ಎಂಎ ಪದವೀಧರೆಯ ಕೈಯಲ್ಲಿ ಅರಳಿದ ಚಿತ್ರಕಲೆ; ಮನೆಯ ಗೋಡೆಗಳ ಮೇಲೆಯೆ ನಿರ್ಮಾಣವಾಗಿದೆ ಆರ್ಟ್ ಗ್ಯಾಲರಿ
ಚಿತ್ರಗಳನ್ನ ಬಿಡಿಸುವುದನ್ನ ಸ್ವಂತವಾಗಿ ಕಲಿತ ಅಂಬಿಕಾ ಇದೀಗ ಮನೆಯ ಗೋಡೆಗಳ ಮೇಲೆಲ್ಲ ಕಲಾವಿದನ ರೀತಿಯಲ್ಲಿ ಅತ್ಯಾಕರ್ಷಕ ಚಿತ್ರಗಳನ್ನ ಬಿಡಿಸುವ ಮೂಲಕ ಮನೆಯಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು: ಸಾಮಾನ್ಯವಾಗಿ ಜನರಿಗೆ ಬಿಡುವು ಸಿಕ್ಕರೆ ಮೊಬೈಲ್ ಚಾಟಿಂಗ್ ಅಥವಾ ಕುಕ್ಕಿಂಗ್ನಲ್ಲಿ ಬ್ಯುಸಿಯಾಗುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಮಾತ್ರ ಬಿಡುವಿನ ಸಮಯವನ್ನು ಕಳೆಯಲು ಸಮಯ ಸಾಧನವಾಗಿ ಶುರುಮಾಡಿದ ಕಲೆ ಇದೀಗ ಏರಿಯಾದಲ್ಲೆ ಹೆಚ್ಚು ಪ್ರಸಿದ್ಧಿಗೆ ಕಾರಣವಾಗಿದೆ. ಊರಿನ ಅಂಗಡಿ, ಮನೆಯ ಗೋಡೆ ಸೇರಿದಂತೆ, ಅಂಗಡಿಗಳಲ್ಲೆಲ್ಲ ಈಕೆಯ ಕೈ ಬರಹದ ಚಿತ್ರಗಳು ಕಂಗೊಳಿಸುತ್ತಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಕಛೇರಿ ಪಾಳ್ಯದ ನಿವಾಸಿಯಾದ ಅಂಬಿಕಾ ಈ ಚಿತ್ರಗಳನ್ನು ಬಿಡಿಸಿದ ಕಾಲಾವಿದೆ. ಈ ಯುವತಿ ಎಂಎ ವ್ಯಾಸಾಂಗ ಮಾಡುತ್ತಿದ್ದು, ಕಳೆದ ವರ್ಷ ಕೊರೊನಾದಿಂದ ಕಾಲೇಜಿಗಳು ಕ್ಲೋಸ್ ಆಗಿದ್ದವು. ಹೀಗಾಗಿ ದಿನಪೂರ್ತಿ ಮನೆಯಲ್ಲೆ ಕಾಲ ಕಳೆಯಲು ಆಗದೆ ಚಿತ್ರಗಳನ್ನ ಬಿಡಿಸಲು ಮುಂದಾಗಿದ್ದು, ಮೊದಲಿಗೆ ಮನೆಯ ಗೋಡೆಗಳ ಮೇಲೆ ಕೆಲ ಚಿತ್ರಗಳನ್ನ ಬಿಡಿಸಿದ್ದಾರೆ.
ತುಂಬು ಗರ್ಬಿಣಿಯ ವಿಭಿನ್ನ ಚಿತ್ರ, ಶಾಂತಿಗೆ ಹೆಸರಾದ ಗೌತಮ ಬುದ್ಧನ ತಪಸ್ಸಿನ ಕಲಾಚಿತ್ರವನ್ನು ಅಂಬಿಕಾ ಬಿಡಿಸಿದ್ದಾರೆ. ಮನೆಯ ಗೋಡೆಗಳೆಲ್ಲ ಹಾಳು ಮಾಡುದ್ದೀಯಾ ಎಂದು ತಾಯಿ ಪ್ರಾರಂಭದ ದಿನಗಳಲ್ಲಿ ಬೈದಿದ್ದರು. ಆದರೆ ಬೈದಿದ್ದ ತಾಯಿ ನಂತರ ನನ್ನ ಕೈಚಳಕದಿಂದ ಮೂಡಿಬಂದ ಚಿತ್ರಗಳನ್ನ ನೋಡಿ ಸುಮ್ಮನಾಗಿ ಉತ್ತೇಜನ ನೀಡಿದ್ದಾರೆ ಎಂದು ಚಿತ್ರಗಳನ್ನ ಬಿಡಿಸಿದ ಯುವತಿ ಅಂಬಿಕಾ ತಿಳಿಸಿದ್ದಾರೆ.
ಚಿತ್ರಗಳನ್ನ ಬಿಡಿಸುವುದನ್ನ ಸ್ವಂತವಾಗಿ ಕಲಿತ ಅಂಬಿಕಾ ಇದೀಗ ಮನೆಯ ಗೋಡೆಗಳ ಮೇಲೆಲ್ಲ ಕಲಾವಿದನ ರೀತಿಯಲ್ಲಿ ಅತ್ಯಾಕರ್ಷಕ ಚಿತ್ರಗಳನ್ನ ಬಿಡಿಸುವ ಮೂಲಕ ಮನೆಯಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣ ಮಾಡಿದ್ದಾರೆ. ಮೊದ ಮೊದಲಿಗೆ ಪೆನ್ಸಿಲ್ನಿಂದ ಚಿತ್ರ ಬಿಡಿಸಿದ ನಂತರ ಇದೀಗ ಕಲರ್ ನೊಂದಿಗೆ ಬ್ರೇಶ್ ನಲ್ಲಿ ವಿವಿಧ ಚಿತ್ರಗಳನ್ನ ಮನೆಯ ಗೋಡೆಗಳು ಸೇರಿದಂತೆ ಹೊರಭಾಗದ ಗೋಡೆಗಳ ಮೇಲು ಬಿಡಿಸಿದ್ದಾರೆ.
ಅಲ್ಲದೆ ಯುವತಿಯ ಕಲೆಯನ್ನ ಕಂಡು ಸಾಕಷ್ಟು ಜನ ಸಂಬಂಧೀಕರು ನೆರೆ ಮನೆಯವರು ಸೇರಿದಂತೆ ಸ್ನೇಹಿತರು ಈಕೆಯನ್ನ ತಮ್ಮ ಮನೆ ಮತ್ತು ಅಂಗಡಿಗಳಿಗೂ ಕರೆದು ಚಿತ್ರಗಳನ್ನ ಬಿಡಿಸಿಕೊಂಡಿದ್ದು, ನಗರದ ಸಾಕಷ್ಟು ಕಡೆ ಈಕೆಯ ಚಿತ್ರಕಲೆಗಳು ನೊಡುಗರನ್ನ ಆಕರ್ಷಿಸುತ್ತಿವೆ.
ಒಟ್ಟಾರೆಯಾಗಿ ಸುಮ್ಮನೆ ಮನೆಯಲ್ಲಿ ಸಮಯ ಕಳೆಯುವ ಬದಲು ಇಂತಹ ಕಲೆಯನ್ನ ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಯುವತಿ ಇತರರಿಗೆ ಮಾದರಿಯಾಗಿದ್ದಾರೆ. ಇನ್ನು ಸರ್ಕಾರಿ ಶಾಲೆ ಮತ್ತು ಇನ್ನಿತರ ಸ್ಪರ್ಧೆಯಲ್ಲಿ ಈ ಯುವತಿ ತನ್ನ ಕಲೆಯನ್ನ ತೋರಿಸಲು ತಯಾರಿ ನಡೆಸುತ್ತಿದ್ದಾರೆ ಎನ್ನುವುದು ವಿಶೇಷ.
(ವರದಿ: ನವೀನ್)
ಇದನ್ನೂ ಓದಿ:
ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಕೈಬೀಸಿ ಕರೆಯುತ್ತಿದೆ ಶಿಕ್ಷಕರ ಕುಂಚದಲ್ಲಿ ಅರಳಿರುವ ಚಿತ್ರ-ಚಿತ್ತಾರ
ಶಿವಮೊಗ್ಗ ನಗರದಲ್ಲಿ ಚಿತ್ರಕಲೆ ರಂಗು; ಜನರ ಗಮನ ಸೆಳೆಯುತ್ತಿದೆ ಸರ್ಕಾರಿ ಗೋಡೆ ಮೇಲಿನ ಚಿತ್ತಾರ
(Artworks by young women on walls are getting villagers attraction in Bangalore)