ಕಳೆದ 15 ದಿನಗಳ ಅಂತರದಲ್ಲಿ 20 ಜನ ಬಲಿ; ಸಾವಿಗೆ ಕಾರಣ ತಿಳಿಯದೆ ಬೀದರ್ ಜನ ಕಂಗಾಲು
15 ವರ್ಷಗಳ ಹಿಂದೆಯೂ ಇದೇ ರೀತಿ ಗ್ರಾಮದಲ್ಲಿ ಸರಣಿ ಸಾವು ಸಂಭವಿಸಿದ್ದವು. ವೈದ್ಯರು, ವಿಜ್ಞಾನಿಗಳು ಆಗಮಿಸಿ ಗ್ರಾಮದಲ್ಲಿ ನೀರು ತಪಾಸಣೆ ಮಾಡಿ, ಗ್ರಾಮದಲ್ಲಿ ಸೋಡಿಯಂ ಮಿಶ್ರಿತ ನೀರು ಕುಡಿದು ಜನ ಸಾಯುತ್ತಿದ್ದಾರೆ ಎಂದು ವರದಿ ನೀಡಿದ್ದರು. ಆದರೆ, ಈಗ ಗ್ರಾಮದಲ್ಲಿ ಸಾವೀಗೀಡಾಗುತ್ತಿರುವುದು ಯಾಕೆ ಎನ್ನುವ ನಿಖರವಾದ ಮಾಹಿತಿ ಸಿಗುತ್ತಿಲ್ಲ.
ಬೀದರ್: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ದೇಶದೆಲ್ಲೇಡೆ ಸಾವು-ನೋವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೀಗಿರುವಾಗಲೇ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ ಸುಮಾರು 20 ಜನ ಮೃತಪಟ್ಟಿದ್ದಾರೆ. ಸತ್ತವರಲ್ಲಿ ಹೆಚ್ಚಿನ ಜನ ವಯೋವೃದ್ಧರಾಗಿದ್ದಾರೆ. ಕೆಲವು ಯುವಕರು ಕೂಡ ಮೃತಪಟ್ಟಿದ್ದು, ಗ್ರಾಮಸ್ಥರಿಗೆ ನುಂಗಲಾರದ ತುತ್ತಾಗಿದೆ. ಮೃತರು ಕೊವಿಡ್ನಿಂದ ಸಾವನ್ನಪ್ಪಿದ್ದರೋ ಅಥವಾ ಸಹಜ ಸಾವೋ ಎಂಬುದು ಗ್ರಾಮಸ್ಥರಿಗೆ ತಿಳಿದಿಲ್ಲ. ಮೃತರ ಅಂತ್ಯಸಂಸ್ಕಾರದಲ್ಲಿ ಬಹುತೇಕ ಗ್ರಾಮಸ್ಥರು ಭಾಗಿಯಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಈಗ ಆತಂಕ ಸೃಷ್ಟಿಯಾಗಿದೆ.
15 ವರ್ಷಗಳ ಹಿಂದೆಯೂ ಇದೇ ರೀತಿ ಗ್ರಾಮದಲ್ಲಿ ಸರಣಿ ಸಾವು ಸಂಭವಿಸಿದ್ದವು. ವೈದ್ಯರು, ವಿಜ್ಞಾನಿಗಳು ಆಗಮಿಸಿ ಗ್ರಾಮದಲ್ಲಿ ನೀರು ತಪಾಸಣೆ ಮಾಡಿ, ಗ್ರಾಮದಲ್ಲಿ ಸೋಡಿಯಂ ಮಿಶ್ರಿತ ನೀರು ಕುಡಿದು ಜನ ಸಾಯುತ್ತಿದ್ದಾರೆ ಎಂದು ವರದಿ ನೀಡಿದ್ದರು. ಆದರೆ, ಈಗ ಗ್ರಾಮದಲ್ಲಿ ಸಾವೀಗೀಡಾಗುತ್ತಿರುವುದು ಯಾಕೆ ಎನ್ನುವ ನಿಖರವಾದ ಮಾಹಿತಿ ಸಿಗುತ್ತಿಲ್ಲ. ಇಲ್ಲಿನ ಗ್ರಾಮಸ್ಥರು ಹೇಳುವ ಪ್ರಕಾರ ಕೆಮ್ಮು, ನೆಗಡಿ ಮತ್ತು ಜ್ವರ ಬಂದು ಜನ ಸಾಯುತ್ತಿದ್ದಾರೆ. ಆದರೆ ಇದಕ್ಕೆ ನಿಖರವಾದ ಕಾರಣ ಮಾತ್ರ ಯಾರಿಗೂ ಗೊತ್ತಿಲ್ಲ.
ಗ್ರಾಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರೆ ಇದ್ದಾರೆ. ಗ್ರಾಮದಲ್ಲಿ ಸ್ವಚ್ಚತೆ ಕೂಡಾ ಇದೆ. ಹೀಗಿರುವಾಗಲೇ ಕೊವಿಡ್ ಸೋಂಕಿನಿಂದ ಮೂರು ಜನ ಈಗಾಗಲೇ ಮೃತಪಟ್ಟಿದ್ದಾರೆ. ಇದಾದ ನಂತರ ಪ್ರತಿದಿನವೂ ಇಬ್ಬರು ಅಥವಾ ಮೂವರು ಮೃತಪಡುತ್ತಿದ್ದಾರೆ. ಅದರಲ್ಲೂ ಮೃತಪಟ್ಟವರ ಪೈಕಿ ಹೆಚ್ಚಿನ ಸಂಖ್ಯೆಯವರು 60 ವರ್ಷ ಮೇಲ್ಪಟ್ಟವರೆ ಇದ್ದಾರೆ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸದ್ಯ ಭಾಲ್ಕಿ ತಾಲೂಕಿನ ತಹಶಿಲ್ದಾರ್ ಹಾಗೂ ಆರೋಗ್ಯಾಧಿಕಾರಿ ತಂಡ, ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆ ಗ್ರಾಮಸ್ಥರು ಕೊರೊನಾ ಸೋಂಕಿನಿಂದಾಗಿ ಸಾಯುತ್ತಿದ್ದಾರೋ ಅಥವಾ 15 ವರ್ಷದ ಹಿಂದಿನಂತೆ ಮತ್ತೆ ಗ್ರಾಮಕ್ಕೆ ಏನಾದರೂ ಸಮಸ್ಯೆ ಎದುರಾಗಿದೆಯೋ ಎನ್ನುವ ಬಗ್ಗೆ ಇನ್ನು ಮಾಹಿತಿ ಹೊರ ಬಂದಿಲ್ಲ. ಹಿಗಾಗಿ ಅಧಿಕಾರಿಗಳು ಆದಷ್ಟು ಬೇಗ ಈ ಬಗ್ಗೆ ಗಮನಹರಿಸುವುದು ಸೂಕ್ತ.
ಇದನ್ನೂ ಓದಿ:
ಕೊರೊನಾ ಸೋಂಕು ಗ್ರಾಮಗಳಲ್ಲಿ ಹರಡದಂತೆ ಎಚ್ಚರಿಕೆ; ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ ದಾವಣಗೆರೆ ಜಿಲ್ಲಾಡಳಿತ