ಅಧಿಕಾರಿಗಳು ಕೊಡುವುದು ರಿಪೋರ್ಟ್; ನಮಗೆ ಬೇಕಾಗಿರುವುದು ಸರ್ಟಿಫಿಕೇಟ್: ಕೆಆರ್​ಎಸ್ ಡ್ಯಾಂ ಬಗ್ಗೆ ಪಟ್ಟು ಬಿಡದ ಸುಮಲತಾ

ಅಧಿಕಾರಿಗಳು ಕೊಡುವುದು ಕೇವಲ ರಿಪೋರ್ಟ್ ಅಷ್ಟೇ. ಆದರೆ ನಮಗೆ ಬೇಕಾಗಿರುವುದು ಸರ್ಟಿಫಿಕೆಟ್. ಕೆಆರ್​ಎಸ್​ನಲ್ಲಿ ಬಿರುಕು ಬಿಟ್ಟಿಲ್ಲ ಎನ್ನುವುದಾದರೆ ಸಂತಸವೇ ಆಗುತ್ತದೆ. ಆ ಬಗ್ಗೆ ಮೊದಲು ಸಂತಸಪಡುವುದು ನಾನೇ ಎಂದು ಸುಮಲತಾ ಹೇಳಿಕೊಂಡಿದ್ದಾರೆ.

ಅಧಿಕಾರಿಗಳು ಕೊಡುವುದು ರಿಪೋರ್ಟ್; ನಮಗೆ ಬೇಕಾಗಿರುವುದು ಸರ್ಟಿಫಿಕೇಟ್: ಕೆಆರ್​ಎಸ್ ಡ್ಯಾಂ ಬಗ್ಗೆ ಪಟ್ಟು ಬಿಡದ ಸುಮಲತಾ
ಸುಮಲತಾ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Jul 10, 2021 | 3:29 PM

ಬೆಂಗಳೂರು: ಗಣಿ ಸಚಿವರ ಭೇಟಿಗೆ ಇಂದು ಸಮಯ ಕೇಳಿರುವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಈಗಾಗಲೇ ಮನವಿ ಮಾಡಿದ್ದೇನೆ. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ. ರವೀಂದ್ರ ಶ್ರೀಕಂಠಯ್ಯ ಹೇಳಿದಂತೆ ನಡೆದುಕೊಳ್ಳಲಾಗಲ್ಲ. ಒಬ್ಬ ಸಂಸದೆಯಾಗಿ ನನ್ನ ಜವಾಬ್ದಾರಿ ನನಗೆ ಗೊತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.

ಟಿ.ಎ. ಶರವಣ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ಕೇಳಿದಾಗ ಶರವಣ ಯಾರು ಎಂಬುದೇ ನನಗೆ ಗೊತ್ತಿಲ್ಲ. ಹಾಗಾಗಿ ಅವರ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ದಿಶಾ ಸಭೆಯಲ್ಲಿ ಮಾತಾಡಿದ್ದನ್ನೇ ಪ್ರಸ್ತಾಪಿಸಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರವನ್ನು ನಾನು ಪ್ರಸ್ತಾಪಿಸಿದ್ದೆ ಎಂದು ಬೆಂಗಳೂರಿನಲ್ಲಿ ಸಂಸದೆ ಸುಮಲತಾ ಹೇಳಿದ್ದಾರೆ.

ಕೆಆರ್​ಎಸ್​ಗೆ ಭೇಟಿ ನೀಡಲು ಈವರೆಗೆ ಅನುಮತಿ ಇರಲಿಲ್ಲ. ಕಾವೇರಿ ನಿಗಮದ ಅನುಮತಿ ಪಡೆದು ಹೋಗುತ್ತೇನೆ. ಕೆಆರ್​ಎಸ್ ಜಲಾಶಯ ಪರಿಶೀಲನೆ ಮಾಡಲು ಹೋಗುತ್ತೇನೆ. ಹಾಗೆಯೇ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ಪರಿಶೀಲಿಸುವೆ. ಸತ್ಯದ ಪರ ನಿಂತಾಗ ಶತ್ರುಗಳು ತಾನಾಗೇ ಹುಟ್ಟಿಕೊಳ್ಳುತ್ತಾರೆ ಎಂದು ಸುಮಲತಾ ವಿರೋಧಿಗಳೀಗೆ, ವಿರೋಧಾಭಿಪ್ರಾಯಗಳ ವಿರುದ್ಧ ಸೆಟೆದು ನಿಂತಿದ್ದಾರೆ.

ಅಧಿಕಾರಿಗಳು ಕೊಡುವುದು ಕೇವಲ ರಿಪೋರ್ಟ್ ಅಷ್ಟೇ. ಆದರೆ ನಮಗೆ ಬೇಕಾಗಿರುವುದು ಸರ್ಟಿಫಿಕೆಟ್. ಕೆಆರ್​ಎಸ್​ನಲ್ಲಿ ಬಿರುಕು ಬಿಟ್ಟಿಲ್ಲ ಎನ್ನುವುದಾದರೆ ಸಂತಸವೇ ಆಗುತ್ತದೆ. ಆ ಬಗ್ಗೆ ಮೊದಲು ಸಂತಸಪಡುವುದು ನಾನೇ ಎಂದು ಸುಮಲತಾ ಹೇಳಿಕೊಂಡಿದ್ದಾರೆ.

ಜುಲೈ 19ರಿಂದ ಆಗಸ್ಟ್ 13ರವರೆಗೆ ಸಂಸತ್ ಅಧಿವೇಶನ ನಡೆಯಲಿದೆ. ಹಾಗಾಗಿ ನಾನು ಹೋಗಬೇಕಿದೆ. ಆಗ ಮಂಡ್ಯ ಸಂಸದರು ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ. ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಾರೆಂದೂ ಗೊತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೆಆರ್ ಎಸ್ ಸುತ್ತಮುತ್ತ ಅಕ್ರಮವಾದ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಸ್ಫೋಟಕ ನಡೆಯುತ್ತಿದೆ ಅನ್ನೋದನ್ನ ತೋರಿಸಿದೆ. ನಾವು ಅಂದುಕೊಂಡಿದ್ದು ಒಂದು ಎರಡು ಬಾರಿ ಭೂಕಂಪನ ಆಗಿರಬೇಕು ಅಂತ. ಆದ್ರೆ ಹನ್ನೊಂದು ಬಾರಿ ಕಂಪನ ಆಗಿದೆ. ಬ್ಲಾಸ್ಟಿಂಗ್​ನಿಂದಾಗಿ ಫೌಂಡೇಷನ್ ತೊರಿಸೋಕೆ ಆಗಲ್ಲ. ಇಂಜಿನಿಯರ್ ಹೇಳಿದ್ದಾರೆ, ಅಧಿಕಾರಿಗಳು ಹೇಳಿದ್ದಾರೆ ಅಂತ ಹೇಳ್ತಾರೆ. ಅಧಿಕಾರಿಗಳು ಕೊಡೋದು ರಿಪೋರ್ಟ್ ಅಷ್ಟೇ. ಸರ್ಟಿಫಿಕೇಟ್ ಕೊಡೋದು ಅಧಿಕಾರಿಗಳ ಕೆಲಸ ಅಲ್ಲ. ನಮಗೆ ಸರ್ಟಿಫಿಕೇಟ್ ಬೇಕು ಅದಕ್ಕಾಗಿ ನಾವು ಕಾಯಬೇಕು. ಕೆಆರ್​ಎಸ್​ಗೆ ಯಾವುದೇ ರೀತಿಯ ಅನಾಹುತ ಆಗೋಕೆ ನಾನು ಬಿಡಲ್ಲ. ಅದು ಆಗದೇ ಇರೋ ರೀತಿ ನಾನು ಹೋರಾಟ ಮಾಡುತ್ತೇನೆ. ಅದ್ರಿಂದ ಯಾರಿಗೆ ನಷ್ಟ ಆಗುತ್ತೆ ಅನ್ನೋದು ನನ್ನ ವಿಚಾರವಲ್ಲ ಎಂದು ಸುಮಲತಾ ತಿಳಿಸಿದ್ದಾರೆ.

ಇದನ್ನೂ ಓದಿ: ನಾವು ನಡೆಸುತ್ತಿರುವುದು ಸಕ್ರಮ ಮೈನ್ಸ್; ನಮಗೆ ಕುಮಾರಣ್ಣನು ಗೊತ್ತಿಲ್ಲ, ಸುಮಲತಾ ಅವರೂ ಗೊತ್ತಿಲ್ಲ; ನಮ್ಮನ್ನು ಬದುಕಲು ಬಿಡಿ: ಗಣಿ ಮಾಲೀಕರು

ಟಾಕ್ ಫೈಟ್ ನಡೆಸುತ್ತಿದ್ದ ಸುಮಲತಾ ಈಗ ಟ್ವೀಟ್ ವಾರ್

Published On - 2:45 pm, Sat, 10 July 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್