AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ನಡೆಸುತ್ತಿರುವುದು ಸಕ್ರಮ ಮೈನ್ಸ್; ನಮಗೆ ಕುಮಾರಣ್ಣನು ಗೊತ್ತಿಲ್ಲ, ಸುಮಲತಾ ಅವರೂ ಗೊತ್ತಿಲ್ಲ; ನಮ್ಮನ್ನು ಬದುಕಲು ಬಿಡಿ: ಗಣಿ ಮಾಲೀಕರು

Mandya Mining Owners: ಕೆಆರ್‌ಎಸ್‌ಗಿಂತ ನಮಗೆ ದೊಡ್ಡದು ಏನೂ ಇಲ್ಲ. ಕೆಆರ್‌ಎಸ್‌ನಲ್ಲಿ ಬಿರುಕು ಇದ್ದಿದ್ರೆ ಇಷ್ಟೊತ್ತಿಗೆ ಇರುತ್ತಿರಲಿಲ್ಲ. ನಮ್ಮನ್ನು ಬದುಕಲು ಬಿಡಿ, ನಮಗೊಂದು ಅವಕಾಶ ಕೊಡಿ ಬದುಕಲು. ನಾವು ನಡೆಸುತ್ತಿರುವುದು ಸಕ್ರಮ ಮೈನ್ಸ್ ಎಂದು ಗಣಿ ಮಾಲೀಕರು ತಿಳಿಸಿದ್ದಾರೆ.

ನಾವು ನಡೆಸುತ್ತಿರುವುದು ಸಕ್ರಮ ಮೈನ್ಸ್; ನಮಗೆ ಕುಮಾರಣ್ಣನು ಗೊತ್ತಿಲ್ಲ, ಸುಮಲತಾ ಅವರೂ ಗೊತ್ತಿಲ್ಲ; ನಮ್ಮನ್ನು ಬದುಕಲು ಬಿಡಿ: ಗಣಿ ಮಾಲೀಕರು
ಗಣಿ ಮಾಲೀಕ ಎಂ.ಪಿ. ನೃಪತುಂಗ: ನಾವು ನಡೆಸುತ್ತಿರುವುದು ಸಕ್ರಮ ಮೈನ್ಸ್; ನಮಗೆ ಕುಮಾರಣ್ಣನು ಗೊತ್ತಿಲ್ಲ, ಸುಮಲತಾ ಅವರೂ ಗೊತ್ತಿಲ್ಲ; ನಮ್ಮನ್ನು ಬದುಕಲು ಬಿಡಿ
TV9 Web
| Edited By: |

Updated on:Jul 10, 2021 | 1:29 PM

Share

ಮಂಡ್ಯ: ‘ಕೆಆರ್​ಎಸ್ ಅಣೆಕಟ್ಟೆ ಬಿರುಕುಬಿಟ್ಟಿದೆ ಎಂದು ಆರೋಪಿಸಿ, ಅದರ ಸಮ್ಮುಖದಲ್ಲಿ ಕಾವೇರಿ ಕಣಿವೆಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ವಿಚಾರವನ್ನು ಮುನ್ನೆಲೆಗೆ ತಂದುಬಿಟ್ಟು… ಸ್ಥಳೀಯ ಗಣಿ ಉದ್ಯಮಿಗಳನ್ನು ಹರಾಜಿಗೆ ಇಟ್ಟ ಪ್ರಸಂಗ ಇತ್ತೀಚೆಗೆ ಕಂಡುಬಂದಿದೆ. ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಕೇಳಿಬಂದಿರುವ ಆರೋಪ-ಪ್ರತ್ಯಾರೋಪಗಳಿಂದ ಗಣಿ ಮಾಲೀಕರು ವಿಚಲಿತರಾದಂತೆ ಕಂಡುಬಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಮಂಡ್ಯದಲ್ಲಿ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲೂಕು ವ್ಯಾಪ್ತಿಯ ಗಣಿ ಮಾಲೀಕರು ಸಭೆ ನಡೆಸಿ, ಪ್ರಸಕ್ತ ಗಣಿ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಮಂಡ್ಯದಲ್ಲಿ ಖಾಸಗಿ ಸಮುದಾಯ ಭವನದಲ್ಲಿ ಗಣಿ ಮಾಲೀಕರ ಸಭೆ ನಡೆದಿದೆ. ನಮ್ಮನ್ನು ಬದುಕಲು ಬಿಡಿ. ನಾವು ರಾಜಧನ ಕಟ್ಟುತ್ತಿದ್ದೇವೆ ಎನ್ನುತ್ತಿದ್ದಾರೆ ಮಾಲೀಕರು. ಗಣಿ ಮಾಲೀಕ ಎಂ.ಪಿ. ನೃಪತುಂಗ ಅವರು ಮಾತನಾಡಿ ರಾಜಧನ ಕಟ್ಟುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಕ್ರಷರ್ ಮಾಲೀಕರು 80 % ನೋಂದಾಯಿತ ಗುತ್ತಿಗೆದಾರರು. ಇವರು ರಾಜಧನವನ್ನು ಕಟ್ಟೇ ಕಟ್ಟುತ್ತಾರೆ. 95% ರಾಜಧನ ಸರ್ಕಾರಕ್ಕೆ ಜಮೆ ಆಗುತ್ತಿದೆ. ತಾಂತ್ರಿಕವಾಗಿ ಇದು ಎಲ್ಲೂ ಸಹ ಡಿಸ್ಕಸ್ ಆಗುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ 5,000 ಗಾಡಿಗಳು ಇವೆ. ಸರ್ಕಾರದ ಕಾಮಗಾರಿಗಳಿಗೆ ಎಷ್ಟು ಪ್ರಮಾಣದ ಕಲ್ಲು ಬೇಕು ಅಷ್ಟು ಮಾತ್ರ ತೆಗೆಯುತ್ತಿದ್ದೇವೆ ಎಂದು ಹೇಳಿದ್ದಾರೆ.

ನಮಗೆ ಕುಮಾರಣ್ಣನು ಗೊತ್ತಿಲ್ಲ, ಸುಮಲತಾ ಅವರೂ ಗೊತ್ತಿಲ್ಲ. ನಮಗೆ ದುಡಿಮೆಯೇ ದೇವರು. ಕೆಆರ್‌ಎಸ್ ವಿಚಾರವಾಗಿ 2018 ರಲ್ಲಿ ಬಂದಿರುವುದು ಒಂದೇ ವರದಿ. ಇನ್ನೂ ಮೂರು ಬಾರಿ ವರದಿಯನ್ನು ನೀಡಬೇಕು. ಕೆಆರ್‌ಎಸ್‌ಗಿಂತ ನಮಗೆ ದೊಡ್ಡದು ಏನೂ ಇಲ್ಲ. ಕೆಆರ್‌ಎಸ್‌ನಲ್ಲಿ ಬಿರುಕು ಇದ್ದಿದ್ರೆ ಇಷ್ಟೊತ್ತಿಗೆ ಇರುತ್ತಿರಲಿಲ್ಲ. ಇವೆಲ್ಲವೂ ಇಲ್ಲ ಸಲ್ಲದ ಆರೋಪಗಳು. ನಮ್ಮನ್ನು ಬದುಕಲು ಬಿಡಿ, ನಮಗೊಂದು ಅವಕಾಶ ಕೊಡಿ ಬದುಕಲು. ನಾವು ನಡೆಸುತ್ತಿರುವುದು ಸಕ್ರಮ ಮೈನ್ಸ್ ಎಂದು ಗಣಿ ಮಾಲೀಕರು ತಿಳಿಸಿದ್ದಾರೆ.

ಕೆಆರ್​ಎಸ್​ ಒಡೆದಿಲ್ಲ ಅಂತಿದ್ದಾರೆ ಅಧಿಕಾರಿಗಳು, ಈಗಲಾದರೂ ಕ್ಷಮೆ ಕೇಳಿ ವಿವಾದಕ್ಕೆ ಇಲ್ಲಿಗೇ ತೆರೆ ಎಳೆಯೋಣ -ದಳಪತಿಗಳಿಂದ ಹಸಿರು ಬಾವುಟ (We are not indulging in Illegal Mining pay royalty says Mining Owners in Mandya District)

Published On - 1:28 pm, Sat, 10 July 21

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?