ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ

| Updated By: ಆಯೇಷಾ ಬಾನು

Updated on: Feb 13, 2024 | 3:14 PM

ನೂತನ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ NOC ನೀಡಲು ಖಾಜಾವಲಿ ಅವರು ದೊಡ್ಡಗಂಜೂರು ಶ್ರೀನಾಥ್ ಎಂಬುವವರಿಂದ 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ. ಶ್ರೀನಾಥ್ ಅವರು ಲಂಚ ನೀಡುವಾಗ ಲೋಕಾಯುಕ್ತ ದಾಳಿ ನಡೆದಿದೆ. ಈ ಪ್ರಕರಣದಲ್ಲಿ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿ ಸಿದ್ದಪ್ಪ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ
Follow us on

ಚಿಕ್ಕಬಳ್ಳಾಪುರ, ಫೆ.13: ಚಿಕ್ಕಬಳ್ಳಾಪುರ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿಯೊಬ್ಬರು ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ನೂತನ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ NOC ನೀಡಲು ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದ ಖಾಜಾವಲಿ ಅವರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಚಿಂತಾಮಣಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

ನೂತನ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ NOC ನೀಡಲು ಖಾಜಾವಲಿ ಅವರು ದೊಡ್ಡಗಂಜೂರು ಶ್ರೀನಾಥ್ ಎಂಬುವವರಿಂದ 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡದ ಕಾರಣ ಶ್ರೀನಾಥ್ ರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಹಿಯಾಳಿಸಿದ್ದರು. ಕೊನೆಗೆ ಶ್ರೀನಾಥ್ ಅವರು ಲಂಚ ನೀಡಲು ಒಪ್ಪಿಕೊಂಡಿದ್ದು ಶ್ರೀನಾಥ್ ಅವರು ಲಂಚ ನೀಡುವಾಗ ಲೋಕಾಯುಕ್ತ ದಾಳಿ ನಡೆದಿದೆ. ಇನ್ನು ಈ ಪ್ರಕರಣದಲ್ಲಿ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿ ಸಿದ್ದಪ್ಪ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಲಂಚ ಪಡೆಯದೇ ಗುತ್ತಿಗೆದಾರರ ಬಾಕಿ ಬಿಲ್​ 600 ಕೋಟಿ ರೂ. ಬಿಡುಗಡೆ: ಕೆಂಪಣ್ಣ

ಯುವತಿಯನ್ನು ಚಪ್ಪಲಿಯಿಂದ ಹೊಡೆದ ಯುವಕ, ಕಾರಣವೇನು?

ಅನ್ಯಕೋಮಿನ ಯುವತಿಗೆ ಯುವಕನೊಬ್ಬ ಚಪ್ಪಲಿಯಿಂದ ಥಳಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗ ಬಂದಿದೆ. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಈ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ. ಗ್ರಾಮದ ಯುವಕ ಶ್ರೀಶೈಲ ಮಸಳಿ ಅನ್ಯ ಕೋಮಿನ ಯುವತಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದವ. ಅನ್ಯ ಕೋಮಿನ ಯುವತಿ ನಾಗಠಾಣ ಗ್ರಾಮದ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡುವ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಕಳೆದ ಕೆಲ ದಿನಗಳಿಂದ ಅನ್ಯ ಕೋಮಿನ ಯುವತಿಗೆ ಶ್ರೀಶೈಲ ಮಸಳಿ ಚುಡಾಯಿಸುತ್ತಿದ್ದನಂತೆ.

ನಿನ್ನೆಯೂ ಯುವತಿಗೆ ಶ್ರೀಶೈಲ ಚುಡಾಡಿಸಿದ್ದಾನೆ. ಆಗ ಯುವತಿ ಶ್ರೀಶೈಲನಿಗೆ ಚಪ್ಪಲಿ ತೋರಿಸಿದ್ದಾಳೆ. ಇದರಿಂದ ಕೆರಳಿದ ಶ್ರೀಶೈಲ ಮಸಳಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿದ್ದ ಯುವತಿಯನ್ನು ಹೊರಗೆಳೆದು ಚಪ್ಪಲಿಯಿಂದ ಥಳಿಸಿದ್ಧಾನೆ. ಚಪ್ಪಲಿಯಿಂದ ಹಲ್ಲೆ ಮಾಡುವ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಯುವತಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರು ನೀಡುತ್ತಿದ್ದಂತೆ ಯುವಕ ಗ್ರಾಮದಿಂದ ಪರಾರಿಯಾಗಿದ್ದಾನೆ. ನಮಗೆ ನ್ಯಾಯಬೇಕೆಂದು ಯುವತಿ ಹಾಗೂ ಪೋಷಕರು ಪಟ್ಟು ಹಿಡಿದಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:08 pm, Tue, 13 February 24