ಬೆಂಗಳೂರು/ಹಾಸನ, (ಆಗಸ್ಟ್ 01): ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅವು ಎಡಿಟ್ ಎಂದು ಹೇಳಲಾಗಿತ್ತು. ಆದ್ರೆ, ಇದೀಗ ಎಫ್ಎಸ್ಎಲ್ ವರದಿ ಬಂದಿದ್ದು, ಆ ವಿಡಿಯೋ ನಕಲಿ ಅಲ್ಲ ಅಸಲಿ ಎಂದು ವರದಿಯಲ್ಲಿ ಬಹಿರಂಗವಾಗಿದೆ. ವಿಡಿಯೋಗಳು ಯಾವುದೇ ಅನಿಮೇಷನ್, ಗ್ರಾಫಿಕ್ಸ್, ಎಡಿಟ್, ಮಾರ್ಫ್ ಮಾಡಿದ್ದಲ್ಲ. ಅವು ಅಸಲಿ ವಿಡಿಯೋಗಳು ಎಂದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದೆ. ಈ ಮೂಲಕ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ, ಆ ವಿಡಿಯೋ ನಕಲಿ, ವಿರೋಧಿಗಳು ಎಡಿಟ್, ಮಾರ್ಫಿಂಗ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಎಸ್ಐಟಿ ವಿಡಿಯೋಗಳ ಅಸಲಿಯತ್ತು ತಿಳಿಯಲು ಎಫ್ಎಸ್ಎಲ್ಗೆ ಕಳುಹಿಸಿತ್ತು. ಇದೀಗ ವಿಡಿಯೋಗಳ ಎಫ್ಎಸ್ಎಲ್ ವರದಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಅಶ್ಲೀಲ ವಿಡಿಯೋ ಅಸಲಿ ಎಂಬುದು ಸಾಬೀತಾಗಿದೆ. ಇನ್ನು ವಿಡಿಯೋದಲ್ಲಿರುವ ವ್ಯಕ್ತಿಗೂ, ಬಂಧಿತ ಆರೋಪಿಯೇ ಎಂಬುದು ಇನ್ನೂ ಸಾಬೀತಾಗಿಲ್ಲ. ಈ ಸಂಬಂಧ ಇನ್ನಷ್ಟೇ ವರದಿ ಬರಬೇಕಿದೆ.
Published On - 11:08 pm, Thu, 1 August 24