AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಕ್ ಫೈಟ್ ನಡೆಸುತ್ತಿದ್ದ ಸುಮಲತಾ ಈಗ ಟ್ವೀಟ್ ವಾರ್

ಮಹಿಳೆಯರು ಅಧಿಕಾರದಲ್ಲಿದ್ದರೆ ಕೆಲವರು ಸಹಿಸಿಕೊಳ್ಳಲಾರರು. ಭ್ರಷ್ಟರು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ, ಒತ್ತಡ, ಕಿರುಕುಳ ಕೊಡಬಲ್ಲರು.

ಟಾಕ್ ಫೈಟ್ ನಡೆಸುತ್ತಿದ್ದ ಸುಮಲತಾ ಈಗ ಟ್ವೀಟ್ ವಾರ್
ಸುಮಲತಾ ಅಂಬರೀಷ್
TV9 Web
| Updated By: sandhya thejappa|

Updated on:Jul 10, 2021 | 12:12 PM

Share

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ನಡುವೆ ಮಾತಿನ ಸಮರ ನಡೆಯುತ್ತಿದೆ. ಮಾತಿನ ಸಮರ ನಡೆಸುತ್ತಿದ್ದ ಮಂಡ್ಯ ಸಂಸದೆ ಸುಮಲತಾ ಈಗ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಸತ್ಯದ ಪರ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಮಹಿಳೆಯರು ಅಧಿಕಾರದಲ್ಲಿದ್ದರೆ ಕೆಲವರು ಸಹಿಸಿಕೊಳ್ಳಲಾರರು. ಭ್ರಷ್ಟರು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ, ಒತ್ತಡ, ಕಿರುಕುಳ ಕೊಡಬಲ್ಲರು. ಪಾಪ ಸಂಸದರನ್ನು ವರ್ಗಾವಣೆ ಮಾಡಲು ಬರುವುದಿಲ್ಲ ಎಂದು ಟ್ವಿಟ್ಟರ್​ನಲ್ಲಿ ಮಂಡ್ಯ ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ.

ವೆಂಕಟೇಶ್ ನಿವಾಸಕ್ಕೆ ಮುತ್ತಿಗೆ ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ ಜಟಾಪಟಿ ತಾರಕ್ಕೇರಿದ್ದು, ಅಭಿಮಾನಿಗಳ ನಡುವೆ ಜಗಳ ಆರಂಭವಾಗಿದೆ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸುಮಲತಾ ಆಪ್ತ ರಾಕ್​ಲೈನ್​ ವೆಂಕಟೇಶ್ ನಿವಾಸಕ್ಕೆ ಇಂದು (ಜುಲೈ 10) ಬೆಳ್ಳಂಬೆಳಗ್ಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಸುಮಲತಾ ನಿವಾಸಕ್ಕೆ ಪೊಲೀಸರಿಂದ ಭದ್ರತೆ ಸುಮಲತಾ ಮನೆಗೂ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆಯಿದ್ದು, ಬೆಂಗಳೂರಿನ ಜೆ.ಪಿ.ನಗರದ ಸುಮಲತಾ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಜೆ.ಪಿ.ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಸುತ್ತಮುತ್ತಲಿನ ಠಾಣೆಗಳ 30ಕ್ಕೂ ಹೆಚ್ಚು ಪೊಲೀಸರು ಭದ್ರತೆ ನೀಡಿದ್ದಾರೆ. ಸುಮಲತಾ ಮನೆಯ ಎರಡೂ ಕಡೆ ಬ್ಯಾರಿಕೇಡ್ನ ಅಳವಡಿಸಿದ್ದಾರೆ.

ಇದನ್ನೂ ಓದಿ

ಕೆಆರ್​ಎಸ್​ ಡ್ಯಾಂ ಬಿರುಕು ವಿವಾದ: ಸಿಬಿಐ ತನಿಖೆ ನಡೆಸುವಂತೆ ಸಿಎಂ ಯಡಿಯೂರಪ್ಪಗೆ ಸುಮಲತಾ ಒತ್ತಾಯ

ರಾಕ್​ಲೈನ್ ವೆಂಕಟೇಶ್​ ನಿವಾಸಕ್ಕೆ ಮುತ್ತಿಗೆ ಹಾಕಿದ ಹೆಚ್​.ಡಿ.ಕುಮಾರಸ್ವಾಮಿ ಅಭಿಮಾನಿಗಳು: ಬ್ಯಾರಿಕೇಡ್ ತಳ್ಳಿ ಒಳನುಗ್ಗಲು ಯತ್ನ

(Sumalatha react in twitter that corrupt would disturb the loyal authorities)

Published On - 12:01 pm, Sat, 10 July 21

ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ