AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಸಂಸ್ಥೆಯ ಕಾರ್ಮಿಕ ಕಾರ್ಡ್ ನೀಡೋದಾಗಿ ಮಹಿಳೆಯರಿಗೆ ವಂಚನೆ‌: ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

Masari Area Gadag: ಕಾರ್ಮಿಕ ಕಾರ್ಡ್ ಮಾಡಿಸಿದ್ರೆ ವಿಶ್ವಸಂಸ್ಥೆಯಿಂದ ಹಣ ಬರುತ್ತೆ.  ಶಿಕ್ಷಣಕ್ಕೆ, ಮದುವೆಗೆ, ಅನಾರೋಗ್ಯಕ್ಕೀಡಾದರೆ ಕಾರ್ಮಿಕ ಕಾರ್ಡ್​​ನಿಂದ  ಹಣ ಬರುತ್ತದೆ ಎಂದು ಆರೋಪಿ  ಕುಮಾರ್ ಮಹಿಳೆಯರಿಗೆ ನಂಬಿಸುತ್ತಿದ್ದ ಎಂದು ತಿಳಿದುಬಂದಿದೆ.

ವಿಶ್ವ ಸಂಸ್ಥೆಯ ಕಾರ್ಮಿಕ ಕಾರ್ಡ್ ನೀಡೋದಾಗಿ ಮಹಿಳೆಯರಿಗೆ ವಂಚನೆ‌: ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು
ವಿಶ್ವ ಸಂಸ್ಥೆಯ ಕಾರ್ಮಿಕ ಕಾರ್ಡ್ ನೀಡೋದಾಗಿ ಮಹಿಳೆಯರಿಗೆ ವಂಚನೆ‌: ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು
TV9 Web
| Updated By: ಸಾಧು ಶ್ರೀನಾಥ್​|

Updated on: Jul 10, 2021 | 3:50 PM

Share

ಗದಗ: ಹಳ್ಳಿಗಾಡಿನ ಮಹಿಳೆಯರನ್ನೇ ಟಾರ್ಗೆಟ್​ ಮಾಡಿಕೊಂಡು ವಂಚಿಸುತ್ತಿದ್ದ ವ್ಯಕ್ತಿಗೆ ಗದಗದ ಮಸಾರಿ ಪ್ರದೇಶದಲ್ಲಿ ಜನ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಕಾರ್ಮಿಕ ಕಾರ್ಡ್ ಮಾಡಿಸಿದ್ರೆ ವಿಶ್ವ ಸಂಸ್ಥೆಯಿಂದ ಹಣ ಬರುತ್ತೆ. ಅಂತಹ ಕಾರ್ಮಿಕ ಕಾರ್ಡ್ ತಾನು ನೀಡೋದಾಗಿ ಮಹಿಳೆಯರಿಗೆ ಆ ವ್ಯಕ್ತಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ.   ಗದಗದ ಮಸಾರಿ ಪ್ರದೇಶದಲ್ಲಿ  ಹಳ್ಳಿಯ ಮಹಿಳೆಯರನ್ನೇ ಟಾರ್ಗೆಟ್​ ಮಾಡಿ ವಂಚಿಸುತ್ತಿದ್ದ ಕುಮಾರ್ ಎಂಬ ವ್ಯಕ್ತಿಗೆ ಸ್ಥಳೀಯರು ಸೇರಿಕೊಂಡು ಬಾರಿಸಿದ್ದಾರೆ. ಚಿತ್ರದುರ್ಗ ಮೂಲದ ಡೆವಲೆಪ್ ಲೈವ್ಲಿವುಡ್ ಫರ್ಮ್ ಸಂಸ್ಥೆಯ ಮೂಲಕ  ಸ್ವರದ ಎಂಟರ್ಪ್ರೈಸ್ ರಚಿಸಿಕೊಂಡು ಹಳ್ಳಿಯ ಮಹಿಳೆಯರಿಗೆ  ಕುಮಾರ್ ವಂಚಿಸುತ್ತಿದ್ದ ಎನ್ನಲಾಗಿದೆ.

ಕುಮಾರ್, ಚಿತ್ರದುರ್ಗದ ಮೂಲದ ಸಂಸ್ಥೆಯ ನಿರ್ದೇಶಕ. ವಿಶ್ವ ಸಂಸ್ಥೆಯ ಕಾರ್ಮಿಕ ಕಾರ್ಡ್ ಮಾಡಿಸಿಕೊಡುವುದಾಗಿ ಪ್ರತಿ ಕಾರ್ಡ್​ಗೆ 1,700 ರೂಪಾಯಿ ವಸೂಲಿ ಮಾಡಿ ಕುಮಾರ್ ವಂಚನೆ ಎಸಗಿದ್ದಾನೆ. ಗದಗ ಜಿಲ್ಲೆಯ ಸಾವಿರಾರು ಕಾರ್ಮಿಕರಿಗೆ ಕಾರ್ಡ್ ಮಾಡೋದಾಗಿ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.

ಕಾರ್ಮಿಕ ಕಾರ್ಡ್ ಮಾಡಿಸಿದ್ರೆ ವಿಶ್ವಸಂಸ್ಥೆಯಿಂದ ಹಣ ಬರುತ್ತೆ.  ಶಿಕ್ಷಣಕ್ಕೆ, ಮದುವೆಗೆ, ಅನಾರೋಗ್ಯಕ್ಕೀಡಾದರೆ ಕಾರ್ಮಿಕ ಕಾರ್ಡ್​​ನಿಂದ  ಹಣ ಬರುತ್ತದೆ ಎಂದು ಆರೋಪಿ  ಕುಮಾರ್ ಮಹಿಳೆಯರಿಗೆ ನಂಬಿಸುತ್ತಿದ್ದ ಎಂದು ತಿಳಿದುಬಂದಿದೆ. ಬಡಾವಣೆ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿ ಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.

(Localites beat a person for allegedly cheating village women in Masari Area Gadag)