ಗನ್ ಮಾಫಿಯಾದಲ್ಲಿ ಸದ್ದು ಮಾಡುತ್ತಿದೆ ಬೆಂಗಳೂರು: ಸಿಟಿ ಪೊಲೀಸರ ರಹಸ್ಯ ಕಾರ್ಯಾಚರಣೆ ವೇಳೆ ಹೊರಬಂತು ಸ್ಪೋಟಕ ಮಾಹಿತಿ
ಒಂದು ಲಕ್ಷದಿಂದ 125000 ರೂಪಾಯಿ ಮೊತ್ತದ ವರೆಗೂ ಗನ್ ಮಾರಾಟ ಮಾಡಲಾಗುತ್ತಿತ್ತು. ಇನ್ನು ಈ ಎಲ್ಲಾ ವ್ಯವಹಾರವನ್ನು ಫೈಯಾಜ್ ಉಲ್ಲಾಖಾನ್ ಜೈಲಿನಿಂದಲೇ ನಡೆಸುತ್ತಿದ್ದು, ಕಳೆದ 17 ವರ್ಷಗಳಿಂದ ಅಕ್ರಮವಾಗಿ ಗನ್ ಮಾರಾಟ ದಂಧೆ ಮಾಡುತ್ತಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.
ಬೆಂಗಳೂರಿ: ಸಿಟಿ ಮಾರ್ಕೆಟ್ ಪೊಲೀಸರಿಂದ ರಹಸ್ಯ ಕಾರ್ಯಾಚರಣೆ ನಡೆದಿದ್ದು, ಗನ್ ಮಾಫಿಯಾದ ಸ್ಪೋಟಕ ಮಾಹಿತಿ ಹೊರಬಂದಿದೆ. ಬೆಂಗಳೂರು ನಗರದ ಕಾಳಸಂತೆಯಲ್ಲಿ ಪಿಸ್ತೂಲ್‌ಗಳ ಮಾರಾಟದ ಬಗ್ಗೆ ಸಿಕ್ಕಿಬಿದ್ದ ಡೀಲರ್ ಕದೀರ್‌ನಿಂದ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಕದೀರ್ ನೀಡಿದ ಮಾಹಿತಿ ಆಧರಿಸಿ ರಹಸ್ಯ ಕಾರ್ಯಾಚರಣೆ ನಡೆಸಲಾಗಿದೆ. ಅಕ್ರಮವಾಗಿ ತಯಾರಾಗುತ್ತಿದ್ದ ಗನ್ಗಳು ಉತ್ತರ ಭಾರತದಿಂದ ಬೆಂಗಳೂರಿಗೆ ಬರುತ್ತಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದಲೇ ಪಿಸ್ತೂಲ್‌ಗಳ ಡೀಲಿಂಗ್ ನಡೆಯುತ್ತಿತ್ತು.ಇನ್ನು ಜೈಲಿನಿಂದಲೇ ದಂಧೆ ನಡೆಸುತ್ತಿದ್ದ 2017ರ ಸಂಪಿಗೆ ಹಳ್ಳಿ ಸುಪಾರಿ ಕೊಲೆ ಕೇಸ್ನ ಆರೋಪಿ ಫಯಾಜ್ ಉಲ್ಲಾಖಾನ್, ಫೋನ್‌ನಲ್ಲಿಯೇ ಪಿಸ್ತೂಲ್ ಡೀಲಿಂಗ್ ಮಾಡುತ್ತಿದ್ದ.
ಜೈಲಿನೊಳಗಿನವರಿಗೆ ಪೇಮೆಂಟ್ ಆದ ಒಂದೇ ಗಂಟೆಯಲ್ಲಿ ಗನ್ ಕೈಗೆ ಸಿಗುತ್ತಿತ್ತು ಎನ್ನುವ ಮಾಹಿತಿಯ ಆಧಾರದ ಮೇಲೆ ಕದೀರ್ ಮೂಲಕ ಗನ್ ಖರೀದಿ ಮಾಡುವುದಾಗಿ ಪೊಲೀಸರು ಕರೆ ಮಾಡಿದ್ದು, ಫೋನ್ ಮುಖಾಂತರ ಸಂಭಾಷಣೆ ನಡೆಸಿದ ಸಿಟಿ ಮಾರ್ಕೆಟ್ ಪೊಲೀಸರು, ನಂತರ ವ್ಯವಹಾರ ಕುದುರಿಸಿ ಫೋನ್ ಪೇ ಮುಖಾಂತರ ಹಣ ಸಂದಾಯ ಮಾಡಿದ್ದಾರೆ.
ಫೈಯಾಜ್ ಉಲ್ಲಾಖಾನ್ ನೀಡಿದ ಮಾಹಿತಿ ಆಧರಿಸಿ ಗನ್ ಜಾಲ ಬೆನ್ನತ್ತಿದ ಪೊಲೀಸರಿಗೆ, ಉತ್ತರ ಭಾರತದ ಯೂಪಿ ಹಾಗೂ ಮಧ್ಯಪ್ರದೇಶದ ಲಿಂಕ್ ಬೆಳಕಿಗೆ ಬಂದಿದೆ. ಮುಝಾಫರ್ ನಗರ ಹಾಗೂ ಗಾಜಿಯಾಬಾದ್ನಿಂದ ಬರುತ್ತಿದ್ದ ಗನ್ಗಳ ಚಿತ್ರಣವನ್ನು ನೀಡಿದಷ್ಟೇ ಅಲ್ಲದೇ ಅದರ ಕಾರ್ಯಾವೈಖರಿಯನ್ನು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದು, ಗ್ರೇಡ್ನ ಮೇಲೆ ವಿವಿಧ ಗನ್ಗಳ ಮಾರಾಟ ಮಾಡುತ್ತಿದ್ದರು ಎನ್ನುವ ವಿಚಾರ ತಿಳಿದುಬಂದಿದೆ.
ಒಂದು ಲಕ್ಷದಿಂದ 1,25,000 ರೂಪಾಯಿ ಮೊತ್ತದ ವರೆಗೂ ಗನ್ ಮಾರಾಟ ಮಾಡಲಾಗುತ್ತಿತ್ತು. ಇನ್ನು ಈ ಎಲ್ಲಾ ವ್ಯವಹಾರವನ್ನು ಫಯಾಜ್ ಉಲ್ಲಾಖಾನ್ ಜೈಲಿನಿಂದಲೇ ನಡೆಸುತ್ತಿದ್ದು, ಕಳೆದ 17 ವರ್ಷಗಳಿಂದ ಅಕ್ರಮವಾಗಿ ಗನ್ ಮಾರಾಟ ದಂಧೆ ಮಾಡುತ್ತಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.
ಹಲವು ವರ್ಷಗಳಿಂದ ಗನ್ ಡೀಲ್ನಲ್ಲಿ ತೊಡಗಿದ್ದ ಮೈಸೂರು ಮೂಲದ ಅಜರ್ ಎಂಬಾತನ ಪಟ್ಟ ಶಿಷ್ಯ ಈ ಫಯಾಜ್. ಅಜರ್ ಬಳಿ ಗನ್ ಸರ್ವಿಸ್ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಫಯಾಜ್. ಕಳೆದ ಮೂರು ವರ್ಷಗಳ ಹಿಂದೆ ಅಜರ್ ಮೃತಪಟ್ಟಿದ್ದು, ಆತನ ಸಾವಿನ ಬಳಿಕ ಫಯಾಜ್ ಗನ್ ದಂಧೆ ನಡೆಸಲು ಶುರುಮಾಡಿದ್ದಾನೆ.
ಒಂದು ಗನ್ಗೆ ನಾಲ್ಕು ಜೀವಂತ ಬುಲೆಟ್ ಉಚಿತ! 35,000 ರೂಪಾಯಿಗೆ ಗನ್ ಪಡೆದು ಲಕ್ಷಕ್ಕೆ ಮಾರಾಟ ಮಾಡುವ ತಂಡ ಇದಾಗಿದ್ದು, ಒಂದು ಗನ್ಗೆ ನಾಲ್ಕು ಜೀವಂತ ಬುಲೆಟ್ಗಳನ್ನು ಉಚಿತವಾಗಿ ನೀಡುತ್ತಿತ್ತು.ಈವರೆಗೂ 120 ಗನ್ಗಳನ್ನು ಮಾರಾಟ ಮಾಡಿರುವ ಫಯಾಜ್ ಉಲ್ಲಾಖಾನ್ ಮತ್ತು ಆತನ ತಂಡವನ್ನು ಸದ್ಯ ಪೊಲೀಸರು ಬಂದಿಸಿದ್ದು, ಇದೀಗ 2ನೇ ಹಂತದ ಕಾರ್ಯಾಚರಣೆಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಫಯಾಜ್ನಿಂದ ಗನ್ ಪಡೆದವರಿಗೆ ಬಲೆ ಬೀಸಿರುವ ಪೊಲೀಸರು ಹೊಸ ಪಟ್ಟಿ ತಯಾರಿಸಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Andhra Politics: ಆಂಧ್ರ ಪ್ರದೇಶ ರಾಜಕಾರಣ: ಜಗನ್ ಮತ್ತು ಚುನಾವಣಾ ಆಯೋಗದ ಜಟಾಪಟಿ ನಡುವೆಯೇ ಮುಗಿಯಿತು ಪಂಚಾಯತ್ ಚುನಾವಣೆ