ರೈತರ ಕಾರಣ ಹೇಳಿ ನಂದಿನಿ ಹಾಲಿನ ದರ ಹೆಚ್ಚಿಸುತ್ತಿದ್ದಾರೆ, ಅವರಿಗೆ ಕೊಡುವುದು ಅನುಮಾನ: ಪ್ರಲ್ಹಾದ್ ಜೋಶಿ

| Updated By: ಗಣಪತಿ ಶರ್ಮ

Updated on: Sep 14, 2024 | 1:35 PM

ಜನ ಸಾಮಾನ್ಯರಿಗೆ ಮತ್ತೊಂದು ದರ ಏರಿಕೆ ಸಿಡಿಲು ಬಡಿಯುವ ದಿನ ಹತ್ತಿರವಾಗುತ್ತಿದೆ. ಈಗಾಗಲೇ ಬೆಲೆ ಹೆಚ್ಚಳದಿಂದ ಬೆಂಡಾಗಿರುವ ಜನರಿಗೆ ನಂದಿನಿ ಹಾಲಿನ ದರ ಹೆಚ್ಚಳದ ಬರೆ ಎಳೆಯಲು ಸರ್ಕಾರ ಮುಂದಾದಂತೆ ಕಾಣುತ್ತಿದೆ. ಮಾಗಡಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಲಿನ ದರ ಏರಿಕೆ ಸುಳಿವು ನೀಡಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರೈತರ ಕಾರಣ ಹೇಳಿ ನಂದಿನಿ ಹಾಲಿನ ದರ ಹೆಚ್ಚಿಸುತ್ತಿದ್ದಾರೆ, ಅವರಿಗೆ ಕೊಡುವುದು ಅನುಮಾನ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Image Credit source: PTI
Follow us on

ಬೆಂಗಳೂರು, ಸೆಪ್ಟೆಂಬರ್ 14: ಹಾಲಿನ ದರ ಏರಿಕೆ ಸುಳಿವು ಕೊಟ್ಟ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಈಗ ರೈತರ ಕಾರಣ ಹೇಳಿ ದರ ಹೆಚ್ಚಿಸುತ್ತಿದ್ದಾರೆ. ಆದರೆ ಅವರಿಗೆ (ರೈತರಿಗೆ) ಕೊಡುತ್ತಾರೋ ಇಲ್ಲವೋ ಎಂಬುದು ಅನುಮಾನ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಎಂದರೆ ಕಳ್ಳರ ಪಾರ್ಟಿ. ಈ ಹಿಂದೆ ಯಾಕೆ ಹಾಲಿನ ದರವನ್ನು ಹೆಚ್ಚಳ ಮಾಡಿದ್ದರು? ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರೈತರಿಗೆ ಪ್ರೋತ್ಸಾಹಧನ ಕೊಡಲಿಲ್ಲ. ಈಗ ರೈತರ ಕಾರಣ ಹೇಳಿ ಹಾಲಿನ ದರ ಹೆಚ್ಚಳ ಮಾಡುತ್ತಿದ್ದಾರೆ. ರೈತರಿಗೆ ಹಣ ಕೊಡುವುದು ಅನುಮಾನವಿದೆ. ನಾನು ಭವಿಷ್ಯ ಹೇಳುತ್ತೇನೆ, ಇದು ಕೇವಲ ಎರಡು ತಿಂಗಳು ಮಾತ್ರ. ಆಮೇಲೆ ಬಂದ್ ಆಗುತ್ತದೆ ಎಂದರು.

ಈ ಹಿಂದೆ ಸೀಮೆಎಣ್ಣೆ, ಹಾಲಿನ ಡೇರಿ ಬಳಿ ಕ್ಯೂ ನಿಲ್ಲುತ್ತಿದ್ದರು. ಹಾಗೆ ಮುಖ್ಯಮಂತ್ರಿ ರೇಸ್​​​ನಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿಂದ ನಿತ್ಯವೂ ಒಂದು ಹಗರಣ ಬೆಳಕಿಗೆ ಬರುತ್ತಿದೆ. ಆಡಳಿತ ಕುಸಿದು ಬಿದ್ದಿದೆ, ಅದೇ ರೀತಿ ಕೆಎಂಎಫ್​ ಕೂಡ ಆಗುತ್ತಿದೆ ಎಂದು ಜೋಶಿ‌ ವಾಗ್ದಾಳಿ ನಡೆಸಿದರು.

ಇತ್ತೀಚೆಗಷ್ಟೇ ನಂದಿನಿ ಹಾಲಿನ ದರ ಏರಿಕೆ ಮಾಡಲಾಗಿತ್ತು. 50 ಎಂಎಲ್ ಹಾಲು ಹೆಚ್ಚಾಗಿ ಕೊಡುತ್ತಿದ್ದೇವೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿತ್ತು. ಹೆಚ್ಚುವರಿ ಹಾಲಿಗೆ 2 ರೂಪಾಯಿ ಹೆಚ್ಚಿಸಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು. ಈ ಏರಿಕೆಯಿಂದ ಸುಧಾರಿಸಿಕೊಳ್ಳುತ್ತಿದ್ದಾಗಲೇ ಮತ್ತೆ ದರ ಏರಿಕೆ ಸುಳಿವು ನೀಡಿರುವುದು ಗ್ರಾಹಕರನ್ನು ರೊಚ್ಚಿಗೆಬ್ಬಿಸಿದೆ.

ಇದನ್ನೂ ಓದಿ: ನಂದಿನಿ ಹಾಲಿನ ದರ ಹೆಚ್ಚಳ ಮಾಡುತ್ತೇವೆ: ಮಾಗಡಿಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ಕೆಲವು ಗ್ರಾಹಕರು, ರೈತರಿಗೆ ಕೊಟ್ಟರೆ ಅನುಕೂಲ. ಆದರೆ, ಫ್ರೀ ಕೊಡುತ್ತೇವೆ ಅಂತ ಹೇಳಿ ಎಲ್ಲಾ ರೇಟ್ ಹೆಚ್ಚಿಸುವುದು ಸರಿಯಲ್ಲ ಎಂದಿದ್ದಾರೆ.

ಈ ಮಧ್ಯೆ, ಸರ್ಕಾರ ನಡೆಯನ್ನ ರೈತರು ಸ್ವಾಗತಿಸಿದ್ದಾರೆ. ಆದರೆ, ಕಳೆದ ಹಲವು ಬಾರಿ ರೈತರ ಹೆಸರಲ್ಲಿ ದರ ಹೆಚ್ಚಿಸಿ ರೈತರಿಗೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ