ದಾವಣಗೆರೆಯಲ್ಲಿ ಭರ್ತಿಯಾದ ಕೊವಿಡ್ ಕೇರ್ ಸೆಂಟರ್; ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಜನರಿಂದ ಒತ್ತಾಯ

ಮನೆಯಲ್ಲಿ ಆರು ಜನವಿದ್ದರೇ ಇವರಲ್ಲಿ ಇಬ್ಬರು ಪಾಸಿಟಿವ್ ಉಳಿದವರು ನೆಗೆಟಿವ್ ಬಂದಿರುತ್ತಾರೆ. ಆದರೂ ಎಲ್ಲರೂ ಒಂದೇ ಮನೆಯಲ್ಲಿ ಇರುತ್ತಾರೆ. ಇದರಿಂದಾಗಿ ಉಳಿದ ನಾಲ್ಕು ಜನ ಸಹ ಒಂದು ವಾರದಲ್ಲಿ ಪಾಸಿಟಿವ್ ಆಗುತ್ತಿದ್ದರು. ಹೀಗಾಗಿ ಕೊವಿಡ್​ ಕೇರ್​ ಸೆಂಟರ್​ಗೆ ಬರುವಂತೆ ತಿಳಿಸಲಾಯಿತು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಭರ್ತಿಯಾದ ಕೊವಿಡ್ ಕೇರ್ ಸೆಂಟರ್; ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಜನರಿಂದ ಒತ್ತಾಯ
ದಾವಣಗೆರೆ ಜಿಲ್ಲಾಸ್ಪತ್ರೆ
Follow us
preethi shettigar
|

Updated on: May 30, 2021 | 4:27 PM

ದಾವಣಗೆರೆ: ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ತಪ್ಪಿಸಲು ಸರ್ಕಾರ ಲಾಕ್​ಡೌನ್ ಘೋಷಿಸಿದೆ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದರು ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಕೆಲ ದಿನಗಳ ಹಿಂದೆ ಕೇವಲ ಶೇಕಡಾ 6 ರಷ್ಟಿದ್ದ ಸೋಂಕಿತರ ಪ್ರಮಾಣ. ಎರಡು ವಾರಗಳಲ್ಲಿ ಶೇಖಡಾ 36ಕ್ಕೆ ಎರಿದೆ. ಹೀಗೆ ಜಿಲ್ಲೆಯಲ್ಲಿ ಸೋಂಕಿತರು ಹೆಚ್ಚಾಗುತ್ತಿರುವುದಕ್ಕೆ ಸಮರ್ಪಕ ಉತ್ತರ ಮಾತ್ರ ಇನ್ನು ಸಿಗುತ್ತಿಲ್ಲ. ಆದರೆ ಸೋಂಕು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಬಹುದಿನಗಳಿಂದ ಜನರು ಕೊವಿಡ್ ಕೇರ್ ಸೆಂಟರ್​ಗೆ ಬರಲಾರಂಭಿಸಿದ್ದಾರೆ. ಇದರ ಪರಿಣಾಮದಿಂದಾಗಿ ಕೊವಿಡ್​ ಕೇರ್ ಸೆಂಟರ್​ಗಳು ಭರ್ತಿಯಾಗಿವೆ.

ದಾವಣಗೆರೆ ಜಿಲ್ಲೆಯಲ್ಲಿ 5337 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಈ ಸೋಂಕಿತರಲ್ಲಿ 2914 ಜನ ಹೋಂ ಐಸೋಲೇಷನ್​ನಲ್ಲಿದ್ದಾರೆ ಮತ್ತು 1305 ಜನ ಕೊವಿಡ್ ಕೇರ್ ಸೆಂಟರ್​ನಲ್ಲಿದ್ದಾರೆ. ಇನ್ನು ಉಳಿದ 1118 ಜನರು ಜಿಲ್ಲಾ ಕೊವಿಡ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಂಕಿ ಅಂಶಗಳ ಪ್ರಕಾರ ಶೇಕಡಾ 60 ಕ್ಕೂ ಹೆಚ್ಚು ಜನ ಸೋಂಕಿತರು ಮನೆಯಲ್ಲಿದ್ದಾರೆ. ಆದರೆ ಇದನ್ನು ಗಮನಿಸಿದ ಜಿಲ್ಲಾಡಳಿತ ಸೋಂಕಿತರು ಮನೆಯಲ್ಲಿ ಇದ್ದರೆ ಮತ್ತಷ್ಟು ಸೋಂಕು ಹೆಚ್ಚುತ್ತದೆ. ಹೀಗಾಗಿ ಕೊವಿಡ್ ಕೇರ್ ಸೆಂಟರ್​ಗೆ ಬನ್ನಿ ಎಂದು ಕರೆ ನೀಡಲು ಆರಂಭಿಸಿತ್ತು.

ಮೇ 11 ರಂದು ಜಿಲ್ಲಾಡಳಿತ 3081 ಜನರ ಕೊವಿಡ್ ಮಾದರಿ ಪರೀಕ್ಷೆ ಮಾಡಿತ್ತು. ಇದರಲ್ಲಿ 212 ಜನರಿಗೆ ಕೊವಿಡ್ ಸೋಂಕು ತಗುಲಿತ್ತು. ಅಂದರೆ ಶೇಕಡಾ 6.53 ಜನಕ್ಕೆ ಸೋಂಕು ಅಂಟಿಕೊಂಡಿತ್ತು. ಇದೇ ಮೇ 15 ರಂದು 3192 ಜನರ ಮಾದರಿ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ 1155 ಜನಕ್ಕೆ ಸೋಂಕು ಅಂಟಿತ್ತು. ಅಂದರೆ ಶೇಕಡಾ 36.18 ರಷ್ಟು ಪತ್ತೆಯಾಗಿದೆ. ಇದಕ್ಕೆ ಕಾರಣ ಹೋಂ ಐಸೋಲೇಷನ್. ಮನೆಯಲ್ಲಿ ಆರು ಜನವಿದ್ದರೇ ಇವರಲ್ಲಿ ಇಬ್ಬರು ಪಾಸಿಟಿವ್ ಉಳಿದವರು ನೆಗೆಟಿವ್ ಬಂದಿರುತ್ತಾರೆ. ಆದರೂ ಎಲ್ಲರೂ ಒಂದೇ ಮನೆಯಲ್ಲಿ ಇರುತ್ತಾರೆ. ಇದರಿಂದಾಗಿ ಉಳಿದ ನಾಲ್ಕು ಜನ ಸಹ ಒಂದು ವಾರದಲ್ಲಿ ಪಾಸಿಟಿವ್ ಆಗುತ್ತಿದ್ದರು. ಹೀಗಾಗಿ ಕೊವಿಡ್​ ಕೇರ್​ ಸೆಂಟರ್​ಗೆ ಬರುವಂತೆ ತಿಳಿಸಲಾಯಿತು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಹೀಗೆ ಜಿಲ್ಲಾಧಿಕಾರಿಗಳಿಂದ ಕರೆ ಬಂದಿದ್ದೇ ತಡ ಕೊವಿಡ್ ಕೇರ್ ಸೆಂಟರ್​ಗೆ ಜನ ಬರಲಾರಂಭಿಸಿದರು. ದಾವಣಗೆರೆಯ 390 ಜನರಿರುವ ಕೊವಿಡ್ ಕೇರ್​ನಲ್ಲಿ 321 ಜನ ಬಂದಿದ್ದಾರೆ, ಹರಿಹರದಲ್ಲಿ 280 ಜನಕ್ಕೆ 252 ಜನ, ಹೊನ್ನಾಳಿ 470 ಜನಕ್ಕೆ 485 ಸ್ವಲ್ಪ ಜನ ಕೊವಿಡ್​ ಕೆರ್​ ಸೆಂಟರ್​ಗೆ ಬಂದಿದ್ದಾರೆ. ಇನ್ನು ಜಗಳೂರ 150 ಜನ ವ್ಯವಸ್ಥೆ ಇರುವ ಕೊವಿಡ್​ ಕೇರ್ ಸೆಂಟರ್​ನಲ್ಲಿ 77 ಜನ ಸೋಂಕಿತರು ಇದ್ದಾರೆ. ಒಟ್ಟಾರೆ ಕೊರೊನಾ ಹೆಚ್ಚಾದ ಪರಿಣಾಮ ದಾವಣಗೆರೆಯ ಕೊವಿಡ್​ ಕೇರ್​ ಸೆಂಟರ್​ಗಳು ಭರ್ತಿಯಾಗಿವೆ. ಹೀಗಾಗಿ ಜಿಲ್ಲಾಡಳಿತ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ಆಕ್ಸಿಜನ್ ಆಯ್ತು ಇದೀಗ ಜೀವ ಜಲಕ್ಕಾಗಿ ಹಾಹಾಕಾರ‌; ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕುಡಿಯಲು ನೀರು ಸಿಗದೆ ಪರದಾಟ

ಗದಗ ಜಿಮ್ಸ್‌ ಆಸ್ಪತ್ರೆಯಲ್ಲಿ ಐಸಿಯು ಸೇರಿ 350 ಆಕ್ಸಿಜನ್ ಬೆಡ್ ಭರ್ತಿ: ಜಿಲ್ಲಾಧಿಕಾರಿ ಸುಂದರೇಶ್​ ಬಾಬು

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ