Congress Bus Yatra: ಫೆ.3 ರಿಂದ ಕಾಂಗ್ರೆಸ್ನಿಂದ ವಿಧಾನಸಭಾ ಕ್ಷೇತ್ರವಾರು ಪ್ರಜಾಧ್ವನಿ ಯಾತ್ರೆ
ವಿಧಾನಸಭೆ ಚುನಾವಣಾ ಹತ್ತಿರ ಬರುತ್ತಿದ್ದಂತೆ, ಚುನಾವಣಾ ಕಾವು ಜೋರಾಗಿದೆ. ಮತದಾರರನ್ನ ಓಲೈಸಲು ಎಲ್ಲಾ ಪಕ್ಷದ ಮುಖಂಡರುಗಳು ಹರಸಾಹಸ ಪಡುತ್ತಿದ್ದಾರೆ. ಅದರಂತೆ ಕಾಂಗ್ರೆಸ್ ತನ್ನ ಜಿಲ್ಲಾವಾರು ಪ್ರಜಾಧ್ವನಿ ಸಮಾವೇಶವನ್ನ ಮುಕ್ತಾಯಗೊಳಿಸಿದ್ದು, ಇದೀಗ ಫೆ.3 ರಿಂದ ಕ್ಷೇತ್ರವಾರು ಪ್ರಜಾಧ್ವನಿ ಯಾತ್ರೆ ಕೈಗೊಳ್ಳಲಿದೆ.
ಬೆಂಗಳೂರು: ಚುನಾವಣೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದ್ದು, ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಅದರಂತೆ ಕಾಂಗ್ರೆಸ್ನ ಜಿಲ್ಲಾವಾರು ಪ್ರಜಾಧ್ವನಿ ಯಾತ್ರೆ ಮುಕ್ತಾಯವಾಗಿದ್ದು, ಇದೀಗ ಫೆ.3 ರಿಂದ ವಿಧಾನಸಭಾವಾರು ಪ್ರಜಾಧ್ವನಿ ಯಾತ್ರೆ ಶುರು ಮಾಡಲಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿ ಫೆಬ್ರವರಿ 3 ರಿಂದ ಪ್ರಜಾಧ್ವನಿ ಯಾತ್ರೆ ಶುರು ಮಾಡಲಿದ್ದಾರೆ. ಡಿ.ಕೆ ಶಿವಕುಮಾರ್ ಮುಳಬಾಗಿಲು ಕ್ಷೇತ್ರದಿಂದ ಯಾತ್ರೆ ನಡೆಸಿದರೆ. ಸಿದ್ದರಾಮಯ್ಯ ಬೀದರ್ನ ಬಸವ ಕಲ್ಯಾಣಕ್ಕೆ ಭೇಟಿ ನೀಡಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಜಾಧ್ವನಿ ಯಾತ್ರೆ ಪ್ರಾರಂಭಿಸಲಿದ್ದಾರೆ.
ಸಿದ್ದರಾಮಯ್ಯನವರ ಕ್ಷೇತ್ರವಾರು ಯಾತ್ರೆಯ ಡೀಟೆಲ್ಸ್ ಹೀಗಿದೆ.
1. ಫೆ. 4 ರಂದು ಔರಾದ್, ಬೀದರ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಪ್ರಜಾಧ್ವನಿ 2. ಫೆ. 4 ರ ಸಂಜೆ ಹುಮ್ನಾಬಾದ್ ನಲ್ಲಿ ಪ್ರಜಾಧ್ವನಿ ಸಮಾವೇಶ 3. ಫೆ. 4 ರಂದು ಕಲಬುರ್ಗಿಯಲ್ಲಿ ವಾಸ್ತವ್ಯ 4. ಫೆ. 6 ರಂದು ಗುಲಬರ್ಗಾ ಗ್ರಾಮೀಣ, ಚಿಂಚೋಳಿ, ಸೇಡಂ ನಲ್ಲಿ ಪ್ರಜಾಧ್ವನಿ 5. ಫೆ. 7 ರಂದ ಆಳಂದ, ಅಫ್ಜಲಪುರ, ಯಡ್ರಾಮಿ ಜೇವರ್ಗಿ ಕ್ಷೇತ್ರದಲ್ಲಿ ಪ್ರಜಾಧ್ವನಿ 6. ಫೆ. 8 ರಂದು ಚಿತ್ತಾಪುರದಲ್ಲಿ ಪ್ರಜಾಧ್ವನಿ ಸಮಾವೇಶ 7. ಫೆ. 10 ರಂದು ಸುರಪೂರ, ಶಹಪುರ, ಕಲಬುರ್ಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಪ್ರಜಾಧ್ವನಿ 8. ಫೆ. 11 ರಂದು ಸಿಂಧಗಿ, ಇಂಡಿ, ನಾಗಠಾಣಾ ಪ್ರಜಾಧ್ವನಿ ಸಮಾವೇಶ 9. ಫೆ. 12 ರಂದು ಬಬಲೇಶ್ವರ, ದೇವರ ಹಿಪ್ಪರಗಿ, ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸಿದ್ದು ಯಾತ್ರೆ.
ಕ್ಷೇತ್ರವಾರು ರಾಜ್ಯ ಪ್ರವಾಸಕ್ಕೆ ಭರ್ಜರಿಯಾಗಿ ಅಣಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ತನ್ನ ಆಪ್ತ ಬಳಗದ ಜೊತೆ ಉತ್ತರ ಕರ್ನಾಟಕ ಭಾಗದಲ್ಲಿ ಮಾಜಿ ಸಿಎಂ ದಂಡಯಾತ್ರೆ ಮಾಡಲಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಜಮೀರ್ ಅಹಮ್ಮದ್, ಭೈರತಿ ಸುರೇಶ್, ಹೆಚ್.ಸಿ ಮಹದೇವಪ್ಪ, ಸಂತೋಷ್ ಲಾಡ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಉಮಾಶ್ರೀ, ಅಂಜಲಿ ನಿಂಬಾಳ್ಕರ್ ಸೇರಿದಂತೆ ಒಟ್ಟು 35 ಮಂದಿಯ ತಂಡದೊಂದಿಗೆ ಸಿದ್ದು ಯಾತ್ರೆ ಆರಂಭಿಸಲಿದ್ದಾರೆ.
ಅದೇ ರೀತಿ ಡಿ.ಕೆ ಶಿವಕುಮಾರ್ ನೇತೃತ್ವದ ಬಸ್ ಯಾತ್ರೆ ಡಿಟೇಲ್ಸ್ ಹೀಗಿದೆ. 1. ಫೆ. 3- ಮುಳಬಾಗಿಲು, ಕೆಜಿಎಫ್ ಕ್ಷೇತ್ರ 2. ಫೆ. 4 – ಮಾಲೂರು, ದೇವನಹಳ್ಳಿ ಕ್ಷೇತ್ರ 3. ಫೆ. 6 – ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು 4. ಫೆ. 7- ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ 5. ಫೆ. 8- ಶಿಕಾರಿಪುರ, ಸೊರಬ, ಸಾಗರ 6. ಫೆ. 9- ತೀರ್ಥಹಳ್ಳಿ, ಭದ್ರಾವತಿ ಕ್ಷೇತ್ರಗಳಲ್ಲಿ ಡಿಕೆಶಿವಕುಮಾರ್ ಪ್ರಜಾಧ್ವನಿ ಯಾತ್ರೆ ಕೈಗೊಳ್ಳಲಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ