ಕೊಪ್ಪಳ: ಕೊರೊನಾ ಲಾಕ್ಡೌನ್ ಸಂದರ್ಭ ಹೊರಗಡೆ ಸುಖಾಸುಮ್ಮನೆ ಜನರು ತಿರುಗಾಡಲು ಅನುವು ನೀಡಿಲ್ಲ. ವಿವಿಧ ಜಿಲ್ಲೆಗಳಲ್ಲಿ ಹಲವಾರು ಜನರ ವಾಹನ ಜಪ್ತಿ ಮಾಡಿದ್ದಾರೆ. ಕಾರಣವಿಲ್ಲದೆ ಹೊರಗೆ ತಿರುಗಾಟ ನಡೆಸುವವರಿಗೆ ದಂಡ ವಿಧಿಸಿದ್ದಾರೆ. ಲಾಕ್ಡೌನ್ ಬಿಸಿ ಎಲ್ಲರಿಗೂ ತಟ್ಟಿದೆ. ಇದೀಗ ಅಂತಹುದೇ ಒಂದು ಪ್ರಕರಣ ಕೊಪ್ಪಳದಲ್ಲಿ ನಡೆದಿದೆ. ಮಾವನ ಮನೆಗೆ ಅಳಿಯತನಕ್ಕೆ ಹೋಗುವವರಿಗೂ ಲಾಕ್ಡೌನ್ ಪರಿಣಾಮ ತಟ್ಟಿದೆ.
ಕ್ರಿಮಿನಲ್ ಐಡಿಯಾ ಬಳಸಿ ಮಾವನ ಮನೆಯತ್ತ ಹೊರಟಿದ್ದ ನವವಿವಾಹಿತರನ್ನು ಪೊಲೀಸರು ತಡೆದಿದ್ದಾರೆ. ಮೇ 14 ರಂದು ಮದುವೆಯಾಗಿರುವ ಎರಡು ಜೋಡಿಗಳು ಮಾವನ ಮನೆಗೆ ಅಳಿಯತನಕ್ಕೆ ಹೊರಟಿದ್ದರು. ಕೊಪ್ಪಳ ತಾಲೂಕಿನ ಹನಕುಂಟಿಯ ಬಸವರಾಜ ಹಾಗು ಮಾರುತಿ ವಿವಾಹವಾಗಿದ್ದು, ಮಸ್ಕಿ ತಾಲೂಕಿನ ಬಸಾಪುರದ ಮಾವನ ಮನೆಗೆ ತೆರಳುತ್ತಿದ್ದರು. ಆದರೆ ಇವರು ಮಾವನ ಮನೆಗೆ ತೆರಳಲು ಕ್ರಿಮಿನಲ್ ಉಪಾಯ ಬಳಸಿದ್ದರು.
ಕೂಡ್ಲಿಗಿ ತಾಲೂಕಿನ ಕೃಷಿ ಇಲಾಖೆಗೆ ಬಾಡಿಗೆ ನೀಡಿರುವ ಕಾರಿನಲ್ಲಿ ನವ ಜೋಡಿಗಳು ಹೊರಟಿದ್ದರು. ಸರಕಾರಿ ವಾಹನದಲ್ಲಿ ಪ್ರಯಾಣಿಸಿದರೆ ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಎಂಬ ಉಪಾಯ ಮಾಡಿಕೊಂಡಿದ್ದರು. ಕಾರಿನಲ್ಲಿ ನವದಂಪತಿಗಳು ಸೇರಿ ಒಟ್ಟು 7 ಜನ ಪ್ರಯಾಣ ಮಾಡುತ್ತಿದ್ದರು. ಈ ವೇಳೆ, ಗಡಿಯಾರ ಕಂಬದ ಬಳಿ ಅನುಮಾನ ಬಂದು ಪೋಲಿಸರು ವಿಚಾರಣೆ ನಡೆಸಿದ್ದಾರೆ. ನವದಂಪತಿಗಳನ್ನು ಗಡಿಯಾರ ಕಂಬದ ಬಳಿ ಇಳಿಸಿ ಕೊಪ್ಪಳ ಪೊಲೀಸರು ಕಾರ್ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗ್ಗೆ 10 ಗಂಟೆ ನಂತರ ರಸ್ತೆಗಿಳಿದರೆ ವಾಹನ ಜಪ್ತಿ, ದೂರು ದಾಖಲು; ಬೆಂಗಳೂರಿನಲ್ಲಿ ಇಂದಿನಿಂದಲೇ ನಿಯಮ ಜಾರಿ
ಇನ್ಮುಂದೆ ಖಾಕಿ ಲಾಠಿ ಪ್ರಯೋಗಕ್ಕೆ ಬ್ರೇಕ್.. ಅನಗತ್ಯವಾಗಿ ಹೊರಬಂದ್ರೆ ಸೀಜ್ ಆಗ್ತಾವೆ ವಾಹನಗಳು
Published On - 4:26 pm, Wed, 19 May 21