AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷ ಕೊಲೆ ಹಿಂದೆ ಎಸ್‌ಡಿಪಿಐ, ಕೆಎಫ್‌ಡಿಯ ಪಾತ್ರವಿದೆ; ಸಂಸದ ಪ್ರತಾಪ್​ ಸಿಂಹ

ಹರ್ಷನ ಕೊಲೆ ಹಿಂದೆ ಎಸ್‌ಡಿಪಿಐ, ಕೆಎಫ್‌ಡಿಯ ಪಾತ್ರವಿದೆ. ಮತಾಂಧರ ಕುತಂತ್ರಕ್ಕೆ ಹರ್ಷ ಬಲಿ ಆಗಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬದವರು ಒಂಟಿಯಲ್ಲ, ಅವರ ಜತೆ ನಾವಿದ್ದೇವೆ; ಸಂಸದ ಪ್ರತಾಪ

ಹರ್ಷ ಕೊಲೆ ಹಿಂದೆ ಎಸ್‌ಡಿಪಿಐ, ಕೆಎಫ್‌ಡಿಯ ಪಾತ್ರವಿದೆ; ಸಂಸದ ಪ್ರತಾಪ್​ ಸಿಂಹ
ಸಂಸದ ಪ್ರತಾಪ್ ಸಿಂಹ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 26, 2022 | 4:25 PM

Share

ಶಿವಮೊಗ್ಗ: ಮತಾಂಧರ ಕುತಂತ್ರಕ್ಕೆ ಬಜರಂಗದಳ ಕಾರ್ಯಕರ್ತ ಹರ್ಷ ಬಲಿಯಾಗಿದ್ದಾನೆ. ಸಾಕಷ್ಟು ಗಣ್ಯರು, ರಾಜಕಾರಣಿಗಳು ಹರ್ಷನ ಮನೆಗೆ ಭೇಟಿ ನೀಡಿದ್ದಾರೆ. ಇಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೂಡ ಹರ್ಷ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಜೊತೆಗೆ 5 ಲಕ್ಷ ರೂ. ನೆರವು ನೀಡಿದ್ದಾರೆ. ಬಳಿಕ ಮಾಧ್ಯಗಳೊಮದಿಗೆ ಮಾತನಾಡಿದ ಅವರು, ಇದರ ಹಿಂದೆ ಎಸ್‌ಡಿಪಿಐ, ಕೆಎಫ್‌ಡಿಯ ಪಾತ್ರವಿದೆ. ಮತಾಂಧರ ಕುತಂತ್ರಕ್ಕೆ ಹರ್ಷ ಬಲಿ ಆಗಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬದವರು ಒಂಟಿಯಲ್ಲ, ಅವರ ಜತೆ ನಾವಿದ್ದೇವೆ. ಹರ್ಷನನ್ನು ಕಳೆದುಕೊಂಡ ನೋವು, ನಾಚಿಕೆ ನಮಗಿದೆ. ರಾಜು, ಕುಟ್ಟಪ್ಪ, ಪ್ರವೀಣ್ ಪೂಜಾರಿ ಹತ್ಯೆ ನೋಡಿ ಅರಿತಿದ್ದೇನೆ. ಹರ್ಷನದು ಮಾಮೂಲಿ ಕೊಲೆಯಲ್ಲ 302 ಅಡಿ ಬರುವ ಪ್ರಕರಣ ಅಲ್ಲ. ಎಸ್ ಡಿಪಿಐ, ಕೆಎಫ್ ಡಿಯ ಪಾತ್ರ ಇದೆ. ಇದೊಂದು ಆರ್ಗನೈಸ್ಡ್ ಕ್ರೈಂ ಎಂದು ಹೇಳಿದರು. ಕೊಲೆಗಾರರಿಗೆ ಯಾವುದೇ ಧರ್ಮ ಇಲ್ಲ ಎಂದಾದರೆ ಧರ್ಮ ನೋಡಿ ಏಕೆ ಕೊಲೆ ಮಾಡುತ್ತಿದ್ದಾರೆ. ಹರ್ಷ ಕೊಲೆ ನಡೆದು ಒಂದು ವಾರ ಆದರೂ ಯಾವ ಕಾಂಗ್ರೆಸ್ಸಿಗನೂ ಭೇಟಿ ಕೊಟ್ಟಿಲ್ಲ. ಸಿನಿಮಾ ನೋಡಲು ಸಿದ್ಧರಾಮಯ್ಯಗೆ ಸಮಯ ಇದೆ. ಆದರೆ ಹರ್ಷನ ಮನೆಗೆ ಬರಲು ಸಮಯ ಇಲ್ಲ. ಕನಿಷ್ಠ ಸಾಂತ್ವನ ಹೇಳಲು ಕಾಂಗ್ರೆಸ್​ನವರು ಬರದಿದ್ದನ್ನು ನೋಡಿದಾಗ ಅವರ ಮನಸ್ಥಿತಿ ಏನೆಂಬುದು ತಿಳಿಯುತ್ತದೆ. ಮೀನು ಮಾರಾಟ ಮಾಡುವವನು ಸತ್ತಾಗ ನೆರವು ನೀಡುವ ಕಾಂಗ್ರೆಸ್ ಈಗ ಏಕೆ ಮಾತನಾಡುತ್ತಿಲ್ಲ. ಜಮೀರ್ ಅಹ್ಮದ್​, ಸಿದ್ದರಾಮಯ್ಯ ಮತ್ತು ನಲಪಾಡ್ ಅವರನ್ನು ಮುಂದಿಟ್ಟುಕೊಂಡು ಡಿಕೆಶಿ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಮೇಕೆದಾಟು 2ನೇ ಹಂತದ ಪಾದಯಾತ್ರೆ ನಾಳೆಯಿಂದ ಆರಂಭ; ಬಿಗಿ ಪೊಲೀಸ್ ಬಂದೋಬಸ್ತ್:

ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಹಿನ್ನೆಲೆ ಪೊಲೀಸ್​ ಬಂದೋಬಸ್ತ್ ಒದಗಿಲಾಗಿದೆ. ಕೇಂದ್ರ ವಲಯ ಐಜಿಪಿ ನೇತೃತ್ವದಲ್ಲಿ ಭದ್ರತೆ ನೀಡಲಾಗಿದ್ದು, ಒಬ್ಬರು ಎಸ್​ಪಿ, 2 Asp, 12 ಇನ್ಸ್ ಪೆಕ್ಟರ್, 38 ಜನ ಪಿಎಸ್ ಐ, 37 ಎಎಸ್ ಐ, 600 ಜನ ಪೊಲೀಸ್ ಸಿಬ್ಬಂದಿ, 50 ಮಹಿಳಾ ಪೊಲೀಸ್ 100 ಜನ ಹೋಮ್ ಗಾರ್ಡ್, 20 ಕೆಎಸ್ ಆರ್ ಪಿ, 12 ಡಿಎಆರ್ ಸೇರಿ 1200 ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ಇದೇ ವೇಳೆ ಟಿವಿ9 ಗೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಹೇಳಿಕೆ ನೀಡಿದ್ದು, ಭದ್ರತೆಗಾಗಿ 1200 ಜನರನ್ನ ನೇಮಕ ಮಾಡಲಾಗಿದೆ. ಕಟ್ಟುನಿಟ್ಟಾದ ಬಂದೋಬಸ್ತ್ ಮಾಡಲಾಗಿದೆ. ಪಾದಯಾತ್ರೆಗೆ ಇದುವರೆಗೂ ಅನುಮತಿ‌ ನೀಡಿಲ್ಲ. ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ ಅಷ್ಟೇ. ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೋ ಹಾಗೆ ಮಾಡುತ್ತೇವೆ ಎಂದು ಹೇಳಿದರು.  ಇನ್ನು ರಾಮನಗರ ಎಸ್ ಪಿ ಸಂತೋಷ್ ಬಾಬು ಟಿವಿ 9 ಗೆ ಹೇಳಿಕೆ ನೀಡಿದ್ದು, ಮೇಕೆದಾಟು ಪಾದಯಾತ್ರೆ ಬಗ್ಗೆ ನಮಗೆ ಮಾಹಿತಿ ಬಂದಿದೆ. ಹೀಗಾಗಿ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಯಾವುದೇ ರೀತಿಯ ಅನುಮತಿಯನ್ನ ನಮ್ಮಲ್ಲಿ ಕೇಳಿಲ್ಲ. ನ್ಯಾಷನಲ್ ಹೈವೆ ಆಕ್ಟ್ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ ಅಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:

ಅರ್ಧಕ್ಕೆ ನಿಂತಿದ್ದ ಮೇಕೆದಾಟು ಪಾದಯಾತ್ರೆ ನಾಳೆಯಿಂದ ಆರಂಭ; ಪಾದಯಾತ್ರೆಯಲ್ಲಿ ಭಾಗಿಯಾಗಲು ಡಿಕೆ ಶಿವಕುಮಾರ್ ಮನವಿ