರದ ಸಾಧನೆಗಳ ಹಿಂದಿನ ಪ್ರೇರಕ ಶಕ್ತಿಗಳಾಗಿವೆ ಎಂದು ಮೋದಿ ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.

  • 26 Aug 2023 06:14 AM (IST)

    PM Modi ISRO Visit Live: ಪ್ರಧಾನಿ ಮೋದಿಗೆ ಬಿಜೆಪಿ ನಾಯಕರ ಸ್ವಾಗತ

    ಗ್ರೀಕ್​ ದೇಶದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯ ಬಿಜೆಪಿ ನಾಯಕರು
    ಸ್ವಾಗತಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದರಾದ ತೇಜಸ್ವಿ ಸೂರ್ಯ, ಎಸ್​​​.ಮುನಿಸ್ವಾಮಿ, ಶಾಸಕರಾದ ಭೈರತಿ ಬಸವರಾಜ್​​, ಮಂಜುಳಾ ಲಿಂಬಾವಳಿ ಪ್ರಧಾನಿಯವರನ್ನು ಸ್ವಾಗತಿಸಿದರು.

  • 26 Aug 2023 06:07 AM (IST)

    PM Modi ISRO Visit Live: ಹೆಚ್​ಎಎಲ್​ ಏರ್​ಪೋರ್ಟ್​ಗೆ ಆಗಮಿಸಿದ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಹೆಚ್​ಎಎಲ್​ ಏರ್​​​ಪೋರ್ಟ್​​ಗೆ ಆಗಮಿಸಿದ್ದಾರೆ. ಅಲ್ಲಿ ತುಸು ಹೊತ್ತು ವಿಶ್ರಾಂತಿ ಪಡೆಯಲಿರುವ ಅವರು, ನಂತರ ಪೀಣ್ಯದಲ್ಲಿರುವ ಇಸ್ರೋ ಪ್ರಧಾನ ಕಚೇರಿಗೆ ತೆರಳಲಿದ್ದಾರೆ.

  • 26 Aug 2023 06:01 AM (IST)

    PM Modi ISRO Visit Live: ಮೋದಿ ಸ್ವಾಗತಕ್ಕೆ ಬೀದಿಗಳಲ್ಲಿ ಜಮಾಯಿಸಿದ ಜನ

    ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಚಂದ್ರಯಾನ-3 ಮಿಷನ್‌ನಲ್ಲಿ ತೊಡಗಿರುವ ಇಸ್ರೋ ತಂಡದ ವಿಜ್ಞಾನಿಗಳನ್ನು ಭೇಟಿ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಪೋಸ್ಟರ್‌ಗಳು ಮತ್ತು ರಾಷ್ಟ್ರಧ್ವಜದೊಂದಿಗೆ ಸ್ಥಳೀಯರು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಬೀದಿಗಳಲ್ಲಿ ಜಮಾಯಿಸಿದ್ದಾರೆ.

  • 26 Aug 2023 05:59 AM (IST)

    PM Modi ISRO Visit Live: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕೆ ಜನಸಾಗರ

    ಪ್ರಧಾನಿ ಮೋದಿ ಅವರ ಸ್ವಾಗತಕ್ಕೆ ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ನಸುಕಿನಲ್ಲೇ ಮೋದಿ ಸಾಗುವ ರಸ್ತೆಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.

  • 26 Aug 2023 05:51 AM (IST)

    PM Modi in Bangalore: ಮೋದಿ ಭೇಟಿ ಹಿನ್ನೆಲೆ; ಬೆಂಗಳೂರು ಪೊಲೀಸರಿಂದ ಬಂದೋಬಸ್ತ್‌

    ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಪೊಲೀಸರಿಂದ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್‌ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿದೆ. ಹೆಚ್‌ಎಎಲ್‌ ಏರ್‌ಪೋರ್ಟ್‌ನಿಂದ ಪೀಣ್ಯದವರೆಗೂ ಬಂದೋಬಸ್ತ್‌ ಏರ್ಡಿಸಲಾಗಿದೆ.

Published On - 5:49 am, Sat, 26 August 23

Follow us on