ಹರ್ಷ ಮನೆಗೆ ಪ್ರತಾಪ್​​ ಸಿಂಹ ಭೇಟಿ; ಸಾಂತ್ವನ ಹೇಳಿ 5 ಲಕ್ಷ ರೂ. ನೆರವು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 26, 2022 | 4:59 PM

ಹರ್ಷ ಕೊಲೆ ಹಿಂದೆ ಎಸ್‌ಡಿಪಿಐ, ಕೆಎಫ್‌ಡಿಯ ಪಾತ್ರವಿದ್ದು, ಅಂತಹ ಸಂಘಟನೆಗಳನ್ನು ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಂಡು ಬ್ಯಾನ್ ಮಾಡಬೇಕು ಎಂದರು.

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾಗಿದ್ದು, ಮೃತ ಹರ್ಷ ಮನೆಗೆ ಸಂಸದ ಪ್ರತಾಪ್​ ಸಿಂಹ ಭೇಟಿ ನೀಡಿದ್ದಾರೆ. ಹರ್ಷ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಜೊತೆಗೆ 5ಲಕ್ಷ ರೂ. ನೆರವು ನೀಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಹರ್ಷ ಕೊಲೆ ಹಿಂದೆ ಎಸ್‌ಡಿಪಿಐ, ಕೆಎಫ್‌ಡಿಯ ಪಾತ್ರವಿದ್ದು, ಅಂತಹ ಸಂಘಟನೆಗಳನ್ನು ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಂಡು ಬ್ಯಾನ್ ಮಾಡಬೇಕು ಎಂದರು. ಇದೊಂದು ಆರ್ಗನೈಸ್ಡ್ ಕ್ರೈಂ ಆಗಿದ್ದು, ಮತಾಂಧರ ಕುತಂತ್ರಕ್ಕೆ ಹರ್ಷ ಬಲಿ ಆಗಿದ್ದಾನೆ. ಕೊಲೆಗಾರರಿಗೆ ಯಾವುದೇ ಧರ್ಮ ಇಲ್ಲ ಎಂದಾದರೆ ಧರ್ಮ ನೋಡಿ ಏಕೆ ಕೊಲೆ ಮಾಡುತ್ತಿದ್ದಾರೆ ಎಂದರು. ನನಗೆ ವಿಶ್ವಾಸವಿದ್ದು, ಮುಂದಿನ ದಿನಗಳಲ್ಲಿ ನಮ್ಮ ಮುಖ್ಯಮಂತ್ರಿಗಳು ಇಂತಹ ಕೊಲೆಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳುತ್ತಾರೆಂದು ಹೇಳಿದರು.

ಇದನ್ನೂ ಓದಿ:

ಹರ್ಷ ಕೊಲೆ ಹಿಂದೆ ಎಸ್‌ಡಿಪಿಐ, ಕೆಎಫ್‌ಡಿಯ ಪಾತ್ರವಿದೆ; ಸಂಸದ ಪ್ರತಾಪ್​ ಸಿಂಹ

Published on: Feb 26, 2022 04:59 PM