Mann Ki Baat: ಮನ್ ಕೀ ಬಾತ್​ನಲ್ಲಿ ಕರ್ನಾಟಕದವರ ಬಗ್ಗೆ ಮೋದಿ ಪ್ರಸ್ತಾಪಿಸಿದ್ದು ಇವು

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jan 29, 2023 | 12:56 PM

PM Modi Praises IISC in Mann Ki Baat: ಭಾರತದ ಪ್ರಜಾತಂತ್ರ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಹಳೆಯದು ಎಂಬ ವಿಚಾರವನ್ನು ಹೇಳುತ್ತಾ, ಪ್ರಧಾನಿ ಮೋದಿ ಅವರು ಬಸವಣ್ಣರ ಅನುಭವ ಮಂಟಪವೋ ಒಳಗೊಂಡು ಹಲವು ಉದಾಹರಣೆಗಳನ್ನು ತೋರಿದರು.

Mann Ki Baat: ಮನ್ ಕೀ ಬಾತ್​ನಲ್ಲಿ ಕರ್ನಾಟಕದವರ ಬಗ್ಗೆ ಮೋದಿ ಪ್ರಸ್ತಾಪಿಸಿದ್ದು ಇವು
ಪ್ರಧಾನಿ ನರೇಂದ್ರ ಮೋದಿ
Image Credit source: narendramodi.in
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ನಡೆಸಿದ ತಮ್ಮ 97ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ (Mann Ki Baat 97th Episode) ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಈ ವೇಳೆ, ಕರ್ನಾಟಕದ ಹಲವರು ಹೆಸರುಗಳು ಭಾಷಣದಲ್ಲಿ ಪ್ರಸ್ತಾಪವಾದವು. ಪದ್ಮ ಶ್ರೀ ಪ್ರಶಸ್ತಿ ವಿಜೇತರಾದ ಚಿಕ್ಕಬಳ್ಳಾಪುರದ ತಮಟೆ ಮಾಸ್ಟರ್ ಮುನಿವೆಂಕಟಪ್ಪ (Tamate Master Munivenkatappa) ಅವರ ಹೆಸರನ್ನೂ ಮೋದಿ ಈ ವೇಳೆ ಉಲ್ಲೇಖಿಸುತ್ತಾ, ಭಾರತದ ಪದ್ಮ ಪ್ರಶಸ್ತಿ ವಿಜೇತರ ಜೀವನ ಮತ್ತು ಸಾಧನೆ ಬಗ್ಗೆ ಜನರು ಅರಿತುಕೊಂಡು ಪ್ರೇರಿತರಾಗಬೇಕೆಂದು ಕರೆ ನೀಡಿದರು.

ಭಾರತದ ಪ್ರಜಾತಂತ್ರ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಹಳೆಯದು ಎಂಬ ವಿಚಾರವನ್ನು ಹೇಳುತ್ತಾ, ಪ್ರಧಾನಿ ಮೋದಿ ಅವರು ಬಸವಣ್ಣರ ಅನುಭವ ಮಂಟಪವೂ (Basavanna Anubhava Mantapa) ಒಳಗೊಂಡು ಹಲವು ಉದಾಹರಣೆಗಳನ್ನು ತೋರಿದರು.

ಬೀದರ್​ನ ಹುಲ್ಸೂರು ಕಂಪನಿ

ಆರೋಗ್ಯಕ್ಕೆ ಸಿರಿಧಾನ್ಯಗಳ ಮಹತ್ವದ ಬಗ್ಗೆ ಮಾತನಾಡುತ್ತಾ ನರೇಂದ್ರ ಮೋದಿ ಅವರು ಸಿರಿಧಾನ್ಯ ಬೆಳೆಗಾರರು, ತಯಾರಕರು ಮತ್ತು ಉದ್ಯಮಿಗಳ ಕಾರ್ಯಗಳನ್ನು ಹೊಗಳಿದರು. ಈ ವೇಳೆ ಅವರು ಬೀದರ್​ನ ಹುಲ್ಸೂರು ಮಹಿಳಾ ಕಿಸಾನ್ ಸಿರಿಧಾನ್ಯ ತಯಾರಕ ಕಂಪನಿಯ ಕೈಂಕರ್ಯಗಳನ್ನು ಅವರು ತಿಳಿಸಿದರು.

ಬೆಂಗಳೂರಿನ ಐಐಎಸ್​ಸಿ

ಭಾರತದಲ್ಲಿ ನಡೆಯುತ್ತಿರುವ ಇನೋವೇಶನ್ (Innovation: ಹೊಸ ಪ್ರಯೋಗ) ಮತ್ತು ಹೊಸ ಪೇಟೆಂಟ್​ಗಳ ನೊಂದಣಿಯ ಬಗ್ಗೆ ಪ್ರಧಾನಿಗಳು ಮಾತನಾಡುತ್ತಾ ಬೆಂಗಳೂರಿನ ಇಂಡಿಯನ್ ಇನ್ಸ್​ಟಿಟ್ಯೂಟ್ ಅಫ್ ಇಂಡಿಯಾ ಸಂಸ್ಥೆಯನ್ನು ಹೊಗಳಿದರು.

ಭಾರತದಿಂದ ದಾಖಲಾಗುತ್ತಿರುವ ಪೇಟೆಂಟ್​ಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಭಾರತದ ಅತ್ಯಂತ ಹಳೆಯ ವಿಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಯನ್ ಇನ್ಸ್​ಟಿಟ್ಯೂಟ್

ಆಫ್ ಸೈನ್ಸ್ ಇದಕ್ಕೆ ಒಳ್ಳೆಯ ಉದಾಹರಣೆ. 2022ರ ಒಂದೇ ವರ್ಷದಲ್ಲಿ ಐಐಎಸ್​ಸಿ ಹೆಸರಿನಲ್ಲಿ 145 ಪೇಟೆಂಟ್​ಗಳು ನೊಂದಣಿಯಾಗಿವೆ. ಅಂದರೆ ಪ್ರತೀ ಐದು ದಿನಗಳಿಗೆ ಎರಡು ಪೇಟೆಂಟ್​ಗಳು ದಾಖಲಾಗುತ್ತಿವೆ. ಇದು ದಾಖಲೆಯೇ ಆಗಿದೆ. ಇಂಥ ಯಶಸ್ಸಿಗೆ ನಾನು ಐಐಎಸ್​ಸಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ಹಾಗೆಯೇ, ಐಐಎಸ್​ಸಿ ಹುಟ್ಟಿಗೆ ಜಮ್​ಶೆಡ್​ಜೀ ಟಾಟಾ ಮತ್ತು ಸ್ವಾಮಿ ವಿವೇಕಾನಂದ ಅವರ ಪ್ರೇರಣೆ ಹೇಗಾಯಿತು ಎಂದೂ ಅವರು ಈ ವೇಳೆ ಹೇಳಿದರು.

Published On - 12:56 pm, Sun, 29 January 23