ಕೊಪ್ಪಳ: ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ; 4 ಟಿಪ್ಪರ್ಗಳು ವಶಕ್ಕೆ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಂದಿಹಳ್ಳಿ ಮತ್ತು ಕಕ್ಕರಗೋಳ ಗ್ರಾಮದಲ್ಲಿ ಅವ್ಯಾಹತವಾಗಿ ಮರಳು ಲೂಟಿಯಾಗುತ್ತಿದೆ. ತುಂಗಭದ್ರಾ ನದಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಇಲ್ಲಿನ ಜನ ಅಕ್ರಮವಾಗಿ ಮರಳು ದಂಧೆ ಮಾಡುತ್ತಿದ್ದಾರೆ. ಹೀಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 4 ಟಿಪ್ಪರ್ಗಳನ್ನು ಕಾರಟಗಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಪ್ಪಳ: ತುಂಗಭದ್ರಾ ಜಲಾಶಯ, ಮೂರು ಜಿಲ್ಲೆಯ ರೈತರ ಜೀವನಾಡಿ. ಕೊಪ್ಪಳ, ಬಳ್ಳಾರಿ, ರಾಯಚೂರು ಮೂರು ಜಿಲ್ಲೆಯ ರೈತರು ತುಂಗೆಯನ್ನು ನಂಬಿ ಜೀವನ ಮಾಡುತ್ತಿದ್ದಾರೆ. ಆದರೆ ಅದೇ ತುಂಗೆಯ ಒಡಲಲ್ಲಿ ಅಕ್ರಮಗಳಿಗೂ ಕೊರತೆ ಇಲ್ಲ. ಮರಳು ದಂಧೆಕೋರರು ತುಂಗೆಯ ಒಡಲನ್ನು ರಾಜಾರೋಷವಾಗಿ ಬಗೆಯುತ್ತಿದ್ದಾರೆ. ಲಾಕ್ಡೌನ್ ಮಧ್ಯೆಯೂ ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ನಿಂತಿಲ್ಲ. ನಿರಂತರವಾಗಿ ದಂಧೆಕೋರರು ಅಕ್ರಮ ಮರಳನ್ನು ಬಗೆಯುತ್ತಿದ್ದಾರೆ. ತುಂಗೆಯ ಒಡಲಿಗೆ ಮರಳು ದಂಧೆಕೋರರು ಕನ್ನ ಹಾಕುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಂದಿಹಳ್ಳಿ ಮತ್ತು ಕಕ್ಕರಗೋಳ ಗ್ರಾಮದಲ್ಲಿ ಅವ್ಯಾಹತವಾಗಿ ಮರಳು ಲೂಟಿಯಾಗುತ್ತಿದೆ. ತುಂಗಭದ್ರಾ ನದಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಇಲ್ಲಿನ ಜನ ಅಕ್ರಮವಾಗಿ ಮರಳು ದಂಧೆ ಮಾಡುತ್ತಿದ್ದಾರೆ. ಹೀಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 4 ಟಿಪ್ಪರ್ಗಳನ್ನು ಕಾರಟಗಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದರೂ ಇಲ್ಲಿನ ಜನರಿಗೆ ಕೊರೊನಾ ಭಯ ಇಲ್ಲ. ನಂದಿಹಳ್ಳಿ ಮತ್ತು ಕಕ್ಕರಗೋಳ ಎರಡು ಅವಳಿ ಗ್ರಾಮಗಳು. ಇಲ್ಲಿ ಮರಳಿಗೆ ಕೊರತೆ ಇಲ್ಲ. ನದಿ ದಡದಿಂದ ಟ್ರ್ಯಾಕ್ಟರ್ ಮೂಲಕ ಒಂದು ಕಡೆ ಮರಳು ಸಂಗ್ರಹ ಮಾಡಿ ಅದನ್ನು ರವಾನೆ ಮಾಡಲಾಗತ್ತದೆ. ಇಲ್ಲಿನ ಕಾರ್ಮಿಕರನ್ನು ಬಳಸಿ ಮರಳು ತುಂಬುವ ದ್ರಶ್ಯಗಳು ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿವೆ.
ಮರಳು ಹೋಗೋದು ಎಲ್ಲಿಗೆ ಕೊಪ್ಪಳ ಜಿಲ್ಲೆಯ ನಂದಿಹಳ್ಳಿ, ಕಕ್ಕರಗೋಳ ಮರಳಿಗೆ ಬಂಗಾರದ ಬೆಲೆ ಇದೆ. ನದಿ ದಂಡೆಯಲ್ಲಿ ಜೆಸಿಬಿ ಮೂಲಕ ತೆಗೆದ ಮರಳಿಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇದೆ. ಇದೇ ಕಾರಣಕ್ಕೆ ನಿತ್ಯ ಇಲ್ಲಿಂದ ಅಕ್ರಮವಾಗಿ ಮರಳು ಬೆಂಗಳೂರಿಗೆ ಸಾಗಾಟವಾಗತ್ತದೆ. ಎರಡು ಗ್ರಾಮದಲ್ಲಿ ಹಗಲಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿ ರಾತ್ರಿ ಅದನ್ನು ಬೆಂಗಳೂರಿಗೆ ರವಾನೆ ಮಾಡಲಾಗತ್ತದೆ. ನಿತ್ಯ 5 ಟೆನ್ ವ್ಹೀಲರ್ ಟಿಪ್ಪರ್ನಲ್ಲಿ ಕೊಪ್ಪಳದಿಂದ ಮರಳು ಸಾಗಾಟವಾಗುತ್ತದೆ. ಪೊಲೀಸ್ ಠಾಣೆ ಮುಂದೆನೆ ಅಕ್ರಮವಾಗಿ ಮರಳು ಸಾಗಾಟವಾದರೂ ಅಧಿಕಾರಿಗಳು ಮಾತ್ರ ಕ್ಯಾರೇ ಅಂತಿಲ್ಲ. ಒಂದು 10 ವ್ಹೀಲರ್ ಟಿಪ್ಪರ್ಗೆ ಸುಮಾರು 80 ರಿಂದ ಒಂದು ಲಕ್ಷಕ್ಕೆ ಮಾರಾಟ ಮಾಡುತ್ತಾರೆ. ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮರಳು ಲೂಟಿ ಮಾಡುತ್ತಿದ್ದರು.
ಮರಳು ಲೂಟಿಗೆ ಬೆಂಗಳೂರು ಮೂಲದ ವ್ಯಕ್ಯಿ ಕಿಂಗ್ ಪಿನ್ ನಂದಿಹಳ್ಳಿ, ಕಕ್ಕರಗೋಳ ತುಂಗೆಯ ಒಡಲು ಬಗೆಯುವುದರಲ್ಲಿ ಬೆಂಗಳೂರು ಮೂಲದ ವ್ಯಕ್ತಿಯ ಪಾತ್ರ ಇದೆ ಎನ್ನುವ ಅನುಮಾನ ಮೂಡಿದೆ. ಆತನೇ ಮರಳು ಸಾಗಾಟ ಮಾಡುತ್ತಾನೆ ಎಂದು ಹೇಳಲಾಗುತ್ತಿದೆ. ಸ್ಥಳೀಯವಾಗಿ ಪಕ್ಷಾತೀತವಾಗಿ ಕೆಲವರು ಮರಳು ಮಾಫಿಯಾದಲ್ಲಿ ಕೈ ಜೋಡಿಸಿದ್ದಾರೆ. ಪೊಲೀಸರು ಹಾಗೂ ಗಣಿ ಭೂ ವಿಜ್ಞಾನ ಅಧಿಕಾರಿಗಳಿಗೆ ಪ್ರತಿ ತಿಂಗಳು ಇಂತಿಷ್ಟು ಮಾಮೂಲಿ ಕೊಡುತ್ತಾರೆ ಎನ್ನುವ ಆರೋಪವೂ ಇದೆ.
ನಮಗೆಲ್ಲ ತುಂಗಭದ್ರಾ ಜಲಾಶಯ ಜೀವನಾಡಿ. ಆದರೆ ಅದೇ ಜಲಾಶಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಅಕ್ರಮ ಮರಳು ಲೂಟಿಯಾಗುತ್ತಿದೆ. ಪರವಾನಿಗೆ ಪಡೆಯದೆ ಮರಳು ಬಗೆಯುತ್ತಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹಲವಾರು ಬಾರಿ ಸಂಘಟನೆಯಿಂದ ಮರಳು ಸಾಗಾಟ ತಡೆಗೆ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಮುಖಂಡ ಶರಣೇಗೌಡ ಕೆಸರಟ್ಟಿ ಹೇಳಿದರು.
ನಂದಿಹಳ್ಳಿ, ಕಕ್ಕರಗೋಳ ಗ್ರಾಮದಲ್ಲಿ ಮರಳು ಮಾಫಿಯಾ ಬಗ್ಗೆ ಮಾಹಿತಿ ಬಂದ ತಕ್ಷಣ ದಾಳಿ ಮಾಡಲಾಗಿದೆ. ಈಗಾಗಲೇ ನಾಲ್ಕು ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ಲಾಕ್ಡೌನ್ ಮಧ್ಯೆಯೂ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದರೂ ಎನ್ನುವ ಮಾಹಿತಿ ಮೇಲೆ ದಾಳಿ ಮಾಡಲಾಗಿದ್ದುತನಿಖೆಯ ನಂತರ ಮರಳು ಎಲ್ಲಿಗೆ ಹೋಗುತ್ತಿತ್ತು? ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಗಲಿದೆ ಎಂದು ಗಣಿ ಭೂ ವಿಜ್ಞಾನ ಅಧಿಕಾರಿ ಮುತ್ತಪ್ಪ ತಿಳಿಸಿದರು.
ಇದನ್ನೂ ಓದಿ
ಕೊರೊನಾ ಸೋಂಕಿತನ ಮೃತದೇಹವನ್ನು ನದಿಗೆ ಎಸೆದು ಹೋದ ಸಂಬಂಧಿಕರು; ವೈರಲ್ ವಿಡಿಯೋ ನೋಡಿ ಪ್ರಕರಣ ದಾಖಲು
ಅಂದು ರಿಜೆಕ್ಟ್ ಆಗಿದ್ದ ಮ್ಯಾಗಜಿನ್ನಲ್ಲೇ ಸೋನು ಸೂದ್ ಫೋಟೋ; ಇದಲ್ಲವೇ ಯಶಸ್ಸು?
(Police have seized 4 tippers illegally transporting sand in koppal)