ಪ್ರೀತಿ ಹೆಸರಲ್ಲಿ ಯುವತಿಯರಿಗೆ ವಂಚಿಸುತ್ತಿದ್ದ ಆರೋಪಿ ಬಂಧನ

ಆರೋಪಿಯಾದ ದಿವಾಕರ್ ಹೊಸದಾಗಿ ಕಾಲೇಜಿಗೆ ಸೇರಿದ ಯುವತಿಯರಿಗೆ ಕೆಎಎಸ್ ಐಎಎಸ್ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವೆ ಎಂದು ಹೇಳಿ ಪರಿಚಯ ಮಾಡಿಕೊಳ್ಳುತ್ತಿದ್ದನಂತೆ. ತನ್ನ ಬಳಿ ಹಣ, ಸಂಪತ್ತು ಇದೆ ಎಂದು ನಂಬಿಸಿ ಗಣ್ಯ ವ್ಯಕ್ತಿಯಂತೆ ವರ್ತಿಸಿ ಹುಡುಗಿಯರ ಗಮನವನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದನಂತೆ.

ಪ್ರೀತಿ ಹೆಸರಲ್ಲಿ ಯುವತಿಯರಿಗೆ ವಂಚಿಸುತ್ತಿದ್ದ ಆರೋಪಿ ಬಂಧನ
ಆರೋಪಿ ಹರೀಶ್
Updated By: ganapathi bhat

Updated on: Apr 04, 2021 | 6:45 PM

ಬೆಂಗಳೂರು: ಬಣ್ಣ ಬಣ್ಣದ ಮಾತುಗಳಿಂದ ಹುಡುಗಿಯರ ಗಮನವನ್ನು ತನ್ನತ್ತ ಸೆಳೆದುಕೊಂಡು ಪ್ರೀತಿ ಹೆಸರಲ್ಲಿ ಅಪ್ರಾಪ್ತೆಯರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ತರೀಕೆರೆ ಮೂಲದ ದಿವಾಕರ್ ಅಲಿಯಾಸ್ ಹರೀಶ್ ಎಂದು ತಿಳಿದುಬಂದಿದೆ.

ಆರೋಪಿಯಾದ ದಿವಾಕರ್ ಹೊಸದಾಗಿ ಕಾಲೇಜಿಗೆ ಸೇರಿದ ಯುವತಿಯರಿಗೆ ಕೆಎಎಸ್ ಐಎಎಸ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವೆ ಎಂದು ಹೇಳಿ ಪರಿಚಯ ಮಾಡಿಕೊಳ್ಳುತ್ತಿದ್ದನಂತೆ. ತನ್ನ ಬಳಿ ಹಣ, ಸಂಪತ್ತು ಇದೆ ಎಂದು ನಂಬಿಸಿ ಗಣ್ಯ ವ್ಯಕ್ತಿಯಂತೆ ವರ್ತಿಸಿ ಹುಡುಗಿಯರ ಗಮನವನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದನಂತೆ. ಬಳಿಕ ಪ್ರೀತಿ ಹೆಸರಲ್ಲಿ ಸುತ್ತಾಡಿ ದೈಹಿಕವಾಗಿ ಬಳಸಿಕೊಳ್ಳುತ್ತಿದ್ದ ಎನ್ನುವ ಆರೋಪ ಕೇಳಿಬಂದಿದ್ದು, ಹಲವರಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಈವರೆಗೂ 8ಕ್ಕೂ ಹೆಚ್ಚು ಯುವತಿಯರಿಗೆ ಆರೋಪಿ ಮಹೇಶ್ ವಂಚಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಬ್ಯಾಡರಹಳ್ಳಿ ಠಾಣೆಗೆ ಕಾಲೇಜು ಯುವತಿ ದೂರು ನೀಡಿದ ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ಪೋಕ್ಸೊ ಪ್ರಕರಣದಡಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

(Police arrested a man accused of cheating girls in Bengaluru)

ಇದನ್ನೂ ಓದಿ

ಮಂಗಳೂರು ಬಾಲಕನ ಕೊಲೆಗೆ ಕಾರಣವಾಯ್ತು ಪಬ್ ಜೀ ಗೇಮ್

80ವರ್ಷ ಹಳೆಯ ಬಂಗಲೆಯನ್ನು ಖರೀದಿಸಿದ ಡಿ-ಮಾರ್ಟ್​ ಸಂಸ್ಥಾಪಕ ರಾಧಾಕೃಷ್ಣನ್​ ದಮಾನಿ; ಇದರ ಬೆಲೆ ಬರೋಬ್ಬರಿ 1001 ಕೋಟಿ ರೂಪಾಯಿ