Bengaluru News: ಬೆಂಗಳೂರಲ್ಲಿ ತಲೆ ಎತ್ತಿವೆ 200ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು
ಬೆಂಗಳೂರಲ್ಲಿ ಬರೊಬ್ಬರಿ 200ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ತಲೆ ಎತ್ತಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಬಿಇಎ ಡಿಡಿಪಿಐ ನೇತೃತ್ವದಲ್ಲಿ ತ್ರಿಮೆನ್ ಸಮಿತಿ ನೀಡಿದ ವರದಿಯಲ್ಲಿ ಮಾಹಿತಿ ಬಹಿರಂಗಗೊಂಡಿದೆ.
ಬೆಂಗಳೂರು: ಮಕ್ಕಳನ್ನು ಒಳ್ಳೆ ಮಾರ್ಗದಲ್ಲಿ ಸಾಗಿಸಬೇಕಾದ ಶಾಲೆಗಳೇ ತಪ್ಪು ಮಾರ್ಗದಲ್ಲಿವೆ. ಕೆಲವು ದಿನಗಳ ಹಿಂದೆ ನಗರದ ಪ್ರತಿಷ್ಠಿತ ಶಾಲೆಗಳಾದ ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಡೆತನದ ಎಂ ಎಸ್ ಧೋನಿ ಶಾಲೆ ಸಿಬಿಎಸ್ಇ ಅನುಮತಿ ಪಡೆಯದೆ ಅನಧಿಕೃತವಾಗಿ ಸಿಬಿಎಸ್ಇ ಪಠ್ಯ ಭೋದಿಸಿರುವುದು ಬೆಳಕಿಗೆ ಬಂದಿದೆ. ಇದರಂತೆ ನಗರದಲ್ಲಿ ಬರೊಬ್ಬರಿ 200ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ತಲೆ ಎತ್ತಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಬಿಇಎ ಡಿಡಿಪಿಐ ನೇತೃತ್ವದಲ್ಲಿ ತ್ರಿಮೆನ್ ಸಮಿತಿ ರಚಿಸಲಾಗಿದೆ. ಈ ಸಮಿತಿ ಬೆಂಗಳೂರಿನ ಸಮಗ್ರ ಶಾಲೆಗಳ ಕುರಿತು ಅಧ್ಯಯನ ಮಾಡಿ ಶಿಕ್ಷಣ ಇಲಾಖೆಗೆ ವರದಿ ನೀಡಿದೆ. ಈ ವರದಿಯಲ್ಲಿ ನಗರದಲ್ಲಿನ ಶಾಲೆ, ಭೋದನಾ ವಿಷಯ ಹಾಗೂ ತರಗತಿಗಳ ಬಗ್ಗೆ ಮಾಹಿತಿಯನ್ನು ಇಲಾಖೆಗೆ ನೀಡಲಾಗಿದೆ.
ಇದನ್ನೂ ಓದಿ: ಕರ್ನಾಟಕ ಶಿಕ್ಷಣ ಇಲಾಖೆಯಿಂದ ಭಾರತ ತಂಡದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಶಾಲೆಗೂ ನೋಟಿಸ್
ಅನಧಿಕೃತ ಶಾಲೆಗಳ ಅಂಕಿ ಅಂಶ
ಬೆಂಗಳೂರು ದಕ್ಷಿಣ ವಲಯ
1. ಅನಧಿಕೃತ ಸಿಬಿಎಸ್ಇ ಪಠ್ಯ ಬೋಧನೆ ಮಾಡುತ್ತಿರುವ ಶಾಲೆಗಳು ಬರೊಬ್ಬರಿ – 171 2. ಅನಧಿಕೃತ ತರಗತಿ ನಡೆಸುತ್ತಿರುವ ಶಾಲೆಗಳು 31
ಇದನ್ನೂ ಓದಿ: ಆರ್ಕಿಡ್ ಇಂಟರ್ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲು, ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ
ಬೆಂಗಳೂರಿನ ಉತ್ತರ ವಲಯ
1. ಅನಧಿಕೃತ ಶಾಲೆಗಳು – 11
2. ಅನಧಿಕೃತ ಸಿಬಿಎಸ್ಇ ಐಸಿಎಸ್ಇ ಪಠ್ಯ ಬೋಧನೆ ಮಾಡುತ್ತಿರುವ ಶಾಲೆಗಳು – 13
3. ಅನಧಿಕೃತ ತರಗತಿಗಳ ನಡೆಸುತ್ತಿರುವ ಶಾಲೆಗಳು – 20. ಎಲ್ಲ ಅನಧಿಕೃತ ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.
ಮುಂದುವರಿದ ಆರ್ಕಿಡ್ ಶಾಲೆಯ ಕಳ್ಳಾಟ
ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ಸಿಬಿಎಸ್ಇ ಮಾನ್ಯತೆ ಪಡೆದಿದೆ ಎಂದು ಅನಧಿಕೃತವಾಗಿ ಶಾಲೆ ನಡೆಸುತ್ತಿದ್ದು, ಪೋಷಕರಿಂದ ಲಕ್ಷಗಟ್ಟಲೇ ಶುಲ್ಕ ಪಡೆಯುತ್ತಿದೆ. ಈ ಹಿನ್ನೆಲೆ ವಿಜಯನಗರದ ಪೋಷಕರು ಜಮಾಯಿಸಿದ್ದಾರೆ. ವಿಜಯನಗರದ ರಮಣಶ್ರೀ ಶಾಲೆಯನ್ನು ಆರ್ಕಿಡ್ ಶಿಕ್ಷಣ ಸಂಸ್ಥೆ ತನ್ನ ವ್ಯಾಪ್ತಿಗೆ ಪಡೆದಿದೆ. ರಮಣಶ್ರೀ ಶಾಲೆಗೆ ಸಿಬಿಎಸ್ಇ ಮಾನ್ಯತೆ ಇದೆ, ಆದ್ರೆ ಆರ್ಕಿಡ್ ಶಾಲೆಗೆ ಇಲ್ಲ. ಈಗ ಆರ್ಕಿಡ್ ಶಾಲೆ, ರಮಣಶ್ರೀ ಶಾಲೆಯನ್ನು ಖರೀದಿಸಿದ್ದರೂ, ಸಿಬಿಎಸ್ಇ ಮಾನ್ಯತೆ ಆರ್ಕಿಡ್ ಶಿಕ್ಷಣ ಸಂಸ್ಥೆ ಸಿಕ್ಕಿಲ್ಲ.
ಕಳೆದ ವರ್ಷದಿಂದ ಆರ್ಕಿಡ್ ಇಂಟರ್ನ್ಯಾಷನಲ್ ಶಾಲೆ, ತನ್ನ ಹೆಸರಲಿನಲ್ಲೇ ಮಕ್ಕಳ ದಾಖಲಾತಿ ಮಾಡಿಸಿಕೊಂಡಿದೆ. ಈ ಹಿನ್ನೆಲೆ ಪೋಷಕರು 1.30 ರಿಂದ 1.40 ಲಕ್ಷದವರೆಗೂ ಪೋಷಕರು ಮಕ್ಕಳ ಶುಲ್ಕ ಕಟ್ಟಿದ್ದಾರೆ. ಈಗ ರಮಣಶ್ರೀ ಆಡಳಿತ ಮಂಡಳಿ ಹೆಸರನಲ್ಲಿಯೇ ಸಿಬಿಎಸ್ಇ ಸರ್ಟಿಫಿಕೇಟ್ ನೀಡಲು ಸಂಸ್ಥೆ ಮುಂದಾಗಿದೆ.
ರಮಣಶ್ರೀ ಸಂಸ್ಥೆ ಈ ಹಿಂದೆ ಇದ್ದ 50 ಸಾವಿರ ಶುಲ್ಕ ಪಡೆಯುತ್ತಿತ್ತು. ಆದರೆ ಈಗ ಆರ್ಕಿಡ್ ತನ್ನ ವ್ಯಾಪ್ತಿಗೆ ಪಡೆದ ಬಳಿಕ 1.20 ಲಕ್ಷಕ್ಕೆ ಶಲ್ಕಕ್ಕೆ ಏರಿಕೆ ಮಾಡಿದೆ. ಈಗ ಸಿಬಿಎಸ್ಇ ಸರ್ಟಿಫಿಕೇಟ್ ಪರೀಕ್ಷೆ ಎಲ್ಲ ರಮಣಶ್ರೀ ಆಡಳಿತ ಮಂಡಳಿಯ ಹೆಸರಲ್ಲಿಯೇ ಕೊಡುತ್ತೇವೆ ಎಂದು ಆರ್ಕಿಡ್ ಸಂಸ್ಥೆ ಹೇಳುತ್ತಿದೆ. ಆರ್ಕಿಡ್ ಈ ಉಸರವಳ್ಳಿ ಆಟಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಮಣಶ್ರೀ ಶಾಲೆಗೆ ನಾವು ಈ ಹಿಂದೆ 50ಸಾವಿರ ಶುಲ್ಕ ಇತ್ತು, ಆರ್ಕಿಡ್ ಬಂದ ಮೇಲೆ 1.20 ಲಕ್ಷಕ್ಕೆ ಶುಲ್ಕ ಪಡೆದಿದೆ. ಆದರೆ ಈಗ ರಮಣಶ್ರೀ ಹೆಸರಲ್ಲಿಯೇ ಸರ್ಟಿಫಿಕೇಟ್ ಪರೀಕ್ಷೆ ಎಲ್ಲ ಅಂತಿದ್ದಾರೆ. ಹೀಗಾಗಿ ಶುಲ್ಕ ವಾಪಸ್ ಕೊಡುವಂತೆ ಒತ್ತಾಯ ಮಾಡುತ್ತಿದ್ದೇವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕಕ್ಲಿ ಮಾಡಿ
Published On - 10:28 am, Mon, 6 February 23