ಬೆಣ್ಣೆನಗರಿಯಲ್ಲಿ ಭರ್ಜರಿ ಬೇಟೆ: ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ 47 ಲಕ್ಷ ನಗದು ಜಪ್ತಿ
ಕಾರಿನಲ್ಲಿ 1 ಕೋಟಿ 47 ಲಕ್ಷ ನಗದನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಘಟನೆ ನಗರದ ಅರಳಿಮರ ಸರ್ಕಲ್ ಬಳಿ ವರದಿಯಾಗಿದೆ. ದಾಖಲೆ ಇಲ್ಲದ ಹಣವನ್ನು ಸಂಚಾರಿ ಪೊಲೀಸರು ಜಪ್ತಿ ಮಾಡಿದ್ದಾರೆ.
ದಾವಣಗೆರೆ: ಕಾರಿನಲ್ಲಿ 1 ಕೋಟಿ 47 ಲಕ್ಷ ನಗದನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಘಟನೆ ನಗರದ ಅರಳಿಮರ ಸರ್ಕಲ್ ಬಳಿ ವರದಿಯಾಗಿದೆ. ದಾಖಲೆ ಇಲ್ಲದ ಹಣವನ್ನು ಸಂಚಾರಿ ಪೊಲೀಸರು ಜಪ್ತಿ ಮಾಡಿದ್ದಾರೆ.
KA 39P 8055 ನೋಂದಣಿ ಸಂಖ್ಯೆಯ ಸ್ವಿಫ್ಟ್ ಕಾರಿನಲ್ಲಿ ನಗದನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಕಾರಿನಲ್ಲಿ ಹಣವನ್ನು ಕಲಬುರಗಿಯಿಂದ ದಾವಣಗೆರೆ ಕಡೆ ಸಾಗಿಸಲಾಗ್ತಿತ್ತು.
ಈ ವೇಳೆ, ವಾಹನವನ್ನು ಅಡ್ಡಗಟ್ಟಿದ ಪೊಲೀಸರು, ಹಣದ ಬಗ್ಗೆ ದಾಖಲೆ ಕೇಳಿದಾಗ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕಲಬುರಗಿ ಮೂಲದ ಮೂವರನ್ನ ವಶಕ್ಕೆ ಪಡೆದಿದ್ದಾರೆ. ಮಹೇಶ್, ಬೀರಲಿಂಗ ಹಾಗೂ ಶ್ರೀಕಾಂತ್ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ನಗರ DySP ನಾಗೇಶ್ ಐತಾಳ್ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.
ಇಬ್ಬರು ನ್ಯಾಯಮೂರ್ತಿಗಳನ್ನು ಕೊಲ್ಲುವುದಾಗಿ.. ಪತ್ರ ಬರೆದ ವೃದ್ಧನಿಗೆ ಹೈಕೋರ್ಟ್ ನೋಟಿಸ್