Vande Bharat Train: ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿರುವ ಮೋದಿ, ರೈಲು ಸಂಚಾರದಲ್ಲಿ ವ್ಯತ್ಯಯ

ಪ್ರಧಾನಿ ಮೋದಿ ಅವರು ವಂದೇ ಭಾರತ್​ ರೈಲಿಗೆ ಚಾಲನೆ ನೀಡಲಿದ್ದು ಬೆಂಗಳೂರು ನಗರಕ್ಕೆ ಆಗಮಿಸುವ ಕೆಲವೊಂದು ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.

Vande Bharat Train: ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿರುವ ಮೋದಿ, ರೈಲು ಸಂಚಾರದಲ್ಲಿ ವ್ಯತ್ಯಯ
ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ
Follow us
| Updated By: Rakesh Nayak Manchi

Updated on:Nov 11, 2022 | 7:48 AM

ಬೆಂಗಳೂರು: ಮೈಸೂರಿನಿಂದ ಬೆಂಗಳೂರಿನ ಮೂಲಕ ಚೆನ್ನೈಗೆ ತೆರಳುವ ‘ವಂದೇ ಭಾರತ್’ ರೈಲಿಗೆ (Vande Bharat Train) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲು ದಕ್ಷಿಣದಲ್ಲಿ ಮೊದಲ ಸೆಮಿ-ಹೈಸ್ಪೀಡ್ ರೈಲು ಮತ್ತು ದೇಶದಲ್ಲಿ ಐದನೇ ರೈಲು ಆಗಿದೆ. ರೈಲಿಗೆ ಚಾಲನೆ ನೀಡುತ್ತಿರುವ ಹಿನ್ನೆಲೆ ಕಣ್ಣೂರು-ಕೆಎಸ್​ಆರ್​ ಎಕ್ಸ್​ಪ್ರೆಸ್, ಅರಸೀಕೆರೆ-ಕೆಎಸ್​ಆರ್​ ಸ್ಪೆಷಲ್ ಎಕ್ಸ್​ಪ್ರೆಸ್ ರೈಲು ಸೇರಿದಂತೆ ಬೆಂಗಳೂರಿನಲ್ಲಿ 11 ರೈಲುಗಳ ಸಂಚಾರ ರದ್ದುಗೊಂಡಿದ್ದು, ಕೆಲವೊಂದು ರೈಲುಗಳ ಸಮಯದಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಕಣ್ಣೂರು- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್​ಆರ್)​ ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದಾಗಲಿದ್ದು, ಅರಸೀಕೆರೆ-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ​ ಸ್ಪೆಷಲ್ ಎಕ್ಸ್​ಪ್ರೆಸ್​ ರೈಲು, ಕೋಲಾರ-ಯಶವಂತಪುರ​​ ಡೆಮು ಎಕ್ಸ್​ಪ್ರೆಸ್​ ರೈಲು, ಮೈಸೂರು-ನಾಯಂಡಹಳ್ಳಿ​​ ಮೆಮು ಎಕ್ಸ್​ಪ್ರೆಸ್​ ರೈಲು, ಹಿಂದೂಪುರ-ಯಶವಂತಪುರ ಮೆಮು ಎಕ್ಸ್​ಪ್ರೆಸ್​ ರೈಲು, ಮಾರಿಕುಪ್ಪಂ-ಕಂಟೋನ್ಮೆಂಟ್​ ಮೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದಾಗಿದೆ.

ಅಲ್ಲದೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್​ಆರ್)-ತುಮಕೂರು ಮೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದಾಗಿದ್ದು, ಹಾಸನ-ಕೆಎಸ್​ಆರ್​ ಡೆಮು ಎಕ್ಸ್​ಪ್ರೆಸ್​ ರೈಲು, ಕೆಎಸ್​ಆರ್​-ವೈಟ್​ಫೀಲ್ಡ್​ ಮೆಮು ಎಕ್ಸ್​ಪ್ರೆಸ್​ ರೈಲು, ಮೈಸೂರು-ಕೆಎಸ್​ಆರ್​ ಮೈಸೂರು ಮೆಮು ಎಕ್ಸ್​ಪ್ರೆಸ್​ ರೈಲು, ಕುಪ್ಪಂ-ಬೆಂಗಳೂರು ಮೆಮು ಎಕ್ಸ್​ಪ್ರೆಸ್​ ರೈಲು ಸಂಚಾರ ರದ್ದುಗೊಂಡಿದೆ.

ಐದು ರೈಲುಗಳ ಸಮಯದಲ್ಲಿ ಬದಲಾವಣೆ

ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ ಹಿನ್ನೆಲೆ ಬೆಂಗಳೂರಿಗೆ ಆಗಮಿಸುವ ಐದು ರೈಲುಗಳ ಸಮಯದಲ್ಲಿ ಬದಲಾವಣೆಯಾಗಲಿದೆ. ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿಗೆ ಆಗಮಿಸುವ ಸಮಯದಲ್ಲಿ ವ್ಯತ್ಯಯವಾಗಲಿದೆ. ಸುಮಾರು 60 ನಿಮಿಷ ತಡವಾಗಿ ಆಗಮಿಸಲಿರುವ ಜನಶತಾಬ್ದಿ ಎಕ್ಸ್‌ಪ್ರೆಸ್‌ ಬೆಂಗಳೂರಿಗೆ ಆಗಮಿಸಲಿದೆ. ಇದಲ್ಲದೆ, ಚಾಮುಂಡಿ ಎಕ್ಸ್‌ಪ್ರೆಸ್‌ ರೈಲಿನ ಸಮಯದಲ್ಲೂ ಬದಲಾವಣೆಯಾಗಿದ್ದು, ಮೈಸೂರಿನಿಂದ 60 ನಿಮಿಷ ತಡವಾಗಿ ಆಗಮಿಸಲಿದೆ.

ಮೈಸೂರು ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆಯಾಗಿದ್ದು, ಚೆನ್ನೈನಿಂದ 60 ನಿಮಿಷ ತಡವಾಗಿ ಬೆಂಗಳೂರಿಗೆ ಆಗಮಿಸಲಿದ್ದು, ಮೈಸೂರು ರಾಜರಾಣಿ ಎಕ್ಸ್‌ಪ್ರೆಸ್‌ ರೈಲು ಮೈಸೂರಿನಿಂದ ಬೆಂಗಳೂರಿಗೆ 90 ನಿಮಿಷ ತಡವಾಗಿ ಆಗಮಿಸಲಿದೆ. ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಮೈಸೂರಿನಿಂದ ಬೆಂಗಳೂರಿಗೆ 100 ನಿಮಿಷ ತಡವಾಗಿ ಆಗಮಿಸಲಿದ್ದರೆ, ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲಿನ ಮಾರ್ಗ ಬದಲಾವಣೆಯಾಗಿದೆ. ಹಾಸನ, ಅರಸೀಕೆರೆ ಮಾರ್ಗವಾಗಿ ಬೆಂಗಳೂರಿಗೆ ರೈಲು ಆಗಮಿಸಲಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:48 am, Fri, 11 November 22