ರಾತ್ರಿ 11ರ ನಂತರ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ -ಪೊಲೀಸ್ ಆಯುಕ್ತ ಕಮಲ್ ಪಂತ್ ವಾರ್ನಿಂಗ್
ರಾತ್ರಿ 11ರ ನಂತರ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಬೆಂಗಳೂರು: ರಾತ್ರಿ 11ರ ನಂತರ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಆಯುಕ್ತರು ನೀಡಿದ ವಿವಿರಗಳು ಹೀಗಿದೆ.
1. ನೈಟ್ ಕರ್ಫ್ಯೂ ಅವಧಿಯಲ್ಲಿ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ 2. ಗೂಡ್ಸ್ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ 3. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ವಿನಾಯಿತಿ ಇದೆ. ಆದರೆ ಕೊವಿಡ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು 4. ರೈಲು, ಏರ್‌ಪೋರ್ಟ್‌ಗಳಲ್ಲಿ ನಿಬಂಧನೆಗಳು ಇರುವುದಿಲ್ಲ. ಜೊತೆಗೆ, ಏರ್‌ಪೋರ್ಟ್ ಟ್ಯಾಕ್ಸಿಗಳಿಗೆ ವಿನಾಯಿತಿ ನೀಡಲಾಗಿದೆ. 5. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ವಿನಾಯಿತಿ ನೀಡಲಾಗಿದೆ. ಉಳಿದಂತೆ ಬೇರೆ ಯಾರೇ ಹೊರಬಂದರೂ ಕಾನೂನು ಕ್ರಮ ಜರುಗಿಸಲಾಗುವುದು. NDMA ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು 6. ಫ್ಲೈಓವರ್‌ಗಳು ಸಂಪೂರ್ಣ ಬಂದ್ ಆಗಲಿದೆ. ಜೊತೆಗೆ, ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಇರಲಿದೆ. ನಗರದಾದ್ಯಂತ ಸಂಪೂರ್ಣ ಬಂದೋಬಸ್ತ್ ಜಾರಿಯಾಗಲಿದೆ. ಯಾರೂ ಅನಗತ್ಯವಾಗಿ ಓಡಾಡುವಂತಿಲ್ಲ 7. ಸಾರ್ವಜನಿಕವಾಗಿ ಎಲ್ಲೂ ಹೊಸ ವರ್ಷ ಆಚರಿಸುವಂತಿಲ್ಲ. ತಾವಿರುವ ಸ್ಥಳದಲ್ಲೇ ನಿಯಮ ಪಾಲಿಸಿ ಹೊಸ ವರ್ಷಾಚರಣೆ ಮಾಡಬಹುದು 8. ರಾತ್ರಿ 11 ಗಂಟೆಗೂ ಮುಂಚಿತವಾಗಿ ಎಲ್ಲಾ ಬಂದ್ ಆಗಬೇಕು. ಹೋಟೆಲ್‌ಗಳು, ಪಬ್‌ಗಳು ಎಲ್ಲವೂ ಬಂದ್ ಆಗಬೇಕು 9. ಪ್ರತಿ ವರ್ಷದಂತೆ ಹೊಸ ವರ್ಷ ಆಚರಣೆಗೆ ಅವಕಾಶವಿಲ್ಲ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಆಚರಣೆಗೆ ಅವಕಾಶವಿಲ್ಲ 10. ನಿಯಮ ಉಲ್ಲಂಘಿಸಿ ಆಚರಣೆ ಮಾಡಿದರೆ ಕೇಸ್ ಹಾಕ್ತೇವೆ. ನೈಟ್ ಕರ್ಫ್ಯೂ ವೇಳೆ ವಿನಾಯಿತಿ ಇರುವ ವಾಹನಗಳು ಓಡಾಟ ನಡೆಸಬಹುದು. ಅನಗತ್ಯವಾಗಿ ಹೊರಗೆ ಬಂದರೆ ವಾಹನ ಸೀಜ್ ಮಾಡಲಾಗುವುದು.
ನಮ್ಮದೇನೂ ವೈಯಕ್ತಿಕ ಪ್ರತಿಷ್ಠೆ ಅಲ್ಲ.. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭ ಮಾಡ್ತಿದ್ದೇವೆ -ಸುರೇಶ್ ಕುಮಾರ್
Published On - 1:00 pm, Thu, 24 December 20