ಕಾಂಗ್ರೆಸ್ ಇದ್ದಾಗ ಪೊಲೀಸ್​ ನೇಮಕಾತಿ ಮುಖ್ಯಸ್ಥ ಐಪಿಎಸ್‌ ಶ್ರೀಧರ್ ತಮ್ಮ ಮನೆಯ ಕಾವಲುಗಾರನಿಗೆ ಬೀಗದ ಕೈ ಕೊಟ್ಟು ಅಕ್ರಮ ಎಸಗಿದ್ದರು! ಸಂಪೂರ್ಣ ಜಾತಕ ಇಲ್ಲಿದೆ

ಅದಾದಮೇಲೆ, ಕಮಿಟಿ ಅಧ್ಯಕ್ಷರಾದ ಕೆ.ವಿ. ಶ್ರೀಧರ್ ಮತ್ತು ಅವರ ಮನೆಯ ಕಾವಲುಗಾರರಾದ ಹರ್ಷಕುಮಾ‌ರ ಸಿ.ಪಿ.ಸಿ-8753 ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿತ್ತು. ಆದರೆ ತನಿಖೆ ನಡೆಸಿದ ಸಿಐಡಿ ಪೊಲೀಸರು ಅಂದಿನ ಡಿಜಿಪಿ ಕೆ.ವಿ. ಶ್ರೀಧರ್ ಅವರನ್ನು ದಸ್ತಗಿರಿ ಮಾಡಿರುವುದಿಲ್ಲ.

ಕಾಂಗ್ರೆಸ್ ಇದ್ದಾಗ ಪೊಲೀಸ್​ ನೇಮಕಾತಿ ಮುಖ್ಯಸ್ಥ ಐಪಿಎಸ್‌ ಶ್ರೀಧರ್ ತಮ್ಮ ಮನೆಯ ಕಾವಲುಗಾರನಿಗೆ ಬೀಗದ ಕೈ ಕೊಟ್ಟು ಅಕ್ರಮ ಎಸಗಿದ್ದರು! ಸಂಪೂರ್ಣ ಜಾತಕ ಇಲ್ಲಿದೆ
ವಿಧಾನಸೌಧ (ಸಂಗ್ರಹ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 06, 2022 | 7:15 PM

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 2014ರಲ್ಲಿ ಸಬ್​​ಇನ್ಸ್​​ಪೆಕ್ಟರ್​​​​ಗಳ ನೇಮಕಾತಿ ವ್ಯವಹಾರದಲ್ಲಿ ಭಾರೀ ಅಕ್ರಮಗಳು ನಡೆದಿದ್ದವು. ಅಂದು ನೇಮಕಾತಿಯ ಮುಖ್ಯಸ್ಥರಾಗಿದ್ದ ಐಪಿಎಸ್‌ ಅಧಿಕಾರಿ ಕೆ.ವಿ. ಶ್ರೀಧರ್ ತಮ್ಮ ಮನೆಯ ಕಾವಲುಗಾರನಿಗೆ ಬೀಗದ ಕೈಕೊಟ್ಟು ಅಕ್ರಮ ಎಸಗಿದ್ದರು! ಅದರ ಸಂಪೂರ್ಣ ಜಾತಕ ಇಲ್ಲಿದೆ. ಜೊತೆಗೆ 2013 ರಿಂದ 2017 ರವರೆಗೆ ನಡೆದ ಡಿವೈಎಸ್‌ಪಿ, ಎಫ್‌ಡಿಎ, ಎಸ್‌ಡಿಎ ಹುದ್ದೆಗಳನ್ನು ಕೊಡಿಸುವುದಾಗಿ ಸಾರ್ವಜನಿಕರನ್ನು ನಂಬಿಸಿ, 18 ಕೋಟಿ ಹಣವನ್ನು ಪಡೆದು ಮೋಸ ಮಾಡಿರುವ ಪ್ರಕರಣವೂ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

2014 ಸಾಲಿನ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅಕ್ರಮಗಳು:

10.09.2014 ರಂದು ಪೊಲೀಸ್ ಕಾನ್ಸ್​ಟೇಬಲ್​ ಸಿವಿಲ್ ಹುದ್ದೆಯ ನೇಮಕಾತಿಗಾಗಿ ಸಬ್‌ ಕಮಿಟಿ ರಚನೆಯಾಗಿತ್ತು. ಸಬ್ ಕಮಿಟಿ ಅಧ್ಯಕ್ಷರಾಗಿ ಕೆ.ವಿ.ಶ್ರೀಧರ್, ಐ.ಪಿ.ಎಸ್, ಡಿಐಜೆಪಿ, ಫಾರೆಸ್ಟ್ ಸೆಲ್ ಮತ್ತು ಸದಸ್ಯರಾಗಿ ಲಾಬೂರಾಮ್ ಐ.ಪಿ.ಎಸ್, ಅಲ್ಕುಲ್ ಅಹದ್ ಐ.ಪಿ.ಎಸ್ ಅವರುಗಳು ನೇಮಕಗೊಂಡಿದ್ದರು. ಸಬ್ ಕಮಿಟಿ ಸದಸ್ಯರುಗಳು ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರಗಳನ್ನು ತಯಾರು ಮಾಡಿ ಅಧ್ಯಕ್ಷರಾದ ಕೆ.ಪಿ. ಶ್ರೀಧರ್ ಅವರಿಗೆ ನೀಡಿದ್ದರು. ದಿನಾಂಕ 16.11.2014 ರಂದು ಪರೀಕ್ಷೆ ನಡೆದಿತ್ತು.

17.11.2014 ರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಕಲಬುರ್ಗಿ ನಗರ ಸಿ.ಪಿ.ಐ, ಎಂ.ಬಿ. ನಗರ ಪೊಲೀಸ್​ ಠಾಣೆ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಕಲಬುರಗಿ ಯೂನಿವರ್ಸಿಟಿ ಪೂಲೀಸ್ ಠಾಣೆ ಮೊ. ಸಂಖ್ಯೆ 290/2014, o 202, 403, 409, 411, 414, 418, 426 / 34, 35, 36 … & 13(1)(), 13(2) ಪ್ರಿವೆನ್ಶನ್ ಆಫ್ ಕರಪ್ಪನ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಅಂದಿನ ಎಎಸ್‌ಪಿ ಐಪಿಎಸ್ ಅಧಿಕಾರಿ ಸಂತೋಷ್ ಬಾಬು ಕೈಗೊಂಡಿದ್ದರು. ದಿನಾಂಕ 17.11.2014 ರಿಂದ 31.12.2014 ರವರೆಗೆ ತನಿಖೆ ನಡೆದಿತ್ತು. ತನಿಖಾ ಕಾಲದಲ್ಲಿ ಅಕ್ರಮದಲ್ಲಿ ಭಾಗಿಯಾದ ಒಟ್ಟು 19 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರಿಂದ ಸುಮಾರು 77 ಲಕ್ಷ ರೂ ವಶಪಡಿಸಿಕೊಳ್ಳಲಾಗಿತ್ತು.

ಅದಾದ ಬಳಿಕ 2015 ರಲ್ಲಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ, ನಾರಾಯಣಸ್ವಾಮಿ ಡಿವೈ. ಎಸ್.ಪಿ. ತನಿಖೆ ನಡೆಸಿ ಆರೋಪಿಗಳಾದ ಹನುಮಂತರಾಯಪ್ಪ ಮತ್ತು ಸದಾನಂದ ಅವರನ್ನು ದಸ್ತಗಿರಿ ಮಾಡಿದ್ದರು. ತನಿಖೆಯ ವೇಳೆ ಸಾಕ್ಷಾಧಾರಗಳ ಪ್ರಕಾರ ಅಂದಿನ ನೇಮಕಾತಿ ಅಧ್ಯಕ್ಷರಾದ ಐಪಿಎಸ್‌ ಅಧಿಕಾರಿ ಕೆ.ಪಿ. ಶ್ರೀಧರ್ ಅವರು ಉತ್ತರಗಳ ಪ್ರತಿಯನ್ನು ತಮ್ಮ ಮನೆಯ ಕಾವಲುಗಾರ ಹರ್ಷಕುಮಾ‌ರನಿಗೆ ನೀಡಿದ್ದರು.

ಮನೆಯ ಕಾವಲುಗಾರ ಹರ್ಷಕುಮಾ‌ರ ಕೀ ಉತ್ತರಗಳನ್ನು ಬೆಂಗಳೂರಿನ ಎಜೆಂಟ್ ಹನುಮಂತರಾಯಪ್ಪನಿಗೆ ನೀಡಿದ್ದ. ಅವನು ಕಲಬುರಗಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್ ನಡೆಸುತ್ತಿರುವ ಹಣಮಂತರಾಯ ಸಾಯಿ ಎಂಬುವರಿಗೆ ಹಸ್ತಾಂತರಿಸಿದ್ದ. ಅಲ್ಲಿಂದ ಬೇರೆ ಬೇರೆ ಅಭ್ಯರ್ಥಿಗಳಿಗೆ ಹಾಗೂ ಮಧ್ಯವರ್ತಿಗಳಿಗೆ ಹಂಚಿಕೆಯಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದರು.

ಅದಾದಮೇಲೆ, ಕಮಿಟಿ ಅಧ್ಯಕ್ಷರಾದ ಕೆ.ವಿ. ಶ್ರೀಧರ್ ಮತ್ತು ಅವರ ಮನೆಯ ಕಾವಲುಗಾರರಾದ ಹರ್ಷಕುಮಾ‌ರ ಸಿ.ಪಿ.ಸಿ-8753 ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿತ್ತು. ಆದರೆ ತನಿಖೆ ನಡೆಸಿದ ಸಿಐಡಿ ಪೊಲೀಸರು ಅಂದಿನ ಡಿಜಿಪಿ ಕೆ.ವಿ. ಶ್ರೀಧರ್ ಅವರನ್ನು ದಸ್ತಗಿರಿ ಮಾಡಿರುವುದಿಲ್ಲ. ಅವರ ಹೇಳಿಕೆಯನ್ನು ಮಾತ್ರ ದಾಖಲಿಸಿದ್ದರು. ಈ ಮಧ್ಯೆ, 08.05.2017 ರಂದು ಆರೋಪಿ ಕೆ.ವಿ. ಶ್ರೀಧರ್, ಡಿ.ಐ.ಜಿ, ಫಾರೆಸ್ಟ್ ಸೆಲ್ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.

03.07.2021 ರಂದು ಈ ಪ್ರಕರಣದಲ್ಲಿ ಆರೋಪಿಯಾದ ಕೆ.ವಿ. ಶ್ರೀಧರ್ ಅವರನ್ನು ವಿಚಾರಣೆಗೊಳಪಡಿಸಲು ಪ್ಯಾಸಿಕ್ಯೂಷನ್ ಅನುಮತಿ ನೀಡುವಂತೆ ಸರ್ಕಾರಕ್ಕೆ ಕೋರಲಾಗಿತ್ತು. ಅದರಂತೆ 16.06.2022 ರಂದು ಸರ್ಕಾರವು ವಿಚಾರಣೆಗೆ ಅನುಮತಿ ನೀಡಿತ್ತು. ದಿನಾಂಕ 18.04.2022 ರಿಂದ ಟಿ. ಮಲ್ಲೇಶ್, ಡಿವೈ. ಎಸ್.ಪಿ. ಅವರು ತನಿಖೆ ಕೈಗೊಂಡಿದ್ದು, ಮುಂದೆ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕಾಗಿರುತ್ತದೆ.

ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮದ ಬಗ್ಗೆ ಮಾಹಿತಿ:

13.06.2018 ರಂದು ಎಂ.ಹೆಚ್. ಮಂಜುನಾಥ್ ಚೌಧರಿ, ಎಸಿಪಿ ಸಿಸಿಬಿ ಅವರು ನೀಡಿದ ದೂರಿನ ಮೇರೆಗೆ ಕಾಟನ್‌ ಪೇಟೆ ಪೊಲೀಸ್ ಠಾಣೆ ಮೊ.ಸಂ. 166/2018, ಕಲಂ 120(ಬಿ), 419, 420, 465, 468, 471 ಸಹಿತ 34, 35 ಮತ್ತು 37 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

5 ಮಂದಿ ಆರೋಪಿಗಳಾದ ಎ1-ಲೋಕೇಶ್ (ಎಪಿಸಿ 3075, ಸಿಎಆರ್, ಕೇಂದ್ರಸ್ಥಾನ) ಎ2- ಬಿ.ಕೆ. ಲಕ್ಷ್ಮೀಕಾಂತ್ (ಎಪಿಸಿ, ಸಿಎಆರ್, ದಕ್ಷಿಣ, ಎ-3-ಕೆ.ಪಿ.ರಾಜೇಶ್ (ಶಾಖಾಧೀಕ್ಷಕರು, 12ನೇ ಕೆಎಸ್‌ಆರ್‌ಪಿ), ಎ4-ಹೆಚ್ ನಾಗರಾಜ್ (ನಿವೃತ್ತ ಶೀಘ್ರ ಲಿಪಿಗಾರರು) ಮತ್ತು ಎ5-ಶಬಾನಾ ಬೇಗಂ, ಮಹಿಳಾ ಹೆಡ್​ ಕಾನ್ಸ್​ಟೇಬಲ್​ ಅವರುಗಳು ಸಮಾನ ಉದ್ದೇಶದಿಂದ ಅಕ್ರಮದ ಹಾದಿಯಲ್ಲಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ 2013 ರಿಂದ 2017 ರವರೆಗೆ ನಡೆದ ಡಿವೈಎಸ್‌ಪಿ, ಎಫ್‌ಡಿಎ, ಎಸ್‌ಡಿಎ ಹುದ್ದೆಗಳನ್ನು ಕೊಡಿಸುವುದಾಗಿ ಸಾರ್ವಜನಿಕರನ್ನು ನಂಬಿಸಿ ಅವರಿಂದ 18 ಕೋಟಿ ಹಣವನ್ನು ಪಡೆದು ಮೋಸ ಮಾಡಿರುವುದಾಗಿ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿ, ಡಿಸಿಪಿ ಜೀನೇಂದ್ರ ಕಣಗಾವಿ ಅವರು ತನಿಖೆಯನ್ನು ಮುಗಿಸಿ ಪ್ರಥಮ ಆರೋಪ ಪಟ್ಟಿಯನ್ನು 18.08.2018 ರಂದು 1 ACMM ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಸಿಸಿ 23582/18 ರಲ್ಲಿ ವಿಚಾರಣೆಯಲ್ಲಿದೆ.

ಅದಾದ ಮೇಲೆ 10.08.2018 ರಂದು ಪೊಲೀಸ್‌ ಪ್ರಧಾನ ಕಛೇರಿಯ ಸಿಆರ್ ಎಂ-1/76/ಬಿಸಿ/2018 ರ ಆದೇಶದಂತೆ ತನಿಖೆ ಮುಂದುವರೆಸುವಂತೆ ಸಿಐಡಿಗೆ ವರ್ಗಾಯಿಸಲಾಯಿತು.

30.06.21 ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಸಿಐಡಿ ತನಿಖಾಧಿಕಾರಿಯಾದ ಸಿ.ಎಸ್.ಸೈಮನ್, ಎಸ್‌ಪಿ ಅವರು ಪ್ರಕರಣ ತನಿಖೆ ಕೈಗೊಂಡು ಆರೋಪಿಗಳು ನೊಂದ ಅಭ್ಯರ್ಥಿಗಳು ನೀಡಿದ ಚೆಕ್‌ಗಳ ಮೇಲಿನ ಸಹಿಗಳನ್ನು ಎಫ್‌ಎಸ್‌ಎಲ್ ರವರಿಂದ ಧೃಡೀಕರಿಸಿರುತ್ತಾರೆ. ಆರೋಪಿಗಳ ಧ್ವನಿಯನ್ನು ಎಫ್‌ಎಸ್‌ಎಲ್ ರವರಿಂದ ದೃಡಪಟ್ಟಿದ್ದು, ಆರೋಪಿ 1 ರಿಂದ 5 ರವರು ಸಾರ್ವಜನಿಕರಿಂದ 10 ಕೋಟಿ 66 ಲಕ್ಷದ 40 ಸಾವಿರ ರೂಗಳನ್ನು ವಂಚಿಸಿರುವ ಬಗ್ಗೆ 01.02.21 ರಂದು ಸಿಆರ್‌ಪಿಸಿ ಕಲಂ 173(8) ರೀತ್ಯಾ ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ. ಪ್ರಕರಣವು ವಿಚಾರಣಾ ಹಂತದಲ್ಲಿದೆ.

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ