AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

FIR ದಾಖಲಿಸಲಿಲ್ಲಾ ಅಂತಾ.. ಸ್ಟೇಷನ್ ಮುಂದೆ ಕಸ ಗುಡಿಸುವಂತೆ ಪೊಲೀಸ್‌ ಸಿಬ್ಬಂದಿಗೆ ಹೈಕೋರ್ಟ್ ಶಿಕ್ಷೆ..

ಯಾರಾದ್ರೂ ತಪ್ಪು ಮಾಡಿದ್ರೆ ಅವರಿಗೆ ಪೊಲೀಸರು ಶಿಕ್ಷೆ ಕೊಡಿಸ್ತಾರೆ. ಜನ ಕೂಡ ಪೊಲೀಸರ ಟ್ರೀಟ್​ಮೆಂಟ್ ಬಗ್ಗೆ ಕೇಳಿರ್ತಾರೆ, ನೋಡಿರ್ತಾರೆ. ಆದ್ರೆ ಇಂತಾ ಪೊಲೀಸ್ ಅಧಿಕಾರಿಗೆ ಈಗ ಕೋರ್ಟ್ ಶಿಕ್ಷೆ ನೀಡಿದೆ. ಆ ಶಿಕ್ಷೆ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಪೊಲೀಸ್ ಅಧಿಕಾರಿಗೆ ಶಿಕ್ಷೆ ನೀಡಿದ್ಯಾಕೆ ಅಂತಾ ಇಲ್ಲಿ ಓದಿ.

FIR ದಾಖಲಿಸಲಿಲ್ಲಾ ಅಂತಾ.. ಸ್ಟೇಷನ್ ಮುಂದೆ ಕಸ ಗುಡಿಸುವಂತೆ ಪೊಲೀಸ್‌ ಸಿಬ್ಬಂದಿಗೆ ಹೈಕೋರ್ಟ್ ಶಿಕ್ಷೆ..
ಕರ್ನಾಟಕ ಹೈಕೋರ್ಟ್​
ಆಯೇಷಾ ಬಾನು
ಆಯೇಷಾ ಬಾನು|

Updated on:Dec 24, 2020 | 12:49 PM

Share

ಕಲಬುರಗಿ: ತಪ್ಪು ಮಾಡಿದವರಿಗೆ ಪೊಲೀಸರು ಶಿಕ್ಷೆ ಕೊಡಿಸೋದು ಸಾಮಾನ್ಯ. ಆದ್ರೆ ಪೊಲೀಸರಿಗೆ ಶಿಕ್ಷೆ ಆಗುವುದನ್ನ ಎಲ್ಲಾದ್ರೂ ನೋಡಿದ್ದೀರಾ. ಆದ್ರೆ ಕಲಬುರಗಿ ಹೈಕೋರ್ಟ್ ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ನೀಡಿ ಖಡಕ್ ಆದೇಶ ನೀಡಿದೆ. ಈ ಆದೇಶ ನೋಡಿ ಇಡೀ ಪೊಲೀಸ್ ಇಲಾಖೆ ಬೆಚ್ಚಿಬಿದ್ದಿದೆ.

ಎಫ್ಐಆರ್ ದಾಖಲಿಸದ ಪೊಲೀಸ್‌ ಸಿಬ್ಬಂದಿಗೆ ವಿಭಿನ್ನ ಶಿಕ್ಷೆ ಹೌದು ಯಾರಾದ್ರೂ ಠಾಣೆಗೆ ದೂರು ತಗೆದುಕೊಂಡು ಹೋದ್ರೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಹಿಂದೇಟು ಹಾಕೋದು, ದೂರು ಕೊಡಲು ಬಂದವರಿಗೆ ಬೆದರಿಸಿ ಕಳುಹಿಸುವ ಅನೇಕ ಘಟನೆಗಳು ನಡೆದಿವೆ. ಇಂತಹ ಪೊಲೀಸ್ ಸಿಬ್ಬಂದಿಗೆ ಬಿಸಿ ಮುಟ್ಟಿಸುವ ಕೆಲಸವನ್ನ ಕಲಬುರಗಿ ಹೈಕೋರ್ಟ್ ಮಾಡಿದೆ. ಪ್ರಕರಣವನ್ನು ದಾಖಲಿಸಿಕೊಳ್ಳದ ಕಲಬುರಗಿ ಸ್ಟೇಷನ್ ಬಜಾರ್ ಠಾಣಾಧಿಕಾರಿಗೆ ಒಂದು ವಾರ ಠಾಣೆಯ ಮುಂದಿನ ರಸ್ತೆಯಲ್ಲಿ ಕಸ ಗೂಡಿಸುವ ಶಿಕ್ಷೆಯನ್ನ ನೀಡಿದೆ.

ಕಲಬುರಗಿ ತಾಲೂಕಿನ ಮಿಣಜಗಿ ತಾಂಡಾದ ತಾರಾಬಾಯಿ ಅನ್ನೋ ಮಹಿಳೆ ತನ್ನ ಮಗ ಸುರೇಶ್‌ ಕಾಣೆಯಾದ ಬಗ್ಗೆ ಕಲಬುರಗಿ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ನೀಡಲು ಅಕ್ಟೋಬರ್ 20 ರಂದು ಹೋಗಿದ್ದಳು. ದಯವಿಟ್ಟು ನನ್ನ ಮಗನನ್ನ ಹುಡುಕಿಕೊಡಿ ಅಂತ ದೂರು ನೀಡಲು ಮುಂದಾಗಿದ್ಲು. ಆದ್ರೆ ದೂರು ದಾಖಲಿಸಿಕೊಳ್ಳದ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಆಕೆಯನ್ನ ವಾಪಸ್ ಕಳುಹಿಸಿದ್ರು. ಹೀಗಾಗಿ ತಾರಾಬಾಯಿ ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ತನ್ನ ಮಗನನ್ನು ಹುಡುಕಿ ಕೊಡಬೇಕು ಅಂತ ಹೈಕೋರ್ಟ್​ಗೆ ಹೇಬಿಯಸ್ ಕಾರ್ಪಸ್ ರಿಟ್ ಸಲ್ಲಿಸಿದ್ದಳು.

FIR ದಾಖಲಿಸದಕ್ಕೆ ಸಿಕ್ತು ತಕ್ಕ ಶಿಕ್ಷೆ ನಂತರ ಕೋರ್ಟ್‌ ಎಫ್ಐಆರ್ ದಾಖಲಿಸದ ಸ್ಟೇಷನ್ ಬಜಾರ್ ಠಾಣೆಯ ಇನ್ಸ್‌ಪೆಕ್ಟರ್ ಆಗಿರುವ ಸಿದ್ದರಾಮೇಶ್ವರ ಗಡೇದ್ ಅವರನ್ನು ನ್ಯಾಯಾಲಯಕ್ಕೆ ಕರೆಸಿ, ಛೀಮಾರಿ ಹಾಕಿದೆ. ದೂರು ದಾಖಲಿಸಲು ಬಂದಾಗ ದೂರು ದಾಖಲಿಸಿಕೊಂಡು ನ್ಯಾಯ ಕೊಡಿಸುವ ಬದಲಾಗಿ ಅವರನ್ನು ಸಾಗು ಹಾಕಿರೋದು ಕರ್ತವ್ಯಲೋಪ ಅಂತ ಹೇಳಿದೆ. ಇಲ್ಲಿ ಮಹಿಳೆ ಮತ್ತು ಆಕೆಯ ಮಗನ ಹಕ್ಕಿಗೆ ಚ್ಯುತಿ ತರಲಾಗಿದೆ. ಹೀಗಾಗಿ ಒಂದು ವಾರ ಸ್ಟೇಷನ್ ಮುಂದಿನ ರಸ್ತೆಯಲ್ಲಿ ಕಸ ಗೂಡಿಸುವಂತೆ ಸೂಚಿಸಿ ಆದೇಶ ನೀಡಿದೆ. ಹೈಕೋರ್ಟ್ ಕ್ಷಮೆ ಕೇಳಿದ ಅಧಿಕಾರಿ ಸಿದ್ದರಾಮೇಶ್ವರ ಗಡೇದ ಪ್ರಾಯಶ್ಚಿತ್ತವಾಗಿ ಸ್ಟೇಷನ್ ಮುಂದಿನ ರಸ್ತೆ ಗುಡಿಸಲು ಒಪ್ಪಿಗೆ ನೀಡಿದ್ದಾರೆ.

ಕಲಬುರಗಿ ಹೈಕೋರ್ಟ್ ಆದೇಶ ಇಡೀ ಪೊಲೀಸ್ ಇಲಾಖೆಗೆ ಬಿಸಿ ಮುಟ್ಟಿಸಿದೆ. ದೂರು ಕೊಡಲು ಹೋದಾಗ ದೂರು ದಾಖಲಿಸಿಕೊಳ್ಳಲು ಹಿಂದು ಮುಂದು ನೋಡುವ ಪೊಲೀಸ್‌ ಅಧಿಕಾರಿಗಳಿಗೆ ಇದು ಖಡಕ್ ಎಚ್ಚರಿಕೆ ನೀಡಿದಂತೆ ಆಗಿದೆ.

Delhi Chalo ಬೆಂಬಲಿಸಿ ರಾಷ್ಟ್ರಪತಿ ಭೇಟಿಗೆ ತೆರಳಿದ ನಿಯೋಗ; ಪ್ರಿಯಾಂಕಾ ಗಾಂಧಿ ವಶಕ್ಕೆ ಪಡೆದು, ಬಿಡುಗಡೆ

Published On - 12:48 pm, Thu, 24 December 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ