ಕೊರೊನಾ ನಿಯಮ ಉಲ್ಲಂಘಿಸಿದಕ್ಕೆ ನಗರಸಭೆ ಮಾಜಿ ಉಪಾಧ್ಯಕ್ಷರ ಪುತ್ರನನ್ನು ಅರೆಸ್ಟ್ ಮಾಡಿದ ಪೊಲೀಸ್

|

Updated on: Apr 22, 2021 | 7:26 AM

ಕೊರೊನಾವನ್ನು ನಿರ್ಲಕ್ಷಿಸಿ ಫರ್ನಿಚರ್ ಅಂಗಡಿಯಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿದ್ದು ತಿಳಿವಳಿಕೆ ಹೇಳಲು ಬಂದ ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಗದಗ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಬಾಕಳೆ ಪುತ್ರ ವಿನಾಯಕ ಬಾಕಳೆಯನ್ನು ಶಹರ ಸಿಪಿಐ ಪಿ.ವಿ ಸಾಲಿಮಠ ಅವರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಕೊರೊನಾ ನಿಯಮ ಉಲ್ಲಂಘಿಸಿದಕ್ಕೆ ನಗರಸಭೆ ಮಾಜಿ ಉಪಾಧ್ಯಕ್ಷರ ಪುತ್ರನನ್ನು ಅರೆಸ್ಟ್ ಮಾಡಿದ ಪೊಲೀಸ್
ವಿನಾಯಕ ಬಾಕಳೆ
Follow us on

ಗದಗ: ಕೊರೊನಾ 2ನೇ ಅಲೆಗೆ ಇಡೀ ದೇಶ ಬೆಚ್ಚಿ ಬಿದ್ದಿದೆ. ಸೋಂಕಿತರು ನರಳಿ ನರಳಿ ಸಾಯುವಂತ ಪರಿಸ್ಥಿತಿ ಇದೆ. ಇದರ ನಡುವೆ ಜನ ಸರ್ಕಾರ ಹೇರಿರುವ ನಿಯಮಗಳನ್ನು ಪಾಲಿಸುತ್ತಿಲ್ಲ. ಕೊವಿಡ್ ನಿಯಮ ಉಲ್ಲಂಘಿಸಿ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಗದಗ ನಗರಸಭೆ ಮಾಜಿ ಉಪಾಧ್ಯಕ್ಷರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೊನಾವನ್ನು ನಿರ್ಲಕ್ಷಿಸಿ ಫರ್ನಿಚರ್ ಅಂಗಡಿಯಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿದ್ದು ತಿಳಿವಳಿಕೆ ಹೇಳಲು ಬಂದ ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಗದಗ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಬಾಕಳೆ ಪುತ್ರ ವಿನಾಯಕ ಬಾಕಳೆಯನ್ನು ಶಹರ ಸಿಪಿಐ ಪಿ.ವಿ ಸಾಲಿಮಠ ಅವರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಫರ್ನಿಚರ್ ಅಂಗಡಿಯಲ್ಲಿ ಮಾಸ್ಕ್ ಹಾಕದೆ, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಇಡದೇ ನಿರ್ಲಕ್ಷ್ಯವಹಿಸಲಾಗಿತ್ತು. ಕೊರೊನಾ ಹರಡಲು ಪ್ರಚೋದನೆ ನೀಡಿರುವ ಕಾರಣ ಪ್ರಕರಣ ದಾಖಲಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ನಿಯಮ ಉಲ್ಲಂಘಿಸಿದ್ರೆ ಎಂತಾ ಪ್ರಭಾವಿಗಳು ಇದ್ರೂ ಬಿಡಲ್ಲ ಅಂತ ಗದಗ ಪೊಲೀಸರು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘನೆ.. ಬೆಂಗಳೂರಿನ JW ಮ್ಯಾರಿಯೆಟ್ ಸೇರಿ 3 ಹೋಟೆಲ್​ಗಳ ವಿರುದ್ಧ FIR