ಪ್ರತಾಪ್ ಸಿಂಹ ಮತ್ತೊಂದು ಬಣದಲ್ಲಿ ಗುರುತಿಸಿಕೊಂಡಿರುವುದು ನನಗೆ ಸಂಬಂಧಿಸದ ವಿಷಯ: ಯದುವೀರ್
ಮತ್ತೊಂದು ಬಣದ ಬಿಜೆಪಿ ನಾಯಕರ ಉದ್ದೇಶಿತ ಪಾದಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್ ಅವರು, ಅದು ಪಕ್ಷದ ವರಿಷ್ಠರ ಸುಪರ್ದಿಗೆ ಬಿಟ್ಟ ವಿಷಯವಾಗಿದೆ, ಅದರ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಪಕ್ಷದ ನಾಯಕರು ಶಾಸಕರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿರೋದೇ ಒಳ್ಳೆಯದು ಎಂದರು.
ಮೈಸೂರು: ನಗರದಲ್ಲಿಂದು ಸಂಸದರ ಕಚೇರಿಯನ್ನು ಉದ್ಘಾಟಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಂಸದ ಯದುವೀರ್ ಕೃಷ್ಣದತ್ ಒಡೆಯರ್, ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳು ಉಂಟಾಗಿದ್ದು ಮತ್ತು ಇನ್ನೊಂದು ಬಣ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ನಡೆಸಲು ಉದ್ದೇಶಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಚಾಣಾಕ್ಷತನದಿಂದ ಉತ್ತರಿಸಿದರು. ಮೊದಲಿಗೆ ಅವರು ಮುಡಾ ಹಗರಣದ ವಿರುದ್ಧ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರು ವರೆಗೆ ಮಾಡಿದ ಪಾದಯಾತ್ರೆ ಬಗ್ಗೆ ಮಾತಾಡುತ್ತಾರೆ ಮತ್ತು ಹಗರಣಕ್ಕೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎನ್ನುತ್ತಾರೆ. ಎರಡನೇ ಬಣದಲ್ಲಿ ಮೈಸೂರಿನ ಮಾಜಿ ಸಚಿವ ಪ್ರತಾಪ್ ಸಿಂಹ ಸಹ ಗುರುತಿಸಿಕೊಂಡಿದ್ದಾರೆ ಎಂದು ಪತ್ರಕರ್ತರೊಬ್ಬರು ಹೇಳಿದಾಗ ಯದುವೀರ್, ಅದು ತನಗೆ ಸಂಬಂಧಪಡದ ವಿಷಯ ಪ್ರತಾಪ್ ಸಿಂಹ ಅವರನ್ನೇ ಕೇಳಬೇಕು ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಸೂರು ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ಸಂಸದ ಯದುವೀರ್ ಭಾಗಿ