AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀರ್ ವಿದೇಶ ಪ್ರವಾಸಕ್ಕೆ ಹೋದ ಮಾಹಿತಿಯನ್ನ ಸರ್ಕಾರಕ್ಕೆ ಕೊಟ್ಟಿಲ್ಲ -ಪ್ರಶಾಂತ್ ಸಂಬರಗಿ

ಬೆಂಗಳೂರು: ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ BS ಯಡಿಯೂರಪ್ಪರನ್ನು ಮಾತನಾಡಿಸಲು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆಗಮಿಸಿದ್ದರು. ಆದರೆ, ಸಿಎಂ ಜೊತೆ ಮಾತುಕತೆ ನಡೆಸಲು ಸಂಬರಗಿಗೆ ಸಮಯ ಸಿಗದ ಹಿನ್ನೆಲೆಯಲ್ಲಿ ವಿಧಾನಸೌಧದ ಕಾರಿಡಾರ್​ನಲ್ಲಿ ಸಿಎಂಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಶಾಂತ್ ಸಂಬರಗಿ ಶಾಸಕ ಜಮೀರ್ ಅಹ್ಮದ್ ಕಾನೂನು ಬಾಹಿರವಾಗಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ. ಜೊತೆಗೆ, ಪ್ರೋಟೋಕಾಲ್ ಪ್ರಕಾರ ಈ ಕುರಿತು ಯಾವುದೇ ದಾಖಲೆ ಸಹ ಕೊಟ್ಟಿಲ್ಲ. ಆ ಬಗ್ಗೆ ಸಿಎಂಗೆ ದೂರು‌ ನೀಡಿದ್ದೇನೆ. […]

ಜಮೀರ್ ವಿದೇಶ ಪ್ರವಾಸಕ್ಕೆ ಹೋದ ಮಾಹಿತಿಯನ್ನ ಸರ್ಕಾರಕ್ಕೆ ಕೊಟ್ಟಿಲ್ಲ -ಪ್ರಶಾಂತ್ ಸಂಬರಗಿ
KUSHAL V
|

Updated on: Sep 22, 2020 | 7:02 PM

Share

ಬೆಂಗಳೂರು: ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ BS ಯಡಿಯೂರಪ್ಪರನ್ನು ಮಾತನಾಡಿಸಲು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆಗಮಿಸಿದ್ದರು. ಆದರೆ, ಸಿಎಂ ಜೊತೆ ಮಾತುಕತೆ ನಡೆಸಲು ಸಂಬರಗಿಗೆ ಸಮಯ ಸಿಗದ ಹಿನ್ನೆಲೆಯಲ್ಲಿ ವಿಧಾನಸೌಧದ ಕಾರಿಡಾರ್​ನಲ್ಲಿ ಸಿಎಂಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಶಾಂತ್ ಸಂಬರಗಿ ಶಾಸಕ ಜಮೀರ್ ಅಹ್ಮದ್ ಕಾನೂನು ಬಾಹಿರವಾಗಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ. ಜೊತೆಗೆ, ಪ್ರೋಟೋಕಾಲ್ ಪ್ರಕಾರ ಈ ಕುರಿತು ಯಾವುದೇ ದಾಖಲೆ ಸಹ ಕೊಟ್ಟಿಲ್ಲ. ಆ ಬಗ್ಗೆ ಸಿಎಂಗೆ ದೂರು‌ ನೀಡಿದ್ದೇನೆ. ಮತ್ತೆ ಸಿಸಿಬಿಗೆ ಹೋಗ್ತೀನಿ ಹಾಗೂ ಡಿಜಿಟಲ್ ಎವಿಡೆನ್ಸ್ ಕೊಡುತ್ತೇನೆ ಎಂದು ಪ್ರಶಾಂತ್​ ಹೇಳಿದರು.

ಜಮೀರ್ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ RTI ಮಾಹಿತಿಯನ್ನು ಸಹ ಕೊಡುತ್ತೇನೆ. ಶಾಸಕ ಜಮೀರ್ ಅಹ್ಮದ್​ ವಿದೇಶ ಪ್ರವಾಸ ಕೈಗೊಂಡಿರುವ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. RTI ಮೂಲಕವೂ ಅವರ ಪ್ರವಾಸದ ಮಾಹಿತಿ ಸಿಗ್ತಿಲ್ಲ. ಹಿಂದೆ ಕ್ಯಾಬಿನೆಟ್ ಸಚಿವರಾದಾಗಲೂ ಅವರು ಸಾಕಷ್ಟು ಬಾರಿ ಕೊಲೊಂಬೋಗೆ ಹೋಗಿದ್ದರು ಎಂದು ಪ್ರಶಾಂತ್​ ಸಂಬರಗಿ ಆರೋಪಿಸಿದ್ದಾರೆ.

ಜಮೀರ್​ ಅಹ್ಮದ್​ ಪ್ರೋಟೋಕಾಲ್​ ಪ್ರಕಾರ ಸ್ಪೀಕರ್​ಗಾದರೂ ಮಾಹಿತಿ ನೀಡಬೇಕಿತ್ತು. ಹಾಗಾಗಿ, ಜಮೀರ್​ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ, ಇವರ ವಿರುದ್ಧ ತನಿಖೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದು ಪ್ರಶಾಂತ್​ ಸಂಬರಗಿ ತಿಳಿಸಿದ್ದಾರೆ.