ಪ್ರಜ್ವಲ್ ರೇವಣ್ಣ ಬಂಧನ
ಬೆಂಗಳೂರು, ಮೇ 31: ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಕೊನೆಗೂ ಬೆಂಗಳೂರಿಗೆ ಬಂದಿದ್ದು ಎಸ್ಐಟಿ (SIT) ಅವರನ್ನು ವಶಕ್ಕೆ ಪಡೆದಿದೆ. ಹಾಗಿದ್ರೆ ಜರ್ಮನಿಯ ಮ್ಯೂನಿಕ್ನಿಂದ ಪ್ರಜ್ವಲ್ ಪ್ರಯಾಣ ಹೇಗಿತ್ತು? ಪ್ರಜ್ವಲ್ ಬರುವ ವಿಚಾರ ಗೊತ್ತಾಗಿ ಇಲ್ಲಿ ಮಾಡಿಕೊಂಡಂಥ ಸಿದ್ಧತೆಗಳು ಹೇಗಿದ್ದವು? ಎಸ್ಐಟಿ ಅಧಿಕಾರಿಗಳ (SIT Officials)ಮುಂದಿನ ತನಿಖೆ ದಿಕ್ಕು ಹೇಗೆ ಸಾಗಲಿದೆ ಎಂಬ ವಿವರ ಇಲ್ಲಿದೆ.
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದಿಳಿದು, ಎಸ್ಐಟಿ ಅಧಿಕಾರಿಗಳ ಕೈಗೆ ಸಿಗುವ ವರೆಗೂ, ಬಂಧನಕ್ಕೊಳಗಾಗುವ ವರೆಗೂ ಯಾವುದನ್ನೂ ಪಕ್ಕಾ ಅಂತಾ ಹೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆದರೆ, ಈ ಬಾರಿ ಪ್ರಜ್ವಲ್ಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ಪ್ರಜ್ವಲ್ ತಾವೇ ಹೇಳಿದಂತೆ ಬಂದು ಅರೆಸ್ಟ್ ಆಗಿದ್ದಾರೆ.
- ಮಧ್ಯಾಹ್ನ 12 ಗಂಟೆಗೆ ಪ್ರಜ್ವಲ್ ಬರುವ ಮಾಹಿತಿ ಬೆಂಗಳೂರು ಕಮಿಷನರ್ ಜೊತೆ ಎಸ್ಐಟಿ ಮುಖ್ಯಸ್ಥರು ಸಭೆ ನಡೆಸಿದರು.
- ಪ್ರಜ್ವಲ್ ರೇವಣ್ಣ ಮೊದಲೇ ಟಿಕೆಟ್ ಬುಕ್ ಮಾಡಿದ ಮಾಹಿತಿ ಅನ್ವಯ, ಫ್ಲೈಟ್ ನಿನ್ನೆ ಸಂಜೆ 4 ಗಂಟೆ ಬಳಿಕ ಟೇಕಾಫ್ ಆಗಲಿತ್ತು. ಹೀಗಾಗಿ ಮಧ್ಯಾಹ್ನವೇ ಅಲರ್ಟ್ ಆಗಿದ್ದ ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, 12 ಗಂಟೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಸಭೆ ನಡೆಸಿದ್ರು. ಪ್ರಜ್ವಲ್ ಬರ್ತಿದ್ದಂತೆ ಭದ್ರತೆ, ಅವರನ್ನ ಕರೆತರುವ ವಿಧಾನದ ಕುರಿತು ಚರ್ಚೆ ನಡೆಸಿದರು.
- ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ಲಗೇಜ್ ಚೆಕ್ಇನ್ ಮಾಡಲಾಗಿತ್ತು. ಸಂಜೆ 4 ಗಂಟೆ 5 ನಿಮಿಷಕ್ಕೆ ವಿಮಾನ ಟೇಕಾಫ್ ಆಯಿತು.
- ಪ್ರಜ್ವಲ್ ಫ್ಲೈಟ್ ಏರಿದ್ದಾರೆ ಅನ್ನೋದನ್ನ ಕನ್ಫರ್ಮ್ ಮಾಡಿಕೊಂಡಿದ್ದ ಎಸ್ಐಟಿ ಅಧಿಕಾರಿಗಳ ಒಂದು ತಂಡ ನಿನ್ನೆ ಸಂಜೆ 4.30ಕ್ಕೆ ಕೆಂಪೇಗೌಡ ಏರ್ಪೋರ್ಟ್ಗೆ ಆಗಮಿಸಿತ್ತು. ಅಲ್ದೆ ಪ್ರಜ್ವಲ್ ಬಂಧಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ 10 ಜನರಿಗೆ ಪಾಸ್ ನೀಡುವಂತೆ ಏರ್ಪೊರ್ಟ್ ಭದ್ರತಾ ವಿಭಾಗಕ್ಕೆ ಎಸ್ಐಟಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು.
- ಪ್ರಜ್ವಲ್ ಹೊರಟಿದ್ದು ದೃಢಪಟ್ಟಿತ್ತು. ಎಸ್ಐಟಿ ಬಂಧನಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿತ್ತು. ಇದೇ ವೇಳೆ ದೆಹಲಿಯಿಂದ ನಿನ್ನೆ ವಾಪಸ್ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಡಿಜಿ ಹಾಗೂ ಐಜಿಪಿ ಅಲೋಕ್ ಮೋಹನ್, ಇಂಟಲಿಜೆನ್ಸ್ ಎಡಿಜಿಪಿ ಶರತ್‌ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸಭೆಯಲ್ಲಿ ಭಾಗಿಯಾಗಿದ್ದರು. ಅರ್ಧಗಂಟೆಗಳ ಕಾಲ ಸಭೆ ನಡೆಸಿ, ಪ್ರಜ್ವಲ್ ಪ್ರಕರಣದಲ್ಲಿ ಕಾನೂನು ಹೋರಾಟಗಳ ಬಗ್ಗೆ ಮಾಹಿತಿ ನೀಡಿ ತೆರಳಿದರು.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಕೇಸ್: ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಎಸ್ಐಟಿ
ಹೀಗೆ ಮಧ್ಯರಾತ್ರಿವರೆಗೂ ಕಾದು. ಪ್ರಜ್ವಲ್ ರೇವಣ್ಣ ಬರ್ತಿದ್ದಂತೆ ಅರೆಸ್ಟ್ ಮಾಡಿ ಎಸ್ಐಟಿ ಕಚೇರಿಗೆ ಕರೆದೊಯ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ