AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಸ್ಮೋಸ್ ತಾರಾಲಯದ ಮೂಲಕ ಮೈಸೂರು ಕೂಡ ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯ ಸೇರಿಸಿದೆ: ನರೇಂದ್ರ ಮೋದಿ

ಮೈಸೂರಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ 'ಕಾಸ್ಮೋಸ್' ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ಈ ಅತ್ಯಾಧುನಿಕ ತಾರಾಲಯದ ಮೂಲಕ ಮೈಸೂರು ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯ ಸೇರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ವಿಜ್ಞಾನ ಆಧ್ಯಾತ್ಮ ಜೊತೆ ಜೊತೆಗೆ ಸಾಗಿದೆ. ನಮ್ಮ ಪೂರ್ವಿಕರು ನಕ್ಷತ್ರ, ಗ್ರಹದ ಗತಿಯನ್ನು ಗುರುತಿಸಿದ್ದರು. ಅವರೇ ಕ್ಯಾಲೆಂಡರ್ ರಚಿಸಿದ್ದರು. ಮೈಸೂರು ಇಂತಹುದ್ದಕ್ಕೆಲ್ಲ ಉತ್ತಮ ಪ್ರೋತ್ಸಾಹ ನೀಡಿದೆ ಎಂದ ಪ್ರಧಾನಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಉಲ್ಲೇಖಿಸಿ ರಾಜಮನೆತನದ ಕೊಡುಗೆ ಸ್ಮರಿಸಿದ್ದಾರೆ.

ಕಾಸ್ಮೋಸ್ ತಾರಾಲಯದ ಮೂಲಕ ಮೈಸೂರು ಕೂಡ ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯ ಸೇರಿಸಿದೆ: ನರೇಂದ್ರ ಮೋದಿ
ನರೇಂದ್ರ ಮೋದಿ
ಪ್ರಸನ್ನ ಹೆಗಡೆ
|

Updated on:Nov 13, 2026 | 6:28 PM

Share

ಮೈಸೂರು, ನವೆಂಬರ್​​ 13: ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮತ್ತು ನೀಲಕಂಠ ಸೋಮಯಾಜಿ ಅವರಂತಹ ಅನೇಕ ಶ್ರೇಷ್ಠ ಖಗೋಳ ವಿಜ್ಞಾನಿಗಳನ್ನು ಭಾರತ ಕಂಡಿದೆ. ಅಂದು ಇಂದು ನಮ್ಮ ಬಳಿ ಇರುವಂತಹ ಅತ್ಯಾಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನಗಳು ಇರಲಿಲ್ಲ. ಆದರೂ ಅವರು ಮಹತ್ವದ ಆವಿಷ್ಕಾರಗಳನ್ನು ಮಾಡಿದ್ದರು ಮತ್ತು ಕಠಿಣ ಗಣಿತದ ಲೆಕ್ಕಾಚಾರಗಳನ್ನು ನಡೆಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗಿರುವ ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ ‘ಕಾಸ್ಮೋಸ್’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಕಾಸ್ಮೋಸ್ ತಾರಾಲಯದ ಮೂಲಕ ಮೈಸೂರು ಕೂಡ ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯವನ್ನು ಸೇರಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಉಲ್ಲೇಖಿಸಿದ ಮೋದಿ

ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಮೋದಿ, ತಾಯಿ ಚಾಮುಂಡೇಶ್ವರಿಗೆ ಶ್ರದ್ಧಾಪೂರ್ವಕವಾಗಿ ನಮನ ಸಲ್ಲಿಸುವುದಾಗಿ ಹೇಳಿದ್ದಾರೆ. ಮೈಸೂರಿಗೆ ಬಂದಿರುವುದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ. ಕೆಲ ತಿಂಗಳ ಹಿಂದೆಯೂ ವಿವೇಕಾನಂದರ ಸ್ಮಾರಕ ಉದ್ಘಾಟನೆಗೆ ಬಂದಿದ್ದೆ. ಈಗ ಕಾಸ್ಮೋಸ್​​ ತಾರಾಲಯ ಲೋಕಾರ್ಪಣೆಗೊಳಿಸಲು ಬಂದಿದ್ದೇನೆ. ವಿವೇಕ ಸ್ಮಾರಕ ಒಳಗಿನದನ್ನು ಅರ್ಥ ಮಾಡಿಸಿದರೆ, ತಾರಾಲಯ ಬಾಹ್ಯಕಾಶವನ್ನು ಅರ್ಥ ಮಾಡಿಸುತ್ತದೆ. ಭಾರತದಲ್ಲಿ ವಿಜ್ಞಾನ ಆಧ್ಯಾತ್ಮ ಜೊತೆ ಜೊತೆಗೆ ಸಾಗಿದೆ. ನಮ್ಮ ಪೂರ್ವಿಕರು ನಕ್ಷತ್ರ, ಗ್ರಹದ ಗತಿಯನ್ನು ಗುರುತಿಸಿದ್ದರು. ಅವರೇ ಕ್ಯಾಲೆಂಡರ್ ರಚಿಸಿದ್ದರು. ಮೈಸೂರು ಇಂತಹುದ್ದಕ್ಕೆಲ್ಲ ಉತ್ತಮ ಪ್ರೋತ್ಸಾಹ ನೀಡಿದೆ ಎಂದ ಪ್ರಧಾನಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಉಲ್ಲೇಖಿಸಿ ರಾಜಮನೆತನದ ಕೊಡುಗೆ ಸ್ಮರಿಸಿದ್ದಾರೆ.

ಒಲಂಪಿಯಾಡ್ ಬಾಹ್ಯಕಾಶದ ವಿಚಾರಲ್ಲಿ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಪದಕ ಗೆದ್ದಿರುವುದು ದೇಶಕ್ಕೆ ಹೆಮ್ಮೆಯ ವಿಷಯ. ನಮ್ಮ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಬೇಕಾಗಿದ್ದು ಸಿಕ್ಕರೆ ಸಾಧಿಸಿ ತೋರಿಸುತ್ತಾರೆ. ಮೈಸೂರು ಕಾಸ್ಮೋಸ್ ತಾರಾಲಯ ಕೂಡ ಈ ಕೆಲಸ ಮಾಡಲಿದೆ. ಯಾವುದೇ ದೇಶ ವಿಜ್ಞಾನದಲ್ಲಿ ಹಿಂದೆ ಉಳಿಯಲು ಸಿದ್ಧವಿಲ್ಲ. ನಾವೂ ಈ ವಿಚಾರದಲ್ಲಿ ಪ್ರಗತಿ ಸಾಧಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಚಂದ್ರಯಾನ 3ರ ಬಗ್ಗೆಯೂ ಉಲ್ಲೇಖಸಿದ ಮೋದಿ, ಆದಿತ್ಯ ಎಲ್ 1 ಬಗ್ಗೆಯೂ ವಿವರಿಸಿದ್ದಾರೆ. ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಸ್ಪೇಸ್​ ಸ್ಟೇಷನ್ ತಲುಪಿ ಸಂಶೋಧನೆ ಮಾಡಿದ್ದಾರೆ. ನಮ್ಮ ಯುವ ವಿಜ್ಞಾನಿಗಳು ರಾಕೆಟ್ ಲಾಂಚ್ ಮಾಡುತ್ತಿದ್ದಾರೆ. ಇದು ಹೊಸ ಭಾರತದ ಪರಿಚಯವಾಗಿದೆ. ನಿಮ್ಮಲ್ಲಿ ಅನೇಕರು ರೈಲಿನ ಲೈವ್ ಲೊಕೇಷನ್ ನೋಡುತ್ತೀರ. ಇದು ಇಸ್ರೋ ಹಾಗೂ ರೈಲ್ವೇ ಇಲಾಖೆ ಸಹಯೋಗದಲ್ಲಿ ಆಗುತ್ತಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೂ ಸ್ಯಾಟಲೈಟ್ ಸಹಯೋಗ ಪಡೆಯಲಾಗಿದೆ. ಸಮಾಜಕ್ಕಾಗಿ ವಿಜ್ಞಾನ ಅನ್ನೋದು ನಮ್ಮ ಚಿಂತನೆಯಾಗಿದೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: 15,600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಬೆಂಗಳೂರಲ್ಲಿ ಪ್ರಧಾನಿ ಮೋದಿಯಿಂದ ಚಾಲನೆ, ಶಂಕುಸ್ಥಾಪನೆ

ಭಾರತದ ವಿದ್ಯಾರ್ಥಿಗಳು ಮತ್ತು ಸಂಶೋಧಕರು ವಿಶ್ವದ ಅತ್ಯುತ್ತಮ ವೈಜ್ಞಾನಿಕ ಸಂಶೋಧನೆಗಳನ್ನು ಸುಲಭವಾಗಿ ಪಡೆಯಲು ಸರ್ಕಾರವು ‘ಒನ್ ನೇಷನ್, ಒನ್ ಸಬ್‌ಸ್ಕ್ರಿಪ್ಷನ್’ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ದೇಶಾದ್ಯಂತದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಪ್ರಮುಖ ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆಗಳನ್ನು ಪ್ರವೇಶಿಸಲು ಹೆಚ್ಚಿನ ಅನುಕೂಲವಾಗಿದೆ. ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾಲಯಗಳು ಹೊಸ ಸಂಶೋಧನಾ ಉಪಕ್ರಮಗಳನ್ನು ಕೈಗೊಳ್ಳಲು ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಅನ್ವೇಷಣ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. ಸಂಶೋಧಕರಿಗೆ ಅಗತ್ಯವಾದ ಆರ್ಥಿಕ ನೆರವು ದೊರೆಯುವಂತೆ ಮಾಡಲು 1 ಲಕ್ಷ ಕೋಟಿ ರೂಪಾಯಿಗಳ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಉಪಕ್ರಮವು ಪ್ರಯೋಗಾಲಯಗಳಲ್ಲಿ ಅಭಿವೃದ್ಧಿಪಡಿಸುವ ಹೊಸ ತಂತ್ರಜ್ಞಾನಗಳನ್ನು ಯುವ ಸಂಶೋಧಕರು ಮತ್ತು ನಾವೀನ್ಯಕಾರರ ಮೂಲಕ ನೈಜ ಜೀವನದಲ್ಲಿ ಬಳಕೆಗೆ ತರುವುದಕ್ಕೆ ನೆರವಾಗಲಿದೆ.

‘ತಾರಾಲಯಗಳು ಮತ್ತು ವಿಜ್ಞಾನ ಕೇಂದ್ರಗಳದ್ದು ಪಾತ್ರ ಮಹತ್ವದ್ದು’

ಭಾರತದಲ್ಲಿ ವಿಜ್ಞಾನ ಮತ್ತು ಸಂಶೋಧನೆಗೆ ಪೂರಕವಾದ ಬಲಿಷ್ಠ ವ್ಯವಸ್ಥೆಯೊಂದು ವೇಗವಾಗಿ ರೂಪುಗೊಳ್ಳುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಯುವ ಮನಸ್ಸುಗಳಲ್ಲಿ ಕುತೂಹಲವನ್ನು ಬೆಳೆಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ತಾರಾಲಯಗಳು ಮತ್ತು ವಿಜ್ಞಾನ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಸ್ಥಳೀಯ ಶಾಲಾ-ಕಾಲೇಜುಗಳ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾಸ್ಮೋಸ್ ತಾರಾಲಯಕ್ಕೆ ಭೇಟಿ ನೀಡುವಂತೆ ವ್ಯವಸ್ಥಿತ ಕಾರ್ಯಕ್ರಮಗಳನ್ನು ರೂಪಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ತಾರಾಲಯದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಮನವಿ ಮಾಡುತ್ತೇನೆ. ಇಂದು ಬ್ರಹ್ಮಾಂಡದ ಬಗ್ಗೆ ತಿಳಿದುಕೊಳ್ಳಲು ಕಾಸ್ಮೋಸ್ ತಾರಾಲಯಕ್ಕೆ ಭೇಟಿ ನೀಡುತ್ತಿರುವ ಮಕ್ಕಳಲ್ಲಿ ಕೆಲವರು ಭವಿಷ್ಯದಲ್ಲಿ ತಮ್ಮದೇ ಆದ ಮಹತ್ವದ ಸಂಶೋಧನೆಗಳೊಂದಿಗೆ ಇದೇ ಸ್ಥಳಕ್ಕೆ ಮರಳಿ ಬಂದು, ಬ್ರಹ್ಮಾಂಡದ ಕುರಿತ ತಮ್ಮ ಅದ್ಭುತ ಆವಿಷ್ಕಾರಗಳನ್ನು ಹಂಚಿಕೊಳ್ಳುವಂತಾದಾಗ ಮಾತ್ರ ಕಾಸ್ಮೋಸ್ ತಾರಾಲಯದ ನಿಜವಾದ ಯಶಸ್ಸು ಸಾಕಾರಗೊಳ್ಳಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:27 pm, Fri, 13 November 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​