ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಟೆಲಿ ಮೆಡಿಸಿನ್ ಸೇವೆ; ಮೈಸೂರು ಜಿಲ್ಲಾಡಳಿತದಿಂದ ವಿನೂತನ ಪ್ರಯೋಗ

ಯಾರಿಗೆಲ್ಲ ಕೌನ್ಸಲಿಂಗ್ ಅವಶ್ಯಕತೆ ಇದೆ ಅವರಿಗೆ ಕೌನ್ಸಲಿಂಗ್ ಕೂಡ ವೈದ್ಯರಿಂದ ಮಾಡಿಸಲಾಗುತ್ತಿದೆ. ಇದಕ್ಕೆ‌ಈಗಾಗಲೆ‌ 40 ಜನ ವೈದ್ಯರು, 25 ಜನ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಟೆಲಿ ಮೆಡಿಸಿನ್ ಸೇವೆ; ಮೈಸೂರು ಜಿಲ್ಲಾಡಳಿತದಿಂದ ವಿನೂತನ ಪ್ರಯೋಗ
ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಟೆಲಿ ಮೆಡಿಸಿನ್ ಸೇವೆ
Follow us
preethi shettigar
|

Updated on: May 19, 2021 | 3:35 PM

ಮೈಸೂರು: ಕೊರೊನಾ‌ ಎರಡನೇ ಅಲೆ ದೇಶದೆಲ್ಲೇಡೆ ಹಬ್ಬಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಕಾರ್ಯತಂತ್ರದ ಮೂಲಕ ಕೊರೊನಾ ಹತೋಟಿಗೆ ತರಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯ ಎಚ್ಛೇತ್ತುಕೊಂಡ ಜಿಲ್ಲಾಡಳಿತ ಜಿಲ್ಲೆಯಲ್ಲಿ ನೂತನ ಪ್ರಯೋಗಕ್ಕೆ ಮುಂದಾಗಿದೆ. ಅದರಂತೆ ಕೊರೊನಾ ತಡೆಗೆ ಮೈಸೂರು ಜಿಲ್ಲಾಡಳಿತ ತಮ್ಮದೇ ಆದ ಹೊಸ ಯೋಜನೆ ಜಾರಿಗೆ ತಂದಿದೆ.

ಒಂದಷ್ಟು ಜನ ಕೊರೊನಾ ಹೆಸರಿಗೆ ಹೆದರಿಯೇ ಆಸ್ಪತ್ರೆ ದಾಖಲಾಗುತ್ತಿದ್ದಾರೆ.‌ ಹೀಗಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ನೀಗಿಸಲು ಮೈಸೂರು‌‌ ಮಹಾನಗರ ಪಾಲಿಕೆ ರೋಟರಿ ಸಂಸ್ಥೆ ಸಹಯೋಗದಲ್ಲಿ ಟೆಲಿ ಮೆಡಿಸಿನ್ ಸೇವೆ ಪ್ರಾರಂಭಿಸಿದೆ. ಇದಕ್ಕಾಗಿ ಸುಮಾರು 40 ಜನ ವೈದ್ಯರು ಸ್ವಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ. ಯಾರಿಗೆ ಕೊರೊನಾ ಬಗ್ಗೆ ಅನುಮಾನಗಳಿದೆ, ಅಂತವರು ಮೊದಲು ಟೆಲಿಕೇರ್​ಗೆ ಕರೆ‌ ಮಾಡಿದರೆ ಅಲ್ಲಿಂದ ಅವರಿಗೆ ಬೇಕಾದ ಸಹಾಯ ಮಾಡಲಾಗುತ್ತದೆ. ಸದ್ಯ ಪಾಲಿಕೆ ಕಾರ್ಯಕ್ಕೆ‌ ರೋಟರಿ ವಿವಿಧ ಸಂಸ್ಥೆ ಕೈಜೋಡಿಸಿದ್ದು, ಯುಕೆಯಲ್ಲಿರುವ ಮೈಸೂರಿನ ವೈದ್ಯರು ಅಲ್ಲಿಂದಲೇ ಧೈರ್ಯ ತುಂಬುತ್ತಿದ್ದಾರೆ.

ಯಾರಿಗೆ ವೈದ್ಯರ ಅವಶ್ಯಕತೆ ಇದೆ ಅಂತವರಿಗೆ, ನುರಿತ ವೈದ್ಯರಿಂದ ಟೆಲಿಕೇರ್ ಮೂಲಕ ಕರೆ‌‌ ಮಾಡಿಸಲಾಗುತ್ತದೆ. ಈ ವೇಳೆ ಅವರಿಗೆ ಆಸ್ಪತ್ರೆಯ ಅವಶ್ಯಕತೆ ಇದೆಯೇ ಅಥವಾ ಮನೆಯಲ್ಲೇ ಹೋಂ ಐಸೋಲೆಷನ್ ಮಾಡಬೇಕಾ ಎಂದು ತಿಳಿಸಲಾಗುತ್ತದೆ. ನಂತರ ಯಾರಿಗೆ ಔಷಧಿ ಅವಶ್ಯಕತೆ ಇರುತ್ತದೆ ಅಂತವರ ಮನೆಗೆ ಮೆಡಿಸನ್ ಕಿಟ್​ಗಳನ್ನ ವಾಲೆಂಟರಿಯಾಗಳ‌ ಮೂಲಕ ಕಳುಹಿಸಾಲಗುತ್ತದೆ. ಕಿಟ್​ನಲ್ಲಿ ಅಕ್ಸಿಮೀಟರ್ ಒಳಗೊಂಡಂತೆ ಕೊವಿಡ್​ಗೆ ಬೇಕಾದ ಎಲ್ಲಾ ಔಷಧಿಗಳನ್ನ ನೀಡಲಾಗುತ್ತದೆ ಎಂದು ರೋಟರಿ ಸಂಸ್ಥೆಯ ಚೇತನ್ ಮಾಹಿತಿ ನೀಡಿದ್ದಾರೆ.

ಯಾರಿಗೆಲ್ಲ ಕೌನ್ಸಲಿಂಗ್ ಅವಶ್ಯಕತೆ ಇದೆ ಅವರಿಗೆ ಕೌನ್ಸಲಿಂಗ್ ಕೂಡ ವೈದ್ಯರಿಂದ ಮಾಡಿಸಲಾಗುತ್ತಿದೆ. ಇದಕ್ಕೆ‌ಈಗಾಗಲೆ‌ 40 ಜನ ವೈದ್ಯರು, 25 ಜನ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಇದರ ಜತೆ ಯುಕೆಯಲ್ಲಿರುವ ಮೈಸೂರಿನ ವೈದ್ಯರು ಟೆಲಿ ಮೆಡಿಸಿನ್ ಸೇವೆಗೆ ಸಹಾಯಮಾಡುವುದಾಗಿ ಮುಂದೆ ಬಂದಿದ್ದಾರೆ. ಈಗಾಗಲೇ ಸುಮಾರು 40 ಜನ ವೈದ್ಯರ ಹೆಸರನ್ನು ನೊಂದಾಯಿಸಿಕೊಂಡಿದ್ದು, ಇನ್ನು ಒಂದಷ್ಟು ಜನ ವೈದ್ಯರು ಸೇವೆಗೆ ಮುಂದಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಒಟ್ಟಾರೆ, ಕೊರೊನಾದಿಂದ ಅಂಜಿರುವ ಜನರಿಗೆ ವೈದ್ಯರೆ ಕರೆ‌ಮಾಡಿ ಅವರ ಸಮಸ್ಯೆ ನಿವಾರಣೆ ಮಾಡುವ ಕೆಲಸ ನಿಜಕ್ಕೂ ಮೆಚ್ಚಲೆ ಬೇಕು. ಇನ್ನು ಇದರ ನಡುವೆ ಸಂಕಷ್ಟದ ಸಂದರ್ಭದಲ್ಲಿ‌ ಸೇವೆಗೆ ಮುಂದಾಗಿರುವ ವೈದ್ಯರ ಕಾರ್ಯ ಶ್ಲಾಘನೀಯ.

ಇದನ್ನೂ ಓದಿ:

ಕೊವಿಡ್ ಮಿತ್ರ ಮಾದರಿಗೆ ಪ್ರಧಾನಿ ಮೆಚ್ಚುಗೆ; ಕೇಂದ್ರಕ್ಕೆ ಈ ಪರಿಕಲ್ಪನೆ ಕಳುಹಿಸುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಮನವಿ

ಚಾಮರಾಜನಗರ ಸಾವು ಪ್ರಕರಣದಲ್ಲಿ ಮೈಸೂರು ಜಿಲ್ಲಾಡಳಿತದ ಸ್ಪಷ್ಟನೆ ಸುಳ್ಳು; ಸಾ.ರಾ.ಮಹೇಶ್ ಆರೋಪ