Chit Fund | ಚೀಟಿ ಹೆಸರಿನಲ್ಲಿ 30 ಜನರಿಗೆ ವಂಚಿಸಿದ್ದ ನೆಲಮಂಗಲ ದಂಪತಿ ಅರೆಸ್ಟ್

Chit Fund | ಗೊರಗುಂಟೆಪಾಳ್ಯ ಬಳಿ ಇರುವ ಖಾಸಗಿ ಗಾರ್ಮೆಂಟ್​ನಲ್ಲಿ ಕೆಲಸ ಮಾಡಿತ್ತಿದ್ದ ದಂಪತಿ ಅದೇ ಗಾರ್ಮೆಂಟ್​ನ ಸುಮಾರು 30 ಜನ ಅಮಾಯಕರಿಗೆ ಮೋಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೋಸ ಹೋದ ಜನರಿಂದ ಹಗಲು, ರಾತ್ರಿ ದಂಪತಿಗಳ ಮನೆ ಬಳಿ ಧರಣಿ ನಡೆಸಿದ್ದಾರೆ.

Chit Fund | ಚೀಟಿ ಹೆಸರಿನಲ್ಲಿ 30 ಜನರಿಗೆ ವಂಚಿಸಿದ್ದ ನೆಲಮಂಗಲ ದಂಪತಿ ಅರೆಸ್ಟ್
ಮಮತಾ ಮತ್ತು ಮೋಹನ್ ಕುಮಾರ್

Updated on: Mar 06, 2021 | 1:55 PM

ನೆಲಮಂಗಲ: ಚೀಟಿ ಹಣ ನೀಡದೆ ಅಮಾಯಕ ಜನರಿಗೆ ವಂಚನೆ ಮಾಡಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಟ್ ಫಂಡ್ ಕಾಯ್ದೆ ಅಡಿ ಪರವಾನಗಿ ಪಡೆಯದೇ ಸುಮಾರು 30 ಜನರಿಗೆ ವಂಚಿಸಿದ್ದ ಮಮತಾ ಮತ್ತು ಮೋಹನ್ ಕುಮಾರ್ ದಂಪತಿಯನ್ನು ಆರ್​ಎಂಸಿ ಯಾರ್ಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಸಾಯಿ ಲೇಔಟ್​ನಲ್ಲಿ ವಾಸವಾಗಿದ್ದ ಮಮತಾ ಮತ್ತು ಮೋಹನ್ ಕುಮಾರ್ ದಂಪತಿ ಚೀಟಿ ಹಣ ರೂಪದಲ್ಲಿ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಗೊರಗುಂಟೆಪಾಳ್ಯ ಬಳಿ ಇರುವ ಖಾಸಗಿ ಗಾರ್ಮೆಂಟ್​ನಲ್ಲಿ ಕೆಲಸ ಮಾಡಿತ್ತಿದ್ದ ದಂಪತಿ ಅದೇ ಗಾರ್ಮೆಂಟ್​ನ ಸುಮಾರು 30 ಜನ ಅಮಾಯಕರಿಗೆ ಮೋಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೋಸ ಹೋದ ಜನರಿಂದ ಹಗಲು, ರಾತ್ರಿ ದಂಪತಿಗಳ ಮನೆ ಬಳಿ ಧರಣಿ ನಡೆಸಿದ್ದಾರೆ. ಒಂದೂವರೆ ಕೋಟಿ ರೂಪಾಯಿಯಷ್ಟು ಚೀಟಿ ಹಣ ದುರ್ಬಳಕೆ ಮಾಡಿದ ದಂಪತಿಯ ಬಳಿ ಹಣ ಕೇಳಿದರೆ.. ಏನ್ ಬೇಕಾದರೂ ಮಾಡಿಕೊಳ್ಳಿ, ಸದ್ಯ ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸಮಯಾವಕಾಶದ ನಡುವೆಯೂ ಹಣ ಕೊಡದಿದ್ದಕ್ಕೆ ದಂಪತಿಯನ್ನು ಗೊರಗುಂಟೆಪಾಳ್ಯ ಇನ್ಸ್‌ಪೆಕ್ಟರ್ ಪಾರ್ವತಿ ಬಂಧಿಸಿದ್ದಾರೆ.

ಆರೋಪಿ ಮಮತಾ ಕಳೆದ 20 ವರ್ಷದಿಂದ ಗೊರಗುಂಟೆಪಾಳ್ಯದ ಖಾಸಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಾ ಇದ್ದರು. ಕೆಲಸದೊಟ್ಟಿಗೆ ಅಲ್ಲೆ ಚೀಟಿ ವ್ಯವಹಾರ ಪ್ರಾರಂಭ ಮಾಡಿದ್ದರು. 18 ವರ್ಷದಿಂದ ಚೀಟಿ ಚೆನ್ನಾಗಿಯೇ ನಡೆಯುತ್ತಿತ್ತು, ಟೈಲರ್ಸ್ ಹೆಲ್ಪರ್ಸ್ ಕಸ ಗುಡಿಸುವವರು, ಬಾತ್ ರೂಂ ಕ್ಲೀನ್ ಮಾಡುವವರು ಸೇರಿದಂತೆ ಎಲ್ಲರೂ ಏನೋ ಜೀವನಕ್ಕೆ ನಾಲ್ಕು ಕಾಸು ಜೊತೆಯಾಗಿ ಮನೆ ಮಠ ಕಟ್ಟಿಕೊಂಡು ಬೆಂಗಳೂರಿಗೆ ಬಂದು ಬದುಕು ಹಸನ ಮಾಡಿಕೊಲ್ಳುವ ಕನಸು ಕಟ್ಟಿಕೊಳ್ಳುತ್ತಿದ್ದವರು ಚೀಟ ಹಣ ಕಟ್ಟುತ್ತಿದ್ದರು. ಇಷ್ಟು ವರ್ಷ ಚೆನ್ನಾಗಿಯೇ ನಡೆಯುತ್ತಿದ್ದ ಚೀಟಿ ವ್ಯವಹಾರ ಕಳೆದ ಒಂದು ವರ್ಷದಿಂದು ಕೈ ಕೊಟ್ಟಿತ್ತು. ಹತ್ತಾರು ಚೀಟಿ ನಡೆಸುತ್ತಿದ್ದ ದಂಪತಿ ಇದ್ದಕ್ಕಿದ್ದ ಹಾಗೆ ಯಾರಿಗೂ ಚೀಟಿ ಹಣ ಕಟ್ಟೋದು ನಿಲ್ಲಿಸಿದ್ದರು.

ಯಾರಾದರೂ ಹಣ ಕೇಳೋಕೆ‌ ಅಂತ ಅವರ ಮನೆ ಹತ್ತಿರ ಹೋದರೆ ಮನೆ ಮಾರಾಟ ಮಾಡಿ ಕೊಡುತ್ತೀನಿ ಅಂತ ಸಬೂಬು ಹೇಳುತ್ತಿದ್ದರಂತೆ. ಇನ್ನೂ ಕೆಲವರು ಹಣಕ್ಕಾಗಿ ಇವರ ಮನೆಯಲ್ಲಿಯೇ ಕೆಲ ದಿನ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ತುಂಬಾ ಸಮಯಾವಕಾಶ ಕೊಟ್ಟು ನೋಡಿದರು ಪ್ರಯೋಜನವಾಗದ ಹಿನ್ನೆಲೆ ಆರ್‌ಎಂ‌ಸಿ ಯಾರ್ಡ್‌ ಪೊಲೀಸರಿಗೆ ದೂರು ಕೊಟ್ಟರು.

ಇದನ್ನೂ ಓದಿ

ತುಮಕೂರಲ್ಲಿ ಚೀಟಿ ಹೆಸರಲ್ಲಿ ಮಹಾಮೋಸ.. ಲಕ್ಷಾಂತರ ರೂಪಾಯಿ ದೋಖಾ, ಬೀದಿಗೆ ಬಿದ್ದಿವೆ ಹತ್ತಾರು ಕುಟುಂಬಗಳು

Debit Credit Card: ಆನ್​ಲೈನ್ ಶಾಪಿಂಗ್​ಗೆ ನೀವು ಕಾರ್ಡ್ ಬಳಸ್ತೀರಾ? ಮೋಸ ಆಗದಿರಲು ಹೀಗೆ ಮಾಡಿ