Mysuru Dasara 2022: ಮೈಸೂರು ದಸರಾ ಫೋಟೋ ನೋಡಿಯೇ ಮನಸೋತ ಪ್ರಧಾನಿ: ಮೈಸೂರು ಜನತೆಗೆ ಧನ್ಯವಾದ ಹೇಳಿದ್ರು

ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಹಾಡು ಕೇಳಿರುತ್ತೀರಿ. ನಿಜವಾಗಿಯೂ ಈ ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಸಾಕ್ಷಿ.

Mysuru Dasara 2022: ಮೈಸೂರು ದಸರಾ ಫೋಟೋ ನೋಡಿಯೇ ಮನಸೋತ ಪ್ರಧಾನಿ: ಮೈಸೂರು ಜನತೆಗೆ ಧನ್ಯವಾದ ಹೇಳಿದ್ರು
Narendra Modi
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 06, 2022 | 8:45 PM

ನವದೆಹಲಿ/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಶ್(Mysuru Dasara) ಮಹೋತ್ಸವಕ್ಕೆ ತೆರೆ ಬಿದ್ದಿದೆ. ನಿನ್ನೆ(ಅ.05)ರಂದು ನಡೆದ ಜಂಬೂಸವಾರಿಗೆ ಲಕ್ಷಾಂತರ ಜನ ಸಾಕ್ಷಿಯಾಗಿದ್ರು. ಕೊರೋನಾ ಮಹಾಮಾರಿಯಿಂದಾಗಿ ಕಳೆಗುಂದಿದ್ದ ಮೈಸೂರು ದಸರಾ ಈ ಬಾರಿ ಅದ್ಧೂರಿಯಾಗಿ ನೆರವೇರಿದೆ. ಜಂಬೂಸವಾರಿಯ ಆಕರ್ಷಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಕಣ್ಣಿಗೆ ಬಿದ್ದಿದೆ. ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಮಹಿಷಾಸುರ ಮರ್ಧಿನಿ ವಿಗ್ರಹ ಹೊತ್ತು ಸಾಗಿದ ಅಭಿಮನ್ಯು ಚಿತ್ರಕ್ಕೆ ಮೋದಿ ಮನಸೋತಿದ್ದಾರೆ.

ಆರ್​​ಎಸ್​​ಎಸ್​ ಸ್ವಯಂಸೇವಕ ನಿವಣೆ ಕಾಲನಾಥ್​ ಭಟ್​ ಎಂಬುವರು ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಜೂ ಸವಾರಿಯ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡು ಪ್ರಧಾನಿ ಮೋದಿ ಅವರಿಗೆ ಟ್ಯಾಗ್ ಮಾಡಿದ್ದರು. ಈ ಫೋಟೋಗೆ ಪ್ರಧಾನಿ ನರೇಂದ್ರ ಮೋದಿ ಫಿದಾ ಆಗಿ ರೀಟ್ವೀಟ್ ಮಾಡಿದ್ದಾರೆ.

ಅಲ್ಲದೇ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಮಹಿಷಾಸುರ ಮರ್ಧಿನಿ ವಿಗ್ರಹ ಹೊತ್ತು ಸಾಗಿದ ಅಭಿಮನ್ಯು ಚಿತ್ರ ಹಾಕಿ‌ ಮಾಡಲಾಗಿದ್ದ ಟ್ವೀಟ್ ಅನ್ನು ಮೋದಿ ರೀಟ್ವೀಟ್ ಮಾಡಿ, ಮೈಸೂರು ದಸರಾ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೈಸೂರು ಜನರಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: Mysuru Dasara 2022: ಯಶಸ್ವಿಯಾಗಿ ನಡೆದ ಜಂಬೂಸವಾರಿ, ಬನ್ನಿಮಂಟಪದಲ್ಲಿ ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ

ದಸರಾ ಸಂಸ್ಕೃತಿ ಪರಂಪರೆ ಉಳಿಸಿ‌ ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕೆ ಮೈಸೂರು ಜನರಿಗೆ ಧನ್ಯವಾದ ಹೇಳಿದ್ದು, ಇದರ ಜೊತೆಗೆ ಇತ್ತೀಚೆಗೆ ಯೋಗ ದಿನಾಚರಣೆಗೆಂದು ತಮ್ಮ ಮೈಸೂರು ಭೇಟಿಯ ಬಗ್ಗೆಯೂ ಟ್ವೀಟ್​ನಲ್ಲಿ ಪ್ರಸ್ತಾಪಿಸಿದ್ದಾರೆ.

ಮೈಸೂರು ದಸರಾ ಅದ್ಭುತವಾಗಿದೆ. ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸುಂದರವಾಗಿ ಉಳಿಸಿಕೊಂಡಿರುವ ಮೈಸೂರಿನ ಜನತೆಯನ್ನು ನಾನು ಶ್ಲಾಘಿಸುತ್ತೇನೆ. 2022ರ ವಿಶ್ವ ಯೋಗ ದಿನದ ಅಂಗವಾಗಿ ಮೈಸೂರಿಗೆ ಭೇಟಿ ನೀಡಿದ ಸಮಯ ಅಚ್ಚುಮೆಚ್ಚಿನ ನೆನಪು ಎಂದು ಟ್ವೀಟ್ ಮಾಡಿ ಸಾಂಸ್ಕೃತಿಕ ನಗರಿಯನ್ನು ಸ್ಮರಿಸಿಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Thu, 6 October 22