ಅಕ್ರಮವಾಗಿ ನಾಡಬಂದೂಕು ತಯಾರಿ: 3 ಆರೋಪಿಗಳನ್ನು ಬಂಧಿಸಿದ ನಂದಿ ಗಿರಿಧಾಮ ಠಾಣೆ ಪೊಲೀಸರು

| Updated By: ಸಾಧು ಶ್ರೀನಾಥ್​

Updated on: Mar 02, 2021 | 11:57 AM

ಗಂಗಾಧರ್, ಅನಿಲ್ ಮತ್ತು ರಾಜು ಎಂಬ ಮೂವರು ಆರೋಪಿಗಳು ಅಕ್ರಮವಾಗಿ ಗನ್ ತಯಾರಿ ಅಷ್ಟೇ ಅಲ್ಲ ರಿಪೇರಿ ಕೂಡ ಮಾಡಿಕೊಡುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದ್ದು, ಸದ್ಯ ನಂದಿಗಿರಿಧಾಮ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ನಾಡಬಂದೂಕು ತಯಾರಿ: 3 ಆರೋಪಿಗಳನ್ನು ಬಂಧಿಸಿದ ನಂದಿ ಗಿರಿಧಾಮ ಠಾಣೆ ಪೊಲೀಸರು
ಅಕ್ರಮವಾಗಿ ಗನ್ ತಯಾರಿ ಮಾಡಿದ ಮೂವರು ಆರೋಪಿಗಳ ಬಂಧನ
Follow us on

ಚಿಕ್ಕಬಳ್ಳಾಪುರ: ಅಕ್ರಮವಾಗಿ ನಾಡಬಂದೂಕು ತಯಾರಿ ಮಾಡಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಗುಂಗಿರ್ಲಹಳ್ಳಿಯಲ್ಲಿ ನಡೆದಿದೆ. ಗಂಗಾಧರ್, ಅನಿಲ್ ಮತ್ತು ರಾಜು ಎಂಬ ಮೂವರು ಆರೋಪಿಗಳು ಅಕ್ರಮವಾಗಿ ಗನ್ ತಯಾರಿ ಅಷ್ಟೇ ಅಲ್ಲ ರಿಪೇರಿ ಕೂಡ ಮಾಡಿಕೊಡುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದ್ದು, ಸದ್ಯ ನಂದಿ ಗಿರಿಧಾಮ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲೂ ಅಕ್ರಮ ಬಂದೂಕು ಮಾಫಿಯಾ:
ಸಿಟಿ ಮಾರ್ಕೆಟ್ ಪೊಲೀಸರಿಂದ ರಹಸ್ಯ ಕಾರ್ಯಾಚರಣೆ ನಡೆದಿದ್ದು, ಗನ್ ಮಾಫಿಯಾದ ಸ್ಪೋಟಕ ಮಾಹಿತಿ ಹೊರಬಂದಿದೆ. ಬೆಂಗಳೂರು ನಗರದ ಕಾಳಸಂತೆಯಲ್ಲಿ ಪಿಸ್ತೂಲ್‌ಗಳ ಮಾರಾಟದ ಬಗ್ಗೆ ಸಿಕ್ಕಿಬಿದ್ದ ಡೀಲರ್ ಕದೀರ್‌ನಿಂದ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಕದೀರ್ ನೀಡಿದ ಮಾಹಿತಿ ಆಧರಿಸಿ ರಹಸ್ಯ ಕಾರ್ಯಾಚರಣೆ ನಡೆಸಲಾಗಿದೆ.

ಅಕ್ರಮವಾಗಿ ತಯಾರಾಗುತ್ತಿದ್ದ ಗನ್​ಗಳು ಉತ್ತರ ಭಾರತದಿಂದ ಬೆಂಗಳೂರಿಗೆ ಬರುತ್ತಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದಲೇ ಪಿಸ್ತೂಲ್‌ಗಳ ಡೀಲಿಂಗ್ ನಡೆಯುತ್ತಿತ್ತು.ಇನ್ನು ಜೈಲಿನಿಂದಲೇ ದಂಧೆ ನಡೆಸುತ್ತಿದ್ದ 2017ರ ಸಂಪಿಗೆಹಳ್ಳಿ ಸುಪಾರಿ ಕೊಲೆ ಕೇಸ್​ನ ಆರೋಪಿ ಫಯಾಜ್ ಉಲ್ಲಾಖಾನ್, ಫೋನ್‌ನಲ್ಲಿಯೇ ಪಿಸ್ತೂಲ್ ಡೀಲಿಂಗ್ ಮಾಡುತ್ತಿದ್ದ.

ಜೈಲಿನೊಳಗಿನವರಿಗೆ ಪೇಮೆಂಟ್ ಆದ ಒಂದೇ ಗಂಟೆಯಲ್ಲಿ ಗನ್ ಕೈಗೆ ಸಿಗುತ್ತಿತ್ತು ಎನ್ನುವ ಮಾಹಿತಿಯ ಆಧಾರದ ಮೇಲೆ ಕದೀರ್ ಮೂಲಕ ಗನ್ ಖರೀದಿ ಮಾಡುವುದಾಗಿ ಪೊಲೀಸರು ಕರೆ ಮಾಡಿದ್ದು, ಫೋನ್ ಮುಖಾಂತರ ಸಂಭಾಷಣೆ ನಡೆಸಿದ ಸಿಟಿ ಮಾರ್ಕೆಟ್ ಪೊಲೀಸರು, ನಂತರ ವ್ಯವಹಾರ ಕುದುರಿಸಿ ಫೋನ್ ಪೇ ಮುಖಾಂತರ ಹಣ ಸಂದಾಯ ಮಾಡಿದ್ದಾರೆ.

ಒಂದು ಲಕ್ಷದಿಂದ 1,25,000 ರೂಪಾಯಿ ಮೊತ್ತದ ವರೆಗೂ ಗನ್ ಮಾರಾಟ ಮಾಡಲಾಗುತ್ತಿತ್ತು. ಇನ್ನು ಈ ಎಲ್ಲಾ ವ್ಯವಹಾರವನ್ನು ಫಯಾಜ್​ ಉಲ್ಲಾಖಾನ್ ಜೈಲಿನಿಂದಲೇ ನಡೆಸುತ್ತಿದ್ದು, ಕಳೆದ 17 ವರ್ಷಗಳಿಂದ ಅಕ್ರಮವಾಗಿ ಗನ್ ಮಾರಾಟ ದಂಧೆ ಮಾಡುತ್ತಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ:ಗನ್ ಮಾಫಿಯಾದಲ್ಲಿ ಸದ್ದು ಮಾಡುತ್ತಿದೆ ಬೆಂಗಳೂರು: ಸಿಟಿ ಪೊಲೀಸರ ರಹಸ್ಯ ಕಾರ್ಯಾಚರಣೆ ವೇಳೆ ಹೊರಬಂತು ಸ್ಪೋಟಕ ಮಾಹಿತಿ