PM Narendra Modi Mysuru Visit Highlights: ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi)ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಬೆ.12.05ಕ್ಕೆ ಬೆಂಗಳೂರು ಯಲಹಂಕ ವಾಯುನೆಲೆಗೆ ಆಗಮಿಸಿದ್ದು, ಮ.12.40ಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಧ್ಯಾಹ್ನ 1.45ಕ್ಕೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮಧ್ಯಾಹ್ನ .3.35ಕ್ಕೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟಿಸಿದ್ದಾರೆ. ಇಂದು ಸಂಜೆ ಮೈಸೂರಿಗೆ ಆಗಮಿಸಿದ್ದಾರೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಅನಾವರಣ. ಸಂ.5 ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಸಂ.6ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದು, ಕೇಂದ್ರ ಯೋಜನಗೆಳ ಫಲಾನುವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಸೋಮವಾರ ಸಂಜೆ ಮೋದಿ ಮೈಸೂರಿಗೆ ಆಗಮಿಸುತ್ತಿದ್ದು, ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊರಭಾಗದಿಂದ ಬಸ್‌ಗಳು ಸಿಟಿ ಪ್ರವೇಶ ಮಾಡದಂತೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ದ್ವಿಚಕ್ರ, ನಾಲ್ಕೂ ಚಕ್ರ ಹಾಗೂ ಬಸ್ ನಿಲುಗಡೆಯಲ್ಲೂ ಬದಲಾವಣೆ ಮಾಡಲಾಗಿದೆ. ನಗರಕ್ಕೆ ನಾಲ್ಕು ದಿಕ್ಕುಗಳಿಂದ ಆಗಮಿಸುವ ಬಸ್, ಕಾರ್ ತಾತ್ಕಾಲಿಕ ಬಸ್ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ. ನಗರ ಪೊಲಿಸ್ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಚಾಮುಂಡಿಬೆಟ್ಟದಿಂದ ಪ್ರಧಾನಿ ನರೇಂದ್ರ ಮೋದಿ ನಿರ್ಗಮಿಸಿದ್ದಾರೆ. ನಾಡಿನ ಅಧಿದೇವತೆ ಚಾಮುಂಡಿ ದರ್ಶನ ಪಡೆದು ಚಾಮುಂಡಿಬೆಟ್ಟದಿಂದ ಮೈಸೂರು ನಗರದತ್ತ ಪ್ರಯಾಣ ಬೆಳೆಸಿದ್ದಾರೆ. ಮೈಸೂರಿನ ಱಡಿಸನ್ ಬ್ಲೂ ಹೋಟೆಲ್ನಲ್ಲಿ 141 ನೇ ಕೊಠಡಿಯ ಪ್ರೆಸಿಡೆಂಟ್ ಸ್ಯೂಟ್ ನಲ್ಲಿ ವಾಸ್ಥವ್ಯ ಹೊಡಿದ್ದಾರೆ. ನಾಳೆ ಬೆಳಗ್ಗೆ ಮೈಸೂರು ಅರಮನೆ ಮೈದಾನದಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು ದೇವಾಲಯದ ಪ್ರಧಾನ ಅರ್ಚಕರು ಪ್ರಧಾನಿ ಮೋದಿಗೆ ಸ್ವಾಗತ ಕೋರಿದ್ದಾರೆ. ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ, ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇನ್ನು ನಾಡಿನ ಅಧಿದೇವತೆ ಚಾಮುಂಡಿ ದರ್ಶನ ಪಡೆದ ಪ್ರಧಾನಿ ಮೋದಿ, ತಾಯಿ ಚಾಮುಂಡೇಶ್ವರಿಗೆ ಸಂಕಲ್ಪ ಪೂಜೆ ನೆರವೇರಿಸಿದ್ದಾರೆ. ಮುಖ್ಯ ಅರ್ಚಕ ಡಾ.ಶಶಿಶೇಖರ ದೀಕ್ಷಿತ್ ಅವರು ಮೋದಿ ಸಂಕಲ್ಪ ಪೂಜೆ ಮಾಡಿದ್ರು. ಇದೇ ಮೊದಲ ಬಾರಿಗೆ ಚಾಮುಂಡಿ ದರ್ಶನ ಪಡೆದ ಮೋದಿ ಚಾಮುಂಡಿ ಸನ್ನಿಧಿಯಲ್ಲಿ ಆಶಯದಂತೆ ಸಂಕಲ್ಪ ಪೂಜೆ ನೆರವೇರಿಸಿದ್ದಾರೆ.
ಸುತ್ತೂರು ಶಾಖಾ ಮಠದಿಂದ ನಿರ್ಗಮಿಸಿದ ಪ್ರಧಾನಿ ಮೋದಿ ರಸ್ತೆ ಮಾರ್ಗವಾಗಿ ಚಾಮುಂಡಿಬೆಟ್ಟಕ್ಕೆ ತೆರಳಿದ್ದಾರೆ. ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಗೆ ನನ್ನ ಪ್ರಣಾಮ. ತಾಯಿ ಕೃಪೆಯಿಂದಲೇ ನನಗೆ ಮೈಸೂರಿಗೆ ಬರುವ ಸೌಭಾಗ್ಯ ಸಿಕ್ಕಿದೆ. ಮೈಸೂರು ಅಭಿವೃದ್ಧಿಗೆ ಚಾಮುಂಡೇಶ್ವರಿಗೆ ನನ್ನ ಪ್ರಾರ್ಥನೆ. ಮೈಸೂರು ಅಭಿವೃದ್ಧಿಗೆ ಕಾರ್ಯಕ್ರಮ ಮಾಡುವ ಅವಕಾಶ ಸಿಕ್ಕಿದೆ. ಸಂತರು ಸೇರಿರುವ ಈ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಧನ್ಯತೆ ಸಿಕ್ಕಿದೆ. ಇಲ್ಲಿಂದ ನಾನು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುತ್ತೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುತ್ತೇನೆ ಎಂದು ಸುತ್ತೂರಿನ ಶಾಖಾ ಮಠದ ಭಾಷಣದಲ್ಲಿ ಹೇಳಿದ್ರು.
ಸುತ್ತೂರಿನ ಶಾಖಾ ಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ಸಾಮಾಜಿಕ ಸೇವೆ, ಅನ್ನ ದಾಸೋಹಕ್ಕೆ ಪ್ರಖ್ಯಾತಿ ಪಡೆದಿರುವ ವಿಶ್ವಪ್ರಸಿದ್ಧದ ಈ ಕ್ಷೇತ್ರಕ್ಕೆ ಆಗಮಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮೈಸೂರಿನ ಚಾಮುಂಡಿ ತಾಯಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ಶಿವರಾತ್ರಿ ಶಿವಯೋಗಿ ಸ್ವಾಮೀಗೆ ಧನ್ಯವಾದಗಳು ಹೇಳುತ್ತೇನೆ. ಸಂಸ್ಕೃತಿ ಪಾಠಶಾಲೆಯ ಕಟ್ಟಡದ ಲೋಕಾರ್ಪಣೆ ಮಾಡಲಾಗಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಬರೆದ ಯೋಗ ಸಂಬಂಧಿಸಿದ 3 ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇನೆ. ವಿಶ್ವದಲ್ಲಿ ಸಮಾಜ ವಿಜ್ಞಾನದಲ್ಲಿ ಏನು ಬರೆದಿದ್ದಾರೆ ಅದನ್ನು ಅಧ್ಯಯನ ಮಾಡಿದ್ದಾರೆ. ‘ನಾರದ ಸೂತ್ರ’ ಪುಸ್ತಕ ಅತೀ ಪುರಾತವಾದದ್ದು ಜ್ಞಾನಕ್ಕಿಂತ ದೊಡ್ಡದ್ದು ಯಾವುದೂ ಇಲ್ಲ. ಇದನ್ನು ನಮ್ಮ ಶಾಸ್ತ್ರದಲ್ಲಿ ಹೇಳಲಾಗಿದೆ. ಕಾಶಿಯಿಂದ ಹಿಡಿದು ನಂಜನಗೂಡಿನ ಕಾಶಿವರೆಗೂ ಶಿವರಾತ್ರಿ ಸ್ವಾಮೀಜಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಯಾವುದೇ ಶುಲ್ಕ ಪಡೆಯದೇ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. 300ಕ್ಕೂ ಹೆಚ್ಚು ಸಂಸ್ಥೆಗಳು & 2 ವಿವಿಗಳು ಸೇರಿದಂತೆ ವಿದೇಶದಲ್ಲೂ ಸುತ್ತೂರು ಮಠದ ವಿದ್ಯಾ ಸಂಸ್ಥೆಗಳಿವೆ. ಇನ್ನೂ ಈ ಮಠದ ವಿದ್ಯಾಸಂಸ್ಥೆಗಳು ವಿಸ್ತರಣೆಯಾಗಲಿವೆ. ಲಂಡನ್ನಲ್ಲಿ ಬಸವೇಶ್ವರ ಪ್ರತಿಮೆ ಅನಾವರಣಗೊಳಿಸುವ ಸೌಭಾಗ್ಯ ಸಿಕ್ಕಿದೆ ಎಂದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ವೇದ ಪಾಠಶಾಲೆ ಕಟ್ಟಡ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ ಯೋಗ ಸಂಬಂಧ 3 ಗ್ರಂಥಗಳನ್ನು ಬಿಡುಗಡೆ ಮಾಡಿದ್ದಾರೆ. ಯೋಗ ಸೂತ್ರ, ಶಿವ ಸೂತ್ರ, ನಾರದ ಸೂತ್ರ ಗ್ರಂಥಗಳ ಬಿಡುಗಡೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡುವುದೇ ಸೌಭಾಗ್ಯ. ತಮ್ಮ ಜೀವನವನ್ನು ದೇಶದ ಅಭಿವೃದ್ಧಿಗೆ ಮೀಸಲಿಟ್ಟವರು ಮೋದಿ. ಇಡೀ ದಿನ ಬಿಡುವಿಲ್ಲದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೂ ಮೋದಿ ಮುಖದಲ್ಲಿ ಕಾಂತಿ ಕಡಿಮೆಯಾಗಿಲ್ಲ. ಪ್ರಧಾನಿ ಮೋದಿ ಬಟ್ಟೆಯಲ್ಲಿ ಜೇಬಿದೆ, ತುಂಬಿಸಿಕೊಳ್ಳುವ ಮನಸ್ಸಿಲ್ಲ. ಭಾರತ ಕಂಡ ಅತ್ಯಂತ ಪ್ರಭಾವಿ ಪ್ರಧಾನಮಂತ್ರಿ ನರೇಂದ್ರ ಮೋದಿ. ಯೋಗ ಕುರಿತು 3 ಗ್ರಂಥ ಬಿಡುಗಡೆ ಮಾಡಿದ್ದಾರೆ. ನಿಮ್ಮನ್ನು ನೀವು ಪ್ರೀತಿಸಿ ಎಂದು ಈ 3 ಗ್ರಂಥಗಳ ಅರ್ಥವಾಗಿದೆ. ಪ್ರಧಾನಿ ಮೋದಿ ತಾಯಿ ಹಿರಾಬೆನ್ 100 ವರ್ಷ ಪೂರೈಸಿದ್ದಾರೆ ಎಂದು ಸುತ್ತೂರು ಶಾಖಾ ಮಠದಲ್ಲಿ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ರು.
ಬಸವಣ್ಣನವರ ವಚನದ ಮೂಲಕ ಸುತ್ತೂರುಶ್ರೀ ಭಾಷಣ ಆರಂಭಿಸಿದ್ರು. ಪ್ರಾಚೀನ ಸಂಸ್ಕೃತಿಗೆ ಗೌರವ ನೀಡಿ ಸಂಸ್ಕೃತ ಪಾಠ ಶಾಲೆ ಉದ್ಘಾಟನೆ ಮಾಡಿದ್ದಾರೆ. ನರೇಂದ್ರ ಮೋದಿ ವಿಶ್ವ ಯೋಗದಿನಾಚರಣೆಗೆ ಆಗಮಿಸಿದ್ದಾರೆ. ಪತಂಜಲಿ ಯೋಗ ಸೂತ್ರದ ಬಗ್ಗೆ ಸಿದ್ದೇಶ್ವರಶ್ರೀ ಪುಸ್ತಕ ಬರೆದಿದ್ದಾರೆ. ಸಿದ್ದೇಶ್ವರಶ್ರೀಗಳ ಪುಸ್ತಕಕ್ಕೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ಅದೇ ಪುಸ್ತಕವನ್ನು ಇಂದು ಪ್ರಧಾನಿ ಮೋದಿ ಬಿಡುಗಡೆ ಮಾಡುತ್ತಾರೆ. ಸುತ್ತೂರುಮಠಕ್ಕೆ ಮೋದಿಯವರು ಈವರೆಗೆ 3 ಬಾರಿ ಭೇಟಿ ನೀಡಿದ್ದಾರೆ. ಕಳೆದ 8 ವರ್ಷಗಳಿಂದ ಒಂದು ದಿನವೂ ರಜೆ ಪಡೆಯದೆ ಮೋದಿ ಕೆಲಸ ಮಾಡಿದ್ದಾರೆ. ವಿಶ್ವದಲ್ಲಿ ರಜೆ ಪಡೆಯದೆ ಕೆಲಸ ಮಾಡಿರುವ ವ್ಯಕ್ತಿಯಿದ್ರೆ ಅದು ಮೋದಿ ಮಾತ್ರ. ಮಾನವೀಯತೆ ಬಗ್ಗೆ ವಿಶ್ವಕ್ಕೆ ಸಂದೇಶ ಸಾರಿದವರು ಪ್ರಧಾನಿ ಮೋದಿ ಎಂದು ಸುತ್ತೂರುಶ್ರೀ ಮೋದಿಯವರನ್ನು ಹೊಗಳಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗಿಯಾಗಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ, ಸಿದ್ಧಗಂಗಾಶ್ರೀ, ಸಿದ್ದೇಶ್ವರಶ್ರೀಗಳು ಉಪಸ್ಥಿತರಿದ್ದಾರೆ. ಪ್ರಧಾನಿಗೆ ರುದ್ರಾಕ್ಷಿಮಾಲೆ ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಲಾಗಿದ್ದು ಮೋದಿ ತಾಯಿ ಜೊತೆಗಿರುವ ಫೋಟೋ, ಬಸವಣ್ಣನ ಫೋಟೋ ಕಾಣಿಕೆ ನೀಡಲಾಗಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಿಂದ ತೆರಳಿ ಸುತ್ತೂರಿನ ಶಾಖಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಸುತ್ತೂರು ಮಠದ ಆವರಣದಲ್ಲಿ ನಿರ್ಮಿಸಿರುವ ವೇದ ಪಾಠಶಾಲೆ ಕಟ್ಟಡವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ರು. ಸುತ್ತೂರು ಶ್ರೀಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆ ದೇಶದ ಎಲ್ಲರಿಗೂ ಸಿಗುತ್ತಿದೆ. ಬಡವರು ಕಡಿಮೆ ದರದಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ಬಡವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಸಮಾಜದ ಎಲ್ಲ ವರ್ಗ, ಕ್ಷೇತ್ರಕ್ಕೂ ನಮ್ಮ ಸರ್ಕಾರ ಯೋಜನೆಗಳನ್ನು ತಲುಪಿಸಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯೂ ಅನೇಕರಿಗೆ ಉಪಯೋಗವಾಗಿದೆ. ಕರ್ನಾಟಕದ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದೇವೆ. ಪಶುಪಾಲನೆ ಮಾಡುವವರಿಗೆ ಬ್ಯಾಂಕ್ನಿಂದ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಇಂದು ಬಡವರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸ ಬಂದಿದೆ. ಕರ್ನಾಟಕದಲ್ಲಿ ಬಡವರಿಗೆ ಉಚಿತ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದೇವೆ. ದಿವ್ಯಾಂಗ ವ್ಯಕ್ತಿಗಳಿಗೆ ಸರ್ಕಾರದಿಂದ ಅನೂಕೂಲ ಮಾಡಿ ಕೊಟ್ಟದ್ದೇವೆ. ಮೈಸೂರಿನ ಭಾರತೀಯ ವಾಕ್‌ಶ್ರವಣ ಸಂಸ್ಥೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ನರೇಂದ್ರ ಮೋದಿ ಭಾಷಣದಲ್ಲಿ ತಿಳಿಸಿದ್ರು.
ಮೈಸೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ರು. ಮೈಸೂರು ಹಾಗೂ ಕರ್ನಾಟಕದ ಸಮಸ್ತ ನಾಹರಿಕ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು. ಕರ್ನಾಟಕ ದೇಶದ ಆರ್ಥಿಕ & ಆಧ್ಯಾತ್ಮಿಕ ಕೇಂದ್ರವಾಗಿದೆ. ಮೈಸೂರಿನ ಐತಿಹಾಸಿಕ ಸ್ಥಳಗಳು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ, ಉತ್ತಮ ಆರೋಗ್ಯ ಸುಧಾರಣೆಗೆ ಈ ಬಾರಿ ಮೈಸೂರು ಆಯ್ಕೆ ಮಾಡಿದ್ದೇವೆ. ನಾಳೆ ಕೋಟ್ಯಂತರ ಜನರು ಮೈಸೂರಿನ ಈ ಕಾರ್ಯಕ್ರಮದ ಮೂಲಕ ಭಾಗಿಯಾಗಲಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕದಲ್ಲಿ ಅಭಿವೃದ್ಧಿ ಮಾಡುತ್ತಿದೆ. ಹೆಗಲಿಗೆ ಹೆಗಲು ಕೊಟ್ಟು ನಾವು ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ. ಇಂದು ಹಲವು ಯೋಜನೆಗಳಿಗೆ ಲೋಕಾರ್ಪಣೆಗೊಳಿಸಿದ್ದೇವೆ. ಮೈಸೂರಿನ ರೈಲ್ವೆ ನಿಲ್ದಾಣ ಆಧುನೀಕರಣಗೊಳಿಸಲಾಗುವುದು. ಬಡವರು, ಮಹಿಳೆಯರು, ದಲಿತರುಮ ವಂಚಿತರಿಗೆ ಹಲವು ಯೋಜನೆ ನಮ್ಮ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. 2014ರಲ್ಲಿ ನೀವು ನಮಗೆ ಅವಕಾಶ ನೀಡಿದ್ದೀರಿ. ಕಳೆದ 8 ವರ್ಷಗಳಲ್ಲಿ ಗರೀಬ್ ಕಲ್ಯಾನ್ ಯೋಜನೆ ವಿಸ್ತರಣೆಯಾಗಿದೆ. ಮೊದಲು ಒಂದು ರಾಜ್ಯಕ್ಕೆ ಸೀಮಿತವಾಗಿದ್ದ ಯೋಜನೆ ಎಲ್ಲ ರಾಜ್ಯಕ್ಕೂ ವಿಸ್ತರಣೆಯಾಗಿದೆ ಎಂದರು.
ಮೈಸೂರಿನ ರಾಮಸ್ವಾಮಿ ಸರ್ಕಲ್ ಮಾರ್ಗವಾಗಿ ಸುತ್ತೂರು ಮಠ ಹಾಗೂ ಚಾಮುಂಡಿ ಬೆಟ್ಟಕ್ಕೆ ಮೋದಿ ತೆರಳಲುವ ಹಿನ್ನೆಲೆ ರಾಮ ಸ್ವಾಮಿ ಸರ್ಕಲ್ ನಲ್ಲಿ ನೂರಾರು ಜನ ಸೇರಿದ್ದಾರೆ. ಮೋದಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕೈಯಲ್ಲಿ ಮೋದಿ ಹಾಗೂ ಬಿಜೆಪಿ ಬಾವುಟವನ್ನ ಹಿಡಿದು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದಾರೆ. ಮಹಿಳೆಯರು ಮಕ್ಕಳು ಸಹ ಕೈಯಲ್ಲಿ ಬಾವುಟ ಹಾಗೂ ಬಾವಚಿತ್ರವನ್ನ ಹಿಡಿದು ಮೋದಿಯ ಬರುವಿಕೆಗಾಗಿ ಕಾಯುತ್ತಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ರು. ಅಭಿವೃದ್ಧಿ ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರಧಾನಿಗೆ ಸ್ವಾಗತ. ಪ್ರಧಾನಿ ಮೋದಿಗೆ ಮೈಸೂರು ಅಂದ್ರೆ ತುಂಬಾನೇ ಪ್ರೀತಿ. ಕಳೆದ ವರ್ಷವೇ ಯೋಗ ದಿನಾಚರಣೆಗೆ ಪ್ರಧಾನಿ ಬರಬೇಕಿತ್ತು. ನಾವು ಆಹ್ವಾನ ನೀಡಿದ ತಕ್ಷಣ ಮೈಸೂರಿಗೆ ಬರಲು ಒಪ್ಪಿದರು. ಇದು ಮೈಸೂರಿನ ಬಗ್ಗೆ ಪ್ರಧಾನಿ ಮೋದಿಗೆ ಇರುವ ಪ್ರೀತಿ ತೋರಿಸುತ್ತೆ. ಇಂದು ಅಧಿಕಾರಕ್ಕಾಗಿ ರಾಜಕಾರಣ ನಡೆಯುತ್ತಿದೆ. ಹಿಂದಿನ ಪ್ರಧಾನಿಗಳು ಅಧಿಕಾರಕ್ಕಾಗಿ ರಾಜಕಾರಣ ಮಾಡಿದರು. ಈಗಿನ ಪ್ರಧಾನಿ ಮೋದಿ ಜನರಾಜಕಾರಣ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಎಂದೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಬಡತನ, ಹಸಿವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಗೊತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಸೈದ್ಧಾಂತಿಕ ರಾಜಕಾರಣ ಮಾಡುತ್ತಿದ್ದಾರೆ. ಬಡವರಿಗಾಗಿ ಹಲವು ಜನಪರ ಯೋಜನೆ ಜಾರಿಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳಿಂದ ಸಾಕಷ್ಟು ಅನುಕೂಲವಾಗಿದೆ. 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿ ಹೊಂದಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಯೋಜನೆ ಪರಿಣಾಮಕಾರಿ ಜಾರಿಯಾಗಿದೆ. ಮೈಸೂರಿನಲ್ಲಿ ಏರ್‌ಪೋರ್ಟ್, ಆಸ್ಪತ್ರೆಗಳ ಅಭಿವೃದ್ಧಿ ಮಾಡಿದ್ದೇವೆ. ಮೈಸೂರಿನ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ ಎಂದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ವಾಗತ ಭಾಷಣ ಮಾಡ್ತಿದ್ದಾರೆ. 12 ವರ್ಷಗಳ ಕಾಲ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ 8 ವರ್ಷಗಳಿಂದ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಯೋಗದಿನಾಚರಣೆಗೆ ಆಗಮಿಸಿರುವ ಪ್ರಧಾನಿ ಮೋದಿಗೆ ಸ್ವಾಗತ. ರಾಜ್ಯ, ಮೈಸೂರಿಗೆ ಪ್ರಧಾನಿ ಮೋದಿ ಹಲವು ಯೋಜನೆ ನೀಡಿದ್ದಾರೆ. ಮೋದಿ ನೇತೃತ್ವದ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಪ್ರಧಾನಿ ಮೋದಿ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಿಎಂ ಬೊಮ್ಮಾಯಿ ಸನ್ಮಾನ ಮಾಡಿದ್ರು. ಇನ್ನು ಪ್ರಧಾನಿ ಕಾರ್ಯಕ್ರಮದಲ್ಲಿ ನಾಗನಹಳ್ಳಿ ರೈಲ್ವೆ ನಿಲ್ದಾಣದ ಕೋಚಿಂಗ್ ಟರ್ಮಿನಲ್‌ಗೆ ಅಡಿಗಲ್ಲು ಹಾಕಿದ್ದಾರೆ. ಸಂವಹನ ಅಸ್ವಸ್ಥೆಗಳುಳ್ಳ ವ್ಯಕ್ತಿಗಳಿಗೆ ಉತ್ಕೃಷ್ಟತಾ ಕೇಂದ್ರ ಉದ್ಘಾಟನೆ ಮಾಡಿದ್ರು. ಮೈಸೂರಿನ ಭಾರತೀಯ ವಾಕ್‌ಶ್ರವಣ ಸಂಸ್ಥೆಯಲ್ಲಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.
ಮೈಸೂರಿನಲ್ಲಿ ಕೇಂದ್ರದ ಯೋಜನೆಗಳ ಫಲಾನುಭವಿಗಳ ಜೊತೆ ನಡೆದಿದ್ದ ಪ್ರಧಾನಿ ಮೋದಿ ಸಂವಾದ ಕಾರ್ಯಕ್ರಮ ಅಂತ್ಯಗೊಂಡಿದೆ. ಸಂವಾದ ಬಳಿಕ ಸಾರ್ವಜನಿಕ ಕಾರ್ಯಕ್ರಮಕ್ಕೆ ಪ್ರಧಾನಿ ತೆರಳಿದ್ದಾರೆ. ಸಂವಾದದ ನಂತರ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಓವೆಲ್ ಹೆಲಿಪ್ಯಾಡ್ ನಿಂದ ಮಹಾರಾಜ ಮೈದಾನಕ್ಕೆ ನರೇಂದ್ರ ಮೋದಿ ತೆರಳಿದ್ದಾರೆ. ಕ್ಯಾಮರ ಕಡೆ ಕೈ ಮಾಡಿ ರೇಂಜ್ ರೋವರ್ ಕಾರಿನಲ್ಲಿ ಮಹಾರಾಜ ಮೈದಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರದ ಯೋಜನೆಗಳ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ,
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಕೆ.ಗೋಪಾಲಯ್ಯ, ಡಾ.ಕೆ.ಸುಧಾಕರ್, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಸಂಸದರಾದ ಪ್ರತಾಪ್ ಸಿಂಹ, ವಿ.ಶ್ರೀನಿವಾಸ ಪ್ರಸಾದ್, ಸುಮಲತಾ, ಶಾಸಕ ಜಿ.ಟಿ.ದೇವೇಗೌಡ, ಮೇಯರ್ ಸುನಂದಾ ಪಾಲನೇತ್ರಾ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದಾರೆ. ಮೋದಿ ಕಾರ್ಯಕ್ರಮದಲ್ಲಿ ಒಟ್ಟು 32 ಸಾವಿರ ಆಸನಗಳ ವ್ಯವಸ್ಥೆ, ವಾಟರ್ಪ್ರೂಫ್ ಶಾಮಿಯಾನ, ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ಮೋದಿ ಕಾರ್ಯಕ್ರಮಕ್ಕೆ ಮಂಡ್ಯ ಸಂಸದೆ ಸುಮಲತಾ ಆಗಮಿಸಿದ್ದು ವೇದಿಕೆ ಮೇಲೆ ಆಗಮಿಸಿದ್ದಾರೆ.
ಉಕ್ರೇನ್ನಲ್ಲಿ ಮೃತಪಟ್ಟಿದ್ದ ವೈದ್ಯಕೀಯ ವಿದ್ಯಾರ್ಥಿನಿ ನವೀನ್ ಕುಟುಂಬಸ್ಥರು ಪ್ರಧಾನಮಂತ್ರಿ ಮೋದಿ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಕಮ್ಮಘಟ್ಟ ಕಾರ್ಯಕ್ರಮದ ಹಿಂಭಾಗದಲ್ಲಿ ಮೋದಿಯವರನ್ನು ಭೇಟಿ ಆದ ಬಗ್ಗೆ ಮೃತ ನವೀನ್ ತಂದೆ ಶೇಖರಗೌಡ ಗ್ಯಾನಗೌಡರ್ ಮಾಹಿತಿ ನೀಡಿದ್ದು, ನಾಲ್ಕೈದು ನಿಮಿಷ ಪ್ರಧಾನಿ ನಮ್ಮ ಜೊತೆ ಮಾತನಾಡಿದರು. ನಮ್ಮ ಕಣ್ಣೀರು ನೋಡಿ ಮೋದಿಯವರು ಭಾವುಕರಾಗಿದ್ದರು. ಸಾವಿನ ದುಃಖದಲ್ಲೂ ಮಗನ ದೇಹದಾನ ಮಾಡಿದ್ದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನವೀನ್ ಮೃತಪಟ್ಟ ನಂತರ ನಿಮ್ಮ ಭೇಟಿಗೆ ಬರಬೇಕಾಗಿತ್ತು. ಆದರೆ ಈಗ ಕಾಲ ಕೂಡಿ ಬಂತು ಎಂದು ಪ್ರಧಾನಿ ಮೋದಿ ಹೇಳಿದ್ರು ಎಂದು ಮೃತ ನವೀನ್ ತಂದೆ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸುವ ಪ್ರಧಾನಿ ಮೋದಿ ಫಲಾನುಭವಿಗಳ ಜತೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ವೇದಿಕೆಯ ಮೊದಲ ಸಾಲಿನಲ್ಲಿ 9 ಆಸನ ವ್ಯವಸ್ಥೆ ಮಾಡಲಾಗಿದ್ದು ವೇದಿಕೆಯ 2ನೇ ಸಾಲಿನಲ್ಲಿ 19 ಆಸನಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತಿತರರು ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು 32 ಸಾವಿರ ಆಸನಗಳ ವ್ಯವಸ್ಥೆ, ವಾಟರ್ಪ್ರೂಫ್ ಶಾಮಿಯಾನ, ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಸೂರು ವಿವಿ ಓವೆಲ್ ಮೈದಾನದ ಹೆಲಿಪ್ಯಾಡ್ಗೆ ಆಗಮಿಸಿದ್ದು ಪ್ರಧಾನಿ ಮೋದಿ ಜತೆ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿದ್ದಾರೆ. ಹೆಲಿಪ್ಯಾಡ್ನಿಂದ ಮಹಾರಾಜ ಕಾಲೇಜು ಮೈದಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಬೆಂಗಳೂರಿನಿಂದ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ನಮ್ಮ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ಟೆಕ್ನಾಲಜಿಗೆ ಹೆಚ್ಚು ಒತ್ತು ನೀಡುತ್ತಿದೆ, ಸಿಎಂ ಬಸವರಾಜ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ, ಎಲ್ಲರಿಗೂ ನಮಸ್ಕಾರಿ ಹೇಳಿ ಭಾಷಣ ಮೊಟಕುಗೊಳಿಸಿದ ಮೋದಿ.
ದೇಶದ ಸ್ಟಾರ್ಟ್ಪ್ ಕೇಂದ್ರಗಳಲ್ಲಿ ಬೆಂಗಳೂರಿನ ಕೇಂದ್ರ ಅತಿ ದೊಡ್ಡದ್ದು, ಕಳೆದ 8 ವರ್ಷಗಳಿಂದ ನಿರಂತರ ವಿದೇಶಿ ಕಂಪನಿಗಳು ಹೂಡಿಕೆ, ದೇಶದಲ್ಲಿ ಹಣ ಹೂಡಿಕೆಗೆ ಬರುವ ಕಂಪನಿಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತದೆ.
ಕಳೆದ 8 ವರ್ಷಗಳಲ್ಲಿ ಸರ್ಕಾರವು ತೆಗೆದುಕೊಂಡ ನಿರ್ಧಾರ ಅಥವಾ ಯೋಜನೆಗಳು ಸುಲಭವಾಗಿರಲಿಲ್ಲ, ಸಾಕಷ್ಟು ಮಂದಿಗೆ ಅದು ಅಪ್ರಿಯವೆನಿಸಿತ್ತು. ಆದರೆ ಕ್ರಮೇಣವಾಗಿ ಜನರು ಅದನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಭಾರತದಲ್ಲಿ ಕಳೆದ 8 ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಬಿಲಿಯನ್ ಡಾಲರ್ ಕಂಪನಿಗಳು ತಲೆ ಎತ್ತಿವೆ- ಮೋದಿ
ಬೆಂಗಳೂರು ನಗರ ಆತ್ಮನಿರ್ಭರ್ ಶಕ್ತಿಗೆ ಪ್ರೇರಣೆ ನೀಡಿದೆ, ಭಾರತೀಯ ಯುವಜನರು ಮನಸು ಮಾಡಿದ್ರೆ ಎಲ್ಲವನ್ನೂ ಸಾಧಿಸುತ್ತಾರೆ, ಬೆಂಗಳೂರು ತಾಕತ್ತು ಬಹಳ ದೊಡ್ಡದ್ದು, ಜನರ ಮನಸ್ಥಿತಿಯನ್ನು ಬದಲಾವಣೆಗೆ ಹೊಂದಿಸುವಂತೆ ಮಾಡುತ್ತದೆ ಎಂದು ಮೋದಿ ಹೇಳಿದರು.
-ಬೆಂಗಳೂರು ನಗರದ ಅಭಿವೃದ್ಧಿಯೇ ಯುವ ಜನತೆ ಕನಸು
-ಒಂದು ಭಾರತ ಶ್ರೇಷ್ಟ ಭಾರತ ಸಾಲಿಗೆ ಬೆಂಗಳೂರು ಮಾದರಿ
-ಬೆಂಗಳೂರು ಅಭಿವೃದ್ಧಿಗೆ ನಮ್ಮ ಡಬಲ್ ಇಂಜಿನ್ ಸರ್ಕಾರ ಬದ್ಧ
-ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕಾಗಿ ನಗರ ರೈಲು ಯೋಜನೆ
-1980ನೇ ಇಸವಿಯಿಂದಲೂ ಸಿಟಿ ರೈಲು ಬಗ್ಗೆ ಚರ್ಚೆ
-14 ತಿಂಗಳಲ್ಲಿ ನಗರ ರೈಲು ಯೋಜನಮ ಪೂರ್ಣಗೊಳಿಸಲು ಪಣ
-ಹಿಂದಿನ 40 ವರ್ಷಗಳಲ್ಲೇ ಯೋಜನೆ ಮಾಡಿದ್ದರೆ ಕಥೆ ಬೇರೆ ಇರ್ತಿತ್ತು
-ಆದರೆ ನಾವು ಈ ಬಾರಿ ಬೆಂಗಳೂರು ನಗರ ರೈಲು ಯೋಜನೆ ಮಾಡುತ್ತೇವೆ
-8 ವರ್ಷಗಳಿಂದ ರೈಲು ಯೋಜನೆಗಳಲ್ಲಿ ಆಮೂಲಾಗ್ರ ಬದಲಾವಣೆ
-ಸ್ವಚ್ಛ, ಸುರಕ್ಷ, ಜನಸ್ನೇಹಿ ರೈಲು ಸಂಚಾರದ ಸುಧಾರಣೆ ಮಾಡಿದ್ದು ನಾವು
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ನನ್ನಿಂದ; ಕನ್ನಡಿಗರ ಕ್ಷಮೆ ಕೇಳಿದ ಪ್ರಧಾನಿ ಮೋದಿ
21ನೇ ಶತಮಾನದಲ್ಲಿ ರೈಲ್ವೆ, ಬಸ್, ವಿಮಾನ ಅಷ್ಟೇ ಅಲ್ಲದೆ ಮಲ್ಟಿಮಾಡೆಲ್ ಕನೆಕ್ಟಿವಿಟಿಯ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಅದಕ್ಕೆ ಪಿಎಂ ಗತಿ ಶಕ್ತಿ ಯೋಜನೆಯು ಸಹಾಯ ಮಾಡುತ್ತಿದೆ.
ನೀವು ಕಳೆದ ಎಂಟು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಭಾರತೀಯ ರೈಲ್ವೆಯು ಈಗ ಹೆಚ್ಚು ಆಧುನಿಕ, ಸಿಟಿಜನ್ ಫ್ರೆಂಡ್ಲಿ ಆಗಿದ್ದು, ಸ್ವಚ್ಛತೆ ಕೂಡ ಹೆಚ್ಚಿದೆ. ಭಾರತೀಯ ರೈಲ್ವೆಯನ್ನು ಉತ್ತಮಗೊಳಿಸಲು ಸಾಕಷ್ಟು ಯೋಜನೆ ಕೈಗೊಳ್ಳಲಾಗಿದೆ-ಮೋದಿ
ಕಳೆದ 40 ವರ್ಷಗಳಿಂದ ಕೇವಲ ಚರ್ಚೆಯಲ್ಲಿ ಸಮಯ ಕಳೆದರು, ನಮ್ಮ ಸರ್ಕಾರ ಬಂದ ಮೇಲೆ ಕೇವಲ 40 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ, ಪ್ರತಿ ಕ್ಷಣವನ್ನು ನಿಮ್ಮ ಸೇವೆಗೆ ಸಮಯವನ್ನು ಮೀಸಲಿಟ್ಟಿದ್ದೇವೆ ಎಂದು ಮೋದಿ ಹೇಳಿದರು.
ಡಬಲ್ ಇಂಜಿನ್ ಕರ್ನಾಟಕದ ಅಭಿವೃದ್ಧಿಗೆ ಭರವಸೆ ನೀಡಿತ್ತು, ಆ ಭರವಸೆಗಳಿಗೆ ಇಂದು ನಾವೆಲ್ಲಾ ಸಾಕ್ಷಿಯಾಗಿದ್ದೇವೆ, ನಿಮ್ಮ ಸೇವೆಗೆ ನಾವು ಸದಾ ಸಿದ್ದರಿದ್ದೇವೆ, ಇಲ್ಲಿ ಬರುವುದಕ್ಕಿಂತ ಮುಂಚೆ ಇಂಡಿಯನ್ ಇನ್ಸ್ಟಿಟ್ಯೂಟ್ & ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ಭೇಟಿ ನೀಡಿದ್ದೆ, ಇಲ್ಲಿಂದ ಹೊಸದನ್ನು ಏನೋ ತೆಗೆದುಕೊಂಡು ಹೋಗುತ್ತಿದ್ದೇನೆ, ಕರ್ನಾಟಕದಲ್ಲಿ 5 ರಾಷ್ಟ್ರೀಯ ಹೆದ್ದಾರಿ ಯೋಜನೆ & 7 ರೈಲು ಯೋಜನೆಗೆ ಚಾಲನೆ ನೀಡಿದ್ದೇವೆ ಎಂದು ಮೋದಿ ಹೇಳಿದರು.
ಬೆಂಗಳೂರು ಲಕ್ಷಾಂತರ ಯುವಕರಿಗೆ ಸ್ವಪ್ನ ನಗರಿಯಾಗಿದೆ, ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಬೆಂಗಳೂರಿನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಒತ್ತು ನೀಡಲಾಗುತ್ತಿದೆ. ಜನತೆಗೆ ಟ್ರಾವೆಲ್ ಕಡಿಮೆ ಮಾಡಿ, ಡಬಲ್ ಎಂಜಿನ್ ಸರ್ಕಾರವು ನರಂತರ ಕೆಲಸ ಮಾಡಿದೆ.
ಈ ಪ್ರಾಜೆಕ್ಟ್ ಹೈಯರ್ ಎಜುಕೇಷನ್, ರಿಸರ್ಚ್, ಸ್ಕಿಲ್ ಡೆವಲಾಪ್ಮೆಂಟ್, ಕನೆಕ್ಟಿವಿಟಿ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ನಿಮಗೆ ಸಹಕಾರಿಯಾಗಲಿದೆ..ಮೋದಿ
ರಾಜ್ಯದಲ್ಲಿ ಹಲವಾರು ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗಳನ್ನು ಜಾರಿಗೊಳಿಸಲು ನನಗೆ ಸಂತೋಷವಾಗಿದೆ ಎಂದು ಕನ್ನಡದಲ್ಲಿಯೇ ಮೋದಿ ಹೇಳಿದರು.
ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ
ಕೊಮ್ಮಘಟ್ಟದಲ್ಲಿ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭವಾಗಿದೆ
ರೈಲ್ವೆ ಯೋಜನೆ ಕುರಿತಾದ ಕಿರುಚಿತ್ರ ಪ್ರದರ್ಶನ ವೀಕ್ಷಿಸುತ್ತಿರುವ ಪ್ರಧಾನಿ ಮೋದಿ
ಕೊಮ್ಮಘಟ್ಟದಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಕಾರ್ಯಕ್ರಮ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ
ಪ್ರಧಾನಿ ಮೋದಿ ರಾಜ್ಯಕ್ಕೆ ಹಲವು ಯೋಜನೆ ಜಾರಿ ಮಾಡಿದ್ದಾರೆ
ದೇಶದಲ್ಲಿ 67 ಏರ್‌ಪೋರ್ಟ್‌ಗಳನ್ನು ನಿರ್ಮಿಸಿದ್ದಾರೆ
ಮೆಟ್ರೋ ರೈಲು ಯೋಜನೆ 5 ನಗರಗಳಿಗೆ ವಿಸ್ತರಿಸಿದ್ದಾರೆ
ಪ್ರಧಾನಿ ಮಾರ್ಗದರ್ಶನದಲ್ಲಿ ರಾಜ್ಯ ಅಭಿವೃದ್ಧಿಯಾಗುತ್ತಿದೆ
ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡಿದ್ದೇವೆ
ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ನವ ಕರ್ನಾಟಕ ನಿರ್ಮಿಸುತ್ತೇವೆ
2047ರಲ್ಲಿ ಭಾರತ ಅತ್ಯಂತ ದೊಡ್ಡ ರಾಷ್ಟ್ರವಾಗಬೇಕು, ಗತಿ ಶಕ್ತಿಯನ್ನು ಕೂಡ ಪ್ರಧಾನಿ ನರೇಂದ್ರ ಮೋದಿ ಕೊಟ್ಟಿದ್ದಾರೆ. ಕೇಂದ್ರದ್ದು ಎಲ್ಲವು ದೊಡ್ಡ ಯೋಜನೆಗಳಲ್ಲ, ಮಾನವ ಸಂಪನ್ಮೂಲವನ್ನು ಹೆಚ್ಚು ಬಳಕೆ ಮಾಡಬೇಕು ಎಂದರು. ಪ್ರಧಾನಿ ಮೋದಿ ಯೋಜನೆಯನ್ನು ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ, ದೂರದೃಷ್ಟಿ ನಾಯಕತ್ವದಿಂದ ಮಾತ್ರ ಇದು ಸಾಧ್ಯವಾಗುತ್ತೆ
ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯತ್ತ ಸಾಗಿದೆ, ಬಡವರು, ರೈತರಿಗೆ ಪ್ರಧಾನಿ ಮೋದಿ ಹಲವು ಕಾರ್ಯಕ್ರಮ ಜಾರಿ, ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಿದ್ದಾರೆ ಎಂದರು.
-33 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು
-ಕರ್ನಾಟಕದ ಇತಿಹಾಸದಲ್ಲೇ ಇಂದು ಹೊಸ ಮೈಲಿಗಲ್ಲು
-ರಾಜ್ಯದ ಅಭಿವೃದ್ಧಿಗೆ ಇಂದಿನ ಕಾರ್ಯಕ್ರಮ ಅತಿ ಮುಖ್ಯ
-ಸಬ್‌ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಲಿದೆ
-ಬೆಂಗಳೂರಿನ ಅಭಿವೃದ್ಧಿಗೆ ಮಹತ್ವದ ಯೋಜನೆಯಾಗಿದೆ
-ಯೋಜನೆಯು ಸಂಚಾರ ದಟ್ಟಣೆಗೆ ಇತಿಶ್ರೀ ಹಾಡಲಿದೆ
ಸಬ್‌ಅರ್ಬನ್ ಯೋಜನೆಯನ್ನು ಇಂದು ಪ್ರಾರಂಭ ಮಾಡುತ್ತಿದ್ದೇವೆ, ಇಂದು ಯಲಹಂಕದಿಂದ ಹೈದರಾಬಾದ್ಗೆ ಡಬ್ಲಿಂಗ್ ಲೈನ್ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.
33 ಸಾವಿರ ಕೋಟಿ ರೂ. ಯೋಜನೆ ಸಂಪೂರ್ಣವಾದಾಗ ಕರ್ನಾಟಕದ ಜಿಡಿಪಿ ಶೇ.2ರಷ್ಟು ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಭಾಷಣ ಆರಂಭ
8 ವರ್ಷಗಳ ಹಿಂದೆ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಮೋದಿ, ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಹಲವು ಜನಪರ ಯೋಜನೆ, ಬಡವರಿಗೆ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಮೋದಿಗೆ ಸಲ್ಲುತ್ತೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಎಂಟು ವರ್ಷಗಳ ಹಿಂದೆ ಮೇ ತಿಂಗಳಿನಲ್ಲಿ ನಾವೆಲ್ಲರೂ ಸೇರಿ ನರೇಂದ್ರ ಪಾರ್ಲಿಮೆಂಟರಿ ಪಾರ್ಟಿಯ ನಾಯಕನನ್ನಾಗಿ ನಾವು ಆಯ್ಕೆ ಮಾಡಿದ್ದೆವು, ಮೊದಲನೇ ಬಾರಿಗೆ ಓರ್ವ ಸಂಸದನಾಗಿ ಆ ಪ್ರಜಾ ಪ್ರಭುತ್ವದ ಗುಡಿಗೆ ನಮಸ್ಕರಿಸಿ ಬಂದು , ನನ್ನ ಸರ್ಕಾರ ಬಡವರಿಗೆ ಸಮರ್ಪಿತವಾದಂತಹ ಸರ್ಕಾರ ಎಂದು ಹೇಳಿದ್ದರು- ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಂದ ಆರಂಭಿಕ ನುಡಿ
ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಸನ್ಮಾನ
ಕೊಮ್ಮಘಟ್ಟದಲ್ಲಿ ಪ್ರಧಾನಿ ಸಾರ್ವಜನಿಕ ಕಾರ್ಯಕ್ರಮ ಆರಂಭ
ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಕೊಮ್ಮಘಟ್ಟದಲ್ಲಿ ಕೆಲವೇ ನಿಮಿಷಗಳಲ್ಲಿ ಸಮಾವೇಶ ಆರಂಭ, ವೇದಿಕೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ಮೋದಿ ಚಾಮುಂಡಿ ಬೆಟ್ಟಕ್ಕೆ ಭೇಟಿ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಚಾಮುಂಡೇಶ್ವರಿ ದೇವಾಲಯದಲ್ಲಿ ಸಿದ್ದತೆ ಪರಿಶೀಲನೆ ನಡೆಸಿದರು.
8:15 ಸುಮಾರಿಗೆ ಪ್ರಧಾನಿ ದೇವಸ್ಥಾನಕ್ಕೆ ಬರುತ್ತಾರೆ, ಸುಮಾರು 20 ನಿಮಿಷ ದೇವರ ಸನ್ನಿಧಿಯಲ್ಲಿ ಮೋದಿ ಇರುತ್ತಾರೆ. ಯಾವುದೇ ವಿಶೇಷ ಪೂಜೆ ಇರುವುದಿಲ್ಲ ಸರಳವಾದ ಪೂಜೆಯನ್ನು ಮೋದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮೈಸೂರಿಗೆ ಪ್ರಧಾನಿ ನರೇಂದ್ರ ಭೇಟಿ ಹಿನ್ನೆಲೆ ಬಿಗಿ ಭದ್ರತೆ, ಎಡಿಜಿಪಿ ಅಲೋಕ್ ಕುಮಾರ್ ಮಾರ್ಗದರ್ಶನದಲ್ಲಿ ಭದ್ರತೆ ಅಲೋಕ್ ಕುಮಾರ್, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಎಸ್ಪಿಗಳು
5 ಸಾವಿರ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ.
ಮಧ್ಯಾಹ್ನ 2.45ಕ್ಕೆ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿರುವ ಮೋದಿ
ಮಧ್ಯಾಹ್ನ 2.45ರಿಂದ 2.55ರವರೆಗೆ ಯೋಜನೆಗಳ ಬಗ್ಗೆ ವಿವರಣೆ
ಮಧ್ಯಾಹ್ನ 2.56ಕ್ಕೆ ವೇದಿಕೆಗೆ ಆಗಮಿಸಲಿರುವ ಪ್ರಧಾನಿ ಮೋದಿ
ಮಧ್ಯಾಹ್ನ 2.56ರಿಂದ 2.59ರವರೆಗೆ ನಾಡಗೀತಿ ಗಾಯನ
ಮಧ್ಯಾಹ್ನ 2.59ರಿಂದ 3.01ರವರೆಗೆ ಕೇಂದ್ರ ಸಚಿವ ಜೋಶಿ ಭಾಷಣ
ಮಧ್ಯಾಹ್ನ 3.06ರ 3.13ರವರೆಗೆ ಸಿಎಂ ಬೊಮ್ಮಾಯಿ ಭಾಷಣ
ಮಧ್ಯಾಹ್ನ 3.13ರಿಂದ 3.30ರವರೆಗೆ ಎಲ್ಇಡಿಯಲ್ಲಿ ವಿವರಣೆ
ಎಲ್ಇಡಿ ಪರದೆ ಮೂಲಕ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ
ಮಧ್ಯಾಹ್ನ 3.30ರಿಂದ ಸಂಜೆ 4ರವರೆಗೆ ಪ್ರಧಾನಿ ಮೋದಿ ಭಾಷಣ
ಸಂಜೆ 4 ಗಂಟೆಗೆ ವೇದಿಕೆಯಿಂದ ನಿರ್ಗಮಿಸುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಕೊಮ್ಮಘಟ್ಟಕ್ಕೆ ಆಗಮಿಸಿದ್ದಾರೆ
ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇನ್ನು 15 ನಿಮಿಷ ಮಾತ್ರ ಅವಕಾಶ, ಬಳಿಕ ಪ್ರವೇಶಕ್ಕೆ ನಿರ್ಬಂಧ, ಸಮಾವೇಶದತ್ತ ಆಗಮಿಸುತ್ತಿರುವ ಜನರು ಸಮಾರಂಭ ವೇದಿಕೆ ಬಳಿ ತೆರಳಲು ನೂಕು ನುಗ್ಗಲು
ಅಂಬೇಡ್ಕರ್ ಯೂನಿವರ್ಸಿಟಿ ಆಫ್ ಎಕನಾಮಿಕ್ಸ್ ನಿಂದ ಹೊರಟ ಪ್ರಧಾನಿ ಮೋದಿ
ಉನ್ನತೀಕರಿಸಿದ ಐಟಿಐ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಜ್ಞಾನಭಾರತಿ ಆವರಣದಲ್ಲಿ ಉನ್ನತೀಕರಿಸಿದ ಐಟಿಐ ಲೋಕಾರ್ಪಣೆ.
ಮಹರಾಜ ಕಾಲೇಜು ಮೈದಾನದ ಕಾರ್ಯಕ್ರಮ ಬಳಿಕ ರಸ್ತೆ ಮೂಲಕ ಸಂಚಾರ.
ಸುತ್ತೂರು ಮಠಕ್ಕೆ ತೆರಳಲಿರುವ ಮೋದಿ.
ಚಾಮರಾಜ ಜೋಡಿ ರಸ್ತೆ ಮೂಲಕ ಮಠಕ್ಕೆ ತೆರಳಲಿರುವ ಪ್ರಧಾನಿ.
ಮೋದಿ ಸಂಚರಿಸುವ ರಸ್ತೆಗಳಲ್ಲಿ
ಭದ್ರತೆ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಕೆ.
ಭದ್ರತೆ ಪರಿಶೀಲನೆ ನಡೆಸುತ್ತಿರುವ ಪೊಲೀಸರು.
ಪ್ರಧಾನಿ ಸಂಚರಿಸುವ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ನಿಷೇಧ.
ಒಂದೆರಡು ಗಂಟೆ ಬಳಿಕ ಸಂಚಾರ ನಿಷೇಧ.
ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಕೊಮ್ಮಘಟ್ಟದತ್ತ ಪ್ರಧಾನಿ ಮೋದಿ ಪ್ರಯಾಣ
ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಸಿದ ಪ್ರಧಾನಿ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.
ಬೇಸ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ಆಗಮಿಸಿದ ಪ್ರಧಾನಿ ಮೋದಿ
ಎಲ್ಲೆಡೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗುತ್ತಿದೆ.
ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಾರ್ಗದರ್ಶನದಲ್ಲಿ ಭದ್ರತೆ, ಮೈಸೂರು ಮಂಡ್ಯ ಹಾಸನ ಚಾಮರಾಜನಗರ ಎಸ್ ಪಿ ಗಳ ನಿಯೋಜನೆ , 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಡಿವೈಎಸ್‌ಪಿ ಡಿಸಿಪಿ ಎಸಿಪಿ ಇನ್ಸಪೆಕ್ಟರ್ ಸಬ್ ಇನ್ಸಪೆಕ್ಟರ್ ಸೇರಿ ಎಲ್ಲಾ ಸಿಬ್ಬಂದಿಗಳ ಬಳಕೆ ಹೊರ ಜಿಲ್ಲೆಗಳಿಂದಲೂ ಆಗಮಿಸಿರುವ ಪೊಲೀಸರು.
ಮೋದಿ ಸಂಚರಿಸುವ ಮಾರ್ಗದಲ್ಲಿ ರಸ್ತೆ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಕೆ ರಸ್ತೆ ಬದಿಯಲ್ಲಿ ಜನರು ನಿಂತು ನೋಡಲು ವ್ಯವಸ್ಥೆ
ಮಹಾರಾಜ ಕಾಲೇಜು ಮೈದಾನದಿಂದ ಸುತ್ತೂರು ಮಠಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿ ವ್ಯವಸ್ಥೆ
ಮಹಾರಾಜ ಕಾಲೇಜು ಮೈದಾನ ಅರಮನೆ ಯೋಗ ಕಾರ್ಯಕ್ರಮಕ್ಕೆ ಮಾರ್ಗಸೂಚಿ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಹಿನ್ನೆಲೆ ಭದ್ರತೆಗೆ ಡ್ರೋನ್ ಕಣ್ಗಾವಲಿರಿಸಿದೆ.
ಮೂರು ಡ್ರೋನ್ ಗಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ, ಮೂರು ತಂಡಗಳಿಂದ ಡ್ರೋನ್ ಗಳ ನಿರ್ವಹಣೆ ಮಾಡಲಾಗುತ್ತಿದೆ.
ಅರಮನೆ ಮಹಾರಾಜ ಕಾಲೇಜು ಮೈದಾನ ಚಾಮುಂಡಿ ಬೆಟ್ಟದಲ್ಲಿ ಡ್ರೋನ್ ಬಳಕೆ ಏರಿಯಲ್ ಮೂಲಕ ಪರಿಶೀಲನೆ
ಅನುಮಾನಸ್ಪದ ವ್ಯಕ್ಯಿಗಳು, ಅನುಮಾನಸ್ಪದ ವಸ್ತುಗಳ ಮೇಲೆ ನಿಗಾ, ಸಾಕಷ್ಟು ಪರಿಣಾಮಕಾರಿ ಹಾಗೂ ಸಹಕಾರಿಯಾಗಿರುವ ಡ್ರೋನ್ ಕಣ್ಗಾವಲು
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ತೆರಳಿದ ಮೋದಿ
ಬೇಸ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟನೆ
ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸುವ ಪ್ರಧಾನಿ
HQTCಯಿಂದ ಕೊಮ್ಮಘಟ್ಟ ಹೆಲಿಪ್ಯಾಡ್ಗೆ ಆಗಮಿಸಿದ ಮೋದಿ
ಐಐಎಸ್ಸಿ ಹೊಸ ಆಸ್ಪತ್ರೆ ಮತ್ತು ಪಿಜಿ ವೈದ್ಯಕೀಯ ಕೇಂದ್ರವನ್ನು ಮೈಂಡ್‌ಟ್ರೀ ಸಹ-ಸಂಸ್ಥಾಪಕರಿಂದ ಪಡೆಯುತ್ತದೆ. ಈ ಹೆಜ್ಜೆಗೆ ಸುಬ್ರೋತೊ ಬಾಗ್ಚಿ ಮತ್ತು ಎನ್‌ಎಸ್ ಪಾರ್ಥಸಾರಥಿ 425 ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ. ದಾನ ಎಂಬ ಪದವೇ ಭಾರತೀಯರ ಪಾಲಿಗೆ ಆಕರ್ಷಣೆ. ತಮ್ಮ ಸಂಪತ್ತನ್ನು ಇಲ್ಲದವರೊಂದಿಗೆ ಹಂಚಿಕೊಳ್ಳುವ ಕಲ್ಪನೆಯು ಈಗ ಹೆಚ್ಚೆಚ್ಚು ಪ್ರಚಾರಕ್ಕೆ ಬರುತ್ತಿದೆ.
1975 ರಲ್ಲಿ ಅತ್ಯುತ್ತಮ ಎನ್‌ಸಿಸಿ ಕೆಡೆಟ್ ಪ್ರಶಸ್ತಿಯನ್ನು ಪಡೆದ ಸುಬ್ರೋತೊ ಬಾಗ್ಚಿ ವಿಪ್ರೋದಲ್ಲಿ ಜಾಗತಿಕ ಆರ್ ಅಂಡ್ ಡಿ ಮುಖ್ಯಸ್ಥರಾಗಿದ್ದರು. ಈಗ ಎಲ್ ಅಂಡ್ ಟಿ ಸ್ಟೇಬಲ್‌ನ ಭಾಗವಾಗಿರುವ ಐಟಿ ಸಂಸ್ಥೆಯಾದ ಮೈಂಡ್‌ಟ್ರೀ ಅನ್ನು ಮುನ್ನಡೆಸಲು ಹೋದ ಮಾಜಿ ವಿಪ್ರೋ ಕಾರ್ಯನಿರ್ವಾಹಕರಲ್ಲಿ ಬಾಗ್ಚಿ ಕೂಡ ಒಬ್ಬರು. ಎನ್‌ಎಸ್ ಪಾರ್ಥಸಾರಥಿ ಅವರು ಮೈಂಡ್‌ಟ್ರೀಯ ಪ್ರವರ್ತಕರಲ್ಲಿ ಒಬ್ಬರಾಗಿದ್ದರು ಮತ್ತು ಅದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (COO) ಸೇವೆ ಸಲ್ಲಿಸಿದರು. ಅವರು ವಿಪ್ರೋ ಆರ್ ಅಂಡ್ ಡಿ ವಿಭಾಗದೊಂದಿಗೆ ಇದ್ದರು ಮತ್ತು 1999ರಲ್ಲಿ ಮೈಂಡ್‌ಟ್ರೀಗೆ ಬಂದರು. ಪಾರ್ಥಸಾರಥಿ ಈಗ ಮೈಂಡ್‌ಟ್ರೀಯ ಮತ್ತೊಬ್ಬ ಸಹ-ಪ್ರವರ್ತಕರಾಗಿದ್ದ ಕೃಷ್ಣಕುಮಾರ್ ನಟರಾಜನ್ ಅವರನ್ನು ಒಳಗೊಂಡಿರುವ ವಿಸಿ ಸಂಸ್ಥೆಯಾದ ಮೇಲಾ ವೆಂಚರ್ಸ್‌ನೊಂದಿಗೆ ತೊಡಗಿಸಿಕೊಂಡಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 280 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಮೆದುಳು ಸಂಶೋಧನಾ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದರು.
ಹಾಗೆಯೇ, ಇದೇ ವೇಳೆ 425 ಕೋಟಿ ರೂ. ವೆಚ್ಚದಲ್ಲಿ ಐಐಎಸ್ಸಿ ಆವರಣದಲ್ಲಿ ನಿರ್ಮಾಣ ವಾಗಲಿರುವ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಗೂ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ದಾನಿಗಳಾದ ಕ್ರಿಸ್ ಗೋಪಾಲಕೃಷ್ಣನ್ ದಂಪತಿ ಹಾಗೂ ಬಾಗ್ಚಿ ಮತ್ತು ಪಾರ್ಥಸಾರಥಿ ಕುಟುಂಬದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಂದು 12 ಮಧ್ಯಾಹ್ನ ಗಂಟೆಯಿಂದ ನಾಳೆ ಬೆಳಗ್ಗೆ 7:30 ವರಗೆ ದೇವರ ದರ್ಶನಕ್ಕೆ ನಿರ್ಬಂಧದ ಮಾಹಿತಿಯನ್ನು ಈಗಾಲೆ ನೀಡಿರುವ ಜಿಲ್ಲಾಡಳಿತ ಮತ್ತು ದೇವಸ್ಥಾನದ ಆಡಳಿತ ಮಂಡಳಿ, ಅದರೆ ಮಾಹಿತಿ ಇಲ್ಲದೆ 12 ಗಂಟೆ ನಂತರ ದೇವರ ದರ್ಶನಕ್ಕೆ ಬಂದು ಅವಕಾಶ ಸಿಗದೆ ಬೇಸರಗೊಂಡಿರುವ ಹಲವಾರು ಭಕ್ತರು.
ಕೊಮ್ಮಘಟ್ಟ ಹೆಲಿಪ್ಯಾಡ್ನಿಂದ ಜ್ಞಾನಭಾರತಿಗೆ ತೆರಳಿದ ಮೋದಿ
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ಮೋದಿ ಭೇಟಿ
ಬೇಸ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟನೆ
ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸುವ ಪ್ರಧಾನಿ
ಕೊಮ್ಮಘಟ್ಟ ಸಮಾರಂಭಕ್ಕೆ ಹರಿದು ಬರುತ್ತಿರುವ ಜನ ಸಾಗರ, ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಜನರು
ವಿಜಯನಗರ, ಗೋವಿಂದರಾಜನಗರ, ಯಶವಂತಪುರ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ಜನರ ಆಗಮನ
IIScಯಿಂದ HQTCಗೆ ವಾಪಸಾದ ಪ್ರಧಾನಿ ನರೇಂದ್ರ ಮೋದಿ
ರಸ್ತೆ ಮಾರ್ಗವಾಗಿ HQTCಗೆ ತೆರಳಿದ ಪ್ರಧಾನಿ ಮೋದಿ
ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿ ಮೋದಿ ವಾಪಸ್
ಮಧ್ಯಾಹ್ನ 1.45ಕ್ಕೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ಭೇಟಿ
ಬಳಿಕ ಬೇಸ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟನೆ
ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸುವ ಪ್ರಧಾನಿ
ಪ್ರಧಾನಿ ಮೋದಿ ಆಗಮನ ಹಿನ್ನೆಲೆ ನಾಳೆ ಬೆಳಗ್ಗೆ 7.30ರವರೆಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧ; ಚಾಮುಂಡೇಶ್ವರಿ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಐಐಎಸ್ಸಿ ಸಿಬ್ಬಂದಿ ಜತೆ ಪ್ರಧಾನಿ ಮೋದಿ ಸಮಾಲೋಚನೆ ನಡೆಸುತ್ತಿದ್ದಾರೆ
ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು.
ಐಐಎಸ್ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
-HQTCಯಿಂದ IIScಗೆ ಆಗಮಿಸಿದ ಪ್ರಧಾನಿ ಮೋದಿ
-ರಸ್ತೆ ಮಾರ್ಗದಲ್ಲಿ IIScಗೆ ಆಗಮಿಸಿದ ಪ್ರಧಾನಿ ಮೋದಿ
-ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಿರುವ ಪಿಎಂ ಮೋದಿ
-ಜೊತೆಗೆ ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು
ಮೇಖ್ರಿ ಸರ್ಕಲ್ ಬಳಿ ಕಾರು ನಿಲ್ಲಿಸಿ ಕಾರ್ಯಕರ್ತರಿಗೆ ಕೈಬೀಸಿದ ಪ್ರಧಾನಿ ಮೋದಿ
ಹೆಡ್ ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್ ಇಂಡಿಯನ್ ಏರ್‌ಫೋರ್ಸ್ ನಿಂದ ರಸ್ತೆ ಮಾರ್ಗದಲ್ಲಿ ಐಐಎಸ್ಸಿಗೆ ತೆರಳುತ್ತಿರುವ ಪ್ರಧಾನಿ ಮೋದಿ.
ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಿರುವ ಪಿಎಂ ಮೋದಿ, ಜೊತೆಗೆ ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು
ಹೆಡ್ ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್ ಇಂಡಿಯನ್ ಏರ್‌ಫೋರ್ಸ್ ಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ, ಅಲ್ಲಿಂದ ರಸ್ತೆ ಮಾರ್ಗದಲ್ಲಿ ಐಐಎಸ್ಸಿಗೆ ತೆರಳಲಿದ್ದಾರೆ.
ಯಲಹಂಕ ವಾಯುನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಧಾನಿಯವರನ್ನು ಭೇಟಿಯಾದರು. ಯಡಿಯೂರಪ್ಪ ಅವರನ್ನು ಆತ್ಮೀಯವಾಗಿ ಕೈ ಹಿಡಿದು ಮಾತನಾಡಿಸಿದ ಪ್ರಧಾನಿ ಮೋದಿ. ಸಿಎ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಮೊದಲ ಬಾರಿಗೆ ಇಂದು ಪ್ರಧಾನಿ ಭೇಟಿ ಮಾಡಿದ ಯಡಿಯೂರಪ್ಪ
ಮೆಖ್ರಿ ಸರ್ಕಲ್ ನಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಜಮಾವಣೆ, ಜೈ ಜೈ ಮೋದಿ .. ಜೈ ಶ್ರೀರಾಮ್ ಚಂದ್ರ ಕಿ ಜೈ ಎಂದು ಜೈಕಾರ ಹಾಕುತ್ತಿದ್ದಾರೆ.
ಯಲಹಂಕ ವಾಯುನೆಲೆಯಿಂದ ಐಐಎಸ್ಸಿ ಕಡೆಗೆ ಪ್ರಧಾನಿ ಮೋದಿ ಪ್ರಯಾಣಬೆಳೆಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ HQTCಗೆ ತೆರಳಿದ ಪ್ರಧಾನಿ ಮೋದಿ ಹೆಡ್ ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್ ಇಂಡಿಯನ್ ಏರ್‌ಫೋರ್ಸ್
ಬೆಂಗಳೂರಿಗೆ ಬಂದ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸ್ವಾಗತ
ಮೂರು ವಿಶೇಷ ಹೆಲಿಕಾಪ್ಟರ್‌ನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಜತೆ ಪ್ರಧಾನಿ ಮೋದಿ ಕಚೇರಿಯ ಅಧಿಕಾರಿಗಳು ತೆರಳಲಿದ್ದಾರೆ.
ಮೈಸೂರು ಅರಮನೆಯಲ್ಲಿ ಯೋಗ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆ ಆವರಣದಲ್ಲಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಜಯ ಮಾರ್ತಂಡ ದ್ವಾರದಲ್ಲಿ ಮುಖ್ಯ ವೇದಿಕೆ ನಿರ್ಮಾಣವಾಗಿದೆ. ಅರಮನೆ ಕಾಣುವಂತೆ ಮುಖ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ. ಯೋಗಪಟುಗಳಿಗೆ ಬ್ಲಾಕ್ ಗಳ ನಿರ್ಮಾಣ.
ಪ್ರತಿ ಬ್ಲಾಕ್ ನಲ್ಲಿ ಒಬ್ಬ ಯೋಗ ಗುರು ಹಾಗೂ ಸಿಸಿ ಕ್ಯಾಮೆರಾ ಕಣ್ಗಾವಲು ನೋಂದಾವಣಿ ಮಾಡಿಕೊಂಡಿರುವವರಿಗಾಗಿ ನಿಗದಿತ ದ್ವಾರದಲ್ಲಿ ಪ್ರವೇಶ, ಗಣ್ಯರಿಗಾಗಿ ಕರಿಕಲ್ಲು ತೊಟ್ಟಿ ಪ್ರವೇಶ ದ್ವಾರದ ಮೂಲಕ ಅವಕಾಶ, ಯೋಗ ಮಾಡದ ಗಣ್ಯರಿಗೆ ಪ್ರತ್ಯೇಕ ಆಸನ, ಬೆಳಗ್ಗೆ 5.30ರ ಒಳಗೆ ಅರಮನೆಯಲ್ಲಿ ಇರುವವರಿಗೆ ಮಾತ್ರ ಅವಕಾಶ, ನಂತರ ಬಂದವರಿಗೆ ಪ್ರವೇಶ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಯಲಹಂಕ ವಾಯುನೆಲೆಗೆ ಬಂದಿಳಿದಿದ್ದಾರೆ.
ಮೂರು ಹೆಲಿಕಾಪ್ಟರ್ಗಳಲ್ಲಿ 15 ಮಂದಿ ಅಧಿಕಾರಿಗಳು ಪ್ರಯಾಣ
ಪ್ರಧಾನಿ ನರೇಂದ್ರ ಬೆಂಗಳೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ 10 ಸಾವಿರ ಪೊಲೀಸರ ನಿಯೋಜನೆ, ಮೇಖ್ರಿ ವೃತ್ತದಲ್ಲಿ 1 ಸಾವಿರ ಪೊಲೀಸರ ಸರ್ಪಗಾವಲು.
ಬೆಂಗಳೂರಿನಾದ್ಯಂತ ನಮೋ ನಮಃ ಎಂದು ಘೋಷಣೆ ಕೂಗಲಾಗುತ್ತಿದೆ.
ಪ್ರಧಾನಿ ಮೋದಿ ಆಗಮನ ಹಿನ್ನೆಲೆ, ಬೆಂಗಳೂರು ವಿವಿಯೊಳಗೆ ಸಾರ್ವಜನಿಕ ವಾಹನ ಪ್ರವೇಶ ನಿರ್ಬಂಧಿಸಲಾಗುತ್ತದೆ.
ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶ ಇರುವುದಿಲ್ಲ. ಮೋದಿ ಬೆಂಗಳೂರಿಗೆ ಬಂದ ಕೂಡಲೇ ಬೆಂ. ವಿವಿ ರಸ್ತೆ ಕ್ಲೋಸ್ ಮಾಡಲಾಗುತ್ತದೆ.
3 ರಿಂದ 4 ತಾಸಿನವರೆಗೆ ಬೆಂಗಳೂರು ವಿವಿ ರಸ್ತೆ ಸಂಪೂರ್ಣ ಕ್ಲೋಸ್ ಆಗಲಿದೆ. ಬೇಸ್ ಉದ್ಘಾಟನೆಗೆ ಬೆಂಗಳೂರು ವಿವಿ ಆವರಣಕ್ಕೆ ಮೋದಿ ಆಗಮಿಸಲಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದಾರೆ.
ಮೋದಿ ಸ್ವಾಗತಕ್ಕೆ ಏರ್ಬೇಸ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನ, ಪ್ರಧಾನಿ ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರು ಸಜ್ಜು.
Published On - 8:49 am, Mon, 20 June 22