ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ: ಕಾಂಗ್ರೆಸ್​ ವಿರುದ್ಧ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಾಗ್ದಾಳಿ

ಹಾಸನ ತಾಲ್ಲೂಕಿನ  ಮೊಸಳೆಹೊಸಳ್ಳಿಯಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೈತ್ರಿ ಅಭ್ಯರ್ಥಿ, ಸಂಸದ ಪ್ರಜ್ವಲ್‌ ರೇವಣ್ಣ, ಪ್ರಜ್ವಲ್‌ ರೇವಣ್ಣ ಏನು ಕೆಲಸ ಮಾಡಿದ್ದಾರೆ ಎಂದು ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಈಗಿನ ಕಾಂಗ್ರೆಸ್​ ಅಭ್ಯರ್ಥಿ ಎಷ್ಟು ಜನರನ್ನು ಬಂದು ಮಾತನಾಡಿಸಿದ್ದಾರೆ. ಅವರದ್ದೇ ಸರ್ಕಾರ ಇದೆಯಲ್ಲಾ ಒಮ್ಮೆಯಾದರೂ ನಿಮ್ಮ ಬಳಿ ಬಂದು ಕಷ್ಟ ಕೇಳಿದ್ದಾರಾ ಎಂದು ಕಿಡಿಕಾಡಿದ್ದಾರೆ.

ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ: ಕಾಂಗ್ರೆಸ್​ ವಿರುದ್ಧ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಾಗ್ದಾಳಿ
ಪ್ರಜ್ವಲ್‌ ರೇವಣ್ಣ
Edited By:

Updated on: Mar 31, 2024 | 2:40 PM

ಹಾಸನ, ಮಾರ್ಚ್​ 31: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂಭತ್ತು ತಿಂಗಳು ಕಳೆದಿದೆ. ಎಲ್ಲಾ ಕಡೆ ಹೋಗಿ ಸಣ್ಣ ಪುಟ್ಟ ಸಭೆ ಮಾಡುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ಏನು ಕೆಲಸ ಮಾಡಿದ್ದಾರೆ ಎಂದು ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಹಿನ್ನಲೆ ಗೊತ್ತಿದ್ದರೆ ಮುನ್ನಲೆ ಬರೆಯಬಹುದು ಎಂದು ಕಾಂಗ್ರೆಸ್ ಹಾಗೂ ಅಭ್ಯರ್ಥಿ ವಿರುದ್ದ ಮೈತ್ರಿ ಅಭ್ಯರ್ಥಿ, ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ವಾಗ್ದಾಳಿ ಮಾಡಿದ್ದಾರೆ. ಹಾಸನ ತಾಲ್ಲೂಕಿನ  ಮೊಸಳೆಹೊಸಳ್ಳಿಯಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಜನರ ಕಣ್ಣುವರೆಸುವುದು ಬಹಳ ಮುಖ್ಯ. ಈಗಿನ ಕಾಂಗ್ರೆಸ್​ ಅಭ್ಯರ್ಥಿ ಎಷ್ಟು ಜನರನ್ನು ಬಂದು ಮಾತನಾಡಿಸಿದ್ದಾರೆ. ಯಾರದ್ದಾದರೂ ಕಣ್ಣೀರು ಒರೆಸಿದ್ದಾರಾ. ಅವರದ್ದೇ ಸರ್ಕಾರ ಇದೆಯಲ್ಲಾ ಒಮ್ಮೆಯಾದರೂ ನಿಮ್ಮ ಬಳಿ ಬಂದು ಕಷ್ಟ ಕೇಳಿದ್ದಾರಾ ಎಂದು ಕಿಡಿಕಾಡಿದ್ದಾರೆ.

ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿಯ ಕೊಡುಗೆ ಏನು?

ದೇವೇಗೌಡರು, ಮೋದಿಯವರ ಆಶೀರ್ವಾದದಿಂದ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದೇನ
ಹಾಸನ ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿಯ ಕೊಡುಗೆ ಏನು? ಅಂತಹವರಿಗೆ ಏಕೆ ಮತ ಹಾಕಬೇಕು. ಕೊರೊನಾ ಸಂದರ್ಭದಲ್ಲಿ ಜನರು ನರಳುತ್ತಿದ್ದಾಗ ಇವರು ಐದು ವರ್ಷ ಎಲ್ಲಿದ್ದರು. ಕೊರೊನಾ ವೇಳೆ ನಾವು ನಮ್ಮ‌ ಕೈಲಾದ ಸಹಾಯ ಮಾಡಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಮೊಸಳೆ ಕಣ್ಣೀರು ಹಾಕಿಕೊಂಡು ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಸಂಕಷ್ಟದಲ್ಲಿ ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿ: ಸಂಪರ್ಕಕ್ಕೇ ಸಿಗದ ಬಿಜೆಪಿ ಶಾಸಕ, ಸಂಸದರು!

ನಾನು ಅಭ್ಯರ್ಥಿಯಲ್ಲ, ದೇವೇಗೌಡರು ಅಭ್ಯರ್ಥಿ ಎಂದು ಮತ ಹಾಕಿ. ರೈತರ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಹೇಮಾವತಿ ನದಿಯ ನೀರನ್ನು ರಾತ್ರೋ ರಾತ್ರಿ ತಮಿಳುನಾಡಿಗೆ ಹರಿಸಿದರು. ಪಕ್ಕದ ರಾಜ್ಯದವರ ಮೇಲೆ ನಿಮಗೆ ಏಕೆ ಇಷ್ಟು ಕಾಳಜಿ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ ಬರುತ್ತೆ. ಬಂಗಾರಪ್ಪ ಅವರನ್ನು ಬಿಟ್ಟರೆ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ ಬಂದಿದೆ. ನುಡಿದಂತೆ ನಡೆದ ಯಾರಾದರೂ ಮುಖ್ಯಮಂತ್ರಿ ಇದ್ದರೆ ಅದು ಕುಮಾರಣ್ಣ. ರೈತರ ಸಾಲಮನ್ನಾ ಮಾಡಿ ನುಡಿದಂತೆ ನಡೆದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡಿಕೆಶಿ ಸಿಎಂ ಆಗಲೆಂದು ಗೋಕರ್ಣದಲ್ಲಿ ಅರ್ಚಕರ ಸಂಕಲ್ಪ, ಅದರಲ್ಲಿ ತಪ್ಪೇನಿಲ್ಲವೆಂದ ಡಿಕೆ ಶಿವಕುಮಾರ್

ಕಾಂಗ್ರೆಸ್ ಪಕ್ಷ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಇನ್ನೊಂದೆ ತಿಂಗಳಲ್ಲಿ ಈ ಸಲದ ಬೇಸಿಗೆ ಜನರನ್ನು ಎಲ್ಲಿಗೆ ಕೊಂಡೊಯ್ಯುತ್ತೋ ಗೊತ್ತಿಲ್ಲ. ಅಂತರ್ಜಲ ಎಲ್ಲಾ ಬತ್ತಿ ಹೋಗಿದೆ. ಗ್ಯಾರೆಂಟಿ ಬಿಟ್ಟರೆ ರೈತರಿಗೆ ಅನುಕೂಲವಾಗುವ ಯಾವ ಕೆಲಸ ಕೊಟ್ಟಿದ್ದಾರೆ. ರೈತರ ಕಂಡರೆ ಏಕೆ ನಿಮಗೆ ಇಷ್ಟೊಂದು ವಿರೋಧ, ಏಕೆ ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಯಾವ ಮುಖ ಇಟ್ಟುಕೊಂಡು ಓಟು ಕೇಳ್ತಾರೆ. ಕೆಲಸ ಮಾಡಿದರೆ ಮತ ಕೇಳಲು ಬರಬೇಕು, ಇಲ್ಲಾ ಮತ ಕೇಳಲು ಬರಬಾರದು. ಐದು ವರ್ಷದಲ್ಲಿ ನಾನು ಸಣ್ಣಪುಟ್ಟ ತಪ್ಪು ಮಾಡಿದ್ದರೆ ಕ್ಷಮಿಸಿ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us