AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Energy Week: ಬೆಂಗಳೂರಿನಲ್ಲಿ ಇಂಧನ ಸಪ್ತಾಹಕ್ಕೆ ಇಂದು ಪ್ರಧಾನಿಯಿಂದ ಚಾಲನೆ

PM Narendra Modi at India Energy Week In Bengaluru: ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಇಂಧನ ಸಪ್ತಾಹ ನಡೆಯಲಿದೆ. ಮೋದಿ ಸೋಮವಾರ ಬೆಳಗ್ಗೆ ಇದರ ಉದ್ಘಾಟನೆ ಮಾಡಲಿದ್ದು, ನೆಲಮಂಗಲದ ಮಾದಾವರ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Energy Week: ಬೆಂಗಳೂರಿನಲ್ಲಿ ಇಂಧನ ಸಪ್ತಾಹಕ್ಕೆ ಇಂದು ಪ್ರಧಾನಿಯಿಂದ ಚಾಲನೆ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 06, 2023 | 11:07 AM

Share

ಬೆಂಗಳೂರು: ಇಂಧನ ಕ್ಷೇತ್ರದಲ್ಲಿ ಭಾರತ ಮಾಡಿರುವ ಸಾಧನೆಯನ್ನು ಜಾಹೀರುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಭಾರತ ಇಂಧನ ಸಪ್ತಾಹ 2023 ಕಾರ್ಯಕ್ರಮಕ್ಕೆ (IEW- India Energy Week 2023) ಚಾಲನೆ ನೀಡಿದ್ದಾರೆ. ನೆಲಮಂಗಲದ ಮಾದವಾರದ ಬಳಿ ಇರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (Bengaluru International Exhibition Centre) ಬೆಳಗ್ಗೆ 11:30ಕ್ಕೆ ಪ್ರಧಾನಿಗಳು ಇಂಧನ ಸಪ್ತಾಹ ಉದ್ಘಾಟನೆ ಮಾಡಲಿದ್ದಾರೆ.

ಫೆಬ್ರುವರಿ 6ರಿಂದ 8ರವರೆಗೆ ಇಂಧನ ಸಪ್ತಾಹ ನಡೆಯಲಿದೆ. ಇಂಧನ ಕೈಗಾರಿಕಾ ವಲಯ, ಸರ್ಕಾರ ಮತ್ತು ಶೈಕ್ಷಣಿಕ ವಲಯವು ಒಂದೇ ವೇದಿಕೆ ಅಡಿಯಲ್ಲಿ ಸೇರುತ್ತಿರುವುದು ವಿಶೇಷ. 30 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, ಒಂದು ಸಾವಿರ ಪ್ರದರ್ಶಕರು ಮತ್ತು 500 ಸ್ಪೀಕರ್​ಗಳು ಭಾರತದ ಭವಿಷ್ಯದ ಇಂಧನ ಪರಿಸ್ಥಿತಿ ಮತ್ತು ಸಾಧ್ಯಾಸಾಧ್ಯತೆಗಳನ್ನು ಚರ್ಚಿಸಲಿದ್ದಾರೆ. ಇಂದು ಪ್ರಧಾನಿಗಳು ದುಂಡುಮೇಜಿನ ಸಭೆ ನಡೆಸಲಿದ್ದು, ಜಾಗತಿಕ ತೈಲ ಮತ್ತು ಅನಿಲ ಸಂಸ್ಥೆಗಳ ಸಿಇಒಗಳು ಪಾಲ್ಗೊಳ್ಳಲಿದ್ದಾರೆ.

ಇಂದು ಬೆಳಗ್ಗೆ 11ಕ್ಕೆ ನರೇಂದ್ರ ಮೋದಿ ಅವರು ಹೆಲಿಪ್ಯಾಡ್ ಮೂಲಕ ಮಾದವಾರಕ್ಕೆ ಆಗಮಿಸಲಿದ್ದು, 11:30ಕ್ಕೆ ಎನರ್ಜಿ ವೀಕ್ ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ. ಎರಡೂ ವರೆ ಗಂಟೆ ಕಾಲ ನಡೆಯುವ ಈ ಕಾರ್ಯಕ್ರಮದ ವೇಳೆ ನರೇಂದ್ರ ಮೋದಿ ದುಂಡುಮೇಜಿನ ಸಭೆ ಜೊತೆಗೆ ಹಸಿರು ಇಂಧನ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಅನಾವರಣ ಕೂಡ ಮಾಡಲಿದ್ದಾರೆ.

ಇದನ್ನೂ ಓದಿ: ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ; ಮಧ್ಯ ಕರ್ನಾಟಕ ಭಾಗ ಟಾರ್ಗೆಟ್, ಮೋದಿ ವರ್ಚಸ್ಸು ಮೂಲಕ ಮತ ಬೇಟೆ

ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾರ್ಯಕ್ರಮದ ಆಯೋಜಕರಿಂದ ಪಾಸ್ ಪಡೆದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶ ಇರಲಿದೆ.

ಈ ಕಾರ್ಯಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅರು ತುಮಕೂರಿಗೆ ತೆರಳಿ ಅಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೆಚ್​ಎಲ್​ನ ಹೆಲಿಕಾಪ್ಟರ್ ಫ್ಯಾಕ್ಟರಿ ಮತ್ತು ಕೈಗಾರಿಕಾ ಟೌನ್​ಶಿಪ್ ಅನ್ನು ಉದ್ಘಾಟಿಸಲಿದ್ದಾರೆ.

ಮೋದಿ ಉದ್ಘಾಟಿಸಲಿರುವ ಇತರ ಯೋಜನೆಗಳು

20 ಇಂಧನ: ಗ್ರೀನ್ ಎನರ್ಜಿ ಗುರಿ ಸಾಧಿಸುವ ನಿಟ್ಟಿನಲ್ಲಿ ಮತ್ತು ಪಳೆಯುಳಿಕೆ ಇಂಧನ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪೆಟ್ರೋಲ್​ಗೆ ಎಥನಾನ್ ಬ್ಲೆಂಡ್ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಒಂದು ಲೀಟರ್ ಪೆಟ್ರೋಲ್​ನಲ್ಲಿ ಶೇ. 20ರಷ್ಟು ಎಥನಾಲ್ ಬ್ಲೆಂಡಿಂಗ್ ಮಾಡುವ ಗುರಿ ಇದ್ದು, ಈ ನಿಟ್ಟಿನಲ್ಲಿ ಇ20 ಇಂಧನ ಸಿದ್ಧವಾಗಿದೆ. 11 ರಾಜ್ಯಗಳಲ್ಲಿನ 84 ಪೆಟ್ರೋಲ್ ಸ್ಟೇಷನ್​​ಗಳಲ್ಲಿ ಇ20 ಪೆಟ್ರೋಲ್ ಲಭ್ಯ ಇದೆ. ನರೇಂದ್ರ ಮೋದಿ ಇಂದು ಇದಕ್ಕೆ ಅಧಿಕೃತ ಚಾಲನೆ ಕೊಡಲಿದ್ದಾರೆ.

ಇದನ್ನೂ ಓದಿ: Narendra Modi: ಬೆಂಗಳೂರಿಗೆ ಮೋದಿ ಭೇಟಿ ಬೆನ್ನಲ್ಲೆ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಇದರ ಜೊತೆಗೆ ಗ್ರೀನ್ ಮೊಬಿಲಿಟಿ ಜಾಥಾ ನಡೆಯಲಿದೆ. ಇದರಲ್ಲಿ ಹಸಿರು ಇಂಧನ ಚಾಲಿತ ವಾಹನಗಳ ಮೆರವಣಿಗೆ ಆಗಲಿದೆ.

ಜೊತೆಗೆ, ಸೌರ ಅಡುಗೆ ವ್ಯವಸ್ಥೆಯ ಕುಕ್ ಟಾಪ್ ಮಾದರಿಗೆ ಮೋದಿ ಚಾಲನೆ ಕೊಡಲಿದ್ದಾರೆ. ಸೌರಶಕ್ತಿ ಬಳಸಿ ಈ ಮಾದರಿ ಅಡುಗೆ ಮನೆಯನ್ನು ನಿರ್ಮಿಸಲಾಗಿದೆ.

ಹಾಗೆಯೆ, ಪಿಇಟಿ ಬಾಟಲ್​ಗಳ ರೀಸೈಕ್ಲಿಂಗ್​ನಿಂದ ತಯಾರಿಸಲಾದ ಸಮವಸ್ತ್ರಗಳ ಉದ್ಘಾಟನೆಯನ್ನು ಮೋದಿ ನೆರವೇರಿಸಲಿದ್ದಾರೆ.

ತುಮಕೂರಿನಲ್ಲಿ ಹೆಚ್​​ಎಲ್ ಫ್ಯಾಕ್ಟರಿ ಉದ್ಘಾಟನೆ ಜೊತೆಗೆ ಇಂಡಸ್ಟ್ರಿಯಲ್ ಟೌನ್​ಶಿಪ್ ನಿರ್ಮಾಣಕ್ಕೆ ಅವರು ಅಡಿಗಲ್ಲು ಹಾಕಲಿದ್ದಾರೆ. ಹಾಗೆಯೇ ಎರಡು ಜಲಜೀವನ್ ಮಿಷನ್ ಯೋಜನೆಗಳಿಗೆ ಚಾಲನೆ ಕೊಡಲಿದ್ಧಾರೆ.

Published On - 9:50 am, Mon, 6 February 23

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?