ತಮಿಳು ನಾಮಫಲಕ ತೆಗೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಬಂಧನ

| Updated By: sandhya thejappa

Updated on: Jul 10, 2021 | 3:35 PM

ಗಡಿಯಲ್ಲಿ ತಮಿಳು ಮತ್ತು ಹಿಂದಿ ಬೋರ್ಡ್ ತೆಗೆಯಬೇಕು. ಬ್ಯಾಂಕ್​ಗಳಲ್ಲಿ ಕನ್ನಡದ ಚಲನ್ ಕೊಡಬೇಕು. ಬ್ಯಾಂಕ್​ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ವಾಟಾಳ್ ನಾಗರಾಜ್, ಬಸ್ ನಿಲ್ದಾಣದ ತಮಿಳು ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳು ನಾಮಫಲಕ ತೆಗೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಬಂಧನ
ವಾಟಾಳ್ ನಾಗರಾಜ್​
Follow us on

ಕೋಲಾರ: ಕನ್ನಡ ಉಳಿಸಿ ಚಳುವಳಿ ಮೂಲಕ ತಮಿಳು ನಾಮಫಲಕಕ್ಕೆ ಮಸಿ ಬಳಿದ ಹಿನ್ನೆಲೆ ವಾಟಾಳ್ ನಾಗರಾಜ್ ಮತ್ತು ಪ್ರತಿಭಟನಾ ನಿರತರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು ಹದಿನೈದಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಕೆಜಿಎಫ್ ನಗರದ ಮುನಿಸಿಪಲ್ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್​ರವರನ್ನು ಬಂಧಿಸಲಾಗಿದೆ. ಕನ್ನಡ ಉಳಿಸಿ ಚಳುವಳಿ ಮಾಡುತ್ತಿರುವ ವಾಟಾಳ್, ತಮಿಳು ನಾಮಫಲಕಗಳನ್ನು ತೆಗೆಯುವಂತೆ ಆಗ್ರಹಿಸಿ ಬಸ್ ತಡೆದು ಪ್ರತಿಭಟನೆ ಮಾಡಿದ್ದರು.

ಗಡಿಯಲ್ಲಿ ತಮಿಳು ಮತ್ತು ಹಿಂದಿ ಬೋರ್ಡ್ ತೆಗೆಯಬೇಕು. ಬ್ಯಾಂಕ್​ಗಳಲ್ಲಿ ಕನ್ನಡದ ಚಲನ್ ಕೊಡಬೇಕು. ಬ್ಯಾಂಕ್​ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ವಾಟಾಳ್ ನಾಗರಾಜ್, ಬಸ್ ನಿಲ್ದಾಣದ ತಮಿಳು ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ಜುಲೈ 12ಕ್ಕೆ ವಾಟಾಳ್ ಪ್ರತಿಭಟನೆ
ಮೇಕೆದಾಟು ಯೋಜನೆ ವಿಚಾರಕ್ಕೆ ಸಂಬಂಧಿಸಿ ಜುಲೈ 12 ರಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸರ್ವಪಕ್ಷ ಸಭೆ ಕರೆದಿರುವ ಹಿನ್ನೆಲೆ, ಸ್ಟಾಲಿನ್ ಹಾಗೂ ತಮಿಳುನಾಡಿನ ಕ್ರಮ ವಿರೋಧಿಸಿ ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಲಿದ್ದಾರೆ. ಮೇಕೆದಾಟು ವಿಚಾರವಾಗಿ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದು ತಪ್ಪು. ಚುನಾವಣೆ ಹಿನ್ನೆಲೆ ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ ನದಿ ಜೋಡಣೆಗೆ ಮುಂದಾಗಿದೆ ಎಂದು ಹೇಳಿಕೆ ನೀಡಿದ ವಾಟಾಳ್, ಕೇಂದ್ರದಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಜುಲೈ 12 ರಂದು ಮೈಸೂರು ಬ್ಯಾಂಕ್ ಸರ್ಕಲ್​​ನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ

ಕಾರ್ಯಕರ್ತನಿಗೆ ಕಪಾಳಮೋಕ್ಷ: ‘ಹೆಗಲ ಮೇಲೆ ಕೈ ಹಾಕೋದು ಅಂದ್ರೆ ಏನರ್ಥ?’ ಸ್ಪಷ್ಟನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಅಧಿಕಾರಿಗಳು ಕೊಡುವುದು ರಿಪೋರ್ಟ್; ನಮಗೆ ಬೇಕಾಗಿರುವುದು ಸರ್ಟಿಫಿಕೇಟ್: ಕೆಆರ್​ಎಸ್ ಡ್ಯಾಂ ಬಗ್ಗೆ ಪಟ್ಟು ಬಿಡದ ಸುಮಲತಾ

(Police have arrested Vatal Nagaraj who protested in kolar)